ಹಣಕಾಸು ಸಚಿವಾಲಯ

ವೇಗವಾಗಿ ಮರುಪಾವತಿ ಮಾಡಲು ಅನುಕೂಲವಾಗುವ  ಇ-ಮೇಲ್ ಗಳನ್ನು ಕಿರುಕುಳ ಎಂದು ತಪ್ಪಾಗಿ ಅರ್ಥೈಸಬಾರದು: ಸಿಬಿಡಿಟಿ

Posted On: 21 APR 2020 11:45AM by PIB Bengaluru

ವೇಗವಾಗಿ ಮರುಪಾವತಿ ಮಾಡಲು ಅನುಕೂಲವಾಗುವ  ಇ-ಮೇಲ್ ಳನ್ನು ಕಿರುಕುಳ ಎಂದು ತಪ್ಪಾಗಿ ಅರ್ಥೈಸಬಾರದು: ಸಿಬಿಡಿಟಿ

 

ಆದಾಯ ತೆರಿಗೆ ಇಲಾಖೆಯು ವಸೂಲು ಮಾಡುವ ಕ್ರಮಗಳನ್ನು ಅನುಸರಿಸುತ್ತಿದೆ ಮತ್ತು ನವೋದ್ಯಮಗಳ  ಬಾಕಿಯನ್ನು ಸರಿಹೊಂದಿಸುವ ಮೂಲಕ  ಬೆದರಿಕೆಯ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕೆಲವು ಹೇಳಿಕೆಗಳಿಗೆ  ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇಂದು ಪ್ರತಿಕ್ರಿಯಿಸಿ,   ಈ ಹೇಳಿಕೆಗಳು ಸಂಪೂರ್ಣವಾಗಿ ನಿರಾಧಾರವಾಗಿದ್ದು  ಮತ್ತು ವಾಸ್ತವಾಂಶವನ್ನು ತಪ್ಪಾಗಿ ಅರ್ಥೈಸಲಾಗಿದೆ  ಎಂದು ಹೇಳಿದೆ.

ತೆರಿಗೆ ಮರುಪಾವತಿ ಪಡೆಯಲು ಅರ್ಹರಾಗಿರುವ ಆದರೆ ಪಾವತಿಸಬೇಕಾದ ಬಾಕಿ ತೆರಿಗೆ ಹೊಂದಿರುವ ಎಲ್ಲರಿಂದ ಸ್ಪಷ್ಟೀಕರಣವನ್ನು ಕೋರಿದ ಇ-ಮೇಲ್ ಅನ್ನು ಕಿರುಕುಳ ಎಂದು ತಪ್ಪಾಗಿ ಅರ್ಥೈಸಬಾರದು ಎಂದು ಸಿಬಿಡಿಟಿ ಹೇಳಿದೆ. ಈ ಕಂಪ್ಯೂಟರ್ ರಚಿತ ಇಮೇಲ್‌ಗಳನ್ನು ಸುಮಾರು 1.72 ಲಕ್ಷ ತೆರಿಗೆದಾರರಿಗೆ ಕಳುಹಿಸಲಾಗಿದೆ, ಇದರಲ್ಲಿ ಎಲ್ಲಾ ವರ್ಗದ ತೆರಿಗೆದಾರರನ್ನು ಒಳಗೊಂಡಿರುತ್ತದೆ - ವ್ಯಕ್ತಿಯಿಂದ ಹಿಡಿದು ಎಚ್‌ಯುಎಫ್  ಮತ್ತು ಸಂಸ್ಥೆಗಳು, ನವೋದ್ಯಮಗಳು ಸೇರಿದಂತೆ ದೊಡ್ಡ ಅಥವಾ ಸಣ್ಣ ಕಂಪನಿಗಳನ್ನು ಒಳಗೊಂಡಿರುತ್ತದೆ.  ಆದ್ದರಿಂದ ನವೋದ್ಯಮಗಳನ್ನು ಪ್ರತ್ಯೇಕಿಸಲಾಗುತ್ತಿದೆ ಮತ್ತು  ಅವುಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳುವುದು  ಸತ್ಯಕ್ಕೆ ದೂರವಾದದು ಮತ್ತು ವಾಸ್ತವಾಂಶಗಳನ್ನು ತಪ್ಪಾಗಿ ಅರ್ಥೈಸಿ ನಿರೂಪಿಸಿರುವುದು.

