ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ ಡೌನ್ ಕ್ರಮಗಳು ದೇಶದಲ್ಲಿ 2020ರ ಮೇ 3 ರ ವರೆಗೆ ಮುಂದುವರಿಕೆ
Posted On:
14 APR 2020 7:49PM by PIB Bengaluru
ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ ಡೌನ್ ಕ್ರಮಗಳು ದೇಶದಲ್ಲಿ 2020ರ ಮೇ 3 ರ ವರೆಗೆ ಮುಂದುವರಿಕೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ, ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕ್ ಡೌನ್ ಕ್ರಮಗಳನ್ನು ವಿಸ್ತರಿಸಲಾಗಿದ್ದು, ಅದು 2020ರ ಮೇ 3 ರವರೆಗೆ ಮುಂದುವರಿಯಲಿದೆ ಎಂದು ಪ್ರಕಟಿಸಿದರು.
ಇದರ ಮುಂದುವರಿದ ಭಾಗವಾಗಿ ಭಾರತ ಸರ್ಕಾರ, ಎಲ್ಲ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಆಡಳಿತಗಳಿಗೆ ದೇಶದಲ್ಲಿ ಸಾಂಕ್ರಾಮಿಕ ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಗೃಹ ಸಚಿವಾಲಯ ಈ ಹಿಂದೆ ಹೊರಡಿಸಿರುವ ಲಾಕ್ ಡೌನ್ ಸಮಗ್ರ ಮಾರ್ಗಸೂಚಿಗಳು 2020ರ ಮೇ 3ರ ವರೆಗೆ ಜಾರಿಯಲ್ಲಿರುತ್ತವೆ ಎಂದು ಆದೇಶ ಹೊರಡಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಈ ಕುರಿತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶವನ್ನು ಹೊರಡಿಸಿದೆ. ಅದರಂತೆ ಲಾಕ್ ಡೌನ್ ಮುಂದುವರಿದಿರುವುದರಿಂದ ಹಲವು ವಲಯಗಳಿಗೆ ಮತ್ತು ನಾನಾ ಚಟುವಟಿಕೆಗಳಿಗೆ ವಿಧಿಸಲಾಗಿರುವ ನಿರ್ಬಂಧಗಳು ಹಾಗೆಯೇ ಮುಂದುವರಿಯಲಿವೆ. ಆ ನಿರ್ಬಂಧಗಳ ಕುರಿತು ಈಗಾಗಲೇ ಎಂಎಚ್ಎ ಹೊರಡಿಸಿರುವ ಸಮಗ್ರ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅವುಗಳನ್ನು ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಆಡಳಿತಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸೂಚಿಸಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ – 2005ರ ಅಡಿ ಎಂಎಚ್ಎ ಹೊರಡಿಸಿರುವ ಆದೇಶವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದ್ದು, ಅದರಂತೆ ಮೇಲಿನ ಮಾರ್ಗಸೂಚಿಯಲ್ಲಿ ವಿಧಿಸಲಾಗಿರುವ ಯಾವುದೇ ನಿರ್ಬಂಧಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಡಿಲಗೊಳಿಸಬಾರದು ಎಂದು ನಿರ್ದೇಶಿಸಲಾಗಿದೆ.
ಲಾಕ್ ಡೌನ್ ಕ್ರಮಗಳ ಮುಂದುವರಿಕೆ ಕುರಿತ ಆದೇಶಕ್ಕೆ ಇಲ್ಲಿ ಕ್ಲಿಕ್ ಮಾಡಿ
***
(Release ID: 1614655)
Visitor Counter : 295
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu