PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
21 APR 2020 6:53PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)
- ದೇಶದಲ್ಲಿ ಇದುವರೆಗೆ 18,601 ಕೋವಿಡ್ -19 ದೃಢೀಕೃತ ಪ್ರಕರಣಗಳು ವರದಿಯಾಗಿವೆ, ಇವುಗಳಲ್ಲಿ 3252 ಮಂದಿ ಗುಣಮುಖರಾಗಿದ್ದಾರೆ/ ಬಿಡುಗಡೆಯಾಗಿದ್ದಾರೆ. ಮೃತರ ಸಂಖ್ಯೆ 590
- 23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 61 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.
- ಕೋವಿಡ್ -19 ರ ಕುರಿತು ನಾಗರಿಕರ ಭಾಗವಹಿಸುವಿಕೆಗೆ ಸಂವಾದ ವೇದಿಕೆ “ಕೋವಿಡ್ ಇಂಡಿಯಾ ಸೇವಾ’ ಕ್ಕೆ ಡಾ. ಹರ್ಷ ವರ್ಧನ ಅವರಿಂದ ಚಾಲನೆ.
- ಪಿ.ಎಂ.-ಕಿಸಾನ್ ಯೋಜನೆ ಅಡಿಯಲ್ಲಿ 8.89 ಕೋಟಿ ಕುಟುಂಬಗಳಿಗೆ ಲಾಕ್ ಡೌನ್ ಅವಧಿಯಲ್ಲಿ 17,793 ಕೋ.ರೂ. ಬಿಡುಗಡೆ.
- ಭಾರತವು ಕೋವಿಡ್ -19 ನ್ನು ಸೋಲಿಸುವುದನ್ನು ಖಾತ್ರಿಪಡಿಸುವಲ್ಲಿ ನಾಗರಿಕ ಸೇವಾ ಅಧಿಕಾರಿಗಳ ಪ್ರಯತ್ನಕ್ಕೆ ಪ್ರಧಾನ ಮಂತ್ರಿ ಮೆಚ್ಚುಗೆ.
- ಮರು ನವೀಕೃತ ಇಂಧನ ಯೋಜನೆಗಳಿಗೆ ಲಾಕ್ ಡೌನ್ ಬಳಿಕವೂ 30 ದಿನಗಳ ಕಾಲಾವಧಿ ವಿಸ್ತರಣೆ.
ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ ಡೇಟ್
ದೇಶದಲ್ಲಿ ಒಟ್ಟು 18,601 ದೃಢೀಕೃತ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ . 3252 ಮಂದಿ ಅಂದರೆ ಒಟ್ಟು ಪ್ರಕರಣಗಳಲ್ಲಿ 17.48 % ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕೋವಿಡ್ -19 ರಿಂದ ಇದುವರೆಗೆ 590 ಸಾವುಗಳು ಸಂಭವಿಸಿವೆ. 23 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಇನ್ನೂ 61 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಸಿ.ಎಸ್.ಐ.ಆರ್. ಸಕ್ರಿಯ ಹೋಲಿಕೆದಾರ ನಿಯಂತ್ರಿತ ಯಾದೃಚ್ಚಿಕ ಕ್ಲಿನಿಕಲ್ ಪರೀಕ್ಷೆಗಳನ್ನು ಕೋವಿಡ್ -19 ರಿಂದ ಗಂಭೀರ ಅನಾರೋಗ್ಯದಲ್ಲಿರುವ ರೋಗಿಗಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ಔಷಧಿಯ ದಕ್ಷತೆ ಪರಿಶೀಲಿಸುವುದಕ್ಕಾಗಿ ನಡೆಸಲು ಉದ್ದೇಶಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ ಅವರು ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಪತ್ರ ಬರೆದು ರಕ್ತದ ಬ್ಯಾಂಕ್ ಗಳಲ್ಲಿ ಸಾಕಷ್ಟು ರಕ್ತದ ದಾಸ್ತಾನು ಇರುವುದನ್ನು ಖಾತ್ರಿಪಡಿಸುವಂತೆ ತಿಳಿಸಿದ್ದಾರೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616753
ಕೋವಿಡ್ -19 ವಿಷಯದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಸಂವಾದ ವೇದಿಕೆ “ಕೋವಿಡ್ ಇಂಡಿಯಾ ಸೇವಾ” ಕ್ಕೆ ಡಾ. ಹರ್ಷ ವರ್ಧನ್ ಚಾಲನೆ
ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ -19 ರ ಬಿಕ್ಕಟ್ಟಿನ ಸ್ಥಿತಿಯಲ್ಲಿ ನಾಗರಿಕರ ಪ್ರಶ್ನೆಗಳಿಗೆ ತಕ್ಷಣವೇ , ಅದೇ ಸಮಯದಲ್ಲಿ ಉತ್ತರಿಸಲು ಮತ್ತು ಪಾರದರ್ಶಕ ಇ-ಆಡಳಿತದ ಒದಗಣೆಗೆ ಅನುವು ಮಾಡಿಕೊಡಲು ಈ ಉಪಕ್ರಮ ಉಪಯುಕ್ತವಾಗಲಿದೆ. ಇದರ ಮೂಲಕ ಜನತೆ ತಮ್ಮ ಪ್ರಶ್ನೆಗಳನ್ನು @CovidIndiaSeva ದಲ್ಲಿ ಕೇಳಬಹುದು ಮತ್ತು ಅದಕ್ಕೆ ಅದೇ ಸಮಯದಲ್ಲಿ ಉತ್ತರವನ್ನೂ ಪಡೆಯಬಹುದು. @CovidIndiaSeva ವು ಬೃಹತ್ ಪ್ರಮಾಣದ ಟ್ವೀಟ್ ಗಳ ಸಂಸ್ಕರಣೆಗೆ ಡ್ಯಾಶ್ ಬೋರ್ಡ್ ಆಗಿ ಸಹಾಯ ಮಾಡುತ್ತದೆ, ಅವುಗಳನ್ನು ಪರಿಹಾರ ಸಾಧ್ಯವನ್ನಾಗಿಸುತ್ತದೆ ಮತ್ತು ಅವುಗಳನ್ನು ತಕ್ಷಣವೇ ಪರಿಹಾರ ಒದಗಿಸುವುದಕ್ಕಾಗಿ ಸಂಬಂಧಿತ ಪ್ರಾಧಿಕಾರಗಳಿಗೆ ರವಾನಿಸುತ್ತದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616667
ಕೋವಿಡ್ -19 ರ ವಿರುದ್ದ ಹೋರಾಡಲು ಜಾರಿ ಮಾಡಲಾಗಿರುವ ಲಾಕ್ ಡೌನ್ ಅನುಷ್ಟಾನದ ಪರಾಮರ್ಶೆ, ಮತ್ತು ಸ್ಥಳದಲ್ಲಿಯೇ ಮೌಲ್ಯಮಾಪನ ಮಾಡಲು ಕೇಂದ್ರ ತಂಡಗಳಿಗೆ ಪಶ್ಚಿಮ ಬಂಗಾಳ ಯಾವುದೇ ಅಡ್ಡಿ ಆತಂಕಗಳನ್ನು ಒಡ್ಡಬಾರದು ಎಂದು ಕೇಂದ್ರವು ನಿರ್ದೇಶನ ನೀಡಿದೆ
ಕೋವಿಡ್ -19 ರ ವಿರುದ್ದ ಹೋರಾಡಲು ಜಾರಿ ಮಾಡಲಾಗಿರುವ ಲಾಕ್ ಡೌನ್ ಅನುಷ್ಟಾನದ ಪರಾಮರ್ಶೆ, ಮತ್ತು ಸ್ಥಳದಲ್ಲಿಯೇ ಮೌಲ್ಯಮಾಪನ ಮಾಡಲು ನಿಯೋಜಿಸಲಾಗಿರುವ ಕೇಂದ್ರ ತಂಡಗಳ ಕೆಲಸಕ್ಕೆ ಯಾವುದೇ ಅಡ್ಡಿ ಆತಂಕ ಉಂಟು ಮಾಡಬಾರದು ಕೇಂದ್ರ ಸರಕಾರವು ಪಶ್ಚಿಮ ಬಂಗಾಳ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಂತರ ಸಚಿವಾಲಯ ಕೇಂದ್ರ ತಂಡಗಳಿಗೆ (ಐ.ಎಂ.ಸಿ.ಟಿ. ಗಳು) ಕೋಲ್ಕೊತ್ತಾ ಮತ್ತು ಜಲಪೈಗುರಿಗಳಲ್ಲಿ ರಾಜ್ಯ ಮತ್ತು ಸ್ಥಳೀಯಾಡಳಿತಗಳಿಂದ ಅವಶ್ಯ ಸಹಕಾರ ಲಭಿಸದೇ ಇರುವ ಬಗ್ಗೆ ಎಂ.ಎಚ್.ಎ.ಯ ಗಮನಕ್ಕೆ ತರಲಾಗಿತ್ತು. ಇದಲ್ಲದೆ ಆ ತಂಡಗಳಿಗೆ ಯಾವುದೇ ಭೇಟಿ, ಆರೋಗ್ಯ ವೃತ್ತಿಪರರ ಜೊತೆ ಸಂವಾದ , ಮತ್ತು ತಳ ಮಟ್ಟದಲ್ಲಿಯ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು.
ವಿವರಗಳಿಗೆ: https://pib.gov.in/PressReleseDetail.aspx?PRID=1616755
ಲಾಕ್ ಡೌನ್ ಅವಧಿಯಲ್ಲಿ ಪಿ.ಎಂ. ಕಿಸಾನ್ ಯೋಜನೆ ಅಡಿಯಲ್ಲಿ 8.89 ರೈತ ಕುಟುಂಬಗಳಿಗೆ 17,793 ಕೋ.ರೂ. ಬಿಡುಗಡೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ (ಪಿ.ಎಂ-ಕಿಸಾನ್ ) ಯೋಜನೆ ಅಡಿಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ದಿನಾಂಕ 24.3.2020 ರಿಂದ ಇಂದಿನವರೆಗೆ 8.89 ಕೋಟಿ ರೈತರ ಕುಟುಂಬಗಳಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ ಮತ್ತು 17,793 ಕೋ.ರೂ.ಗಳನ್ನು ಇದುವರೆಗೆ ಬಿಡುಗಡೆ ಮಾಡಲಾಗಿದೆ. ಕೋವಿಡ್ -19 ರ ಇಂದಿನ ಸ್ಥಿತಿಯಲ್ಲಿ ಆಹಾರ ಭದ್ರತೆಯನ್ನು ಒದಗಿಸಲು ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ (ಪಿ.ಎಂ.ಜಿ.ಕೆ.ವೈ.) ಅಡಿಯಲ್ಲಿ ಅರ್ಹ ಮನೆಗಳಿಗೆ ಬೇಳೆ ಕಾಳುಗಳನ್ನು ವಿತರಿಸಲು ನಿರ್ಧರಿಸಿದೆ. ಇದುವರೆಗೆ 107,077.85 ಎಂ.ಟಿ. ಬೇಳೆ ಕಾಳುಗಳನ್ನು ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616597
ಪಿ.ಎಂ.ಜಿ.ಕೆ.ವೈ. ಅಡಿಯಲ್ಲಿ ವಿನಾಯಿತಿ ನೀಡಲಾದ ಪಿ.ಎಫ್. ಟ್ರಸ್ಟ್ ಗಳಿಂದ 40,826 ಸದಸ್ಯರಿಗೆ 481.63 ಕೋ.ರೂ. ವಿತರಣೆ
ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಉಂಟು ಮಾಡಿರುವ ಪರಿಸ್ಥಿತಿಯಿಂದ ಪಾರಾಗಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನಾ (ಪಿ.ಎಂ.ಜಿ.ಕೆ.ವೈ.) ಯೋಜನೆಯನ್ನು ಸರಕಾರ ಘೋಷಿಸಿದ್ದು, ಅದರ ಅಡಿಯಲ್ಲಿ ಇ.ಪಿ.ಎಫ್.ಯೋಜನೆಯಿಂದ ವಿಶೇಷ ಹಿಂಪಡೆಯುವಿಕೆಗೆ ಅವಕಾಶ ಒದಗಿಸಲಾಗಿದೆ. ವಿನಾಯಿತಿ ನೀಡಲಾದ ಪಿ.ಎಫ್. ಟ್ರಸ್ಟ್ ಗಳು ಕೋವಿಡ್ -19 ರ ಈ ಸಂದರ್ಭದಲ್ಲಿ ನೆರವಿಗೆ ಬಂದಿವೆ. 17.04.2020 ರ ಬೆಳಿಗ್ಗೆವರೆಗೆ 481.63 ಕೋ.ರೂ.ಗಳನ್ನು (481,63,76,714 ರೂ.) ಮುಂಗಡವಾಗಿ 40,826 ಪಿ.ಎಫ್ ಸದಸ್ಯರಿಗೆ ವಿತರಿಸಲಾಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616557
ನಾಗರಿಕ ಸೇವೆಗಳ ದಿನದಂದು ನಾಗರಿಕ ಸೇವಾ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಶುಭಾಶಯ ಮತ್ತು ಸರ್ದಾರ್ ಪಟೇಲ್ ಅವರಿಗೆ ಗೌರವಾರ್ಪಣೆ
“ಇಂದು ನಾಗರಿಕ ಸೇವೆಗಳ ದಿನ. ನಾನು ಎಲ್ಲಾ ನಾಗರಿಕ ಸೇವಕರಿಗೆ ಮತ್ತು ಅವರ ಕುಟುಂಬದವರಿಗೆ ಶುಭಾಶಯ ಹೇಳುತ್ತೇನೆ. ಕೋವಿಡ್ -19 ನ್ನು ಭಾರತವು ಯಶಸ್ವಿಯಾಗಿ ಸೋಲಿಸುವುದನ್ನು ಖಾತ್ರಿಗೊಳಿಸುವುದರಲ್ಲಿ ಅವರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ ಅವರು ಪ್ರತಿಯೊಬ್ಬರೂ ಆರೋಗ್ಯದಿಂದಿರಬೇಕು ಎಂದು ಮತ್ತು ಆವಶ್ಯಕತೆಯುಳ್ಳವರಿಗೆ ನೆರವಾಗುತ್ತಾ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ “ ಎಂದು ನಾಗರಿಕ ಸೇವೆಗಳ ದಿನದಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616822
ಭಾರತದ ಕೋವಿಡ್ -19 ವಿರುದ್ದದ ಹೋರಾಟದಲ್ಲಿ ನಾಗರಿಕ ಸೇವಾ ಅಧಿಕಾರಿಗಳ ಅಮೋಘ ಸೇವೆಯನ್ನು ನಾಗರಿಕ ಸೇವಾ ದಿನದಂದು ಶ್ಲಾಘಿಸಿದ ಡಾ. ಜಿತೇಂದ್ರ ಸಿಂಗ್
ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಸಹಾಯ ಮಾಡುವ ಯತ್ನವಾಗಿ 29 ಸೇವೆಗಳ ಸಂಘಟನೆಗಳನ್ನು ಒಗ್ಗೂಡಿಸಿರುವ ಯಶಸ್ವೀ ವೇದಿಕೆಯಾದ ”ಕರುಣಾ’ವನ್ನು ಉದಾಹರಣೆಯಾಗಿ ನೀಡಿದ ಡಾ. ಸಿಂಗ್ ಅಂತರ ಸೇವಾ ಸೌಹಾರ್ದ ಮೈತ್ರಿಗೆ ಕರೆ ನೀಡಿದ್ದಲ್ಲದೆ , ಸರಕಾರದ ಕೋವಿಡ್-19 ಪರಿಹಾರ ಕಾರ್ಯಾಚರಣೆಯಲ್ಲಿ ತಮ್ಮ ಒಂದು ದಿನದ ವೇತನವನ್ನು ಪಿ.ಎಂ. ಕೇರ್ಸ್ ನಿಧಿಗೆ ನೀಡಿರುವುದಕ್ಕಾಗಿ ವೀಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ನಾಗರಿಕ ಸೇವಾ ಅಧಿಕಾರಿಗಳನ್ನು ಶ್ಲಾಘಿಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟವನ್ನು ಜಿಲ್ಲಾಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ ಅವರು ಈ ಜಾಗತಿಕ ಸಾಂಕ್ರಾಮಿಕವನ್ನು ನಿಗ್ರಹಿಸುವ ಭಾರತದ ಭವಿಷ್ಯ ನಾಗರಿಕ ಸೇವಾ ಅಧಿಕಾರಿಗಳ ಹೆಗಲ ಮೇಲಿದೆ ಎಂದೂ ಹೇಳಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1616840
ಭಾರತ ಮತ್ತು ಅಪಘಾನಿಸ್ತಾನಗಳು ಕೋವಿಡ್ -19 ವಿರುದ್ದ ಏಕತ್ರ ಭಾವನೆಯಿಂದ ಒಗ್ಗೂಡಿ ಮತ್ತು ಪರಸ್ಪರ ಹಂಚಿಕೊಂಡ ನಿರ್ಧಾರಗಳೊಂದಿಗೆ ಹೋರಾಡಲಿವೆ, ಎಂದಿದ್ದಾರೆ ಪ್ರಧಾನ ಮಂತ್ರಿ
ಕೋವಿಡ್ -19 ರ ವಿರುದ್ದ ಭಾರತ ಮತ್ತು ಅಪಘಾನಿಸ್ತಾನಗಳು ಏಕತ್ರ ಭಾವನೆಯಿಂದ ಮತ್ತು ಹಂಚಿಕೊಂಡ ನಿರ್ಧಾರಗಳೊಂದಿಗೆ ಒಗ್ಗೂಡಿ ಹೋರಾಡಲಿವೆ ಎಂದು ಪ್ರಧಾನ ಮಂತ್ರಿ ಶೀ ನರೇಂದ್ರ ಮೋದಿ ಅವರಿಂದು ಹೇಳಿದ್ದಾರೆ. ಅಪಘಾನಿಸ್ತಾನದ ಅಧ್ಯಕ್ಷ ಡಾ. ಅಶ್ರಫ್ ಘಾನಿ ಅವರು ಅವಶ್ಯಕ ಔಷಧಿಗಳಾದ ಹೈಡ್ರೋಕ್ಸಿಕ್ಲೋರೋಕ್ವಿನ್, ಪ್ಯಾರಸಿಟಮೋಲ್ ಮತ್ತು ಇತರ ವಸ್ತುಗಳನ್ನು ಅಪಘಾನಿಸ್ತಾನಕ್ಕೆ ಕೊಡಮಾಡಿರುವ ಭಾರತಕ್ಕೆ ಧನ್ಯವಾದ ಸಲ್ಲಿಸಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನ ಮಂತ್ರಿ ಅವರು ಈ ಹೇಳಿಕೆ ನೀಡಿದ್ದಾರೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616564
ನ್ಯೂ ಡೆವಲಪ್ ಮೆಂಟ್ ಬ್ಯಾಂಕಿನ ಗವರ್ನರುಗಳ ಮಂಡಳಿಯ 5 ನೇ ವಾರ್ಷಿಕ ಸಭೆಯಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಭಾಗಿ
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರು ಹೊಸದಿಲ್ಲಿಯಲ್ಲಿ ನ್ಯೂ ಡೆವಲಪ್ ಮೆಂಟ್ ಬ್ಯಾಂಕಿನ ಗವರ್ನರುಗಳ ಮಂಡಳಿಯ 5 ನೇ ವಾರ್ಷಿಕ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು. ಕೋವಿಡ್ -19 ರ ಕುರಿತ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ತುರ್ತುಪರಿಸ್ಥಿತಿ ಸಹಾಯವಾದ ಡಾಲರ್ 1 ಬಿಲಿಯನ್ ಮೊತ್ತವನ್ನು ಭಾರತಕ್ಕೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹೋರಾಟಕ್ಕೆ ನೀಡಿರುವುದೂ ಸೇರಿದಂತೆ ಬ್ರಿಕ್ಸ್ ದೇಶಗಳಿಗೆ ತ್ವರಿತ ಗತಿಯಲ್ಲಿ ಡಾಲರ್ 5 ಬಿಲಿಯನ್ ಗಳನ್ನು ನೀಡುವಲ್ಲಿ ಎನ್.ಡಿ.ಬಿ.ಯ ಪ್ರಯತ್ನಗಳನ್ನು ಕೊಂಡಾಡಿದರು. ಈ ಸೌಲಭ್ಯದಡಿ ನೀಡಲಾಗುತ್ತಿರುವ ನೆರವನ್ನು ಡಾಲರ್ 10 ಬಿಲಿಯನ್ನಿಗೆ ಏರಿಸಬೇಕು ಎಂದೂ ಅವರು ಸಲಹೆ ಮಾಡಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1616598
ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರುಗಳ ತಯಾರಿಕೆಗೆ ಮತ್ತು ಪೆಟ್ರೋಲ್ ಬ್ಲೆಂಡಿಂಗ್ ಮಾಡುವುದಕ್ಕಾಗಿ ಹೆಚ್ಚುವರಿ ಅಕ್ಕಿಯನ್ನು ಎಥೆನಾಲ್ ಆಗಿ ಪರಿವರ್ತನೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಎನ್.ಬಿ.ಸಿ.ಸಿ. ಯ ಸಭೆ ಇಂದು ನಡೆಯಿತು. ಇದರಲ್ಲಿ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)ದಲ್ಲಿರುವ ಹೆಚ್ಚುವರಿ ಅಕ್ಕಿಯನ್ನು ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಗಳ ತಯಾರಿಕೆಗೆ ಬಳಸುವುದಕ್ಕಾಗಿ ಮತ್ತು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ.ಬಿ.ಪಿ.) ಕಾರ್ಯಕ್ರಮದಲ್ಲಿ ಬ್ಲೆಂಡಿಂಗ್ ಮಾಡಲು ಎಥೆನಾಲ್ ಆಗಿ ಪರಿವರ್ತಿಸುವುದಕ್ಕೆ ಅನುಮೋದನೆ ನೀಡಲಾಯಿತು.
ವಿವರಗಳಿಗೆ: https://pib.gov.in/PressReleseDetail.aspx?PRID=1616497
ಸೋಲಾರ್ ಪಿ.ವಿ. ಮೊಡ್ಯೂಲ್ ಗಳು ಮತ್ತು ಸೋಲಾರ್ ಪಿ.ವಿ. ಸೆಲ್ ಗಳ ಉತ್ಪಾದಕರು ಮತ್ತು ಅನುಮೋದಿತ ಮಾದರಿಗಳ ಪಟ್ಟಿ ಅನುಷ್ಟಾನ ಜಾರಿಗೆ ಬರುವ ದಿನಾಂಕಗಳನ್ನು 30.09-2020ರವರೆಗೆ ವಿಸ್ತರಿಸಲಾಗಿದೆ
ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಸಚಿವಾಲಯವು (ಎಂ.ಎನ್.ಆರ್.ಇ.) ಇತ್ತೀಚೆಗೆ ಅಧಿಕೃತ ಜ್ಞಾಪನಪತ್ರವನ್ನು ಹೊರಡಿಸಿ ಸೋಲಾರ್ ಪಿ.ವಿ. ಮೊಡ್ಯೂಲ್ ಗಳು ಮತ್ತು ಸೋಲಾರ್ ಪಿ.ವಿ.ಸೆಲ್ ಗಳ ಅನುಮೋದಿತ ಪಟ್ಟಿ ( ಎ.ಎಲ್.ಎಂ.ಎಂ.) ಅನುಷ್ಟಾನ ಜಾರಿಗೆ ಬರುವ ದಿನಾಂಕಗಳನ್ನು 2020ra ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಈ ಮೊದಲು ಇದು 31.03.2020 ರವರೆಗೆ ಇದ್ದಿತ್ತು.