ಈ ಇಮೇಲ್‌ಗಳು ಮುಖರಹಿತ ಸಂವಹನದ ಒಂದು ಭಾಗವಾಗಿದ್ದು, ಬಾಕಿ ಇರುವ ಬೇಡಿಕೆಗೆ ಸರಿಹೊಂದಿಸದೆ ಮರುಪಾವತಿ ಬಿಡುಗಡೆಯಾಗುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಸಾರ್ವಜನಿಕ ಹಣವನ್ನು ರಕ್ಷಿಸುತ್ತದೆ ಎಂದು ಸಿಬಿಡಿಟಿ ಹೇಳಿದೆ.  ಮರುಪಾವತಿ ಪ್ರಕರಣಗಳಲ್ಲಿ  ಈ ಇಮೇಲ್‌ಗಳನ್ನು ಐ-ಟಿ ಕಾಯ್ದೆಯ ಸೆಕ್ಷನ್ 245 ರ ಅಡಿಯಲ್ಲಿ ತೆರಿಗೆ ಬಾಕಿ ಇರುವ ತೆರಿಗೆದಾರರಿಗಾಗಿ ಸ್ವಯಂಚಾಲಿತವಾಗಿ ರಚಿಸಲಾಗಿರುತ್ತದೆ.  ಒಂದು ವೇಳೆ   ತೆರಿಗೆದಾರರಿಂದ ಈಗಾಗಲೇ ಪಾವತಿಸಲಾಗಿದ್ದರೆ ಅಥವಾ ಅದನ್ನು ಉನ್ನತ ತೆರಿಗೆ ಅಧಿಕಾರಿಗಳು ತಡೆಹಿಡಿದಿದ್ದರೆ, ತೆರಿಗೆ ಪಾವತಿದಾರರಿಗೆ ಅದರ ಬಗ್ಗೆ ಮಾಹಿತಿ ಒದಗಿಸಲು ಈ ಇ ಮೇಲ್‌ಗಳ ಮೂಲಕ ವಿನಂತಿಸಲಾಗುತ್ತದೆ ಇದರಿಂದ ಮರುಪಾವತಿ ಮಾಡುವ ಸಂದರ್ಭದಲ್ಲಿ, ಈ ಮೊತ್ತವನ್ನು ಹಿಡಿದಿಟ್ಟುಕೊಳ್ಳದೆ ಮತ್ತು  ತೆರಿಗೆಪಾವತಿದಾರರ ಮರುಪಾವತಿಯನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ.

ಇಮೇಲ್ ಸಂವಹನಗಳ ಉದ್ದೇಶ ಬಾಕಿ ಉಳಿದಿರುವ ಬೇಡಿಕೆಯೊಂದಿಗೆ ಮರುಪಾವತಿಯ ಪ್ರಸ್ತಾವಿತ ಹೊಂದಾಣಿಕೆಗಾಗಿ ತೆರಿಗೆದಾರರಿಂದ  ಮಾಹಿತಿಯನ್ನು ಪಡೆಯುವ ಕೋರಿಕೆಯಾಗಿದೆ .  ಇದನ್ನು ಆದಾಯ ತೆರಿಗೆ ಇಲಾಖೆಯು ಬಾಕಿ ವಸೂಲಿಯ ನೋಟಿಸ್  ಅಥವಾ ಆದಾಯ ತೆರಿಗೆ ಇಲಾಖೆಯ ಬಾಕಿಯನ್ನು ಸರಿಹೊಂದಿಸುವ ಮೂಲಕ  ಬೆದರಿಕೆಯ ತಂತ್ರಗಳನ್ನು ಬಳಸುತ್ತಿದೆ ಎಂದು  ತಪ್ಪಾಗಿ ಅರ್ಥೈಸಬಾರದು  ಎಂದು ಸಿಬಿಡಿಟಿ ಹೇಳಿದೆ . ಏಕೆಂದರೆ ಮರುಪಾವತಿಯನ್ನು ಬಿಡುಗಡೆ ಮಾಡುವ ಮೊದಲು ಬಾಕಿ ಇರುವ ತೆರಿಗೆಯನ್ನು ಸರಿಹೊಂದಿಸುವ ಮೂಲಕ ಸಾರ್ವಜನಿಕ ಹಣವನ್ನು ರಕ್ಷಿಸುವುದು ಇಲಾಖೆಯ ಕರ್ತವ್ಯವಾಗಿರುತ್ತದೆ.

ನವೋದ್ಯಮಗಳಿಗೆ ಮುಕ್ತ ತೆರಿಗೆ ವಾತಾವರಣವನ್ನು ಒದಗಿಸುವ ಸಲುವಾಗಿ, ಏಕೀಕೃತ ಸುತ್ತೋಲೆ ಸಂಖ್ಯೆ22/2019 ದಿನಾಂಕ 30 ಆಗಸ್ಟ್ 2019 ರದನ್ನು ಸಿಬಿಡಿಟಿ ಹೊರಡಿಸಿದೆ.  ನವೋದ್ಯಮಗಳ ಮೌಲ್ಯಮಾಪನಕ್ಕಾಗಿ ವಿಧಾನಗಳನ್ನು ಹಾಕುವುದರ ಹೊರತಾಗಿ, ಸೆಕ್ಷನ್ 56 (2) (ವಿಐಬಿ) ಅಡಿಯಲ್ಲಿ ಮಾಡಿದ ಸೇರ್ಪಡೆಗಳಿಗೆ ಸಂಬಂಧಿಸಿದ ಬಾಕಿ ಇರುವ ಆದಾಯ ತೆರಿಗೆ ಬೇಡಿಕೆಗಳನ್ನು ಮುಂದುವರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ಯಿಂದ  ಬೇಡಿಕೆಯನ್ನು ದೃಢೀಕರಿಸದ ಹೊರತು ಅಂತಹ ಯಾವುದೇ ನವೋದ್ಯಮದ ಆದಾಯ ತೆರಿಗೆ ಬೇಡಿಕೆಯನ್ನು ಸಹ ಮುಂದುವರಿಸಲಾಗುವುದಿಲ್ಲ. ಇದಲ್ಲದೆ, ನವೋದ್ಯಮಗಳ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಅಂತಹ ತೆರಿಗೆ ಸಂಬಂಧಿತ ಇತರ ಸಮಸ್ಯೆಗಳನ್ನು ಬಗೆಹರಿಸಲು ಸ್ಟಾರ್ಟ್-ಅಪ್ ಸೆಲ್ ಅನ್ನು ರಚಿಸಲಾಗಿದೆ.

ತೆರಿಗೆದಾರರ ವಿಷಯದಲ್ಲಿ ಬಾಕಿ ಇರುವ ತೆರಿಗೆಗಳನ್ನು ವಸೂಲಿ ಮಾಡಲು ಸಂಬಂಧಿಸಿದ ಕಾರ್ಯವಿಧಾನವನ್ನು ವಿವರಿಸಿದ ಸಿಬಿಡಿಟಿ, ಆದಾಯ ಇಲಾಖೆಗೆ ತೆರಿಗೆಯನ್ನು ಪಾವತಿಸಲು ಅಥವಾ ಕೇಳಿದ ತೆರಿಗೆಯ ಸ್ಥಿತಿಯನ್ನು ತಿಳಿಸಲು ಇಲಾಖೆಯಿಂದ ತೆರಿಗೆದಾರರಿಗೆ ಅವಕಾಶವನ್ನು ಒದಗಿಸಲಾಗಿದೆ ಎಂದು ವಿವರಿಸಲಾಗಿದೆ.  ಏಕರೂಪವಾಗಿ, ಅಂತಹ ಸಂವಹನವನ್ನು ತೆರಿಗೆದಾರಿಗೆ ಇಮೇಲ್ ಕಳುಹಿಸುವ ಮೂಲಕ ಬಾಕಿ ಇರುವ ತೆರಿಗೆಯ ಪ್ರಮಾಣವನ್ನು ತಿಳಿಸುವ ಮೂಲಕ ಮತ್ತು ತೆರಿಗೆಯನ್ನು ಪಾವತಿಸಲು ಅಥವಾ ಈಗಾಗಲೇ ಮಾಡಿದ ತೆರಿಗೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳೊಂದಿಗೆ ಪ್ರತಿಕ್ರಿಯಿಸಲು ಅಥವಾ ಸ್ಥಿತಿಯನ್ನು  ತಿಳಿಸುವ  ಮೂಲಕ ಮಾಡಲಾಗುತ್ತದೆ. 

ತನ್ನ ಕಡೆಯಿಂದ ತೆರಿಗೆದಾರರು ಬಾಕಿ ಇರುವ ತೆರಿಗೆಯ ವಿವರಗಳನ್ನು ನೀಡಬೇಕಾಗಿರುತ್ತದೆ, ಅದನ್ನು ಪಾವತಿಸಲಾಗಿದೆಯೆ ಅಥವಾ ಯಾವುದೇ ಮೇಲ್ಮನವಿ/ ಸಮರ್ಥ ಪ್ರಾಧಿಕಾರದಿಂದ ತಡೆಯಾಜ್ಞೆ ತಂದು ಉಳಿಸಲಾಗಿದೆಯೆ ಎನ್ನುವುದನ್ನು ತಿಳಿಸಬೇಕು, ಇದರಿಂದಾಗಿ ಅಷ್ಟು ಮೊತ್ತವನ್ನು ಬಿಟ್ಟು  ಮರುಪಾವತಿ ಮಾಡುವಾಗ ಅದನ್ನು ಕಡಿತಗೊಳಿಸುವುದಿಲ್ಲ ಎಂದು ಸಿಬಿಡಿಟಿ ತಿಳಿಸಿದೆ.

