ಗೃಹ ವ್ಯವಹಾರಗಳ ಸಚಿವಾಲಯ

ವೈದ್ಯಕೀಯ ಸಿಬ್ಬಂದಿ, ಆರೋಗ್ಯ ವೃತ್ತಿಪರರು, ಮುಂಚೂಣಿಯಲ್ಲಿರುವ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ತಡೆಗೆ ಅವರಿಗೆ ಅಗತ್ಯ ಭದ್ರತೆ ಒದಗಿಸಬೇಕು: ಕೇಂದ್ರ ಗೃಹ ಸಚಿವರು

Posted On: 22 APR 2020 5:24PM by PIB Bengaluru

ವೈದ್ಯಕೀಯ ಸಿಬ್ಬಂದಿ, ಆರೋಗ್ಯ ವೃತ್ತಿಪರರು, ಮುಂಚೂಣಿಯಲ್ಲಿರುವ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ತಡೆಗೆ ಅವರಿಗೆ ಅಗತ್ಯ ಭದ್ರತೆ ಒದಗಿಸಬೇಕು: ಕೇಂದ್ರ ಗೃಹ ಸಚಿವರು

ಕೋವಿಡ್-19 ವಿರುದ್ಧ ಸೇವೆ ಸಲ್ಲಿಸುವ ವೇಳೆ ಅದೇ ಸೋಂಕಿಗೆ ಬಲಿಯಾಗುವ ವೈದ್ಯಕೀಯ ವೃತ್ತಿಪರರು ಅಥವಾ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಅಂತ್ಯಕ್ರಿಯೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು; ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ

 

ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಷಾ ಅವರ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಆರೋಗ್ಯ ವೃತ್ತಿಪರರು, ವೈದ್ಯಕೀಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಅಗತ್ಯ ಭದ್ರತೆ ಒದಗಿಸಿ ಕೊಡಬೇಕು ಮತ್ತು ಅವರ ವಿರುದ್ಧ ಹಿಂಸಾಚಾರವನ್ನು ತಡೆಗಟ್ಟಬೇಕು ಎಂದು ಆದೇಶಿಸಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಅದೇ ಸೋಂಕಿಗೆ ಬಲಿಯಾಗುವ ವೈದ್ಯಕೀಯ ವೃತ್ತಿಪರರು ಅಥವಾ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಅಂತ್ಯಕ್ರಿಯೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ), ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 24.03.2020, 04.04.2020 ಮತ್ತು 11.04.2020ರಂದು ಹೊರಡಿಸಿದ ಮಾರ್ಗಸೂಚಿಗಳಲ್ಲಿ, ಆರೋಗ್ಯ ವೃತ್ತಿಪರರು, ವೈದ್ಯಕೀಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಆದೇಶಿಸಿತ್ತು. ಸಂವಹನ ನಡುವೆಯೂ ದೇಶದ ನಾನಾ ಭಾಗಗಳಲ್ಲಿ ಆರೋಗ್ಯ ವೃತ್ತಿಪರರು/ಮುಂಚೂಣಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದಿರುವ ಘಟನೆಗಳು ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ಮೇಲೆ ಯಾವುದೇ ಒಂದು ಸಣ್ಣ ದೌರ್ಜನ್ಯದ ಪ್ರಕರಣ ನಡೆದರೂ ಅದು ಇಡೀ ಆರೋಗ್ಯ ರಕ್ಷಣಾ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಿಸುವ ಸಾಧ್ಯತೆಗಳಿರುತ್ತವೆ.

ಭಾರತದ ಸರ್ವೋಚ್ಛ ನ್ಯಾಯಾಲಯ 08.04.2020 ತನ್ನ ನಿರ್ದೇಶನದಲ್ಲಿ ಭಾರತ ಸರ್ಕಾರ, ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಕೋವಿಡ್-19 ಪತ್ತೆಯಾದ ರೋಗಿಗಳಿರುವ ಕಡೆ ಅಥವಾ ಕೋವಿಡ್ ಸೋಂಕು ಶಂಕಿತರಿರುವ ಕಡೆ ಅಥವಾ ಯಾರನ್ನು ಕ್ವಾರಂಟೈನ್ ಮಾಡಿ, ಮನೆಗಳಲ್ಲಿ ಇಡಲಾಗಿದೆಯೋ ಅಂತಹ ಆಸ್ಪತ್ರೆ ಹಾಗೂ ಪ್ರದೇಶಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಆದೇಶಿಸಿತ್ತು. ಅಲ್ಲದೆ ನ್ಯಾಯಾಲಯ, ರೋಗದ ಲಕ್ಷಣಗಳುಳ್ಳ ಜನರನ್ನು ತಪಾಸಣೆ ಮಾಡುವ ಸ್ಥಳಗಳಲ್ಲಿಯೂ ಸಹ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ನಿರ್ದೇಶನ ನೀಡಿತ್ತು.

ಸುಪ್ರೀಂಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ-2005 ಅನುಸಾರ ಎಂಎಚ್ಎ, ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲಾಡಳಿತ, ಆರೋಗ್ಯ ವೃತ್ತಿಪರರು ಅಥವಾ ಸಂಬಂಧಿಸಿದ ವ್ಯಕ್ತಿಗಳು ಅಥವಾ ಸರ್ಕಾರಿ ಆರೋಗ್ಯಾಧಿಕಾರಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಾಯ್ದೆಗಳನ್ವಯ ಅಥವಾ ಯಾವುದೇ ಕಾಯ್ದೆಗಳನ್ನು ಬಳಸಿ, ಕಠಿಣ ದಂಡನಾ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ 2005 ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಅಧಿಕಾರ ಹೊಂದಿರುವ ಅಧಿಕಾರಿ ನ್ಯಾಯಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಆದೇಶಿಸಿದೆ.

ಆರೋಗ್ಯ ವೃತ್ತಿಪರರ ಭದ್ರತೆಯ ಬಗ್ಗೆ ನಿಗಾವಹಿಸಲು ರಾಜ್ಯಮಟ್ಟದಲ್ಲಿ, ಕೇಂದ್ರಾಡಳಿತ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ದಿನದ 24 ಗಂಟೆಗಳೂ ಲಭ್ಯವಿರುವಂತಹ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಎಂಎಚ್ಎ, ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು. ಅವರು ಯಾವುದೇ ರೀತಿಯ ದೌರ್ಜನ್ಯ ಪ್ರಕರಣಗಳು ನಡೆದರೆ, ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು.

ಇದಲ್ಲದೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡುವಂತೆ ಮನವಿ ಮಾಡಲಾಗಿತ್ತು ಹಾಗೂ ವೈದ್ಯಕೀಯ ಸಮುದಾಯಗಳ ನಡುವೆಯೇ ಸ್ಥಳೀಯ ಐಎಂಎ ಶಾಖೆಗಳ ಸದಸ್ಯರು, ಸ್ಥಳೀಯ ಜನರು ಸೇರಿ ನೋಡಲ್ ಅಧಿಕಾರಿಗಳ ನೇಮಿಸಬೇಕು. ಇದರಿಂದ ತಳಮಟ್ಟದಲ್ಲಿ ನಿಯಮಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತವೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿರುವ ಅಧಿಕೃತ ಸಂವಹನ ಆದೇಶಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

***



(Release ID: 1617343) Visitor Counter : 246