ವಿವರಗಳಿಗೆ: https://pib.gov.in/PressReleseDetail.aspx?PRID=1616862
ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್.ಇ . ಯೋಜನೆಗಳು ಅಸ್ತವ್ಯಸ್ತಗೊಂಡಿರುವುದನ್ನು ಪರಿಗಣಿಸಿ ಅವುಗಳಿಗೆ ಲಾಕ್ ಡೌನ್ ಬಳಿಕವೂ 30 ದಿನಗಳ ವಿಸ್ತರಣೆಯನ್ನು ಎಂ.ಎನ್.ಆರ್.ಇ. ನೀಡಿದೆ
ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಸಚಿವಾಲಯವು ಮರುನವೀಕೃತ ಇಂಧನ ಅನುಷ್ಟಾನ ಏಜೆನ್ಸಿಗಳಿಗೆ ಆರ್.ಇ. ಯೋಜನೆಗಳಿಗೆ ಕೋವಿಡ್ -19 ರ ಲಾಕ್ ಡೌನ್ ಕಾರಣಕ್ಕಾಗಿ ಅಷ್ಟು ದಿನಗಳ ವಿಸ್ತರಣೆ ಮತ್ತು ಹೆಚ್ಚುವರಿ 30 ದಿನಗಳ ಕಾಲ ಹೆಚ್ಚುವರಿ ಅವಧಿ ವಿಸ್ತರಣೆಯನ್ನು ಇಂತಹ ಲಾಕ್ ಡೌನ್ ಅವಧಿಯ ಬಳಿಕ ಸಹಜಸ್ಥಿತಿ ನೆಲೆಗೊಳಿಸುವುದಕ್ಕಾಗಿ ನೀಡುವುದಾಗಿ ಹೇಳಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616899
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗಳ ಪೀಠಗಳ ಕಾರ್ಯಚಟುವಟಿಕೆ 03.05.2020 ರ ವರೆಗೆ ಅಮಾನತು
ವಿವರಗಳಿಗೆ: https://pib.gov.in/PressReleseDetail.aspx?PRID=1616839
ಕೋವಿಡ್ -19 ವಿರುದ್ದದ ಹೋರಾಟಕ್ಕೆ ಬೆಂಬಲ ನೀಡಿದ ಲೈಫ್ ಲೈನ್ ಉಡಾನ್ ವಿಮಾನಗಳಿಂದ ದೇಶಾದ್ಯಂತ 541 ಟನ್ನಿಗೂ ಅಧಿಕ ವೈದ್ಯಕೀಯ ಸರಕು ರವಾನೆ
ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಏರಿಂಡಿಯಾ, ಅಲಯೆನ್ಸ್ ಏರ್, ಐ.ಎ.ಎಫ್., ಮತ್ತು ಖಾಸಗಿ ಕ್ಯಾರಿಯರ್ ಗಳ ಒಟ್ಟು 316 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯಾಚರಿಸಿ 541.33 ಟನ್ ಸರಕನ್ನು ಸಾಗಿಸಿವೆ. ಲೈಫ್ ಲೈನ್ ಉಡಾನ್ ವಿಮಾನಗಳು ಇಂದಿನವರೆಗೆ ಕ್ರಮಿಸಿದ ವಾಯ ದೂರ 3,14,965 ಕಿಲೋ ಮೀಟರ್. ಪವನ್ ಹಂಸ ಲಿಮಿಟೆಡ್ ಸಹಿತ ಹೆಲಿಕಾಪ್ಟರ್ ಸೇವೆಗಳನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮತ್ತು ಈಶಾನ್ಯ ವಲಯಗಳಲ್ಲಿ ಸಂಕೀರ್ಣ ಸ್ಥಿಯಲ್ಲಿರುವ ರೋಗಿಗಳ ಸ್ಥಳಾಂತರ ಮತ್ತು ವೈದ್ಯಕೀಯ ಸರಕುಗಳ ಸಾಗಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ.2020ರ ಏಪ್ರಿಲ್ 20 ರವರೆಗೆ ಇದು 1.90 ಟನ್ನಿನಷ್ಟು ಸರಕನ್ನು ಸಾಗಿಸಿದೆ ಮತ್ತು ಇವು ಕ್ರಮಿಸಿದ ದೂರ 6537 ಕಿಲೋ ಮೀಟರ್.
ವಿವರಗಳಿಗೆ: https://pib.gov.in/PressReleseDetail.aspx?PRID=1616854
ತ್ವರಿತ ಮರುಪಾವತಿಗಾಗಿ ಇ-ಮೈಲ್ ಗಳನ್ನು ಕಿರುಕುಳ ಎಂದು ತಪ್ಪಾಗಿ ಭಾವಿಸಬಾರದು: ಸಿ.ಬಿ.ಡಿ.ಟಿ.
ಸಾಮಾಜಿಕ ಮಾಧ್ಯಮಗಳಲ್ಲ್ಲಿ ಬರುತ್ತಿರುವ ಕೆಲವು ಮಾಹಿತಿಗಳಿಗೆ ಸಂಬಂಧಿಸಿ ನೇರ ತೆರಿಗೆಗೆಳ ಕೇಂದ್ರೀಯ ಮಂಡಳಿಯು ಸ್ಪಷ್ಟೀಕರಣವನ್ನು ನೀಡಿದ್ದು, ಅದಾಯ ತೆರಿಗೆ ಇಲಾಖೆಯು ವಸೂಲಿ ಪ್ರಕ್ರಿಯೆಯನ್ನು ಬಲವಂತದಿಂದ ಮಾಡುತ್ತಿದೆ, ನವೋದ್ಯಮಗಳಿಗೆ ಬಾಕಿ ಇರುವ ಬೇಡಿಕೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಸತ್ಯವಾದುದಲ್ಲ ಮತ್ತು ಅದು ಸಂಪೂರ್ಣವಾಗಿ ತಿರುಚಿದ ಮಾಹಿತಿ ಎಂಬುದಾಗಿ ಹೇಳಿದೆ.
ವಿವರಗಳಿಗೆ:: https://pib.gov.in/PressReleseDetail.aspx?PRID=1616849
ದೇಶದಲ್ಲಿ ಕೋವಿಡ್ 19 ಜಾಗತಿಕ ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸಲು ಜಿಲ್ಲಾ ಮತ್ತು ಗ್ರಾಮ ಮಟ್ಟದ ಸ್ಥಳೀಯಾಡಳಿತಗಳಿಂದ ನಿರಂತರ ಕ್ರಮಗಳ ಅನುಷ್ತಾನ
ಸ್ಥಳೀಯ ಜನರ ಪ್ರಾಥಮಿಕ ಪರೀಕ್ಷೆ, ಹೋಗುವ ಮತ್ತು ಬರುವ ವ್ಯಕ್ತಿಗಳ ವೈದ್ಯಕೀಯ ಸ್ಕ್ರೀನಿಂಗ್ ಗಾಗಿ ತಪಾಸಣಾ ಠಾಣಾಗಳ ರಚನೆ, ಸಾರ್ವಜನಿಕ ಸ್ಥಳಗಳ ನಿಯಮಿತ ನೈರ್ಮಲ್ಯೀಕರಣ ಮತ್ತು ಕ್ವಾರಂಟೈನ್ ಕೇಂದ್ರಗಳ ನಿರ್ಮಾಣ ಹಾಗು ಖರೀದಿ ಕೇಂದ್ರಗಳ ನಿರಂತರ ಪರಿವೀಕ್ಷಣೆಗಳು ಈ ಕ್ರಮಗಳಲ್ಲಿ ಸೇರಿವೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1616857
ಲಾಕ್ ಡೌನ್ ಅವಧಿಯಲ್ಲಿ ಆಹಾರ ಧಾನ್ಯಗಳ ಪೂರೈಕೆಯನ್ನು ನಿರ್ವಹಿಸಲು ಎಫ್.ಸಿ.ಐ.ಯಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಎರಡು ನೌಕೆಗಳು ಮತ್ತು ಲಕ್ಷದ್ವೀಪ ದ್ವೀಪಕ್ಕೆ 7 ಸಣ್ನ ಹಡಗುಗಳ ರವಾನೆ
ಅಂಡಮಾನ್ ಮತ್ತು ನಿಕೋಬಾರ್ ಹಾಗು ಲಕ್ಷ ದ್ವೀಪಕ್ಕೆ ಲಾಕ್ ಡೌನ್ ಅವಧಿಯಲ್ಲಿ ನಿರಂತರ ಆಹಾರ ಧಾನ್ಯಗಳ ಪೂರೈಕೆಯನ್ನು ಭಾರತೀಯ ಆಹಾರ ನಿಗಮ ಕಳೆದ 27 ದಿನಗಳಿಂದ ವೀರೋತ್ಸಾಹದಿಂದ ನಿರ್ವಹಿಸುತ್ತಿದೆ. ಕಳೆದ 27 ದಿನಗಳಲ್ಲಿ 6500 ಎಂ.ಟಿ. ಆಹಾರ ಧಾನ್ಯಗಳನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಾಗಿಸಲಾಗಿದ್ದು, ಇದು ತಿಂಗಳ ಸರಾಸರಿಗಿಂತ ದುಪ್ಪಟ್ಟಾಗಿದೆ. ಮತ್ತು ಲಕ್ಷದ್ವೀಪಕ್ಕೆ 1750 ಎಂ.ಟಿ. ಸಾಗಿಸಲಾಗಿದ್ದು, ತಿಂಗಳ ಸರಾಸರಿಯ ಮೂರು ಪಟ್ಟು ಆಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616878
ಜಾಗತಿಕ ಸಾಂಕ್ರಮಿಕ ಕೋವಿಡ್ -19 ರ ಹಿನ್ನೆಲೆಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ವಿವಿಧ ಧನಾತ್ಮಕ ಕ್ರಮಗಳು
ಬುಡಕಟ್ಟು ಜನರನ್ನು ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ -19) ನಿಂದ ರಕ್ಷಿಸಲು ಮತ್ತು ಚಲನ ವಲನ ನಿರ್ಬಂಧದ ಬಳಿಕ ಹಾಗು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಂತರ ಆರ್ಥಿಕ ಬೆಳವಣಿಗೆಯನ್ನು ಮರುಸ್ಥಾಪಿಸಲು ವಿವಿಧ ಧನಾತ್ಮಕ ಕ್ರಮಗಳ ಅನುಷ್ಟಾನವನ್ನು ಜಾಗತಿಕ ಸಾಂಕ್ರಾಮಿಕದಿಂದ ಬುಡಕಟ್ಟು ಜನರ ರಕ್ಷಣೆ ಪ್ರಕ್ರಿಯೆಯ ಅಂಗವಾಗಿ ಕೈಗೆತ್ತಿಕೊಂಡಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616900
ಕೇಂದ್ರ ಎಚ್.ಆರ್.ಡಿ.ಸಚಿವರ ಅಧ್ಯಕ್ಷತೆಯಲ್ಲಿ ಸ್ವಯಂ ಮತ್ತು ಸ್ವಯಂಪ್ರಭಾ ಕುರಿತ ಪರಿಶೀಲನಾ ಸಭೆ
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾದ ಶ್ರೀ ರಮೇಶ ಪೋಖ್ರಿಯಾಲ್ ನಿಶಾಂಕ್ ಅವರು ರಾಷ್ಟ್ರೀಯ ಆನ್ ಲೈನ್ ಶಿಕ್ಷಣ ವೇದಿಕೆಯಾದ ಸ್ವಯಂ ಮತ್ತು 32 ಡಿ.ಟಿ.ಎಚ್. ಟೆಲಿವಿಶನ್ ಶಿಕ್ಷಣ ಚಾನೆಲ್ ಗಳಾದ ಸ್ವಯಂ ಪ್ರಭಾ ಗಳ ವಿವರವಾದ ಪ್ರಗತಿ ಪರಿಶೀಲನೆ ನಡೆಸಿದರು. ಪ್ರಸ್ತುತ ಸ್ವಯಂ ನಲ್ಲಿ 1902 ಕೋರ್ಸುಗಳು ಲಭ್ಯ ಇವೆ. ಉನ್ನತ ಗುಣಮಟ್ಟದ ಶಿಕ್ಷಣ ಕಾರ್ಯಕ್ರಮಗಳನ್ನು ಜಿಸ್ಯಾಟ್ 15 ಬಳಸಿ 24*7 ಆಧಾರದಲ್ಲಿ ಪ್ರಸಾರ ಮಾಡುವ 32 ಡಿ.ಟಿ.ಎಚ್. ಗುಂಪಿನ ಚಾನೆಲ್ ಗಳ ಆರಂಭದ ಬಳಿಕ 1.56 ಕೋಟಿ ವಿದ್ಯಾರ್ಥಿಗಳಿಗೆ ಈ ಕೋರ್ಸುಗಳನ್ನು ಒದಗಿಸಲಾಗುತ್ತಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616835
ಪಿ.ಐ.ಬಿ.ಯ ವಸ್ತು ಸ್ಥಿತಿ ಪರಿಶೀಲನಾ ಟ್ವೀಟ್ ಗಳು ಇಂದು ಅಧಿಕೃತ ಹೇಳಿಕೆಗಳನ್ನು ಐದು ಪಟ್ಟು ಟ್ವೀಟ್ ಮಾಡಿವೆ
ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗುವುದಕ್ಕೆ ತಡೆಯೊಡ್ದಲು ಮತ್ತು ಸುಪ್ರೀಂ ಕೋರ್ಟಿನ ಅಭಿಪ್ರಾಯಗಳ ಹಿನ್ನೆಲೆಯಲ್ಲಿ , ಪಿ.ಐ.ಬಿ.ಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ವೈರಲ್ ಆಗುವ ವದಂತಿಗಳನ್ನು ಮಟ್ಟ ಹಾಕಲು ಪ್ರತ್ಯೇಕ ಘಟಕವನ್ನು ಸ್ಥಾಪಿಸಿದೆ. “‘PIBFactCheck’ ಎಂಬುದು ಟ್ವಿಟರಿನಲ್ಲಿರುವ ಪರಿಶೀಲನೆ ಮಾಡಲಾದ ವ್ಯವಸ್ಥೆಯಾಗಿದ್ದು, ಅದು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುವ ಸಂದೇಶಗಳ ಮೇಲೆ ನಿಗಾ ಇಡುತ್ತದೆ. ಮತ್ತು ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯಲು ಸಮಗ್ರ ಪರಿಷ್ಕರಣೆಯನ್ನು ನಡೆಸುತ್ತದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616830
ಕೋವಿಡ್ -19 ವಿರುದ್ದದ ಸಮರದಲ್ಲಿ ಹೆಚ್ಚು ಜನರನ್ನು ಸೇರಿಸಿಕೊಳ್ಳುವ ಮೂಲಕ ನೆರವಿಗೆ ರೊಟೇರಿಯನ್ ಗಳು ಮುಂದೆ ಬರಲಿ- ಡಾ. ಹರ್ಷ ವರ್ಧನ್
ಕೋವಿಡ್ -19 ರ ವಿರುದ್ದದ ನಮ್ಮ ಹೋರಾಟದಲ್ಲಿ ರೊಟೇರಿಯನ್ ಗಳು ಬಹಳ ದೊಡ್ದ ಸಹಕಾರ ಕೊಟ್ಟಿದ್ದಾರೆ, ನಾನು ಅವರ ಮೌಲ್ಯವನ್ನು ಗೌರವಿಸುತ್ತೇನೆ. ಪಿ.ಎಂ. ಕೇರ್ಸ್ ದೇಣಿಗೆಯಲ್ಲಿ , ಅಸ್ಪತ್ರೆಗಳಿಗೆ ಸಲಕರಣೆ, ಸ್ಯಾನಿಟೈಸರ್ ಗಳು, ಆಹಾರ, ಪಿ.ಪಿ.ಇ.ಕಿಟ್ ಗಳು ಮತ್ತು ಎನ್ 95 ಮುಖಗವಸು ಇತ್ಯಾದಿಗಳ ಕೊಡುಗೆಯಲ್ಲಿ ಅವರ ಕೊಡುಗೆ ಮೆಚ್ಚತಕ್ಕದ್ದು” ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ದೇಶಾದ್ಯಂತ ಇರುವ ರೊಟೇರಿಯನ್ನರ ಜೊತೆ ಇನ್ನಷ್ಟು ಜನರನ್ನು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಸಂದರ್ಭ ಅವರು ಈ ಮಾತುಗಳನ್ನು ಹೇಳಿದ್ದಾರೆ..
