ರಕ್ಷಣಾ ಸಚಿವಾಲಯ
1.10 ಲಕ್ಷ ಐಎಸ್‌ಒ(ISO) ಕ್ಲಾಸ್ 3 ಕವರಾಲ್‌ಗಳನ್ನು ಓ ಎಫ್ ಬಿ ತಯಾರಿಸಲಿದೆ
Posted On:
14 APR 2020 2:41PM by PIB Bengaluru
1.10 ಲಕ್ಷ ಐಎಸ್‌ಒ(ISO) ಕ್ಲಾಸ್ 3 ಕವರಾಲ್‌ಗಳನ್ನು ಓ ಎಫ್ ಬಿ ತಯಾರಿಸಲಿದೆ
ಆರ್ಡ್‌ನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್‌ಬಿ) ಐಎಸ್‌ಒ (ISO) ಕ್ಲಾಸ್ 3 ಮಾನ್ಯತೆ ಮಾನದಂಡಗಳಿಗೆ ಅನುಗುಣವಾಗಿ ಕವರಾಲ್ ಗಳ ಸರಬರಾಜನ್ನು ಪ್ರಾರಂಭಿಸಿದೆ. ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ (ಎಚ್‌ಎಲ್‌ಎಲ್) ನಿಂದ 1.10 ಲಕ್ಷ ಆರಂಭಿಕ ಆದೇಶದ ತಯಾರಿಕೆಯು ಭರದಿಂದ ಸಾಗಿದೆ. ಈ ಆದೇಶದ ಸರಬರಾಜನ್ನು 40 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು.
ಕಾರ್ಖಾನೆಗಳ ಮಂಡಳಿಯು ವಿಶೇಷ ಎರಡು ಮೀಟರ್ ಡೇರೆಗಳನ್ನು ಅಭಿವೃದ್ಧಿಪಡಿಸಿದೆ, ಇದನ್ನು ವೈದ್ಯಕೀಯ ತುರ್ತುಸ್ಥಿತಿ, ತಪಾಸಣೆ, ಆಸ್ಪತ್ರೆ ಚಿಕಿತ್ಸೆಯ ಸರದಿ ನಿರ್ಧಾರಕ್ಕೆ ಮತ್ತು ಸಂಪರ್ಕತಡೆಗಾಗಿ ಬಳಸಬಹುದು. ಇವು ಜಲನಿರೋಧಕ ಫ್ಯಾಬ್ರಿಕ್, ಸೌಮ್ಯ ಉಕ್ಕು ಮತ್ತು ಅಲ್ಯೂಮಿನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ. ಸರಬರಾಜು ಈಗಾಗಲೇ ಪ್ರಾರಂಭವಾಗಿದೆ.
ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಯು ಸಮರೋಪಾದಿಯಲ್ಲಿ ನಡೆಯುತ್ತಿದೆ ಮತ್ತು ಈಗಾಗಲೇ 70,000 ಲೀಟರ್‌ಗಳನ್ನು ವಿವಿಧ ಸಂಸ್ಥೆಗಳಿಗೆ ಸರಬರಾಜು ಮಾಡಲಾಗಿದೆ.
ರಕ್ತ ನುಗ್ಗುವ ಪರೀಕ್ಷೆಗೆ ಒಂದು ಚೆನ್ನೈ ಮತ್ತು ಇನ್ನೊಂದು ಕಾನ್ಪುರದಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ,.
10 ಆಸ್ಪತ್ರೆಗಳಲ್ಲಿ ಸುಮಾರು 280 ಹಾಸಿಗೆಗಳನ್ನು ಪ್ರತ್ಯೇಕತೆಗಾಗಿ ಮೀಸಲಿಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಅಗತ್ಯಕ್ಕೆ ಅನುಗುಣವಾಗಿ ಇದನ್ನು ಮಾಡಲಾಗಿದೆ. ಎಚ್‌ಎಲ್‌ಎಲ್ ಇರಿಸಿದ ಪೈಲಟ್ ಆರ್ಡರ್ ಪ್ರಮಾಣಕ್ಕೆ ಅನುಗುಣವಾಗಿ ಮುಖಕವಚಗಳನ್ನು ತಯಾರಿಸಲು ಒಎಫ್‌ಬಿ ಪ್ರಯತ್ನಿಸುತ್ತಿದೆ. 90,000 ಕ್ಕೂ ಹೆಚ್ಚು ವೈದ್ಯಕೀಯೇತರ ಮುಖಗವಸುಗಳನ್ನು ತಯಾರಿಸಿ ವಿತರಿಸಲಾಗಿದೆ. ವೈದ್ಯಕೀಯ ಮುಖಗವಸುಗಳ ಪರೀಕ್ಷಾ ಸೌಲಭ್ಯಗಳು ಈ ವಾರದಲ್ಲಿ ಲಭ್ಯವಾಗುತ್ತವೆ.
***
(Release ID: 1614327)
Visitor Counter : 131
Read this release in:
Gujarati
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Tamil
,
Telugu