ಕಾನೂನು ಮತ್ತು ನ್ಯಾಯ ಸಚಿವಾಲಯ
ಆದಾಯ ತೆರಿಗೆ ನ್ಯಾಯಮಂಡಳಿ, ಐ.ಟಿ.ಎ.ಟಿ. ಮೊದಲ ಬಾರಿಗೆ ವಿಡಿಯೋ ಸಂವಾದ ಮೂಲಕ ವಿಚಾರಣೆ
Posted On:
24 APR 2020 7:19PM by PIB Bengaluru
ಆದಾಯ ತೆರಿಗೆ ನ್ಯಾಯಮಂಡಳಿ, ಐ.ಟಿ.ಎ.ಟಿ. ಮೊದಲ ಬಾರಿಗೆ ವಿಡಿಯೋ ಸಂವಾದ ಮೂಲಕ ವಿಚಾರಣೆ
ನ್ಯಾಯಾಧಿಕರಣ ಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಪಿ.ಪಿ.ಭಟ್ ಅವರ ನೇತೃತ್ವದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐ.ಟಿ.ಎ.ಟಿ.) ವಿಭಾಗೀಯ ಪೀಠ ವಿಡಿಯೊ ಸಂವಾದ (ಅಂತರ್ಜಾಲ ಆಧಾರಿತ ದೃಶ್ಯಾಭಿಮುಖ) ಮೂಲಕ, ಇಂದು ತುರ್ತು ತಡೆ (ಸ್ಟೇ) ಅರ್ಜಿಗಳನ್ನು ಆಲಿಸಿದ್ದಾರೆ ಮತ್ತು ತ್ವರಿತ ವಿಲೇವಾರಿ ಮಾಡಿದ್ದಾರೆ. ನ್ಯಾಯಮಂಡಳಿಯ 79 ವರ್ಷಗಳ ಹಳೆಯ ತನ್ನ ಇತಿಹಾಸದಲ್ಲಿ ಈ ಪ್ರಯತ್ನ ಮೊದಲನೆಯದು. ಕೊವಿಡ್ -19 ಲಾಕ್ ಡೌನ್‌ನಿಂದಾಗಿ ಐ.ಟಿ.ಎ.ಟಿ. ಮುಚ್ಚಿದಾಗಿನಿಂದ ತಮ್ಮ ಮನೆಯ ಕಚೇರಿಗಳಿಂದ ವಿಡಿಯೊ ಸಂವಾದ ಮೂಲಕ ನ್ಯಾಯಮೂರ್ತಿ ಪಿ.ಪಿ. ಭಟ್ ಮತ್ತು ಐ.ಟಿ.ಎ.ಟಿ. ಉಪಾಧ್ಯಕ್ಷರಾದ ಶ್ರೀ ಪ್ರಮೋದ್ ಕುಮಾರ್ ಅವರನ್ನೊಳಗೊಂಡ ಐ.ಟಿ.ಎ.ಟಿ. ಮುಂಬಯಿ ಇದರ ಇಬ್ಬರು ಸದಸ್ಯರ ಪೀಠವು ಅರ್ಜಿಯನ್ನು ಆಲಿಸಿತು.
ಮುಂಬೈ ಆದಾಯ ಕಚೇರಿಯಿಂದ 2010-11ರ ಮೌಲ್ಯಮಾಪನ ವರ್ಷಕ್ಕೆ ರೂ .2.91 ಕೋಟಿ ಬಾಕಿ ತೆರಿಗೆ ವಸೂಲಿ ಮಾಡಲು ನೀಡಿದ ನೋಟಿಸ್ ಗೆ ಸೊಲಾಪುರ ಮೂಲದ ಪಾಂಡೆಸ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಡೆ (ಸ್ಟೇ) ಗಾಗಿ ಮೇಲ್ಮನವಿ ಅರ್ಜಿಯನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಿ, ತುರ್ತು ವಿಚಾರಣೆ ಕೋರಿತ್ತು. ಈ ಹಿಂದೆ ಬಾಂಬೆ ಹೈಕೋರ್ಟ್‌ಗೆ ಸಂಸ್ಥೆ ಮೊರೆ ಹೋಗಿತ್ತು, ಆದರೆ ಮೊದಲು ಐ.ಟಿ.ಎ.ಟಿ.ಯನ್ನು ಸಂಪರ್ಕಿಸಲು ಹೈಕೋರ್ಟ್ ನಿರ್ದೇಶಿಸಿತ್ತು.
ತಡೆ(ಸ್ಟೇ) ನೀಡುವ ಮೂಲಕ ಕಂಪನಿಯ ಬ್ಯಾಂಕರ್‌ಗಳು ಮತ್ತು ಸಾಲಗಾರರ ಮೇಲೆ ಕಂದಾಯ ಅಧಿಕಾರಿಗಳು ನೀಡಿರುವ ಎಲ್ಲಾ ನೋಟಿಸ್‌ಗಳನ್ನು ಐ.ಟಿ.ಎ.ಟಿ. ಪೀಠ ಅಮಾನತುಗೊಳಿಸಿದೆ. ಈ ತಡೆಯಾಜ್ಞೆಯ ವಿಷಯವನ್ನು ಕೂಡಲೇ ಮೌಲ್ಯಮಾಪನ ಅಧಿಕಾರಿ/ ಕ್ಷೇತ್ರ ಅಧಿಕಾರಿಗಳಿಗೆ ತಿಳಿಸುವಂತೆ ವಿಚಾರಣೆಯ ಸಮಯದಲ್ಲಿ ಹಾಜರಿದ್ದ ಇಲಾಖಾ ಪ್ರತಿನಿಧಿಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ. ಈ ಮಧ್ಯೆ ತ್ವರಿತ ಆಲಿಕೆ ಸಂಬಂಧಿತ ಕಂಪನಿಯ ಮನವಿಯ ವಿಚಾರಣೆಗೆ ಜೂನ್ 8, 2020ರ ದಿನಾಂಕವನ್ನು ಸೂಚಿಸಿ ನ್ಯಾಯಪೀಠ ನಿರ್ದೇಶಿಸಿದೆ.
ಕಂದಾಯ ಇಲಾಖೆಯ ತುರ್ತು ವಿಷಯಗಳ ಬಗ್ಗೆ ಅರ್ಜಿಗಳ ಆಧಾರದಲ್ಲಿ ಮೌಲ್ಯಮಾಪನಕ್ಕಾಗಿ ಹಾಗೂ ಇದೇ ರೀತಿಯ ವಿಡಿಯೊ ಸಂವಾದದ ವಿಚಾರಣೆ ನಡೆಸಲು 27 ಸ್ಥಳಗಳಲ್ಲಿರುವ ಎಲ್ಲಾ ಐ.ಟಿ.ಎ.ಟಿ. ಪೀಠಗಳು ಸುಸಜ್ಜಿತವಾಗಿವೆ.
***
(Release ID: 1618093)
Visitor Counter : 223