ವಿವರಗಳಿಗೆ: https://pib.gov.in/PressReleseDetail.aspx?PRID=1616901
ಕೋವಿಡ್ -19 ಕ್ಕೆ ಸಂಬಂಧಿಸಿದ 25,000 ಕ್ಕೂ ಅಧಿಕ ಪೋರ್ಟಲ್ ಕುಂದುಕೊರತೆಗಳನ್ನು ಏಪ್ರಿಲ್ 1 ರಿಂದ ಆರಂಭಗೊಂಡು ಕಳೆದ 20 ದಿನಗಳಲ್ಲಿ ಇತ್ಯರ್ಥ ಮಾಡಲಾಗಿದೆ: ಡಾ. ಜಿತೇಂದ್ರ ಸಿಂಗ್
ಕುಂದುಕೊರತೆಗಳ ಪೋರ್ಟಲಿನಲ್ಲಿರುವ ರಾಷ್ಟ್ರೀಯ ನಿಗಾ ಡ್ಯಾಶ್ ಬೋರ್ಡ್ (https://darpg.gov.in)ನ್ನು ಕೋವಿಡ್ ಸಂಬಂಧಿತ ಕುಂದುಕೊರತೆಗಳ ಪರಿಹಾರಕ್ಕಾಗಿರುವ ಗವಾಕ್ಷವಾಗಿ ಸ್ಥಾಪಿಸಲಾಗಿದ್ದು, ಕೋವಿಡ್ ಗೆ ಸಂಬಂಧಿಸಿದ ಯಾವುದೇ ಕುಂದುಕೊರತೆ ನೇರವಾಗಿ ಇದರಲ್ಲಿ ನೊಂದಾವಣೆಯಾಗುತ್ತದೆ, ಅದರನ್ವಯ ಸಂಬಂಧಿತರಿಂದ ಅನುಸರಣಾ ಕ್ರಮಗಳು ನಡೆಯುತ್ತವೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1616828
ದಿಲ್ಲಿ ಪೊಲೀಸರಿಗೆ ನೆರವಾಗಲು ರೈಲ್ವೇಯು ದಿನವೊಂದಕ್ಕೆ 10000 ನೀರಿನ ಬಾಟಲುಗಳನ್ನು ಕೋವಿಡ್ ಕರ್ತವ್ಯದಲ್ಲಿರುವ ದಿಲ್ಲಿ ಪೊಲೀಸು ಸಿಬ್ಬಂದಿಗಳಿಗೆ ಒದಗಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ
ಬೇಸಗೆಯ ಉಷ್ಣಾಂಶ ಹೆಚ್ಚುತ್ತಿದ್ದಂತೆ , ಭಾರತೀಯ ರೈಲ್ವೇಯು ಅದರ ಸಾರ್ವಜನಿಕ ರಂಗದ ಉದ್ಯಮವಾದ ಐ.ಆರ್.ಸಿ.ಟಿ.ಸಿ. ನೆರವಿನೊಂದಿಗೆ ಕೋವಿಡ್ ವಿರುದ್ದದ ಹೋರಾಟದಲ್ಲಿ ರಸ್ತೆ ನಾಕಾಗಳು ಮತ್ತು ಇತರ ಸ್ಥಳಗಳಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸರಿಗೆ ರೈಲ್ ನೀರ್ ನೀರಿನ ಬಾಟಲುಗಳನ್ನು ವಿತರಿಸಲು ಆರಂಭಿಸಿದೆ. ಇದುವರೆಗೆ 50000 ಕ್ಕೂ ಅಧಿಕ ಬಾಟಲುಗಳನ್ನು ವಿತರಿಸಲಾಗಿದೆ; ಈ ವ್ಯವಸ್ಥೆಗಳು ಮೇ 3 ರ ವರೆಗೆ ಮುಂದುವರೆಯುತ್ತವೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616676
ಪುಣೆಯ ಮೊಬೈಲ್ ಆಪ್ ಸೈಯಂ ಗೃಹ ಕ್ವಾರಂಟೈನ್ ನಾಗರಿಕರನ್ನು ಪತ್ತೆ ಮಾಡುತ್ತದೆ
ಗೃಹ ಕ್ವಾರಂಟೈನ್ ಆಗಿರುವ ನಾಗರಿಕರ ಮೇಲೆ ಸಮರ್ಪಕ ಹದ್ದುಗಣ್ಣು ಇಡಲು ಮತ್ತು ಅವರು ನಿಜವಾಗಿಯೂ ಗೃಹ ಕ್ವಾರಂಟೈನ್ ಆಗಿ ಮನೆಯಲ್ಲಿಯೇ ಇದ್ದಾರೆಯೆ ಎಂಬುದನ್ನು ಖಾತ್ರಿಪಡಿಸಲು ಮೊಬೈಲ್ ಅಪ್ಲಿಕೇಶನ್ ಸೈಯಂ ನ್ನು ಸ್ಮಾರ್ಟ್ ಸಿಟಿ ಮಿಷನ್ (ಎಸ್.ಸಿ.ಎಂ.) ಅಡಿಯಲ್ಲಿ ಪುಣೆಯ ಮುನ್ಸಿಪಲ್ ಕಾರ್ಪೋರೇಶನ್ ಅಭಿವೃದ್ದಿಪಡಿಸಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616686
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಜಾರಿಯಲ್ಲಿರುವ ಲಾಕ್ ಡೌನ್ ನಡುವೆ ಇಂಧನ ಸಚಿವಾಲಯದ ಸಾರ್ವಜನಿಕ ರಂಗದ ಉದ್ಯಮ ಅರ್.ಇ.ಸಿ.ಯಿಂದ ಪರಿಹಾರ ಕಾರ್ಯ
ನವರತ್ನ ಸಿ.ಪಿ. ಎಸ್.ಇ. ಆಗಿರುವ ಆರ್.ಇ.ಸಿ ಲಿಮಿಟೆಡ್ ಲಾಕ್ ಡೌನ್ ಅವಧಿಯಲ್ಲಿ ಬೇಯಿಸಿದ ಆಹಾರ, ಪಡಿತರ , ಸವಲತ್ತುಗಳ ಪೊಟ್ಟಣಗಳು, ಮುಖಗವಸುಗಳು, ಸ್ಯಾನಿಟೈಸರುಗಳನ್ನು ಒದಗಿಸುತ್ತಿರುವುದಲ್ಲದೆ ಆಶ್ರಯವನ್ನೂ ನೀಡುತ್ತಿದೆ. ಇದರ ಪ್ರಯೋಜನವನ್ನು 76,000 ದಿನಗೂಲಿಗಳು ಮತ್ತು ಅವರ ಕುಟುಂಬಗಳು ಪಡೆಯುತ್ತಿವೆ. ಆರ್.ಇ.ಸಿ.ಪ್ರತಿಷ್ಟಾನವು ಒಟ್ಟು 7 ಕೋ.ರೂ.ಗಳ ನಿಧಿಯನ್ನು ಈ ಕಾರ್ಯಚಟುವಟಿಕೆಗಳಿಗಾಗಿ ಮಂಜೂರು ಮಾಡಿದೆ ಮತ್ತು ಇನ್ನಷ್ಟು ಹಣಕಾಸು ಮಂಜೂರಾತಿಯ ಹಾದಿಯಲ್ಲಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1616837
ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ
- ಚಂಡೀಗಢ: ಚಂಡೀಗಢ ಆಡಳಿತವು 6670 ನೊಂದಾಯಿತ ನಿರ್ಮಾಣ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯಲ್ಲಿ ಅವರ ನಿರುದ್ಯೋಗ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಪರಿಹಾರವಾಗಿ 3000/- ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ. ಈ ಮೊತ್ತವು ಈಗಾಗಲೇ ಮಂಜೂರು ಮಾಡಲಾದ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ ಅಡಿಯಲ್ಲಿ ಮಂಜೂರು ಮಾಡಲಾದ 3000/- ರೂ ಗಳ ಮೊತ್ತವನ್ನು ಒಳಗೊಂಡಿಲ್ಲ. ನಗದನ್ನು ನೇರವಾಗಿ ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಲಾಗುವುದು. ಸೋಂಕಿನ ಸಾಧ್ಯತೆಯನ್ನು ತಡೆಯಲು ಮಾಧ್ಯಮಗಳ ಪ್ರತಿನಿಧಿಗಳನ್ನು ಪರೀಕ್ಷಿಸಲು ವಿಶೇಷ ಶಿಬಿರ ನಡೆಸುವಂತೆ ಚಂಡೀಗಢ ಆಡಳಿತಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
- ಪಂಜಾಬ್: ಕೋವಿಡ್ -19 ರ ವಿವರವಾದ ಮಾಹಿತಿ ಜನತೆಗೆ ಲಭ್ಯವಾಗುವಂತೆ ಮಾಡಲು ಪಂಜಾಬಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವ್ಯಾಟ್ಸ್ ಪ್ ಬೂತ್ ಮತ್ತು ಚಾಟ್ ಬೂತ್ ಗಳನ್ನು ಫೇಸ್ ಬುಕ್ ನಲ್ಲಿ ಆರಂಭಿಸಿದೆ. ಕೇಂದ್ರ ಸರಕಾರ ಅನುಮತಿಸಿದ ಸಡಿಲಿಕೆಗಳ ಹೊರತಾಗಿಯೂ ರಾಜ್ಯವ್ಯಾಪೀ ಕರ್ಫ್ಯೂ ಸಡಿಲಿಕೆ ಇಲ್ಲ ಎಂಬ ತಮ್ಮ ನಿರ್ಧಾರದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಸೋಂಕುರಹಿತ ವಲಯಗಳಲ್ಲಿ ಕೈಗಾರಿಕಾ ಘಟಕಗಳಿಗೆ ಕಾರ್ಯಚಟುವಟಿಕೆ ನಡೆಸಲು ಅನುಮತಿ ನೀಡಲಾಗುವುದು, ಮತ್ತು ಅವು ರಾಜ್ಯ ಸರಕಾರ ಈ ಮೊದಲು ಹೊರಡಿಸಿದ ಆದೇಶಗಳಿಗೆ ಹಾಗು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳಿಗೆ ಬದ್ದವಾಗಿರಬೇಕಾಗುತ್ತದೆ ಎಂದು ಸ್ಪಷ್ಟೀಕರಿಸಿದ್ದಾರೆ.
- ಹರ್ಯಾಣ: ಸರಕಾರದ ಎಲ್ಲಾ ಕಲ್ಯಾಣ ನೀತಿಗಳು ಮತ್ತು ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ಲಭ್ಯವಾಗುವುದನ್ನು ಖಾತ್ರಿಪಡಿಸುವುದು ರಾಜ್ಯ ಸರಕಾರದ ಉದೇಶವಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಮನೋಹರ ಲಾಲ್ ಹೇಳಿದ್ದಾರೆ. ರಾಜ್ಯದಲ್ಲಿ 163 ಸಾಸಿವೆ ಖರೀದಿ ಕೇಂದ್ರಗಳಲ್ಲಿ 8,693 ರೈತರು ವರದಿ ಮಾಡಿಕೊಂಡಿದ್ದಾರೆ ಮತ್ತು 9,729 ಗೋಧಿ ರೈತರು, ಗೋಧಿ ಖರೀದಿ ಕೇಂದ್ರಗಳಲ್ಲಿ ವರದಿ ಮಾಡಿಕೊಂಡಿದ್ದಾರೆ.
- ಹಿಮಾಚಲ ಪ್ರದೇಶ: ರಾಜ್ಯ ಸರಕಾರವು “ಇ ಸಂಜೀವಿನಿ ಹೊರ ರೋಗಿ ವಿಭಾಗವನ್ನು” ಆರಂಭ ಮಾಡಿದೆ. ಜನರು ತಮ್ಮ ಮನೆಗಳಲ್ಲಿ ಕುಳಿತು ವೈದ್ಯರಿಂದ ಆರೋಗ್ಯ ಸಂಬಂಧಿ ಮಾರ್ಗದರ್ಶನವನ್ನು ಪಡೆಯಬಹುದು. ಪೋರ್ಟಲಿನ ಯು.ಆರ್.ಎಲ್.- “esanjeevaniopd.in”.
- ಕೇರಳ: ಕಣ್ಣೂರು (ಕೆಂಪು ವಲಯ) ನಲ್ಲಿ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದುದರಿಂದ ಇಂದಿನಿಂದ ತ್ರಿವಳಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಕೆಲವು ಲಾಕ್ ಡೌನ್ ಸಡಿಲಿಕೆಗಳನ್ನು ಎರಡು ಹಸಿರು ವಲಯ ಜಿಲ್ಲೆಗಳಾದ ಕೊಟ್ಟಾಯಂ, ಮತ್ತು ಇಡುಕ್ಕಿ ಗಳಲ್ಲಿ ಹಿಂಪಡೆಯಲಾಗಿದೆ. ಪಟ್ಟನಂತಿಟ್ಟದಲ್ಲಿಯ 62 ವರ್ಷದ ಮಹಿಳೆ 42 ದಿನಗಳ ಬಳಿಕವೂ ಗುಣಮುಖರಾಗಿಲ್ಲ, ಇಂದಿನವರೆಗೆ ಮಾಡಲಾದ 19 ಪರೀಕ್ಷೆಗಳು ಪಾಸಿಟಿವ್ ಫಲಿತಾಂಶ ತೋರಿಸಿವೆ.
- ತಮಿಳುನಾಡು: ಚೆನ್ನೈನಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿದ ವೈದ್ಯರ ಶವಸಂಸ್ಕಾರವನ್ನು ಸ್ಥಳೀಯ ನಿವಾಸಿಗಳು ಹಿಂಸಾತ್ಮಕವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಸಿಬ್ಬಂದಿಗೆ ಎಲ್ಲಾ ಸರ್ಕಾರದ ಬೆಂಬಲವನ್ನು ಖಾತರಿಪಡಿಸುವಂತೆ ಸಿಎಂ ಹೇಳಿಕೆ ನೀಡಿದ್ದಾರೆ. ತಮಿಳು ಟಿವಿ ಚಾನೆಲ್ ಕೋವಿಡ್ ಪಾಸಿಟಿವ್ ಪತ್ರಕರ್ತೆಯ 26 ಸಹೋದ್ಯೋಗಿಗಳಲ್ಲಿ ಸೋಖಕು ದೃಢ. ನಿನ್ನೆ ತನಕ ಒಟ್ಟು ಪ್ರಕರಣಗಳು: 1520, ಸಾವುಗಳು: 17, ಗುಣಮುಖರಾಗಿ ಬಿಡುಗಡೆಗೊಂಡವರು: 457, ಸಕ್ರಿಯ ಪ್ರಕರಣಗಳು: 1043. ಚೆನ್ನೈ (290) ಮತ್ತು ಕೊಯಮತ್ತೂರು (133) ಗರಿಷ್ಠ ಪ್ರಕರಣಗಳನ್ನು ವರದಿ ಮಾಡಿದೆ.
- ಕರ್ನಾಟಕ: ಇಂದು 7 ಹೊಸ ಪ್ರಕರಣಗಳು ದೃಢಪಟ್ಟಿವೆ. ವಿಜಯಪುರ 3, ಕಲಬುರ್ಗಿ 3, ಮತ್ತು ದಕ್ಷಿಣ ಕನ್ನಡ 1. ಒಟ್ಟು ದೃಢೀಕೃತ ಕೋವಿಡ್ ಪ್ರಕರಣಗಳು; 415. ಮೃತಪಟ್ಟವರು -17. ಗುಣಮುಖರಾಗಿ ಬಿಡುಗಡೆಗೊಂಡವರು 117.
- ಆಂಧ್ರ ಪ್ರದೇಶ: ಕಳೆದ 24 ಗಂಟೆಗಳಲ್ಲಿ 35 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 757 ಕ್ಕೇರಿದೆ. ಒಟ್ಟುಸಾವುಗಳು: 22, ಗುಣಮುಖರಾದವರು 96, ಆಕ್ಟಿವ್ ಪ್ರಕರಣಗಳು: 639. ಕರ್ನೂಲು, ಗುಂಟೂರು, ಕೃಷ್ಣಾ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿರುವುದರಿಂದ ರಾಜ್ಯವು ಗರಿಷ್ಟ ಜಾಗೃತ ಸ್ಥಿತಿಯಲ್ಲಿದೆ. ದೇವಾಲಯಗಳ ಅರ್ಚಕರಿಗೆ , ಇಮಾಮರಿಗೆ, ಪಾದ್ರಿಗಳಿಗೆ ತಲಾ ರೂಪಾಯಿ 5000 ಹಣಕಾಸು ನೆರವನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜೆಲ್ಲೆಗಳೆಂದರೆ ; ಕರ್ನೂಲು (184) , ಗುಂಟೂರು ( 158) , ಕೃಷ್ಣಾ (83) , ನೆಲ್ಲೂರು (67) , ಚಿತ್ತೂರು ( 53)
- ತೆಲಂಗಾಣ: ದಿಲ್ಲಿ ಟಿ.ಜೆ. ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣದ ಇಬ್ಬರು ರೊಹಿಂಗ್ಯಾ ನಿರಾಶ್ರಿತರು ಕೋವಿಡ್ ಪಾಸಿಟಿವ್ ಆಗಿದ್ದಾರೆ.ಒಟ್ಟ್ಟು ಪ್ರಕರಣಗಳ ಸಂಖ್ಯೆ 874 ಕ್ಕೆ ತಲುಪಿದೆ. ರಾಜ್ಯದಲ್ಲಿಯ ಆರೋಗ್ಯಾಧಿಕಾರಿಗಳು ಕೋವಿಡ್ -19 ರಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾದ ಮೃತ ದೇಹಗಳಿಂದ ಮಾದರಿಗಳನ್ನು ಪಡೆಯುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಎನ್.ಐ.ಟಿ, ವಾರಂಗಲ್ ಶೈಕ್ಷಣಿಕ ವಲಯದಿಂದ ಕೊರೊನಾವೈರಸ್ ಮೇಲೆ ಉಷ್ಣಾಂಶ ಮತ್ತು ತೇವಾಂಶ ಪರಿಣಾಮ ಕುರಿತು ಅಧ್ಯಯನಕ್ಕಾಗಿ ಬಂದಿರುವ ಸಂಶೋಧನಾ ಪ್ರಸ್ತಾಪವನ್ನು ವೈಟ್ ಹೌಸ್ ಆಫೀಸ್ ಆಫ್ ಸಾಯನ್ಸ್ ಆಂಡ್ ಟೆಕ್ನಾಲಜಿ ಪಾಲಿಸಿ (ಒ.ಎಸ್.ಟಿ.ಪಿ.) ಯಿಂದ ಸಾರ್ವಜನಿಕ ಖಾಸಗಿ ಪ್ರಯತ್ನವಾಗಿಸಲಾಗಿದೆ. ಇದು ವೈರಸ್ ನ್ನು ಅರಿತುಕೊಂಡು ಲಸಿಕೆಯನ್ನು ಅಭಿವೃದ್ದಿಪಡಿಸಲು ಸಹಾಯ ಮಾಡುತ್ತದೆ.
- ಅರುಣಾಚಲ ಪ್ರದೇಶ: ರಾಜ್ಯದ ಕೆಂಪು ಮತ್ತು ಕಿತ್ತಳೆ ವಲಯದಿಂದ ತರಕಾರಿಗಳನ್ನು ತರುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಇಟಾನಗರ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ.
- ಅಸ್ಸಾಂ: ರಾಜ್ಯ ಸರಕಾರವು ಗುವಾಹಟಿಯ ಸೋಂಕು ನಿಯಂತ್ರಣ ವಲಯವಾದ ಸ್ಪ್ಯಾನಿಶ್ ಗಾರ್ಡನ್ ನಿಂದ ತ್ವರಿತ ಪ್ರತಿಕಾಯ (ಆಂಟಿ ಬಾಡಿ) ಪರೀಕ್ಷೆಗಳನ್ನು ಏಪ್ರಿಲ್ 22 ರಿಂದ ಆರಂಭಿಸುವುದಾಗಿ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ.
- ಮಣಿಪುರ: ಅಧೀನ ಕಾರ್ಯದರ್ಶಿವರೆಗಿನ ಶ್ರೇಣಿಯ ಸಿಬ್ಬಂದಿಗಳ ಗರಿಷ್ಟ 33 ಶೇಕಡಾ ಹಾಜರಾತಿಯನ್ನು ಕಡ್ಡಾಯ ಮಾಡಿ ರಾಜ್ಯ ಸರಕಾರದ ಆದೇಶ.
- ಮಿಜೋರಾಂ: ಮಿಜೋರಾಂ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿಯ 40,000 ಕ್ಕೂ ಅಧಿಕ ಫಲಾನುಭವಿಗಳು ಲಾಕ್ ಡೌನ್ ಅವಧಿಯಲ್ಲಿ ತಲಾ 3000 ರೂಪಾಯಿಗಳನ್ನು ಡಿ.ಬಿ.ಟಿ ವ್ಯವಸ್ಥೆಯ ಮೂಲಕ ಪಡೆದಿದ್ದಾರೆ.
- ನಾಗಾಲ್ಯಾಂಡ್: ಡೋಯಾಂಗ್ ನ ಡಿ.ಎಚ್.ಇ.ಪಿ.ಯ ಸಿ.ಐ.ಎಸ್.ಎಫ್. ಸಿಬ್ಬಂದಿಗಳು ವೋಖಾ ಜಿಲ್ಲೆಯ ಡೊಯಾಂಗ್ ಗ್ರಾಮದಲ್ಲಿ ಆವಶ್ಯಕತೆ ಇರುವ ಜನರಿಗೆ ಪಡಿತರ ಮತ್ತು ಇತರ ಅವಶ್ಯಕ ಸಾಮಗ್ರಿಗಳನ್ನು ವಿತರಿಸಿದರು.
- ಸಿಕ್ಕಿಂ: ಲಾಕ್ ಡೌನ್ ಅವಧಿಯಲ್ಲಿ ಪ್ರತೀ ಮನೆಗೆ ಪಡಿತರ/ಜೀವನಾವಶ್ಯಕ ವಸ್ತುಗಳನ್ನು ತಲುಪಿಸಲು ರಾಜ್ಯ ಸಹಕಾರಿ ಪೂರೈಕೆ ಮತ್ತು ಮಾರುಕಟ್ಟೆ ಫೆಡರೇಶನ್ ಲಿಮಿಟೆಡ್ ( ಎಸ್.ಐ.ಎಂ.ಎಫ್.ಇ.ಡಿ.) ಗ್ಯಾಂಗ್ಟಕ್ ನಲ್ಲಿ ಸಂಚಾರಿ ಪಡಿತರ ವ್ಯಾನ್ ಆರಂಭ ಮಾಡಿದೆ.
- ತ್ರಿಪುರಾ: ತ್ರಿಪುರಾದಲ್ಲಿ 10 ಮತ್ತು 12 ನೇ ತರಗತಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್ 24 ರಿಂದ ಆರಂಭಗೊಳ್ಳುತ್ತದೆ.
- ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 4,676 ದಾಟಿದೆ. ಇದುವರೆಗೆ 472 ಹೊಸ ಪ್ರಕರಣಗಳು ವರದಿಯಾಗಿವೆ. ಎರಡು ಅಂತರ ಸಚಿವಾಲಯ ತಂಡಗಳು ಸ್ಥಳ ಪರಿಶೀಲನೆ ನಡೆಸಿ ಪರಿಸ್ಥಿತಿಯ ಅಂದಾಜು ಮಾಡಲು ಮತ್ತು ಪರಿಹಾರಕ್ಕಾಗಿ ರಾಜ್ಯದ ಅಧಿಕಾರಿಗಳಿಗೆ ಅವಶ್ಯ ನಿರ್ದೇಶನಗಳನ್ನು ನೀಡಲು ಇಲ್ಲಿಗೆ ಭೇಟಿ ನೀಡಿವೆ. ಈ ನಡುವೆ ಮುಂಬಯಿಯಲ್ಲಿ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವ 53 ಪತ್ರಕರ್ತರನ್ನು ಸಬರ್ಬನ್ ಹೊಟೇಲಿನಲ್ಲಿ ಐಸೋಲೇಶನ್ನಿನಲ್ಲಿ ಇಡಲಾಗಿದೆ.
- ಗುಜರಾತ್: ಗುಜರಾತಿನಲ್ಲಿ ಅಹ್ಮದಾಬಾದಿನ ಸರ್ದರ್ ವಲ್ಲಭ ಭಾಯಿ ಪಟೇಲ್ ಸಂಸ್ಥೆಯು ರೋಗಿಯಲ್ಲಿ ಕೊರೊನಾವೈರಸ್ ಸಂಬಂಧಿ ಸಂಕೀರ್ಣ ಸಮಸ್ಯೆಗಳನ್ನು ಪ್ಲಾಸ್ಮಾ ಸುರಕ್ಷೆಯ ಮೂಲಕ ಅಧ್ಯಯನ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.
- ರಾಜಸ್ಥಾನ: ನಿಖರವಲ್ಲದ ಫಲಿತಾಂಶಗಳನ್ನು ಒದಗಿಸಿದುದಕ್ಕಾಗಿ ಕೊರೊನಾವೈರಸ್ ಪರೀಕ್ಷೆಗೆ ಚೀನಾದಲ್ಲಿ ಉತ್ಪಾದಿಸಲಾದ ತ್ವರಿತ ಪರೀಕ್ಷಾ ಕಿಟ್ ಗಳ ಬಳಕೆಯನ್ನು ರಾಜಸ್ಥಾನ ಸರಕಾರ ಸ್ಥಗಿತಗೊಳಿಸಿದೆ. ರಾಜ್ಯದ ಆರೋಗ್ಯ ಸಚಿವ ರಘು ಶರ್ಮಾ ಮಾತನಾಡಿ ಈ ಕಿಟ್ ಗಳು ನಿರೀಕ್ಷಿತ 90 ಶೇಖಡಾ ನಿಖರತೆಗೆ ಬದಲಾಗಿ ಬರೇ 5.4 ಶೇಕಡಾ ನಿಖರತೆಯನ್ನು ನೀಡಿವೆ ಎಂದಿದ್ದಾರೆ. ರಾಜಸ್ಥಾನದಲ್ಲಿಂದು 93 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ 1659 ಕ್ಕೇರಿದೆ.
ಕೋವಿಡ್-19 ಕುರಿತ ವಾಸ್ತವದ ಪರಿಶೀಲನೆ
***
(Release ID: 1616967)
Visitor Counter : 229
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam