ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಮಾನವ ಸಂಪನ್ಮೂಲ ಸಚಿವಾಲಯದ NIOS ನಿಂದ ಪರಿಣಾಮಕಾರಿ ಶಾಲಾ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಒಂದು ಅನನ್ಯ ವಿಧಾನ

Posted On: 14 APR 2020 3:06PM by PIB Bengaluru

ಮಾನವ ಸಂಪನ್ಮೂಲ ಸಚಿವಾಲಯದ NIOS ನಿಂದ ಪರಿಣಾಮಕಾರಿ ಶಾಲಾ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಒಂದು ಅನನ್ಯ ವಿಧಾನ

ಕೋವಿಡ್-19 ಹಿನ್ನೆಲೆಯಲ್ಲಿ, ಕೆವಿಎಸ್, ಎನ್ವಿಎಸ್ ಮತ್ತು ಸಿಬಿಎಸ್ ಮತ್ತು ಎನ್ಸಿಇಆರ್ಟಿ ಸಹಯೋಗದೊಂದಿಗೆ NIOS ನಿಂದ ಸ್ವಯಂ ಪ್ರಭಾ ಡಿಟಿಎಚ್ ಚಾನೆಲ್ಗಳಲ್ಲಿ ಸ್ಕೈಪ್ ಮೂಲಕ ನೇರ ಪ್ರಸಾರ

ಮನೆಯಲ್ಲಿ ಇಂಟರ್ನೆಟ್ ಲಭ್ಯತೆ ಇಲ್ಲದವರಿಗೆ ಕಲಿಯುವ ಪರಿಣಾಮಕಾರಿ ಸಾಧನ ಸ್ವಯಂ ಪ್ರಭಾ: ಶ್ರೀ ರಮೇಶ್ ಪೋಖ್ರಿಯಲ್ ನಿಶಾಂಕ್

ಉಪಕ್ರಮದಿಂದಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಜೆಇಇ/ ನೀಟ್ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನುಕೂಲ

 

ಕೋವಿಡ್- 19 ರಿಂದ ಉದ್ಭವಿಸಿರುವ ಸವಾಲಿನ ಪರಿಸ್ಥಿತಿಯಿಂದ ಕಲಿಯುವವರ ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಮಾನವ ಸಂಪನ್ಮೂಲ ಸಚಿವಾಲಯವು ಹಲವಾರು ತ್ವರಿತ, ಹೊಸ ಮತ್ತು ವಿಶಿಷ್ಟ ಉಪಕ್ರಮಗಳನ್ನು ತೆಗೆದುಕೊಂಡಿದೆ.

ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆಗೆ, ಪರಿಣಾಮಕಾರಿಯಾದ ಶಾಲಾ ಶಿಕ್ಷಣವನ್ನು ತಲುಪದವರಿಗೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸಲು NIOS ಒಂದು ವಿಶಿಷ್ಟ ವಿಧಾನವನ್ನು ಪ್ರಾರಂಭಿಸಿದೆ. ಗುಣಮಟ್ಟದ ಶಿಕ್ಷಣದ ಉದ್ದೇಶಗಳನ್ನು ಪೂರೈಸುವ ಮೂಲಕ, 9 ನೇ ತರಗತಿಯಿಂದ 12 ನೇ ತರಗತಿಯವರೆಗೆ ವಿವಿಧ ವಿಷಯಗಳಿಗೆ ಎಂಎಚ್ಆರ್ಡಿಯ 'SWAYAMMOOC ಪ್ಲಾಟ್ಫಾರ್ಮ್ ನಲ್ಲಿ ಆನ್ ಲೈನ್ ಮೂಲಕ ಲಭ್ಯವಾಗುತ್ತಿದೆ. ಸ್ವಯಂ ಕಲಿಕಾ ಸಾಮಗ್ರಿಗಳ ಜೊತೆಗೆ, 'SWAYAM’ ಪೋರ್ಟಲ್ ವೀಡಿಯೊ ಉಪನ್ಯಾಸಗಳು ಮತ್ತು ಸ್ವಯಂ-ಮೌಲ್ಯಮಾಪನದ ಸೌಲಭ್ಯವನ್ನು ಒದಗಿಸುತ್ತದೆ. ಕಲಿಯುವವರ ಪ್ರಶ್ನೆಗಳನ್ನು ಚರ್ಚಾ ವೇದಿಕೆಯ ಮೂಲಕ ಪರಿಹರಿಸಲಾಗುತ್ತಿದೆ.

ಇದಲ್ಲದೆ, ಇಂಟರ್ನೆಟ್ ಲಭ್ಯತೆಯಿಲ್ಲದವರಿಗೆ   ವೀಡಿಯೊ ಉಪನ್ಯಾಸಗಳನ್ನು ತಮ್ಮ ಶಿಕ್ಷಕರು ಮತ್ತು ವಿಷಯ ತಜ್ಞರೊಂದಿಗೆ ಸಂವಹನ ನಡೆಸಲು ಲೈವ್ ಸೆಷನ್ಗಳೊಂದಿಗೆ ಎಂಎಚ್ಆರ್ಡಿ ಸ್ವಯಂಪ್ರಭ ಟಿವಿ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಮನೆಯಲ್ಲಿ ಕುಳಿತು ಜೆಇಇ ಮತ್ತು ನೀಟ್ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಪಕ್ರಮದಿಂದ ಅನುಕೂಲವಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, KVS, NVS ಮತ್ತು CBSE & NCERT ಗಳ ಜಂಟಿ ಸಹಯೋಗದೊಂದಿಗೆ ಸ್ಕೈಪ್ ಮೂಲಕ ಸ್ವಯಂಪ್ರಭಾ ಡಿಟಿಎಚ್ ಚಾನಲ್ ಗಳ ಮೂಲಕ NIOS ಪಾಣಿನಿ (#72), ಶಾರದ (#28), ಮತ್ತು NCERT ಕಿಶೋರ್ ಮಂಚ್ (#31) ಗಳಲ್ಲಿ ನೇರ ಪ್ರಸಾರ ಅತ್ಯುತ್ತಮ ಆವಿಷ್ಕಾರಗಳನ್ನು NIOS ಮಾಡಿದೆ. ಈಗ, ವಿಷಯ ತಜ್ಞರು ತಮ್ಮ ಮನೆಯಿಂದ ಸ್ಕೈಪ್ ಮೂಲಕ ಸ್ವಯಂಪ್ರಭಾ ನೇರ ಪ್ರಸಾರಕ್ಕಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಕಲಿಯುವವರು ಡಿಟಿಎಚ್ ಚಾನೆಲ್ಗಳು ಮತ್ತು ಎನ್ಐಒಎಸ್ ಯೂಟ್ಯೂಬ್ ಚಾನೆಲ್ನಲ್ಲಿ 6 ಗಂಟೆಗಳ ಮುದ್ರಿತ ಪ್ರಸಾರವನ್ನು ಬೆಳಿಗ್ಗೆ 7.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ  ವೀಕ್ಷಿಸಬಹುದು ಮತ್ತು ನಂತರ 6 ಗಂಟೆಗಳ ಲೈವ್ ಸೆಷನ್ ಮಧ್ಯಾಹ್ನ 1.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ನಾಲ್ವರು ವಿಭಿನ್ನ ವಿಷಯ ತಜ್ಞರೊಂದಿಗೆ ಒಂದೂವರೆ ಗಂಟೆ ಅಧಿವೇಶನ ಇರುತ್ತದೆ. ನೇರ ಪ್ರಸಾರದ ಅಧಿವೇಶನದಲ್ಲಿ ಪ್ರದರ್ಶಿಸಲಾದ ಸಂಖ್ಯೆಯ ಫೋನ್ ಗೆ ಕರೆ ಮಾಡುವ ಮೂಲಕ ಮತ್ತು NIOS ವೆಬ್ಸೈಟ್ 'ವಿದ್ಯಾರ್ಥಿ ಪೋರ್ಟಲ್' ಮೂಲಕ ಕಲಿಯುವವರು ತಮ್ಮ ಮನೆಯಿಂದ ವಿಷಯ ತಜ್ಞರಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರ ಮನವಿಯ ಮೇರೆಗೆ, ಟಾಟಾ ಸ್ಕೈ ಮತ್ತು ಏರ್ಟೆಲ್ ಡಿಟಿಎಚ್ ಆಪರೇಟರ್ಗಳು ತಮ್ಮ ಡಿಟಿಎಚ್ ಪ್ಲಾಟ್ಫಾರ್ಮ್ನಲ್ಲಿ ಸ್ವಯಂ ಪ್ರಭಾ ಡಿಟಿಎಚ್ ಚಾನೆಲ್ಗಳನ್ನು ಪ್ರಸಾರ ಮಾಡಲು ಒಪ್ಪಿದ್ದಾರೆ. ಈಗ ಮೂರು ಸ್ವಯಂ ಪ್ರಭಾ ಡಿಟಿಎಚ್ ಚಾನೆಲ್ಗಳು ಡಿಡಿ-ಡಿಟಿಎಚ್ ಮತ್ತು ಜಿಯೋ ಟಿವಿ ಆ್ಯಪ್ ಜೊತೆಗೆ ಎಲ್ಲಾ ಡಿಟಿಎಚ್ ಸೇವಾ ಪೂರೈಕೆದಾರರ ಮೂಲಕ ಲಭ್ಯವಿವೆ. ಚಾನೆಲ್ಗಳಿಗಾಗಿ ಜನರು ತಮ್ಮ ಡಿಟಿಎಚ್ 'ಸೇವಾ ಪೂರೈಕೆದಾರರನ್ನು' ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವಿನಂತಿ ಮಾಡಬಹುದು. ಏಕೆಂದರೆ ಇವು ಉಚಿತ ಚಾನೆಲ್ಗಳಾಗಿವೆ. ಕೋವಿಡ್ -19 ಸಾಂಕ್ರಾಮಿಕದ ಕಷ್ಟದ ಪರಿಸ್ಥಿತಿಯಲ್ಲಿ ಕಲಿಯುವವರು ತಮ್ಮ ಶಿಕ್ಷಣ ಮತ್ತು ಕಲಿಕೆಯನ್ನು ಮನೆಯಲ್ಲಿ ಯೇ ಮುಂದುವರೆಸಬಹುದು.

ವಿವಿಧ ಡಿಟಿಎಚ್ ಸೇವಾ ಪೂರೈಕೆದಾರರ ಚಾನಲ್ ಸಂಖ್ಯೆ ಹೀಗಿದೆ:

AIRTEL: ಚಾನೆಲ್ # 437, ಚಾನೆಲ್ # 438 & ಚಾನೆಲ್ # 439

Videocon: ಚಾನೆಲ್ # 475, ಚಾನೆಲ್ # 476, ಚಾನೆಲ್ # 477

TATASky: ಚಾನೆಲ್ # 756.

DISHTV: ಚಾನೆಲ್ # 946, ಚಾನೆಲ್ # 947, ಚಾನೆಲ್ # 949, ಚಾನೆಲ್ # 950

ಸ್ವಯಂ ಪ್ರಭಾ, ತಮ್ಮ ಮನೆಯಲ್ಲಿ ಇಂಟರ್ನೆಟ್ ಲಭ್ಯತೆ ಇಲ್ಲದವರಿಗೆ ಕಲಿಯುವ ಪರಿಣಾಮಕಾರಿ ಸಾಧನವಾಗಿದೆ. ಸ್ವಯಂ ಪ್ರಭಾ ಎಂಬುದು 32 ಡಿಟಿಎಚ್ ಚಾನೆಲ್ಗಳ ಗುಂಪಾಗಿದ್ದು, ಜಿಸ್ಯಾಟ್ -15 ಉಪಗ್ರಹವನ್ನು ಬಳಸಿಕೊಂಡು 24X7 ಆಧಾರದ ಮೇಲೆ ಉತ್ತಮ-ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಮೀಸಲಿಡಲಾಗಿದೆ. ಪ್ರತಿದಿನ, ಕನಿಷ್ಠ ನಾಲ್ಕು ಗಂಟೆಗಳ ಕಾಲ ಹೊಸ ವಿಷಯವಿರುತ್ತದೆ, ಅದು ದಿನದಲ್ಲಿ 5 ಬಾರಿ ಪುನರಾವರ್ತನೆಯಾಗುತ್ತದೆ.  ಇದು ವಿದ್ಯಾರ್ಥಿಗಳಿಗೆ ತಮ್ಮ ಅನುಕೂಲತೆಯ ಸಮಯದಲ್ಲಿ ಕಲಿಯಲು ಅನುವು ಮಾಡಿಕೊಡುತ್ತದೆ. ಚಾನಲ್ಗಳನ್ನು ಗಾಂಧಿನಗರದ ಬಿಸಾಗ್ನಿಂದ ಅಪ್ಲಿಂಕ್ ಮಾಡಲಾಗುತ್ತಿದೆ. ವಿಷಯಗಳನ್ನು ಎನ್ಪಿಟಿಇಎಲ್, ಐಐಟಿಗಳು, ಯುಜಿಸಿ, ಸಿಇಸಿ, IGNOU, ಎನ್ಸಿಇಆರ್ಟಿ ಮತ್ತು ಎನ್ಐಒಎಸ್ ಒದಗಿಸುತ್ತದೆ. INFLIBNET ಕೇಂದ್ರವು ವೆಬ್ ಪೋರ್ಟಲ್ ಅನ್ನು ನಿರ್ವಹಿಸುತ್ತದೆ. ಎಲ್ಲಾ 32 ಚಾನೆಲ್ಗಳು ಡಿಡಿ ಡಿಟಿಎಚ್ ಮತ್ತು ಜಿಯೊ ಟಿವಿ ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತವೆ.

ಡಿಟಿಎಚ್ ಚಾನೆಲ್ಗಳು ಕೆಳಗಿನವುಗಳನ್ನು ಒಳಗೊಂಡಿವೆ:

)        ಉನ್ನತ ಶಿಕ್ಷಣ: ಕಲೆ, ವಿಜ್ಞಾನ, ವಾಣಿಜ್ಯ, ಪ್ರದರ್ಶನ ಕಲೆಗಳು, ಸಾಮಾಜಿಕ ವಿಜ್ಞಾನಗಳು ಮತ್ತು ಮಾನವಿಕತೆಗಳು, ಎಂಜಿನಿಯರಿಂಗ್, ತಂತ್ರಜ್ಞಾನ, ಕಾನೂನು, ಔಷಧ, ಕೃಷಿ, ಮುಂತಾದ ವಿವಿಧ ವಿಭಾಗಗಳನ್ನು ಒಳಗೊಂಡ ಸ್ನಾತಕೋತ್ತರ ಮತ್ತು ಪದವಿಪೂರ್ವ ಪಠ್ಯಕ್ರಮ ಆಧಾರಿತ ಪಠ್ಯ ವಿಷಯಗಳು. MOOC ಗಳ ಕೋರ್ಸ್ಗಳನ್ನು ನೀಡಲು ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿರುವ SWAYAM ಮೂಲಕ ಎಲ್ಲಾ ಕೋರ್ಸ್ಗಳು ತಮ್ಮ ಪ್ರಮಾಣೀಕರಣ-ಸಿದ್ಧವಾಗುತ್ತವೆ.

ಬಿ)        ಶಾಲಾ ಶಿಕ್ಷಣ (9-12 ತರಗತಿಗಳು): ಶಿಕ್ಷಕರ ತರಬೇತಿಗಾಗಿ ಮಾಡ್ಯೂಲ್ಗಳು ಮತ್ತು ದೇಶದ ಮಕ್ಕಳಿಗೆ ಬೋಧನೆ ಮತ್ತು ಕಲಿಕಾ ಸಾಧನಗಳು ವಿಷಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ವೃತ್ತಿಪರ ಪದವಿ ಕೋರ್ಸ್ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಸಹಾಯ ಮಾಡುತ್ತವೆ.

ಸಿ)       ಭಾರತ ಮತ್ತು ವಿದೇಶಗಳಲ್ಲಿರುವ ಭಾರತೀಯ ನಾಗರಿಕರ ಜೀವಮಾನವಿಡೀ ಕಲಿಯುವ ಅಗತ್ಯಗಳನ್ನು ಪೂರೈಸಬಲ್ಲ ಪಠ್ಯಕ್ರಮ ಆಧಾರಿತ ಕೋರ್ಸ್ಗಳು.

ಡಿ)        ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು (11 ಮತ್ತು 12 ನೇ ತರಗತಿ) ತಯಾರಾಗಲು ನೆರವು.

 

ಚಾನೆಲ್‌  01-10 :                                   ಸಿಇಸಿ-ಯುಜಿಸಿ ನಿರ್ವಹಣೆ

ಚಾನಲ್‌ 11- 18 :                            ಎನ್ಪಿಟಿಇಎಲ್ ನಿರ್ವಹಣೆ

ಚಾನೆಲ್‌ 19 -22:                                    ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಐಐಟಿ ದೆಹಲಿಯಿಂದ ನಿರ್ವಹಿಸಲಾಗುತ್ತದೆ ಮತ್ತು  ಇದನ್ನು ಐಐಟಿ ಪಿಎಎಲ್ ಎಂದು ಕರೆಯಲಾಗುತ್ತದೆ

ಚಾನೆಲ್‌ 23, 24, 25 ಮತ್ತು 26 :    IGNOU ನವದೆಹಲಿ ನಿರ್ವಹಣೆ

ಚಾನೆಲ್‌ 27, 28 ಮತ್ತು 30:                       ನವದೆಹಲಿಯ NIOS ನಿರ್ವಹಣೆ

ಚಾನೆಲ್ 29 :                                          ಗಾಂಧಿನಗರದ UGC-INFLIBNET ನಿರ್ವಹಣೆ

ಚಾನೆಲ್ 31 :                                          ಎನ್ಸಿಇಆರ್ಟಿ ನಿರ್ವಹಣೆ

ಚಾನೆಲ್ 32:                                           IGNOU  ಮತ್ತು NIOS ಜಂಟಿಯಾಗಿ ನಿರ್ವಹಣೆ

 

SWAYAM PRABHA ಚಾನೆಲ್ಗಳ ಹೆಚ್ಚಿನ ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

https://www.swayamprabha.gov.in/index.php/ch_allocation

***



(Release ID: 1614574) Visitor Counter : 209