ಹೀಗಾಗಿ, ಬಾಕಿ ಇರುವ ಬೇಡಿಕೆಯ ತೆರಿಗೆಯ ವಸೂಲಿಯ ಕಾರ್ಯವಿಧಾನವನ್ನು ಅನುಸರಿಸಿ, ಆದಾಯ ತೆರಿಗೆ ಇಲಾಖೆಗೆ ತಿಳಿಸಲು, ತೆರಿಗೆಯ ಬಾಕಿ ಇರುವ ಸ್ಥಿತಿ ಮತ್ತು ಅದನ್ನು ಸಮರ್ಥ ಪ್ರಾಧಿಕಾರದಿಂದ  ತಡೆಯಾಜ್ಞೆ ತಂದು ಉಳಿಸಲಾಗಿದೆಯೆ ಎಂದು ವಿವರ ಕೇಳಲು ನವೋದ್ಯಮಗಳೂ ಸೇರಿದಂತೆ  1.72 ಲಕ್ಷ ತೆರಿಗೆದಾರರಿಗೆ ಇದೇ ರೀತಿಯ ಇಮೇಲ್ಗಳನ್ನು ಕಳುಹಿಸಲಾಗಿದೆ. ಇದರಿಂದಾಗಿ ವಿಳಂಬವಿಲ್ಲದೆ ನವೋದ್ಯಮಗಳಿಗೆ ಮರುಪಾವತಿಗಳನ್ನು ಬಿಡುಗಡೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬಹುದು.  ಆದಾಗ್ಯೂ, ಆದಾಯ ತೆರಿಗೆ ಇಲಾಖೆಯ ಇಮೇಲ್ಗಳಿಗೆ ಪ್ರತಿಕ್ರಿಯೆಯನ್ನು ನೀಡದಿರುವುದು ಮತ್ತು ಸುಳ್ಳಿನ ಭೀತಿಯನ್ನು ಹರಡುವುದು ಸಿಬಿಡಿಟಿಯ ಸುತ್ತೋಲೆ 22/2019 ರ ಉದ್ಧೇಶಕ್ಕೆ ವಿರುದ್ಧವಾಗಿದೆ ಮತ್ತು ಇದು ಖಂಡಿತವಾಗಿ ನ್ಯಾಯಸಮ್ಮತವಲ್ಲ.

ಸಿಬಿಡಿಟಿ ತನ್ನ ಇಮೇಲ್ಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ನವೋದ್ಯಮಗಳಿಗೆ ವಿನಂತಿಸಿದೆ, ಇದರಿಂದಾಗಿ  ಆದಾಯ ತೆರಿಗೆ  ಇಲಾಖೆಯು ಈಗಿರುವ ಕಾರ್ಯವಿಧಾನಕ್ಕೆ ಅನುಗುಣವಾಗಿ ಮರುಪಾವತಿಗಳನ್ನು ಶೀಘ್ರವೇ ಬಿಡುಗಡೆ ಮಾಡಲು ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಸಿಬಿಡಿಟಿ ಯು ಏಪ್ರಿಲ್ 8, 2020 ರ  ಸರ್ಕಾರದ ಹಿಂದಿನ ಪತ್ರಿಕಾ ಪ್ರಕಟಣೆಯನ್ನು ಅನುಸರಿಸಿ ಇಲ್ಲಿಯವರೆಗೆ ಸುಮಾರು 9,000 ಕೋಟಿ ರೂಪಾಯಿಗಳನ್ನೊಳಗೊಂಡ 14 ಲಕ್ಷ ಸಂಖ್ಯೆ ಮರುಪಾವತಿಗಳನ್ನು ವ್ಯಕ್ತಿಗಳು, ಎಚ್‌ಯುಎಫ್‌ಗಳು, ಮಾಲೀಕರು, ಸಂಸ್ಥೆಗಳು, ಕಾರ್ಪೊರೇಟ್, ನವೋದ್ಯಮಗಳು, ಎಂಎಸ್‌ಎಂಇಗಳು ಸೇರಿದಂತೆ ವಿವಿಧ ತೆರಿಗೆದಾರರಿಗೆ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತೆರಿಗೆದಾರರಿಗೆ ಅನುಕೂಲವಾಗಲೆಂದು ವಿತರಿಸಿದೆ.  ತೆರಿಗೆದಾರರಿಂದ ಪ್ರತಿಕ್ರಿಯೆಗಳು ಬರದಿರುವ ಕಾರಣ ಅನೇಕ ಮರುಪಾವತಿಗಳು ಇನ್ನೂ ಬಾಕಿ ಉಳಿದಿವೆ ಮತ್ತು ಮಾಹಿತಿಯನ್ನು ಸ್ವೀಕರಿಸಿದ ನಂತರ ಸಾಧ್ಯವಾದಷ್ಟು ಬೇಗ ವಿತರಿಸಲಾಗುತ್ತದೆ.

***



(Release ID: 1616849) Visitor Counter : 213