ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಟದ ರಾಷ್ಟ್ರವ್ಯಾಪಿ ಲಾಕ್ಡೌನ್ ಮೇ 3 ರವರೆಗೆ ವಿಸ್ತರಿಸುವ ನಿರ್ಧಾರ ಜನರ ಜೀವ ರಕ್ಷಣೆಗೆ ತೆಗೆದುಕೊಳ್ಳಲಾಗಿದೆ: ಶ್ರೀ ಅಮಿತ್ ಶಾ
Posted On:
14 APR 2020 3:10PM by PIB Bengaluru
ಕೋವಿಡ್-19 ವಿರುದ್ಧ ಹೋರಾಟದ ರಾಷ್ಟ್ರವ್ಯಾಪಿ ಲಾಕ್ಡೌನ್ ಮೇ 3 ರವರೆಗೆ ವಿಸ್ತರಿಸುವ ನಿರ್ಧಾರ ಜನರ ಜೀವ ರಕ್ಷಣೆಗೆ ತೆಗೆದುಕೊಳ್ಳಲಾಗಿದೆ: ಶ್ರೀ ಅಮಿತ್ ಶಾ
ಭಾರತದ ಜನರು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೋವಿಡ್-19 ವಿರುದ್ಧ ಹೋರಾಟದಲ್ಲಿ ಇಡೀ ಜಗತ್ತಿಗೆ ಒಂದು ಮಾದರಿಯಾಗಿದ್ದಾರೆ: ಗೃಹ ಸಚಿವರು
ಕೋವಿಡ್-19 ವಿರುದ್ಧ ಹೋರಾಡಲು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯ ಶ್ಲಾಘನೀಯ: ಶ್ರೀ ಅಮಿತ್ ಶಾ
ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ವೃತ್ತಿಪರರು ಮತ್ತು ಭದ್ರತಾ ಸಿಬ್ಬಂದಿಗೆ ವಂದನೆ: ಗೃಹ ಸಚಿವರು
ದೇಶದಲ್ಲಿ ಆಹಾರ, ಔಷಧಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಸಾಕಷ್ಟು ದಾಸ್ತಾನಿದೆ, ಜನರು ಭಯಪಡುವ ಅಗತ್ಯವಿಲ್ಲ: ಶ್ರೀ ಅಮಿತ್ ಶಾ
ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲು ಭಾರತ ಸರ್ಕಾರ ನಿರ್ಧರಿಸಿದೆ.
ಈ ನಿರ್ಧಾರ ಕೈಗೊಂಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿಯವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಕೋವಿಡ್-19 ವಿರುದ್ಧ ಹೋರಾಟದ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ನಿರ್ಧಾರವು ದೇಶದ ಜನರ ಜೀವಗಳನ್ನು ರಕ್ಷಿಸಲು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್-19 ಹರಡುವುದನ್ನು ತಡೆಯಲು ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಶ್ಲಾಘಿಸಿದ ಶ್ರೀ ಷಾ, ಇಂದು ಜಗತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಮತ್ತು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಭಾರತದ ಜನರು ರೋಗದ ವಿರುದ್ಧ ಹೋರಾಟಕ್ಕೆ ಮಾದರಿಯಾಗಿದ್ದಾರೆ. ಸರ್ಕಾರ ತೆಗೆದುಕೊಳ್ಳುತ್ತಿರುವ ಎಲ್ಲಾ ಸಮಯೋಚಿತ ನಿರ್ಧಾರಗಳು ಮತ್ತು ಅವುಗಳಲ್ಲಿ ಜನರ ಭಾಗವಹಿಸುವಿಕೆಯಿಂದ ಇದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ನಾಗರಿಕರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯವು ಪ್ರಮುಖವಾದುದು ಎಂದು ವಿವರಿಸಿದ ಗೃಹ ಸಚಿವರು, ಎಲ್ಲಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ ಎಂದರು. ಈ ಸಮನ್ವಯವನ್ನು ತೀವ್ರಗೊಳಿಸಬೇಕಾಗಿರುವುದರಿಂದ ಎಲ್ಲಾ ನಾಗರಿಕರು ಲಾಕ್ಡೌನ್ ಅನ್ನು ಸರಿಯಾಗಿ ಪಾಲಿಸಬೇಕು ಮತ್ತು ಅವರ ದೈನಂದಿನ ಅಗತ್ಯತೆಗಳಿಗೆ ಪಡೆಯಲು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ಹೇಳಿದರು.
ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ವೃತ್ತಿಪರರು ಮತ್ತು ಭದ್ರತಾ ಸಿಬ್ಬಂದಿಗೆ ವಂದಿಸಿದ ಶ್ರೀ ಶಾ, ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನಮ್ಮ ವೈದ್ಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ಎಲ್ಲಾ ಭದ್ರತಾ ಸಿಬ್ಬಂದಿಗಳ ಕೊಡುಗೆ ಹೃದಯಸ್ಪರ್ಶಿಯಾದುದು ಎಂದು ಹೇಳಿದರು. ಈ ಕಠಿಣ ಕಾಲದಲ್ಲಿ ಅವರ ಧೈರ್ಯ ಮತ್ತು ತಿಳುವಳಿಕೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುತ್ತದೆ. ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಅವರೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ದೇಶದ ನಾಗರಿಕರಿಗೆ ಭರವಸೆ ತುಂಬಿ ಮತ್ತು ಪರಸ್ಪರರಿಗೆ ಸಹಾಯ ಮಾಡಲು ಪ್ರೇರೇಪಿಸಿದ ಶ್ರೀ ಶಾ, " ದೇಶದ ಗೃಹ ಸಚಿವನಾಗಿ, ದೇಶದಲ್ಲಿ ಆಹಾರ, ಔಷಧಿಗಳು ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಸಾಕಷ್ಟು ದಾಸ್ತಾನು ಇದೆ ಎಂದು ಸಾರ್ವಜನಿಕರಿಗೆ ನಾನು ಭರವಸೆ ನೀಡುತ್ತೇನೆ. ಆದ್ದರಿಂದ ಯಾವುದೇ ನಾಗರಿಕರು ಭಯಭೀತರಾಗುವ ಅಗತ್ಯವಿಲ್ಲ. ಹಾಗೆಯೇ ಉಳ್ಳವರು, ತಮ್ಮ ಹತ್ತಿರದ ಬಡವರಿಗೆ ಸಹಾಯ ಮಾಡುವಂತೆಯೂ ನಾನು ವಿನಂತಿಸುತ್ತೇನೆ " ಎಂದರು.
***
(Release ID: 1614397)
Visitor Counter : 159
Read this release in:
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam