ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೊವಿಡ್-19 ಅಪ್ ಡೆಟ್ಸ್

Posted On: 26 APR 2020 5:13PM by PIB Bengaluru

ಕೊವಿಡ್-19 ಅಪ್ ಡೆಟ್ಸ್

 

ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸೇರಿ ಕೊವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ವಿಧಾನದ ಮೂಲಕ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಸಕಾಲಿಕವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಟ್ರೂಮಾ ಕೇಂದ್ರಕ್ಕೆ ಭೇಟಿ ನೀಡಿ ಕೊವಿಡ್-19 ಅನ್ನು ತಡೆಯಲು ಮಾಡಿರುವ ಸನ್ನದ್ಧತೆಯನ್ನು ಪರಿಶೀಲಿಸಿದರು. ಅವರು ಕೊವಿಡ್-19 ರೋಗಿಗಳಿಗೆ ಪ್ರತ್ಯೇಕ ಸೌಲಭ್ಯವನ್ನು ಹೊಂದಿರುವ ಅತ್ಯಾಧುನಿಕ ಕಟ್ಟಡದ ವಿವಿಧ ವಾರ್ಡ್ಗಳಿಗೆ ಕೂಡಾ ಭೇಟಿ ನೀಡಿದರು. ಅವರ ಭೇಟಿಯ ಸಮಯದಲ್ಲಿ ಕೆಲವು ಕೊವಿಡ್-19 ಪೀಡಿತ ರೋಗಿಗಳೊಂದಿಗೆ ಫೋನ್ - ವೀಡಿಯೊ ಕರೆ ಮೂಲಕ ಮಾತನಾಡಿ, ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು, ಏಮ್ಸ್ನಲ್ಲಿ ಲಭ್ಯವಿರುವ ಸೌಲಭ್ಯಗಳ ಸುಧಾರಣೆಗಾಗಿ ಬಗ್ಗೆ ಪ್ರತಿಕ್ರಿಯೆಯನ್ನು ಕೋರಿದರು. ಸಂದರ್ಭದಲ್ಲಿ ರೋಗಿಗಳು ರೋಬೋಟ್ ನಿರ್ವಹಿಸಿದ ಉಪಕರಣ ಮೂಲಕ ಸಚಿವರೊಂದಿಗೆ ಮಾತನಾಡಿದ್ದಾರೆ.

ಸವಿವರವಾದ ಮಾಹಿತಿ ಹಾಗೂ ಪರಿಶೀಲನೆಯ ನಂತರ, ಸಚಿವ ಡಾ. ಹರ್ಷ್ ವರ್ಧನ್ ವಿವಿಧ ಘಟಕಗಳ ಕೆಲಸದಲ್ಲಿ ತೃಪ್ತಿ ವ್ಯಕ್ತಪಡಿಸಿದರು. ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ವಿಡಿಯೋ/ ವಾಯ್ಸ್ ಕಾಲ್ ತಂತ್ರಜ್ಞಾನಗಳನ್ನು ಬಳಸುವ ಕೊವಿಡ್-19 ದೃಢಪಡಿಸಿದ್ದಕ್ಕಾಗಿ ಮತ್ತು ಶಂಕಿತ ರೋಗಿಗಳ ಯೋಗಕ್ಷೇಮವನ್ನು 24X7 ಮೇಲ್ವಿಚಾರಣೆ ಮಾಡುವುದನ್ನು ಖಾತ್ರಿಪಡಿಸಿದ್ದಕ್ಕಾಗಿ ಸಚಿವರು ಏಮ್ಸ್ ಅನ್ನು ಶ್ಲಾಘಿಸಿದರು. ಸಂಪೂರ್ಣ ಭಾರತವು ಲಾಕ್ ಡೌನ್ 2.0 ಅನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಕೊವಿಡ್-19 ಹರಡುವುದನ್ನು ಕಡಿತಗೊಳಿಸಲು ಪರಿಣಾಮಕಾರಿಯಾಗಿ ಸಹಕರಿಸಬೇಕು ಎಂದು ಡಾ.ಹರ್ಷ್ ವರ್ಧನ್ ಅವರು ಜನರನ್ನು ಕೋರಿದರು. ಹಾಟ್ ಸ್ಪಾಟ್ ಡಿಸ್ಟ್ರಿಕ್ಟ್ (ಎಚ್.ಎಸ್.ಡಿ) ಗಳು ಇತ್ತೀಚೆಗೆ ನಾನ್ ಹಾಟ್ ಸ್ಪಾಟ್ ಡಿಸ್ಟ್ರಿಕ್ಟ್ (ಎನ್.ಎಚ್.ಎಸ್.ಡಿ) ಆಗಿ ಸಕಾರಾತ್ಮಕವಾಗಿ ಸಾಗುತ್ತಿರುವ ಕಾರಣ ಭಾರತದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊವಿಡ್-19 ಸ್ಪಂದನೆ, ಸನ್ನದ್ಧತೆಯನ್ನು ಪರಿಶೀಲನೆಗಳನ್ನು ಅರಿಯುವ ಸಲುವಾಗಿ, ಕ್ಯಾಬಿನೆಟ್ ಕಾರ್ಯದರ್ಶಿ, ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಡಿ.ಜಿ.ಪಿಗಳೊಂದಿಗೆ ವಿವರವಾದ ವಿಡಿಯೊ ಸಂವಾದವಿಂದು ಜರುಗಿದೆ. ಹೆಚ್ಚಿನ ಕೊವಿಡ್-19 ಪ್ರಕರಣ ಹೊಂದಿರುವ ರಾಜ್ಯಗಳು ಲಾಕ್ ಡೌನ್ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮತ್ತು ಧಾರಕ ತಂತ್ರಗತ್ತ ಗಮನ ಹರಿಸಬೇಕು, ಪ್ರತ್ಯೇಕ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್ಗಳು ಇತ್ಯಾದಿಗಳ ಸಮರ್ಪಕ ಲಭ್ಯತೆಯನ್ನು ಒಳಗೊಂಡಿರುವ ವೈದ್ಯಕೀಯ ಮೂಲಸೌಕರ್ಯಗಳ ಬಗ್ಗೆ ರಾಜ್ಯಗಳು ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.

ಇಂದಿನ ಮಾಹಿತಿಯಂತೆ, ಭಾರತದಲ್ಲಿ ಒಟ್ಟು 5804 ಜನರು ಚೇತರಿಕೆಯಾಗಿದ್ದಾರೆ ಮತ್ತು ಚೇತರಿಕೆಯ ದರ 21.90% ಕ್ಕೆ ತಲುಪಿದೆ. ಅಲ್ಲದೆ, ಕೊವಿಡ್-19 ಗೆ ಒಟ್ಟು 26,496 ಜನರು ಸಕಾರಾತ್ಮಕವೆಂದು ದೃಢಪಟ್ಟಿದ್ದು, ಈವರೆಗೆ ಒಟ್ಟು 824 ಸಾವುಗಳು ವರದಿಯಾಗಿವೆ.

ಕೊವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಾರರ ಎಲ್ಲಾ ಅಧಿಕೃತ ಮತ್ತು ನವೀಕರಿಸಿದ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ, ಆಗಾಗ : https://www.mohfw.gov.in/ ಭೇಟಿ ನೀಡಿ.

ಕೊವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು ಇತರ ಪ್ರಶ್ನೆಗಳಿಗೆ ncov2019[at]gov[dot]in ನಲ್ಲಿ ಇಮೈಲ್ ಮಾಡಬಹುದು.

ಕೊವಿಡ್-19 ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ: 011-23978046 ಅಥವಾ 1075 (ನಿಶುಲ್ಕ/ಶುಲ್ಕ ರಹಿತ). ಕೊವಿಡ್-19 ಗೆ ಸಂಬಂಧಿಸಿದ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ಕೊಂಡಿಯಲ್ಲಿ ಲಭ್ಯವಿದೆ.

***


(Release ID: 1618569) Visitor Counter : 232