ರಕ್ಷಣಾ ಸಚಿವಾಲಯ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಾಯು ಕಾರ್ಯಾಚರಣೆಗೆ ನೆರವಾಗಲು ಭಾರತೀಯ ನೌಕಾಪಡೆ ವಿಶಾಖಪಟ್ಟಣಂ ವಾಯುನೆಲೆಯಿಂದ 24 x 7 ಕಾರ್ಯಾಚರಣೆಯನ್ನು ಖಾತ್ರಿಗೊಳಿಸುತ್ತಿದೆ

Posted On: 14 APR 2020 12:41PM by PIB Bengaluru

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಾಯು ಕಾರ್ಯಾಚರಣೆಗೆ ನೆರವಾಗಲು ಭಾರತೀಯ ನೌಕಾಪಡೆ ವಿಶಾಖಪಟ್ಟಣಂ ವಾಯುನೆಲೆಯಿಂದ 24 x 7 ಕಾರ್ಯಾಚರಣೆಯನ್ನು ಖಾತ್ರಿಗೊಳಿಸುತ್ತಿದೆ

 

ಈತ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗಿರುವುದರಿಂದ, ಪೂರ್ವ ನೌಕಾ ಕಮಾಂಡ್‌ನ (ಇ ಎನ್ ಸಿ) ಐಎನ್‌ಎಸ್ ಡೆಗಾ ವಿಶಾಖಪಟ್ಟಣಂನಲ್ಲಿನ ಜಂಟಿ-ಬಳಕೆದಾರ ವಾಯುನೆಲೆ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುತ್ತದೆ. ಎಲ್ಲಾ ಅಗತ್ಯ ಸುರಕ್ಷತಾ ಸೇವೆಗಳು ಮತ್ತು ವಾಯುನೆಲೆಯ ಸೌಲಭ್ಯಗಳು ನಿರಂತರವಾಗಿ ಲಭ್ಯವಾಗುವಂತೆ ಖಾತ್ರಿಪಡಿಸಲು ಏರ್ ಫೀಲ್ಡ್ ಮ್ಯಾನಿಂಗ್ ಅನ್ನು ಮಾರ್ಪಡಿಸಲಾಗಿದೆ. ಇದು ಎಲ್ಲಾ ವಿಶೇಷ ವಿಮಾನಗಳು ಮತ್ತು ಸ್ಪೈಸ್ ಜೆಟ್‌ನ ಸರಕು ಹಾರಾಟವು ತನ್ನ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸುವುದನ್ನು ಖಾತ್ರಿಪಡಿಸುತ್ತದೆ. ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದ ಇದುವರೆಗೆ 15 ಸರಕು ವಿಮಾನಗಳ ಹಾರಾಟ ನಡೆಸಲಾಗಿದೆ.

ಇದಲ್ಲದೆ, ಭಾರತೀಯ ನೌಕಾಪಡೆಯು ಹಗಲು ಮತ್ತು ರಾತ್ರಿ ನಿಯಮಿತ ಕಡಲ ಕಣ್ಗಾವಲು ಕಾರ್ಯಗಳನ್ನು ನಿರ್ವಹಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದೆ. ವಾಯು ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಇಎನ್‌ಸಿ 311 ರ ಇಎನ್‌ಸಿಯ ಡಾರ್ನಿಯರ್ ಸ್ಕ್ವಾಡ್ರನ್ ನಿಯಮಿತ ಕಡಲ ಕಣ್ಗಾವಲು ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹೆಚ್ಚುವರಿಯಾಗಿ, ಎಲ್ಲಾ ಇತರ ವಿಮಾನಗಳನ್ನು ಸಿದ್ಧವಾಗಿರಿಸಲಾಗಿದೆ ಮತ್ತು ಅಗತ್ಯವಿದ್ದಲ್ಲಿ ತಕ್ಷಣದ ನಿಯೋಜನೆಗೆ ಸಿದ್ಧಪಡಿಸಲಾಗಿದೆ.

***



(Release ID: 1615871) Visitor Counter : 148