ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವರು ವೈದ್ಯರು ಮತ್ತು ಐಎಂಎ ಹಿರಿಯ ಪ್ರತಿನಿಧಿಗಳೊಂದಿಗೆ ಚರ್ಚೆ
Posted On:
22 APR 2020 12:12PM by PIB Bengaluru
ಕೇಂದ್ರ ಗೃಹ ಸಚಿವರು ವೈದ್ಯರು ಮತ್ತು ಐಎಂಎ ಹಿರಿಯ ಪ್ರತಿನಿಧಿಗಳೊಂದಿಗೆ ಚರ್ಚೆ
ಕೊವಿಡ್-19 ರ ವಿರುದ್ಧದ ಹೋರಾಟದಲ್ಲಿ ಅವರಿಗೆ ಭದ್ರತೆ ಒದಗಿಸುವುದಾಗಿ ಭರವಸೆ
ಆರೋಗ್ಯ ವೃತ್ತಿಪರರ ಮೇಲಿನ ದಾಳಿ ಖಂಡನೀಯ; ಅವರ ಯೋಗಕ್ಷೇಮ ಮತ್ತು ರಕ್ಷಣೆಗಾಗಿ ಮೋದಿ ಸರ್ಕಾರ ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ: ಶ್ರೀ ಅಮಿತ್ ಶಾ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದ ವೈದ್ಯರು ಮತ್ತು ಹಿರಿಯ ಪ್ರತಿನಿಧಿಗಳೊಂದಿಗೆ ಇಂದು ನವದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು.
ವೈದ್ಯರ ಸಾಮಾನ್ಯ ಕಾರ್ಯನಿರ್ವಹಣೆ ಮತ್ತು ವಿಶೇಷವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರ ಪಾತ್ರವನ್ನು ಶ್ಲಾಘಿಸಿದರು ಮತ್ತು ವೈದ್ಯರು ಈ ಹೋರಾಟದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುವುದನ್ನು ಮುಂದುವೆರೆಸಲಿದ್ದಾರೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು. ಕೊವಿಡ್-19 ರಂತಹ ಮಾರಣಾಂತಿಕ ರೋಗಗಳಿಂದ ಜನರನ್ನು ಸುರಕ್ಷಿತವಾಗಿಡಲು ವೈದ್ಯರು ಮಾಡುತ್ತಿರುವ ತ್ಯಾಗವನ್ನು ಅವರು ಅಭಿನಂದಿಸಿದರು.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ ವ್ಯಕ್ತಪಡಿಸಿದ ತಮ್ಮ ಭದ್ರತೆಯ ಆತಂಕದ ಕುರಿತು, ಕಾಳಜಿ ವ್ಯಕ್ತಪಡಿಸಿದ ಗೃಹ ಮಂತ್ರಿಗಳು. ಅವರ ಯೋಗಕ್ಷೇಮ ಮತ್ತು ರಕ್ಷಣೆಗಾಗಿ ಮೋದಿ ಸರ್ಕಾರ ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ ಎಂದು ಭರವಸೆ ನೀಡಿದರು.
ಆರೋಗ್ಯ ಸಿಬ್ಬಂದಿ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಖಂಡಿಸಿದ ಶ್ರೀ ಶಾ ರವರು, ಪ್ರಧಾನ ಮಂತ್ರಿ ಅವರು ಈ ಎಲ್ಲ ಸಮಸ್ಯೆಗಳು ಮತ್ತು ವೈದ್ಯರ ಕಳವಳವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಹೇಳಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು. ಜಾಗತಿಕ ಮತ್ತು ರಾಷ್ಟ್ರೀಯ ಹಿತದೃಷ್ಠಿಯಿಂದ ವೈದ್ಯರು ಪ್ರಸ್ತಾಪಿಸಿದ ಸಾಂಕೇತಿಕ ಪ್ರತಿಭಟನೆಯನ್ನು ಕೂಡಾ ಮಾಡಬಾರದೆಂದು ಅವರು ವೈದ್ಯರಲ್ಲಿ ಮನವಿ ಮಾಡಿಕೊಂಡರು.
ಕೇಂದ್ರ ಸರ್ಕಾರ ಉನ್ನತ ಮಟ್ಟದಲ್ಲಿ ತಕ್ಷಣ ಪ್ರತಿಕ್ರಿಯೆ ನೀಡಿದ್ದರಿಂದ ಮತ್ತು ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವರು ಭರವಸೆ ನೀಡಿದ್ದರಿಂದ, ಐಎಂಎ ಪ್ರಸ್ತಾಪಿಸಿದ ಪ್ರತಿಭಟನೆಯನ್ನು ಹಿಂಪಡೆದಿದೆ ಮತ್ತು ಕೊವಿಡ್-19 ವಿರುದ್ಧದ ಹೋರಾಟವನ್ನು ತಡೆರಹಿತವಾಗಿ ಮುಂದುವರೆಸಲು ನಿರ್ದರಿಸಿದೆ.
ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಹಿರಿಯ ವೈದ್ಯರು ಮತ್ತು ನೀತಿ ಆಯೋಗದ ಪ್ರತಿನಿಧಿಗಳು ಕೂಡ ಹಾಜರಿದ್ದರು.
***
(Release ID: 1617211)
Visitor Counter : 983
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam