PIB Headquarters
ಕೋವಿಡ್ -19: ಪಿ ಐ ಬಿ ದೈನಿಕ ವರದಿ
Posted On:
13 APR 2020 7:06PM by PIB Bengaluru
ಕೋವಿಡ್ -19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ನಿನ್ನೆಯಿಂದ ಇಲ್ಲಿಯವರೆಗೆ 796 ಕೋವಿಡ್ ಸೋಂಕಿತರ ಹೊಸ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಕೋವಿಡ್ 19 ದೃಢಪಟ್ಟ ಪ್ರಕರಣಗಳ ಸಂಖ್ಯೆ 9152 ಆಗಿದೆ. ಈ ದಿನದವರೆಗೆ ಮೃತಪಟ್ಟವರ ಸಂಖ್ಯೆ 308 ಆಗಿದ್ದು, 857 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ 19ಗಾಗಿ ಜಿಲ್ಲಾ ಆಡಳಿತ ಮಟ್ಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್-19 ಗೆ ಜಿಲ್ಲಾಡಳಿತ ಮಟ್ಟದಲ್ಲಿ ಸಕಾಲಿಕ ಪ್ರತಿಕ್ರಿಯೆಗಾಗಿ ಎಲ್ಲಾ ಹಂತದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಕ್ರಿಯಾಯೋಜನೆಯ ಜಾರಿ ಫಲ ನೀಡಲು ಆರಂಭಿಸಿದ್ದು, ಈ ಹಿಂದೆ ಪ್ರಕರಣ ವರದಿಯಾಗಿದ್ದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ ಮತ್ತು ಭವಿಷ್ಯದಲ್ಲಿಯೂ ಇಲ್ಲಿ ಹೊಸ ಪ್ರಕರಣಗಳು ವರದಿಯಾಗದ ರೀತಿ ಕಟ್ಟೆಚ್ಚರ ವಹಿಸಲಾಗಿದೆ.
2020ರ ಏಪ್ರಿಲ್ 14ರಂದು ದೇಶವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಅಂದರೆ 2020ರ ಏಪ್ರಿಲ್ 14ರಂದು ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಅಂತರರಾಜ್ಯ ಮತ್ತು ರಾಜ್ಯದೊಳಗೆ ಸರಕು, ಟ್ರಕ್ ಗಳು, ಕೆಲಸಗಾರರು ಮತ್ತು ಗೋದಾಮು/ಶೀಥಲೀಕರಣ ಘಟಕ ಕಾರ್ಯಚಟುವಟಿಕೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಾನೂನು ರೀತ್ಯ ಮತ್ತು ಅದೇ ಸ್ಫೂರ್ತಿಯೊಂದಿಗೆ ಜಾರಿಗೆ ತರಲು ಎಂಎಚ್ಎ ರಾಜ್ಯಗಳಿಗೆ ನಿರ್ದೇಶಿಸಿದೆ
ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಾನೂನು ರೀತ್ಯ ಮತ್ತು ಅದೇ ಸ್ಫೂರ್ತಿಯೊಂದಿಗೆ ಅನುಷ್ಠಾನಗೊಳಿಸಬೇಕು, ಅಂತರ ರಾಜ್ಯ ಮತ್ತು ರಾಜ್ಯದೊಳಗೆ ಸರಕು, ಟ್ರಕ್, ಕಾರ್ಮಿಕರು ಮತ್ತು ಗೋದಾಮು/ಶೀಥಲೀಕರಣಘಟಕದ ಕಾರ್ಯಚಟುವಟಿಕೆ ಸುಗಮವಾಗಿ ಸಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಎಂ.ಎಚ್.ಎ. ರಾಜ್ಯಗಳಿಗೆ ನಿರ್ದೇಶನ ನೀಡಿದೆ. ದೇಶದ ಕೆಲವು ಭಾಗಗಳಲ್ಲಿ ಮೇಲಿನ ಮಾರ್ಗಸೂಚಿಗಳು ಮತ್ತು ಸ್ಪಷ್ಟೀಕರಣಗಳು ಕಾನೂನು ರೀತ್ಯ ಮತ್ತು ಸ್ಪೂರ್ತಿಯೊಂದಿಗೆ ಅನುಷ್ಠಾನಗೊಂಡಿಲ್ಲ ಎಂದು ತಿಳಿಸಿದೆ.
ಪ್ರಧಾನಮಂತ್ರಿ ಮತ್ತು ವಿಯಟ್ನಾಂ ಸಮಾಜವಾದಿ ಗಣರಾಜ್ಯದ ಪ್ರಧಾನಮಂತ್ರಿ ಅವರೊಂದಿಗೆ ದೂರವಾಣಿ ಸಂಭಾಷಣೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯಟ್ನಾಂ ಸಮಾಜವಾದಿ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಎಂಗುಯೇನ್ ಕ್ಸುವಾನ್ ಫುಕ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ 19 ಸಾಂಕ್ರಾಮಿಕದಿಂದ ಎದುರಾಗಿರುವ ಪರಿಸ್ಥಿತಿ ಮತ್ತು ಅದನ್ನು ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಡಿಜಿಟಲ್ ಪಾವತಿ ಮೂಲಸೌಕರ್ಯದಿಂದಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ನಗದು ಪಾವತಿಯ ತ್ವರಿತ ವರ್ಗಾವಣೆ
ಜನ-ಧನ್ ಖಾತೆ ಮತ್ತು ಇತರ ಖಾತೆಗಳನ್ನು ಖಾತೆದಾರರ ಮೊಬೈಲ್ ಸಂಖ್ಯೆಗಳು ಮತ್ತು ಆಧಾರ್ [ಜನ ಧನ್-ಆಧಾರ್-ಮೊಬೈಲ್ (ಜಾಮ್)] ನೊಂದಿಗೆ ಸಂಪರ್ಕ ಮಾಡುವ ಮೂಲಕ ಡಿಜಿಟಲ್ ವರ್ಗಾವಣೆ ಮಾರ್ಗ ರೂಪಿಸಲಾಗಿದೆ. ಸಾಮಾಜಿಕ ಸುರಕ್ಷತೆ/ಪಿಂಚಣಿ ಯೋಜನೆ ಇತ್ಯಾದಿ ಅಳವಡಿಸಿಕೊಂಡು ಈ ಮೂಲಸೌಕರ್ಯ ಮಾರ್ಗವು ನೆರ ಸವಲತ್ತು ವರ್ಗಾವಣೆಗೆ ಹರಿವಿಗೆ ಬೆನ್ನೆಲುಬಾಗಿದೆ. ಬ್ಯಾಂಕ್ ಸೌಲಭ್ಯವೇ ಇಲ್ಲದ ಜನರಿಗೆ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲು ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಗೆ 2014ರ ಆಗಸ್ಟ್ ನಲ್ಲಿ ಚಾಲನೆ ನೀಡಲಾಯಿತು. 2020ರ ಮಾರ್ಚ್ 20ರವರೆಗೆ ಸಕ್ರಿಯವಾಗಿರುವ 126 ಕೋಟಿ ಸಿಎಎಸ್.ಎ ಖಾತೆಗಳ ಪೈಕಿ 38 ಕೋಟಿ ಖಾತೆಗಳು ಪಿಎಂಜೆಡಿವೈ ಅಡಿ ಕಾರ್ಯಾಚರಣೆ ಮಾಡುತ್ತಿವೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಈವರೆಗಿನ ಪ್ರಗತಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ 32 ಕೋಟಿಗೂ ಹೆಚ್ಚು ಬಡ ಜನರು 29,352 ಕೋಟಿ ರೂ. ಆರ್ಥಿಕ ನೆರವನ್ನು ಪಡೆದಿದ್ದಾರೆ. 5.29 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರ ಆಹಾರ ಧಾನ್ಯವನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ವಿತರಿಸಲಾಗಿದೆ. 9.8 ಲಕ್ಷ ಉಚಿತ ಉಜ್ವಲ ಸಿಲಿಂಡರ್ ಗಳನ್ನೂ ಪೂರೈಸಲಾಗಿದೆ. ಇಪಿಎಫ್.ಓದ 2.1 ಲಕ್ಷ ಸದಸ್ಯರು ಮತ್ತೆ ಹಿಂತಿರುಗಿಸಲಾರದ 510 ಕೋಟಿ ರೂ. ಮುಂಗಡವನ್ನು ಆನ್ ಲೈನ್ ಹಿಂಪಡೆಯುವಿಕೆ ಮೂಲಕ ತಮ್ಮ ಇಪಿಎಫ್ಓ ಖಾತೆಗಳಿಂದ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನ ಪ್ರಥಮ ಕಂತು 14,946ಕೋಟಿ ರೂ.ಗಳನ್ನು .47 ಕೋಟಿ ರೈತರಿಗೆ ವರ್ಗಾವಣೆ ಮಾಡಲಾಗಿದೆ. 9930 ಕೋಟಿ ರೂ.ಗಳನ್ನು 19.86 ಕೋಟಿ ಮಹಿಳಾ ಜನ್ ಧನ್ ಖಾತೆದಾರರಿಗೆ ವಿತರಿಸಲಾಗಿದೆ. 1400 ಕೋಟಿ ರೂ. ಗಳನ್ನು 2.82 ಕೋಟಿ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ದಿವ್ಯಾಂಗರಿಗೆ ವಿತರಿಸಲಾಗಿದೆ. 2.1 ಕೋಟಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು 3071 ಕೋಟಿ ರೂ. ಆರ್ಥಿಕ ಬೆಂಬಲ ಪಡೆದಿದ್ದಾರೆ.
ಕೋವಿಡ್ -19 ಹಿನ್ನೆಲೆಯಲ್ಲಿ ಪ್ರಯಾಣದ ನಿರ್ಬಂಧದ ಕಾರಣ ಪ್ರಸ್ತುತ ಭಾರತದಲ್ಲಿ ಉಳಿದಿರುವ ವಿದೇಶೀ ಪ್ರಜೆಗಳಿಗೆ 2020 ಏಪ್ರಿಲ್ 30ರವೆಗೆ ರಾಯಭಾರ ಕಚೇರಿ ಸೇವೆಗಳು ಮಂಜೂರು
ಜಗತ್ತಿನ ಹಲವು ಭಾಗಗಳಲ್ಲಿ ಕೋವಿಡ್-19 ಹಬ್ಬಿರುವುದರಿಂದ ಮತ್ತು ಭಾರತೀಯ ಅಧಿಕಾರಿಗಳು ವಿಧಿಸಿರುವ ಪ್ರಯಾಣ ನಿರ್ಬಂಧಗಳ ಕಾರಣದಿಂದಾಗಿ ಮತ್ತು ಅವರ ವೀಸಾಗಳ ಅವಧಿ ಮುಗಿದ ಕಾರಣ ಭಾರತದಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದೇಶಿ ಪ್ರಜೆಗಳ ಸಾಮಾನ್ಯ ವೀಸಾ, ಇ-ವೀಸಾ ಅಥವಾ ವಾಸ್ತವ್ಯದ ಷರತ್ತುಗಳು 01.02.2020 (ಮಧ್ಯ ರಾತ್ರಿ) ರಿಂದ 30.04.2020 (ಮಧ್ಯ ರಾತ್ರಿ) ಅವಧಿಯಲ್ಲಿ ಮುಕ್ತಾಯಗೊಳ್ಳಲಿದ್ದರೆ, ಅಂತಹ ವಿದೇಶಿಯರು ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ, ಅವರಿಗೆ 2020 ಏಪ್ರಿಲ್ 30 ರವರೆಗೆ (ಮಧ್ಯ ರಾತ್ರಿ) ಅವುಗಳನ್ನು ವಿಸ್ತರಿಸಲಾಗುವುದು.
ಮುಂಬೈನ ಘಾಟ್ಕೂಪರ್ ದಿಗ್ಬಂಧನ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದ 44ಮಂದಿ ಮನೆಗೆ ಮರಳಿದ್ದಾರೆ
ಮುಂಬೈನ ಘಾಟ್ಕೂಪರ್ ನಲ್ಲಿ ಭಾರತೀಯ ನೌಕೆಯ ಮೆಟೀರಿಯಲ್ ಸಂಘಟನೆಯ ದಿಗ್ಬಂಧನ ಸೌಲಭ್ಯದಲ್ಲಿದ್ದ ಇರಾನ್ ನಿಂದ ತೆರವು ಮಾಡಲಾಗಿದ್ದ 44 ಜನರು (24 ಮಹಿಳೆಯರೂ ಸೇರಿ) ಯಶಸ್ವಿಯಾಗಿ ತಮ್ಮ ಹೋರಾಟ ಪೂರ್ಣಗೊಳಿಸಿ ಮನೆಗೆ ಮರಳಿದ್ದಾರೆ.
ಉಡಾನ್ ಲೈಫ್ ಲೈನ್ ಕಾರ್ಯಾಚರಣೆ ಅಡಿಯಲ್ಲಿ ವೈದ್ಯಕೀಯ ಸರಕು ಸಾಗಣೆ ವಿಮಾನಗಳು ಒಂದೇ ದಿನದಲ್ಲಿ 108 ಟನ್ ಅತ್ಯಾವಶ್ಯಕ ವಸ್ತುಗಳನ್ನು ದೇಶದ ವಿವಿಧೆಡೆ ಪೂರೈಕೆ ಮಾಡಿವೆ
ನಾಗರಿಕ ವಿಮಾನಯಾನ ಸಚಿವಾಲಯದಿಂದ ಕಾರ್ಯಾಚರಣೆ ಮಾಡಲಾದ 214 ಲೈಫ್ ಲೈನ್ ಉಡಾನ್ ವಿಮಾನಗಳು ಭಾರತ ಕೋವಿಡ್ 19 ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ದೂರದ ಪರದೇಶಗಳಿಗೆ ಅತ್ಯಾವಶ್ಯಕ ವೈದ್ಯಕೀಯ ವಸ್ತುಗಳನ್ನು ಸಾಗಿಸಿವೆ.
ಲಾಕ್ ಡೌನ್ ವೇಳೆ ಶೈಕ್ಷಣಿಕ ವೇಳಾಪಟ್ಟಿ ಮುಂದುವರಿಕೆ ಖಾತ್ರಿ ಪಡಿಸುವಂತೆ ವಿಶ್ವ ವಿದ್ಯಾಲಯಗಳಿಗೆ ಉಪರಾಷ್ಟ್ರಪತಿ ಕರೆ
ಭಾರತದ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯನಾಯ್ಡು ಅವರು, ಈ ಲಾಕ್ ಡೌನ್ ಅವಧಿಯಲ್ಲಿ ಶೈಕ್ಷಣಿಕ ವೇಳಾಪಟ್ಟಿ ಅನ್ನು ಮುಂದುವರಿಸುವುದನ್ನು ಖಾತ್ರಿಪಡಿಸಲು ವಿಶ್ವವಿದ್ಯಾಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನದ ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ವಿವಿಧ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಸಾರ್ವಜನಿಕ ಆಡಳಿತದ ಭಾರತೀಯ ಸಂಸ್ಥೆಯ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ ಉಪ ರಾಷ್ಟ್ರಪತಿಯವರು, ಸಾಮಾನ್ಯ ಸ್ಥಿತಿಗೆ ಮರಳಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂದರು ಹಾಗೂ ಕೋವಿಡ್-19 ಸಾಂಕ್ರಾಮಿಕದಿಂದ ಆಗಿರುವ ತೊಂದರೆಗಳನ್ನು ಎದುರಿಸಲು ಕೈಗೊಂಡ ಕ್ರಮಗಳ ಕುರಿತಂತೆ ಅವರು ವಿಚಾರಿಸಿದರು
ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಪೂರೈಕೆ ಸರಪಣಿ ನಿರಂತರತೆ ಮತ್ತು ಮೂಲಸೌಕರ್ಯ ವಲಯಕ್ಕೆ ಚೈತನ್ಯ ತುಂಬುತ್ತಿರುವ ಭಾರತೀಯ ರೈಲ್ವೆ
ಕಳೆದ 11 ದಿನಗಳಿಂದ ಅಂದರೆ ಏಪ್ರಿಲ್ 1ರಿಂದ 2020ರ ಏಪ್ರಿಲ್ 11ರವರೆಗೆ ರೈಲ್ವೆ 192165 ಬೋಗಿಗಳಷ್ಟು ಕಲ್ಲಿದ್ದಲು ಮತ್ತು 13276 ಬೋಗಿ ಪೆಟ್ರೋಲಿಯಂ ಉತ್ಪನ್ನ (ಒಂದು ಬೋಗಿ 58-60 ಟನ್ ಸರಕು ಹೊಂದಿರುತ್ತದೆ) ತುಂಬಿಸಿ ಸಾಗಿಸಿದೆ.
ಸಿಇಸಿ ಮತ್ತು ಇಸಿಗಳು ಕೋವಿಡ್ ನಿಧಿಗೆ ಸ್ವಯಂಪೇರಿತವಾಗಿ ತಮ್ಮ ಇಸಿಐ ಮೂಲ ವೇತನದ ಶೇಕಡ 30ರಷ್ಟು ಹಣವನ್ನು ಒಂದು ವರ್ಷಗಳ ಕಾಲ ದೇಣಿಗೆಯಾಗಿ ನೀಡಿದ್ದಾರೆ
ಎಸ್.ಬಿ.ಎಂ. ನಗರ ಅಡಿಯಲ್ಲಿ ತ್ವರಿತ ಬಿಕ್ಕಟ್ಟು ನಿರ್ವಹಣೆ ಯೋಜನೆ ರೂಪಿಸಿದ ಸೂರತ್
ಸಾಂಕ್ರಾಮಿಕತೆಯ ಸಮೂಹವನ್ನು (ಏಜೆಂಟ್ –ಆತಿಥೇಯ-ಪರಿಸರ ಅಂಶಗಳು), ಕೋವಿಡ್ -19 ಶಂಕಿತ ಪ್ರಕರಣಗಳನ್ನು ಆರಂಭದಲ್ಲೇ ಪತ್ತೆಹಚ್ಚುವಿಕೆ ಮತ್ತು ಸೋಂಕು ದೃಢಪಟ್ಟವರಿಗೆ ಗರಿಷ್ಠ ಆರೈಕೆ ನೀಡುವ ಮೂಲಕ ಮಾನವನಿಂದ ಮಾನವನಿಗೆ ಹರಡುವ ಸೋಂಕಿನ ಸರಪಳಿಯನ್ನು ಮುರಿಯುವ ಉದ್ದೇಶದೊಂದಿಗೆ ಸ್ವಯಂ ಬಾಷ್ಯ ಬರೆಯುತ್ತಿರುವ ಸೂರತ್ ಪುರಸಭೆ ಕೋವಿಡ್ -19 ವಿರುದ್ಧ ಹೋರಾಡಲು 3-ಟಿ ವ್ಯೂಹ ಎಂದು ಕರೆಯಲಾಗುವ ಮೂರು ಆಯಾಮದ ದೃಷ್ಟಿಕೋನವನ್ನು ಅಂದನ್ನು ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಯ ಪದ್ಧತಿ ಅಳವಡಿಸಿಕೊಂಡಿದೆ.
ಕೋವಿಡ್ -19 ಲಾಕ್ ಡೌನ್ ನಡುವೆಯೂ ವಾಣಿಜ್ಯ ಬಾತ್ಮೀದಾರರಾಗಿ ಬ್ಯಾಂಕ್ ಗಳಿಗೆ ಕೆಲಸ ಮಾಡುತ್ತಿರುವ ಎಸ್.ಎಚ್.ಜಿ.ಗಳು (ಬಿ.ಸಿ. ಸಖಿಯರು) ಮತ್ತು ಬ್ಯಾಂಕ್ ಸಖಿಯರು ಪ್ರಥಮ ಕಂತಿನ ಎಕ್ಸ್ ಗ್ರೇಷಿಯಾ ಹಣವಾದ ರೂ.500ನ್ನು ಮಹಿಳಾ ಪಿಎಂಜೆಡಿವೈ ಖಾತೆಗಳಿಗೆ ವಿತರಣೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ
ಲಾಕ್ ಡೌನ್ ನಡುವೆಯೂ ಸುಮಾರು 8800 ಬಿ.ಸಿ. ಸಖಿ ಮತ್ತು 21600 ಬ್ಯಾಂಕ್ ಸಖಿ ಪೈಕಿ, ಎರಡೂ ಕೇಡರ್ ನ ಸುಮಾರು ಶೇ.50ರಷ್ಟು ಜನರು ಸ್ವಯಂ ಪ್ರೇರಿತರಾಗಿ ದೇಶಾದ್ಯಂತ ಹಲವು ರಾಜ್ಯಗಳಲ್ಲ ಕಾರ್ಯಾರಂಭ ಮಾಡಿದ್ದಾರೆ. ಬ್ಯಾಂಕ್ ಸಖಿಯರು ಬ್ಯಾಂಕ್ ಶಾಖಾ ಮ್ಯಾನೇಜರ್ ಗಳಿಗೆ ಡಿಬಿಟಿ ಪಾವತಿ ವೇಳೆ ಶಾಖೆಗಳಲ್ಲಿ ದಟ್ಟಣೆ ನಿರ್ವಹಣೆಗೆ ಮತ್ತು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಲು ಮತ್ತು ಗ್ರಾಮೀಣ ಸಮುದಾಯಕ್ಕೆ ಜಾಗೃತಿ ಮೂಡಿಸಲು ನೆರವಾಗುತ್ತಿದ್ದಾರೆ.
ಕೋವಿಡ್ 19 ಲಾಕ್ ಡೌನ್ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಕಡು ಬಡವರಿಗೆ, ದುರ್ಬಲರಿಗೆ ಎಸ್.ಎಚ್.ಜಿ. ಮಹಿಳೆಯರು ನಡೆಸುತ್ತಿರುವ ಸಮುದಾಯ ಅಡುಗೆ ಮನೆಗಳ ಮೂಲಕ ಆಹಾರ ಪೂರೈಸುತ್ತಿದ್ದಾರೆ
ದೇಶಾದ್ಯಂತ ಸ್ವಸಹಾಯ ಗುಂಪುಗಳು ಅಗತ್ಯ ಸೇವೆಗಳಿಗೆ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಉಪಕ್ರಮಗಳೊಂದಿಗೆ ಸ್ಪಂದಿಸುತ್ತಿವೆ; ಸಾಮೂಹಿಕವಾಗಿ ಮಹಿಳೆಯರು ಮುಂಪಡೆಯ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಿರುವ ಮಕ್ಕಳಿಗೆ, ಹದಿಹರೆಯದವರಿಗೆ ಮತ್ತು ತಾಯಿಯರ ಆರೋಗ್ಯ ಮತ್ತು ಪೌಷ್ಟಿಕಾಂಶ-ಸಂಬಂಧಿತ ಅರ್ಹತೆಗಳ ವಿತರಣೆಯಲ್ಲಿ ಬೆಂಬಲ ನೀಡುತ್ತಿದ್ದಾರೆ. .
ಅಸ್ಸಾಂನ ಗ್ರಾಮೀಣ ಮಹಿಳೆಯರು ಕೋವಿಡ್ 19 ವಿರುದ್ಧ ಹೋರಾಡಲು ಕರ ನೈರ್ಮಲ್ಯಕಗಳು, ಗೃಹ ನಿರ್ಮಿತ ಮಾಸ್ಕ್ ಗಳನ್ನು ತಯಾರಿಸುತ್ತಿವೆ
ಗ್ರಾಮೀಣ ಮಹಿಳಾ ತಂತ್ರಜ್ಞಾನ ಪಾರ್ಕ್ (ಆರ್.ಡಬ್ಲ್ಯು.ಟಿ.ಪಿ.) ಅಡಿಯಲ್ಲಿ ಸಿಎಸ್.ಐ.ಆರ್. – ಈಶಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಜೋರ್ಹಟ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೀಜ ವಿಭಾಗದ ಬೆಂಬಲದೊಂದಿಗೆ, ಗ್ರಾಮೀಣ ಮಹಿಳೆಯರಿಗೆ ಕರ ನೈರ್ಮಲ್ಯಕ, ಗೃಹ ನಿರ್ಮಿತ ಮಾಸ್ಕ್ ಮತ್ತು ದ್ರವ ರೂಪದ ಸೋಂಕು ನಿವಾರಕಗಳನ್ನು ಕುಟುಂಬದ ಸದಸ್ಯರುಗಳಿಗೆ ಮತ್ತು ಹತ್ತಿರದ ಗ್ರಾಮಗಳ ಬಡ ಜನರಿಗೆ ಕೋವಿಡ್ ವಿರುದ್ಧ ಹೋರಾಡಲು ಬೆಂಬಲ ನೀಡುತ್ತಿವೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613906
ಕೊರೊನಾ ಸಾಂಕ್ರಾಮಿಕ ರೋಗ ಒಡ್ಡಿರುವ ಸವಾಲಿನ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಭಾರತೀಯ ಮುಸ್ಲಿಂರಿಗೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರ ಮನವಿ
ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಕೊರೋನಾ ಸಾಂಕ್ರಾಮಿಕ ಒಡ್ಡಿರುವ ಸವಾಲಿನ ಹಿನ್ನೆಲೆಯಲ್ಲಿ ಬಹುತೇಕ ಏಪ್ರಿಲ್ 24ರಿಂದ ಆರಂಭವಾಗಲಿರುವ, ಪವಿತ್ರ ರಂಜಾನ್ ಮಾಸದ ವೇಳೆ ಭಾರತೀಯ ಮುಸ್ಲಿಮರು ಕಟ್ಟು ನಿಟ್ಟಾಗಿ ಲಾಕ್ ಡೌನ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮನೆಗಳ ಒಳಗೆ ಪ್ರಾರ್ಥನೆ ಮತ್ತಿತರೆ ಧಾರ್ಮಿಕ ವಿಧಿಗಳ ಆಚರಣೆ ಮಾಡುವಂತೆ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614105
ಕೇವಲ 3 ದಿನಗಳಲ್ಲಿ 3700 ಸಲಹೆಗಳನ್ನು ಸ್ವೀಕರಿಸಿದ ಭಾರತ್ ಪಡೆ ಆನ್ ಲೈನ್ ಅಭಿಯಾನ
ಭಾರತದಲ್ಲಿ ಆನ್ ಲೈನ್ ಶಿಕ್ಷಣ ವ್ಯವಸ್ಥೆಯ ಪರಿಸರವನ್ನು ಸುಧಾರಣೆ ಮಾಡಲು ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಕಲ್ಪನೆಗಳ ಸಮೂಹ ಸಂಪನ್ಮೂಲಕ್ಕಾಗಿ ಒಂದು ವಾರ ಕಾಲದ ಭಾರತ್ ಡೆ ಆನ್ ಲೈನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದು ಎಚ್.ಆರ್.ಡಿ. ಸಚಿವಾಲಯ ಭಾರತ್ ಪಡೆ ಅಭಿಯಾನಕ್ಕೆ ಮೂರೇ ದಿನಗಳಲ್ಲಿ ಟ್ವಿಟರ್ ಮತ್ತು ಇಮೇಲ್ ನಲ್ಲಿ 300 ಸಲಹೆಗಳನ್ನು ಸ್ವೀಕರಿಸಿದೆ.
ಡಾ. ಜಿತೇಂದ್ರ ಸಿಂಗ್ ಅವರು ಡಿಓಪಿಟಿ, ಡಿಎಆರ್.ಪಿಜಿ ಮತ್ತು ಡಿಓಪಿಪಿಡಬ್ಲ್ಯು ಕೋವಿಡ್ 19 ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಗಳ ಪರಾಮರ್ಶೆ ನಡೆಸಿದರು
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸುವುದರ ಜೊತೆಗೆ, ಸಚಿವರು ಈ ಅವಧಿಯಲ್ಲಿ ಯಾವುದೇ ಕೆಲಸಕ್ಕೆ ತೊಂದರೆ ಅಗಬಾರದು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದರು. ಏಪ್ರಿಲ್ 12, 2020 ರ ಹೊತ್ತಿಗೆ, ಸರ್ಕಾರವು 7000 ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಿದ್ದು, ಇದು ಸರಾಸರಿ 1.57 ದಿನಗಳಾಗಿದೆ.
ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ
- ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸಿಆರ್.ಪಿಎಫ್.ನ 138ನೇ ಬೆಟಾಲಿಯನ್ ಕೋವಿಡ್- 19 ಕುರಿತಂತೆ ಮನೆ-ಮನೆಗೆ ಜಾಗೃತಿ ಅಭಿಯಾನವನ್ನು ಆಯೋಜಿಸುತ್ತಿದೆ.
- ಅಸ್ಸಾಂ: ಇತರ ರಾಜ್ಯಗಳಲ್ಲಿ ಉಳಿದಲ್ಲೇ ಉಳಿದಿರುವ ಅಸ್ಸಾಮಿ ಜನರಿಗೆ ನೆರವಾಗಲು ಅಸ್ಸಾಂ ಸರ್ಕಾರ ಅಸ್ಸಾಂ ಕೋವಿಡ್ ಸಹಾಯವಾಣಿ ಸಂಖ್ಯೆ 96-1547-1547, ಆರಂಭಿಸಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಟ್ವೀಟ್ ಮಾಡಿದ್ದಾರೆ.
- ಮಣಿಪುರ: ಮಣಿಪುರ ಆರೋಗ್ಯ ನಿರ್ದೇಶನಾಲಯವು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಖರೀದಿಸದಂತೆ ಜನತೆಗೆ ಮನವಿ ಮಾಡಿದೆ.
- ಮೇಘಾಲಯ: ಮೇಘಾಲಯದ ದಕ್ಷಿಣ ಕಾಶಿ ಗಿರಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ.
- ಮಿಜೋರಾಂ: ಮಿಜೋರಾಂ ಸಿಎಂ ಅವರಿಂದು ಕೋವಿಡ್ 19 ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚ್ ಗಳು, ಎನ್.ಜಿ.ಓ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಮತ್ತು ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿದರು.
- ನಾಗಾಲ್ಯಾಂಡ್: ರಾಜ್ಯದ ಪ್ರಥಮ ಕೋವಿಡ್ ರೋಗಿ ಕೋಲ್ಕತ್ತಾದ ದೀಮಾಪುರದಿಂದ ಏರ್ ಇಂಡಿಯಾ ವಿಮಾನ 709ರಲ್ಲಿ (ಸೀಟ್ ನಂ. 5ಬಿ)ಯಲ್ಲಿ ಪ್ರಯಾಣ ಮಾಡಿದ್ದು, ಎಲ್ಲ ಸಹ ಪ್ರಯಾಣಿಕರ ಸಂಪರ್ಕದ ಶೋಧನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
- ಸಿಕ್ಕಿಂ: ಆರೋಗ್ಯ ಇಲಾಖೆಯ ಡಿ.ಜಿ. 70 ಪ್ರಕರಣಗಳಲ್ಲಿ ಸೋಂಕು ಇಲ್ಲದಿರುವುದರಿಂದ ವಿಶ್ವಾಸದಿಂದಿದ್ದು, ಸಿಕ್ಕಿಂ ಹಸಿರು ವಲಯದಲ್ಲೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
- ತ್ರಿಪುರಾ: ಅತ್ಯಾವಶ್ಯಕ ವಸ್ತುಗಳ ಉತ್ಪಾದನಾ ಘಟಕಗಳು ಲಾಕ್ ಡೌನ್ ಅವಧಿಯಲ್ಲೂ ಕಾರ್ಯಾಚರಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
- ಕೇರಳ: ಕೇಂದ್ರ ಸರ್ಕಾರದ ನಿರ್ಧಾರ ತಿಳಿದ ತರುವಾಯವಷ್ಟೇ ಲಾಕ್ ಡೌನ್ ಷರತ್ತುಗಳನ್ನು ಸರಳಗೊಳಿಸಲು ನಿರ್ಧರಿಸಿದೆ. ಮುಂಬೈ ಮತ್ತು ಪುಣೆಯ ಕೇರಳದ ನಾಲ್ವರು ದಾದಿಯರಲ್ಲಿ ಸೋಂಕು ದೃಢಪಟ್ಟಿದೆ. ನಾಳೆ ವಿಶು ಹಬ್ಬದ ಹಿನ್ನೆಲೆಯಲ್ಲಿ ಬೀದಿಗಳಲ್ಲಿ ಲಾಕ್ ಡೌನ್ ಜಾರಿಗೆ ಪೊಲೀಸರು ತೀವ್ರ ಹೆಣಗಾಡಿದರು. 36 ರೋಗಿಗಳು ಗುಣಮುಖರಾಗಿದ್ದರೆ, 2 ಹೊಸ ಪ್ರಕರಣಗಳು ನಿನ್ನೆ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಪ್ರಕರಣ ಈವರೆಗೆ 375 ಆಗಿದೆ. ಸಾವಿನ ದರ ಶೇ.0.53 ಇದ್ದು ವಿಶ್ವದ ಸರಾಸರಿಗಿಂತ ಉತ್ತಮವಾಗಿದೆ.
- ತಮಿಳುನಾಡು: ತಜ್ಞರ ಸಮಿತಿ ಸಾಮೂಹಿಕ ಪರೀಕ್ಷೆಗೆ ಮತ್ತು ಮಾಸ್ಕ್ ಬಳಕೆ ಕಡ್ಡಾಯಗೊಳಿಸಲು ಶಿಫಾರಸು ಮಾಡಿದೆ. ಕೊಯಮತ್ತೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಇಬ್ಬರು ಪಿಜಿ ಡಾಕ್ಟರ್ ಗಳಲ್ಲಿ ರೋಗ ಲಕ್ಷಣ ಕಂಡು ಬಂದಿದ್ದು, ಅವರನ್ನು ಪ್ರತ್ಯೇಕವಾಗಿಡಲಾಗಿದೆ. ಖಾಸಗಿ ಪ್ರಯೋಗಾಲಯಗಳ ಕೋವಿಡ್ ಪರೀಕ್ಷೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ. ನಿನ್ನೆ 106 ಹೊಸ ಸೋಂಕಿನ ಪ್ರಕರಣ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ಈಗ 1075 ಆಗಿದೆ. 50 ಜನರು ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 11 ಆಗಿದೆ. ಚೆನ್ನೈನಲ್ಲಿ (181) ಮತ್ತು ಕೊಯಮತ್ತೂರು (97) ಮುಂಚೂಣಿಯಲ್ಲಿವೆ.
- ಕರ್ನಾಟಕ: 15 ಹೊಸ ಪ್ರಕರಣಗಳು ಈವರೆಗೆ ವರದಿಯಾಗಿವೆ. ಬೆಳಗಾವಿ 3, ಬೀದರ್ 2, ಮಂಡ್ಯ 3, ಧಾರವಾಡ , ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 247. ಈವರೆಗೆ 6 ಮಂದಿ ಮೃತಪಟ್ಟಿದ್ದು, 59 ಮಂದಿ ಬಿಡುಗಡೆಯಾಗಿದ್ದಾರೆ.
- ಆಂಧ್ರಪ್ರದೇಶ: ಪರೀಕ್ಷೆ ಮತ್ತು ಮಾದರಿ ಸಂಗ್ರಹಕ್ಕಾಗಿ ರಾಜ್ಯವು ಶ್ರೀಕಾಕುಲಂನಲ್ಲಿ ಮೊಬೈಲ್ ವಾಕ್-ಇನ್ ಸ್ಯಾಂಪಲ್ ಕಿಯೋಸ್ಕ್ (ವಿಸ್ಕ್) ಅನ್ನು ಸ್ಥಾಪಿಸಿದೆ. ಕೋವಿಡ್ ನೆರವಿಗಾಗಿ ಸರ್ಕಾರ ಉಚಿತ ಕರೆ ಸಂಖ್ಯೆ 14410ಯೊಂದಿಗೆ ಡಾ ವೈಎಸ್ಆರ್ ಟೆಲಿಮೆಡಿಸಿನ್ ಪಿಜಿಎಂ ಅನ್ನು ಆರಂಭಿಸಿದೆ. ಪಿಸಿಆರ್ ತಂತ್ರವನ್ನು ಬಳಸಿಕೊಂಡು ಮಾದರಿ ಪರೀಕ್ಷೆಯನ್ನು ತೀವ್ರಗೊಳಿಸಲು ರಾಜ್ಯ ಮುಂದಾಗಿದೆ.. ಇಂದು ವರದಿಯಾದ 12 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಒಟ್ಟು ಪ್ರಕರಣಗಳ ಸಂಖ್ಯೆಯನ್ನು 432 ಕ್ಕೆ ಏರಿದೆ; ಚೇತರಿಸಿಕೊಂಡರು ಮತ್ತು ಬಿಡುಗಡೆಯಾದವರು 12; ಸಾವು 7. ಗುಂಟೂರು (90) ಮತ್ತು ಕರ್ನೂಲ್ (84) ಸೋಂಕಿನ ಪ್ರಕರಣಗಳಲ್ಲಿ ಮುನ್ನಡೆ.
- ತೆಲಂಗಾಣ: ರಾಜ್ಯದಲ್ಲಿ ಮತ್ತೊಂದು ಸೋಂಕಿನ ಪ್ರಕರಣ ವರದಿಯಾಗಿದೆ. ಒಟ್ಟು ಸೋಂಕು ದೃಢಪಟ್ಟ ಸಂಖ್ಯೆ 532 ಆಗಿದೆ. ಹೈದ್ರಾಬಾದ್ ಪೊಲೀಸರು ಸ್ಥಳೀಯ ಕಚೇರಿಯಲ್ಲಿ ವಿದೇಶೀಯರಿಗೆ ಆಶ್ರಯ ನೀಡಿದ್ದಕ್ಕಾಗಿ ತಬ್ಲಿಗಿ ಜಮಾತ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಮುಂದೂಡಿದೆ.
- ಮಹಾರಾಷ್ಟ್ರ: ಮುಂಬೈನಲ್ಲಿ ಕೋವಿಡ್ 19 ಸ್ಫೋಟಗೊಂಡಿರುವ ಧಾರಾವಿಯಲ್ಲಿ ನಿಯಂತ್ರಣಕ್ಕಾಗಿ ಮುನಿಸಿಪಲ್ ಪ್ರಾಧಿಕಾರಗಳು ಶ್ರಮಿಸುತ್ತಿವೆ. ಇತರ ಕೊಳೆಗೇರಿ ಪ್ರದೇಶಗಳಾದ ವರ್ಲಿ ಕೋಲಿವಾಡ ಮತ್ತು ಗೋವಂದಿಲ್ಲಿ ಹೊಸ ಹಾಟ್ ಸ್ಪಾಟ್ ಆಗಿ ಹೊರಹೊಮ್ಮಿವೆ. ಈ ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರದ ಅಭ್ಯಾಸ ಮಾಡಿಸುವುದು ಕಷ್ಟ ಮತ್ತು ಈ ಕೊಳೆಗೇರಿಗಳಲ್ಲಿ ವೈರಸ್ ತಡೆಯುವುದು ಮುಂಬೈಗೆ ದೊಡ್ಡ ಸವಾಲು ಎಂದು ಆರೋಗ್ಯ ತಜ್ಞರು ಭಾವಿಸಿದ್ದಾರೆ.
- ಗುಜರಾತ್: 22 ಹೊಸ ಕೋವಿಡ್ 19 ಪ್ರಕರಣಗಳು ಗುಜರಾತ್ ನಲ್ಲಿ ಇಂದು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 538ಕ್ಕೆ ಏರಿದೆ. ಹೊಸ ಪ್ರಕರಣಗಳಲ್ಲಿ 13 ಅಹಮದಾಬಾದ್ ನಿಂದ ವರದಿಯಾಗಿದೆ. ಇದರಲ್ಲಿ ಐದು ಸೂರತ್ ನಿಂದ, ಎರಡು ಬನಸ್ಕಾಂತದಲ್ಲಿ ಮತ್ತು ಆನಂದ್ ಮತ್ತು ವಡೋದರದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
- ರಾಜಾಸ್ಥಾನ: ರಾಜಾಸ್ಥಾನದಲ್ಲಿ ಸೋಮವಾರ 11 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 815 ಆಗಿದೆ. 10ರಿಂದ 11 ಸೋಂಕು ದೃಢಪಟ್ಟ ಪ್ರಕರಣಗಳು ಭರತ್ ಪುರದಿಂದ ವರದಿಯಾಗಿವೆ. ಈ ಮಧ್ಯೆ ರಾಜ್ಯ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಅನಿರ್ದಿಷ್ಟಕಾಲ ಮುಂದೂಡಿದೆ ಮತ್ತು ಬೇಸಿಗೆ ರಜೆಯನ್ನು ಏಪ್ರಿಲ್ 16ರಿಂದ ಮೇ 30ರವರೆಗೆ ಘೋಷಿಸಿದೆ.
Fact Check on #Covid19





***
(Release ID: 1614169)
Visitor Counter : 284
Read this release in:
Malayalam
,
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu