ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣದ ನಿರ್ಬಂಧದಿಂದಾಗಿ ಪ್ರಸ್ತುತ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಏಪ್ರಿಲ್ 30, 2020 ರವರೆಗೆ ಕಾನ್ಸುಲರ್ ಸೇವೆಗಳು ಮಂಜೂರು

Posted On: 13 APR 2020 2:38PM by PIB Bengaluru

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣದ ನಿರ್ಬಂಧದಿಂದಾಗಿ ಪ್ರಸ್ತುತ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಏಪ್ರಿಲ್ 30, 2020 ರವರೆಗೆ ಕಾನ್ಸುಲರ್ ಸೇವೆಗಳು ಮಂಜೂರು

 

ಸಾರ್ವಜನಿಕರಲ್ಲಿ ಗೊಂದಲವನ್ನು ಹೋಗಲಾಡಿಸುವ ಸಲುವಾಗಿ, 28.03.2020 ರಂದು ಕೇಂದ್ರ ಗೃಹ ಸಚಿವಾಲಯವು ಕೋವಿಡ್ ಕಾರಣದಿಂದಾಗಿ ಪ್ರಯಾಣದ ನಿರ್ಬಂಧದ ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲಿ ಇರುವ ವಿದೇಶಿ ಪ್ರಜೆಗಳಿಗೆ 2020 ಏಪ್ರಿಲ್ 30 ರವರೆಗೆ ಉಚಿತವಾಗಿ ಕಾನ್ಸುಲರ್ ಸೇವೆಗಳನ್ನು ಮಂಜೂರು ಮಾಡಿದೆ.

(Https://pib.gov.in/PressReleaseIframePage.aspx?PRID=1613895)

ಜಗತ್ತಿನ ಹಲವು ಭಾಗಗಳಲ್ಲಿ ಕೋವಿಡ್-19 ಹರಡಿದ್ದರಿಂದ ಮತ್ತು ಭಾರತೀಯ ಅಧಿಕಾರಿಗಳು ವಿಧಿಸಿದ ಪ್ರಯಾಣ ನಿರ್ಬಂಧಗಳ ಕಾರಣದಿಂದಾಗಿ ಮತ್ತು ಅವರ ವೀಸಾಗಳ ಅವಧಿ ಮುಗಿದ ಕಾರಣ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿ ಪ್ರಜೆಗಳ ಸಾಮಾನ್ಯ ವೀಸಾ, -ವೀಸಾ ಅಥವಾ ವಾಸ್ತವ್ಯದ ಷರತ್ತುಗಳು 01.02.2020 (ಮಧ್ಯ ರಾತ್ರಿ) ರಿಂದ 30.04.2020 (ಮಧ್ಯ ರಾತ್ರಿ) ಅವಧಿಯಲ್ಲಿ ಮುಕ್ತಾಯಗೊಳ್ಳಲಿದ್ದರೆ, ಅಂತಹ ವಿದೇಶಿಯರು ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ, ಅವರಿಗೆ 2020 ಏಪ್ರಿಲ್ 30 ರವರೆಗೆ (ಮಧ್ಯ ರಾತ್ರಿ) ಅವುಗಳನ್ನು ಉಚಿತವಾಗಿ ವಿಸ್ತರಿಸಲಾಗುವುದು.

***(Release ID: 1613925) Visitor Counter : 186