ಜವಳಿ ಸಚಿವಾಲಯ

ಕೋವಿಡ್ -19 ಚಿಕಿತ್ಸಾ ವೈದ್ಯಕೀಯ ಸಿಬ್ಬಂದಿಗೆ ಅವಶ್ಯ ರಕ್ಷಣಾ ಕವಚ  ಉತ್ಪಾದನಾ ಸಾಮರ್ಥ್ಯ ದಿನಕ್ಕೆ 1ಲಕ್ಷಕ್ಕೂ ಅಧಿಕ ಪ್ರಮಾಣ; ಈವರೆಗೆ ಸುಮಾರು 1 ಮಿಲಿಯನ್ ಯೂನಿಟ್ ಉತ್ಪಾದನೆ

Posted On: 26 APR 2020 3:57PM by PIB Bengaluru

ಕೋವಿಡ್ -19 ಚಿಕಿತ್ಸಾ ವೈದ್ಯಕೀಯ ಸಿಬ್ಬಂದಿಗೆ ಅವಶ್ಯ ರಕ್ಷಣಾ ಕವಚ  ಉತ್ಪಾದನಾ ಸಾಮರ್ಥ್ಯ ದಿನಕ್ಕೆ 1ಲಕ್ಷಕ್ಕೂ ಅಧಿಕ ಪ್ರಮಾಣ; ಈವರೆಗೆ ಸುಮಾರು 1 ಮಿಲಿಯನ್ ಯೂನಿಟ್ ಉತ್ಪಾದನೆ

ಕೋವಿಡ್ -19 ವಿರುದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಉತ್ತೇಜನಾ ಕ್ರಮ

ಸ್ವಯಂ ರಕ್ಷಣಾ ಕವಚಗಳ (ಪಿ.ಪಿ..) ಉತ್ಪಾದನೆಯಲ್ಲಿ ಬೆಂಗಳೂರು ಪ್ರಥಮ ಸ್ಥಾನ; ತಮಿಳು ನಾಡಿನ ಚೆನ್ನೈ ಮತ್ತು ತಿರುಪುರ್, ಪಂಜಾಬಿನ ಫಾಗ್ವಾರ ಮತ್ತು ಲೂಧಿಯಾನ, ಎನ್.ಸಿ.ಆರ್. ನಲ್ಲಿ ಗುರುಗ್ರಾಮ ಮತ್ತು ನೊಯಿಡಾಗಳೂ ಪಿ.ಪಿ.. ಗಳ ಒಟ್ಟು ಉತ್ಪಾದನೆಯಲ್ಲಿ ಪ್ರಮುಖ ತಾಣಗಳಾಗಿ ಮೂಡಿಬಂದಿವೆ 

ಅಡೆತಡೆಗಳನ್ನು ನಿವಾರಿಸಿ, ಪೂರೈಕೆ ಸರಪಳಿಯನ್ನು ಸರಿಪಡಿಸಿ, ನಿರಂತರ ಪೂರೈಕೆಗಾಗಿ ಉತ್ಪಾದಕರು ಮತ್ತು ವಿವಿಧ ಕೈಗಾರಿಕಾ ಮಂಡಳಿಗಳ ಜೊತೆ ಸರಕಾರ ಕಾರ್ಯನಿರತ

 

ದೇಶದಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅವಶ್ಯವಾದ ರಕ್ಷಾ ಕವಚ ಉತ್ಪಾದನಾ ಸಾಮರ್ಥ್ಯ್ವವನ್ನು ಹೆಚ್ಚಿಸಲಾಗಿದ್ದು, ದಿನಕ್ಕೆ 1 ಲಕ್ಷಕ್ಕೂ ಅಧಿಕ ಕವಚಗಳನ್ನು ತಯಾರಿಸಲಾಗಿದೆ. ಕೋವಿಡ್ -19 ಪ್ರಕರಣಗಳ  ವಿರುದ್ದ ಹೋರಾಟಕ್ಕೆ ಪಿ.ಪಿ.. ರಕ್ಷಾ ಕವಚಗಳ ಉತ್ಪಾದನೆಯಲ್ಲಿ ಬೆಂಗಳೂರು ಪ್ರಮುಖ ತಾಣವಾಗಿದೆ. ಇದುವರೆಗಿನ ಒಟ್ಟು ಉತ್ಪಾದನೆಯು ಸುಮಾರು 1 ಮಿಲಿಯನ್ ಯೂನಿಟ್ ಗಳು. ದೇಶದಲ್ಲಿ ಸುಮಾರು 50 % ರಕ್ಷಾ ಕವಚಗಳ ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ. ದೇಹ ರಕ್ಷಣೆಯ ಪಿ.ಪಿ..ಗಳು ಆರೋಗ್ಯ ವೃತ್ತಿಪರರಿಗೆ ಉನ್ನತ ಮಟ್ಟದ ರಕ್ಷಣೆಯನ್ನು ಒದಗಿಸುವ ವಿಶೇಷ ರಕ್ಷಾ ಕವಚಗಳಾಗಿವೆ. ಇದರ ತಯಾರಿಕೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಗೀಕರಿಸಿದ ಕಠಿಣ ತಾಂತ್ರಿಕ ಆವಶ್ಯಕತೆಗಳನ್ನು ಪೂರೈಸಬೇಕಾಗಿರುತ್ತದೆ. ಮೆ/ ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ ಸಂಸ್ಥೆಯು ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಸಂಸ್ಥೆಗಳಿಗೆ ಇವುಗಳನ್ನು ಖರೀದಿಸಲು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ನಿಯೋಜಿತವಾದ ಏಕ ಗವಾಕ್ಷ ಸಂಸ್ಥೆಯಾಗಿದೆ.

ಬೆಂಗಳೂರನ್ನು ಹೊರತುಪಡಿಸಿದರೆ ಪಿ.ಪಿ.. ರಕ್ಷಾ ಕವಚಗಳನ್ನು ತಮಿಳುನಾಡಿನ ತಿರುಪುರ, ಚೆನ್ನೈ ಮತ್ತು ಕೊಯಮುತ್ತೂರು, ಗುಜರಾತಿನ ಅಹ್ಮದಾಬಾದ್ ಮತ್ತು ವಡೋದರ, ಪಂಜಾಬಿನ ಫಗ್ವಾರ ಮತ್ತು ಲೂಧಿಯಾನ, ಮಹಾರಾಷ್ಟ್ರದ ಕುಸುಮ್ ನಗರ್ ಮತ್ತು ಭಿವಂಡಿ, ರಾಜಸ್ಥಾನದ ದುಂಗಾರ್ಪುರ , ಕೋಲ್ಕೊತ್ತಾ , ದಿಲ್ಲಿ, ನೊಯಿಡಾ, ಗುರುಗ್ರಾಮ, ಮತ್ತು ಇತರ ಕೆಲವು ಕಡೆಗಳಲ್ಲಿ ತಯಾರಿಸಲಾಗುತ್ತದೆ.ಇಂದಿನವರೆಗೆ ಒಟ್ಟು ಉತ್ಪಾದನೆ ಸುಮಾರು ಒಂದು ಮಿಲಿಯನ್ ರಕ್ಷಾ ಕವಚ ಯೂನಿಟ್ ಗಳು.

2020 ಜನವರಿ ಕೊನೆಯ ವಾರದಲ್ಲಿ ರಕ್ಷಾ ಕವಚಗಳಿಗೆ ತಾಂತ್ರಿಕ ಗುಣಮಾನಕಗಳನ್ನು ಡಬ್ಲ್ಯು.ಎಚ್.. ತರಗತಿ -3 ಒಡ್ಡುವಿಕೆ ಒತ್ತಡ ಅನ್ವಯ .ಎಸ್.  16003 ಅಥವಾ ಅದಕ್ಕೆ ಸಮನಾದುದನ್ನು ನಿಗದಿ ಮಾಡಲಾಯಿತು. ಇಂತಹ ಸಾಮಗ್ರಿಗಳನ್ನು ಕೆಲವೇ ಕೆಲವು ಅಂತಾರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುತ್ತಿದ್ದವು. ಸಾಕಷ್ಟು ದಾಸ್ತಾನು ಇಲ್ಲದೆ ಇದ್ದುದರಿಂದ ಮತ್ತು ಆಯಾ  ದೇಶಗಳು ರಫ್ತಿನ ಮೇಲೆ ನಿಷೇಧ ಹೇರಿದ್ದರಿಂದ ಅವುಗಳು ಸಾಮಗ್ರಿ ಪೂರೈಕೆಗೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದವು. ಬರೇ ಸ್ವಲ್ಪ ಪ್ರಮಾಣದಲ್ಲಿ ಅವುಗಳನ್ನು ತರಿಸಲಾಯಿತು ಮತ್ತು ಅವುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಖರೀದಿ ಸಂಸ್ಥೆಗಳಿಂದ ಖರೀದಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2020 ಮಾರ್ಚ್ 2 ರಂದು ತಾಂತ್ರಿಕ ಆವಶ್ಯಕತೆಯನ್ನು ಅಂತಿಮಗೊಳಿಸಿತು. ಸಾಮಗ್ರಿಗಳ ದೇಶೀಯ ಲಭ್ಯತೆಯನ್ನು ಮತ್ತು ಕೋವಿಡ್ -19 ಪ್ರಕರಣಗಳನ್ನು ನಿಭಾಯಿಸುತ್ತಿರುವ ಆರೋಗ್ಯ ವೃತ್ತಿಪರರ ಉನ್ನತ ಮಟ್ಟದ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು , ಕ್ಷೇತ್ರದ ವೈದ್ಯಕೀಯ ತಜ್ಞರ ಸಲಹೆಗಳನ್ನು ಪಡೆದು ನಿಟ್ಟಿನಲ್ಲಿ ಮುಂದಡಿ ಇಡಲಾಯಿತುಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ ಜಾಲತಾಣದಲ್ಲಿ 2020 ಮಾರ್ಚ್ 5 ರಂದು ಇದರ ನಿರ್ದಿಷ್ಟ ಪಡಿಸಿದ ಮಾನದಂಡಗಳನ್ನು ಪ್ರಕಟಿಸಿ ಸಾಕಷ್ಟು ಸಾಮರ್ಥ್ಯ ಇರುವ ಉತ್ಪಾದಕರು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಯಿತು.

ಈಗ ದೇಶದಲ್ಲಿ ಕೃತಕವಾಗಿ ತಯಾರಿಸಲಾದ ರಕ್ತ ಒಳತೂರುವಿಕೆ ತಡೆಯುವ ಪರೀಕ್ಷಾ ಸೌಲಭ್ಯಗಳು ಮತ್ತು ಪರೀಕ್ಷೆಗಳನ್ನು ನಡೆಸಲು ಅವಶ್ಯ ಅನುಮೋದನೆಗಳನ್ನು ಮತ್ತು ಕೋವಿಡ್ -19 ಕ್ಕೆ ಸಂಬಂಧಿಸಿ ದೇಹಕ್ಕೆ ಸುರಕ್ಷೆ ಒದಗಿಸುವ ಪಿ.ಪಿ..ಗಳ ಪ್ರಮಾಣೀಕರಣಕ್ಕೆ ನಾಲ್ಕು ಪ್ರಯೋಗಾಲಯಗಳಿವೆ. ಅವುಗಳೆಂದರೆ ದಕ್ಶಿಣ ಭಾರತ ಜವಳಿ ಸಂಶೋಧನಾ ಸಂಘಟನೆ (ಸಿಟ್ರಾ) ,ಕೊಯಮುತ್ತೂರು, ಗ್ವಾಲಿಯರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿ.ಆರ್.ಡಿ..) ಮತ್ತು ಎರಡು ಪ್ರಯೋಗಾಲಯಗಳು ಯುದ್ದೋಪಕರಣ ಕಾರ್ಖಾನೆ ಮಂಡಳಿ ಅಡಿಯಲ್ಲಿಭಾರೀ ವಾಹನಗಳ ಕಾರ್ಖಾನೆ, ಅವದಿ ಮತ್ತು ಕಾನ್ಪುರದ ಸ್ಮಾಲ್ ಆರ್ಮ್ಸ್ ಕಾರ್ಖಾನೆಗಳಲ್ಲಿ ಇವೆ.

ಆಯಾ ತಯಾರಕರು ಕಳುಹಿಸುವ ಒಂದು ಮಾದರಿಯ ಬಟ್ಟೆಗಳಿಗೆ ಸಂಬಂಧಿಸಿ ನಡೆಸುವ ಇಂತಹ ಪ್ರತೀ ಪರೀಕ್ಷೆಗೂ ಮತ್ತು ಪಿ.ಪಿ.. ಒಟ್ಟು ವಸ್ತ್ರಕ್ಕೂ ಒಂದು ವಿಶೇಷ ಪ್ರಮಾಣೀಕರಣ ಕೋಡ್  (ಯು.ಸಿ.ಸಿ.-ಕೋವಿಡ್ -19) ಲಭಿಸುತ್ತದೆ . ಕೋಡ್ ಬಟ್ಟೆಯ ನೂಲಿನ ಮಾದರಿ, ವಸ್ತ್ರದ ಮಾದರಿ, ಪರೀಕ್ಷೆ ನಡೆಸಿದ ದಿನಾಂಕ , ಪರೀಕ್ಷಾ ಮಾನದಂಡಗಳು ಮತ್ತು ಇತರ ಸಂಬಂಧಿತ ವಿವರಗಳನ್ನು ಒಳಗೊಂಡಿರುತ್ತದೆ. ಪ್ರತೀ ತೇರ್ಗಡೆ ಮಾಡಲಾದ ಮಾದರಿಗೆ ನೀಡಲಾದ ಯು.ಸಿ.ಸಿ. ಯನ್ನು ಡಿ.ಆರ್.ಡಿ.., .ಎಫ್.ಬಿ. ಮತ್ತು ಸಿಟ್ರಾ (ಎಸ್..ಟಿ.ಆರ್. .) ಅಧಿಕೃತ ಜಾಲತಾಣಗಳಲ್ಲಿ ಉತ್ಪಾದನೆಯ ಯಾವುದೇ ಬಳಕೆದಾರರು ಪರಿಶೀಲಿಸಲು ಅನುಕೂಲವಾಗುವಂತೆ ಪ್ರಕಟಿಸಲಾಗುತ್ತದೆ . ಪರೀಕ್ಷೆಯ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಮತ್ತು ಪಿ.ಪಿ.. ರಕ್ಷಾ ಕವಚಗಳ ಗುಣಮಟ್ಟವನ್ನು ಕಾಪಾಡಲು ಪರೀಕ್ಷಾ ಪ್ರಯೋಗಾಲಯಗಳು ಈಗ ಮಾದರಿಗಳನ್ನು ನಿಗದಿತ ಉತ್ಪಾದಕರು ಅನುಮೋದಿತ ಪ್ರಯೋಗಾಲಯಗಳಲ್ಲಿ ತಮ್ಮ ರಕ್ಷಾ ಕವಚಗಳನ್ನು ಪರೀಕ್ಶೆಗೆ ಒಳಪಡಿಸಲು ಇಚ್ಚಿಸಿದರೆ  ನಿಗದಿತ ಮಾದರಿಯಲ್ಲಿ ಅಫಿದಾವಿತ್ ಸಲ್ಲಿಸಿದರೆ ಮಾತ್ರ ಅವರ ಪಿ.ಪಿ.. ರಕ್ಷಾ ಕವಚಗಳ ಮಾದರಿಯನ್ನು ಪರೀಕ್ಷ್ಗೆ ಕೈಗೆತ್ತಿಕೊಳ್ಳುತ್ತವೆ.

ಪಿ.ಪಿ.. ಕಿಟ್ ಗಳನ್ನು ಆವಶ್ಯಕತೆಗಳಿಗೆ ಅನುಗುಣವಾಗಿ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಕಳುಹಿಸಿಕೊಡುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಔಷಧ ಇಲಾಖೆ ಮತ್ತು ಜವಳಿ ಇಲಾಖೆಗಳು ನಿರಂತರವಾಗಿ ವಿವಿಧ ಕೈಗಾರಿಕಾ ಮಂಡಳಿಗಳು , ಭಾಗೀದಾರರು ಮತ್ತು ಉತ್ಪಾದಕರ ಜೊತೆ 24x7ಆಧಾರದಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿವೆ.ಪೂರೈಕೆ ಸರಪಳಿಯನ್ನು ಚುರುಕುಗೊಳಿಸುವುದು , ಅಡೆತಡೆಗಳನ್ನು ನಿವಾರಿಸುವುದು ಮತ್ತು ಆರೋಗ್ಯ ಸೇವಾ ವಲಯದ ವೃತ್ತಿಪರರಿಗೆ ಅವಶ್ಯವಾದ ಎಲ್ಲಾ ವಸ್ತುಗಳು ನಿರಂತರ ಪೂರೈಕೆಯಾಗುವಂತೆ ಇವು ನೋಡಿಕೊಳ್ಳುತ್ತಿವೆ

***



(Release ID: 1618425) Visitor Counter : 272