ರಕ್ಷಣಾ ಸಚಿವಾಲಯ

ಕಾರವಾರದಲ್ಲಿ ಕೋವಿಡ್ -19 ವಿರುದ್ದದ ಹೋರಾಟದ ಮುಂಚೂಣಿಯಲ್ಲಿ ಭಾರತೀಯ ನೌಕಾ ಆಸ್ಪತ್ರೆ ಹಡಗು ಪತಂಜಲಿ

Posted On: 19 APR 2020 1:23PM by PIB Bengaluru

ಕಾರವಾರದಲ್ಲಿ ಕೋವಿಡ್ -19 ವಿರುದ್ದದ ಹೋರಾಟದ ಮುಂಚೂಣಿಯಲ್ಲಿ ಭಾರತೀಯ ನೌಕಾ ಆಸ್ಪತ್ರೆ ಹಡಗು ಪತಂಜಲಿ

 

ಉತ್ತರ ಕನ್ನಡ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಮೂಲಕ ಕೋವಿಡ್ -19 ರ ವಿರುದ್ದದ ಹೋರಾಟದಲ್ಲಿ ಕಾರವಾರದ ಭಾರತೀಯ ನೌಕಾ ಆಸ್ಪತ್ರೆ ಪತಂಜಲಿ ಮುಂಚೂಣಿಯಲ್ಲಿದೆ.

2020 ರ ಮಾರ್ಚ್ 25 ರಂದು ರಾಷ್ಟ್ರವ್ಯಾಪೀ ಲಾಕ್ ಡೌನ್ ಘೋಷಣೆಯಾದ ಬಳಿಕ ಕಾರವಾರ ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ಐ.ಎನ್.ಎಚ್.ಎಸ್. ಪತಂಜಲಿ 24 ಗಂಟೆಗಳಲ್ಲಿ ಎಲ್ಲಾ ರೀತಿಯಿಂದಲೂ ಕೋವಿಡ್ -19 ಪಾಸಿಟಿವ್ ರೋಗಿಗಳನ್ನು ಸೇರಿಸಿಕೊಳ್ಳಲು ಸಿದ್ದಗೊಂಡಿತು. 2020 ರ ಮಾರ್ಚ್ 28 ರಂದು ಮೊದಲ ಗುಂಪಿನ ರೋಗಿಗಳು ಇಲ್ಲಿ ದಾಖಲಾದರು. ಮೂವರು ವೈದ್ಯರು, 9 ಮಂದಿ ವೈದ್ಯಕೀಯ ಸಿಬ್ಬಂದಿಗಳು, 9 ಮಂದಿ ಪೂರಕ ಸಿಬ್ಬಂದಿಗಳೊಂದಿಗೆ 24*7 ಅವಧಿಯೂ ಇಲ್ಲಿಗೆ ಸೇರ್ಪಡೆಯಾದ 9 ಮಂದಿ ಕೋವಿಡ್ -19 ರೋಗಿಗಳ ಚಿಕಿತ್ಸೆಯನ್ನು ಖಾತ್ರಿಪಡಿಸಿದ್ದಾರೆ.

ಆಸ್ಪತ್ರೆಗೆ ಸೇರ್ಪಡೆಯಾದ 9 ರೋಗಿಗಳ ಪೈಕಿ ಇದುವರೆಗೆ 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಇವರ ಬಿಡುಗಡೆಯ ಬಳಿಕ , ಈ ಆಸ್ಪತ್ರೆಯು ಏಪ್ರಿಲ್ 16 ರಂದು ದಾಖಲಾದ ಏಕೈಕ ರೋಗಿಯ ಚಿಕಿತ್ಸೆಯಲ್ಲಿ ನಿರತವಾಗಿದೆ ಮತ್ತು ಆ ರೋಗಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಈ ಹೆಚ್ಚುವರಿ ಜವಾಬ್ದಾರಿಯ ಹಿನ್ನೆಲೆಯಲ್ಲಿ , ಐ.ಎನ್.ಎಸ್. ಪತಂಜಲಿ ಈ ಆಸ್ಪತ್ರೆಯನ್ನು ಅವಲಂಬಿಸಿದ್ದ ಸೇವಾ ಸಿಬ್ಬಂದಿಗಳು ಮತ್ತು ಕುಟುಂಬದವರು ಒಳಗೊಂಡಂತೆ ದೊಡ್ದ ಜನಸಮುದಾಯಕ್ಕೆ ವೈದ್ಯಕೀಯ ಸವಲತ್ತು ಒದಗಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ.

***



(Release ID: 1616072) Visitor Counter : 178