PIB Headquarters

ಕೋವಿಡ್ -19: ಪಿ ಐ ಬಿ ದೈನಿಕ ವರದಿ

Posted On: 09 APR 2020 7:20PM by PIB Bengaluru

ಕೋವಿಡ್ -19: ಪಿ ಬಿ ದೈನಿಕ ವರದಿ

 

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

           

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 5734 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು,  166 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 473 ಜನರು ಗುಣಮುಖರಾಗಿ/ ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳು ಮತ್ತು ರಾಜ್ಯ ಆರೋಗ್ಯ ಇಲಾಖೆಗಳಿಗೆ ವಿಭಾಗೀಯ ಮಟ್ಟದಲ್ಲಿ ರೋಗ ನಿಗ್ರಹ ಯೋಜನೆ ಮತ್ತು ಆಸ್ಪತ್ರೆಗಳ ಸನ್ನದ್ಧತೆಗೆ (ಕೋವಿಡ್-19 ರೋಗಿಗಳಿಗೆ ಐಸಿಯು ಮತ್ತು ವೆಂಟಿಲೇಟರ್ ನಿರ್ವಹಣೆ) ನೆರವಾಗಲು ಉನ್ನತ ಮಟ್ಟದ ಬಹು-ವಿಭಾಗೀಯ ಕೇಂದ್ರ ತಂಡಗಳನ್ನು ರಚಿಸಿ ನಿಯುಕ್ತಿಗೊಳಿಸಿದೆ.

https://pib.gov.in/PressReleseDetail.aspx?PRID=1612754

ಭಾರತ ಕೋವಿಡ್-19 ತುರ್ತು ಸ್ಪಂದ ನೆ ಮತ್ತು ಆರೋಗ್ಯ ವ್ಯವಸ್ಥೆಯ ಸನ್ನದ್ಧತೆ ಪ್ಯಾಕೇಜ್ ಗೆ 15 ಸಾವಿರ ಕೋಟಿ ಮಂಜೂರು ಮಾಡಿದ ಭಾರತ ಸರ್ಕಾರ

ಭಾರತ ಸರ್ಕಾರ (ಜಿಓಐ) ಭಾರತ ಕೋವಿಡ್ -19 ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆ ಸನ್ನದ್ಧತೆ ಪ್ಯಾಕೇಜ್’’ಗಾಗಿ 15,000 ಕೋಟಿ ರೂ. ಹೂಡಿಕೆಯ ಮಹತ್ವದ ಘೋಷಣೆ ಮಾಡಿದೆ. ಮಂಜೂರು ಮಾಡಿರುವ ಹಣವನ್ನು ತತ್ ಕ್ಷಣದ ಕೋವಿಡ್ -19 ತುರ್ತು ಸ್ಪಂದನೆಗೆ (7774 ಕೋಟಿ ರೂ. ಮೊತ್ತ) ಮತ್ತು ಉಳಿದ ಹಣವನ್ನು ಮಧ್ಯಮ ಅವಧಿ ಬೆಂಬಲ (1-4 ವರ್ಷಗಳು)ಕ್ಕಾಗಿ ಯಂತ್ರೋಪಾದಿಯಂತೆ ಒದಗಿಸಲಾಗುತ್ತದೆ.

https://pib.gov.in/PressReleseDetail.aspx?PRID=1612655

ಸಚಿವರ ಗುಂಪಿನಿಂದ ಕೋವಿಡ್ 19 ನಿರ್ವಹಣೆಗಾಗಿ ಪ್ರಸಕ್ತ ಸ್ಥಿತಿ ಮತ್ತು ಕ್ರಮದ ಪರಿಶೀಲನೆ

ಸಚಿವರುಗಳ ಗುಂಪು (ಜಿಓಎಂ) ಕೋವಿಡ್ 19 ನಿರ್ವಹಣೆ ಮತ್ತು ನಿಗ್ರಹ ಕುರಿತಂತೆ ಸವಿವರವಾದ ಸಮಾಲೋಚನೆ ನಡೆಸಿತು. ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು, ರೋಗ ತಡೆ ಕಾರ್ಯತಂತ್ರವಾಗಿ ಸಾಮಾಜಿಕ ಅಂತರದ ಪ್ರಸಕ್ತ ಸನ್ನಿವೇಶ ಮತ್ತು ಕೋವಿಡ್ 19 ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತಂತೆ ಜಿಓಎಂ ಚರ್ಚಿಸಿತು.

https://pib.gov.in/PressReleseDetail.aspx?PRID=1612832

ಭಾರತ ಮತ್ತು ಅಮೆರಿಕಾ ಬಾಂದವ್ಯ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂದು ಪ್ರಧಾನಿ ಹೇಳಿಕೆ

ಭಾರತ ಮತ್ತು ಅಮೆರಿಕದ ಬಾಂಧವ್ಯ ಹಿಂದೆಂದಿಗಿಂದಲೂ ಬಲಿಷ್ಠವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಕೋವಿಡ್ 19ರ ವಿರುದ್ಧ ಅಮೆರಿಕದ ಹೋರಾಟದ ಸಂದರ್ಭದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆಯ ಭಾರತದ ನಿರ್ಧಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಅಮೆರಿಕದ ಅಧ್ಯಕ್ಷ ಘನತೆವೆತ್ತ ಡೋನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಗೆ ಶ್ರೀ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

https://pib.gov.in/PressReleseDetail.aspx?PRID=1612422

ಪರಿಹಾರ ಕಾರ್ಯಾಚರಣೆಗೆ ನೇರವಾರಿ ಎಫ್.ಸಿ.ಐ.ನಿಂದ ಆಹಾರ ಧಾನ್ಯ ಖರೀದಿಸಲು ಎನ್.ಜಿ.ಓ.ಗಳಿಗೆ ಅನುಮತಿ

ಎನ್.ಜಿ.ಓ.ಗಳು ಮತ್ತು ದತ್ತಿ ಸಂಸ್ಥೆಗಳು ದೇಶವ್ಯಾಪಿ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ಮತ್ತು ಬಡಜನರಿಗೆ ಬೇಯಿಸಿದ ಆಹಾರ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಇಂಥ ಸಂಘಟನೆಗಳಿಗೆ ತಡೆರಹಿತವಾಗಿ ಆಹಾರ ಧಾನ್ಯ ಪೂರೈಕೆಯನ್ನು ಖಾತ್ರಿ ಪಡಿಸಲು ಇಂಥ ಸಂಘಟನೆಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಓಎಂಎಸ್.ಎಸ್.) ದರದಲ್ಲಿ ಇ-ಹರಾಜು ಪ್ರಕ್ರಿಯೆ ಇಲ್ಲದೆಯೇ ಗೋಧಿ ಮತ್ತು ಅಕ್ಕಿಯನ್ನು ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

https://pib.gov.in/PressReleseDetail.aspx?PRID=1612448

ಇ-ಮತದಾನ ಸೌಲಭ್ಯ/ ನೋಂದಾಯಿತ ಇಮೇಲ್ ಮೂಲಕ ಸರಳೀಕೃತ ಮತದಾನದೊಂದಿಗೆ ವಿಸಿ ಅಥವಾ ಓಎವಿಎಂ ಮೂಲಕ ಇಜಿಎಂ ನಡೆಸಲು ಅವಕಾಶ ನೀಡಿದ ಎಂ.ಸಿ.ಎ

ಸಾಮಾನ್ಯ ಸುತ್ತೋಲೆ ಸಂಖ್ಯೆ. 14/2020 ದಿನಾಂಕ 08.04.2020ನ್ನು ಹೊರಡಿಸಿರುವ ಎಂ.ಸಿ.ಎ. ಲಿಸ್ಟೆಡ್ ಕಂಪನಿಗಳಿಗೆ ಅಥವಾ 1000 ಶೇರುದಾರರು ಅಥವಾ ಅದಕ್ಕಿಂತ ಹೆಚ್ಚಿರುವ ಕಂಪನಿಗಳಿಗೆ ವಿಸಿ/ಓಎವಿಎಂ ಮತ್ತು ಇವೋಂಟಿಗ್ ಮೂಲಕ ಇಜಿಎಂ ನಡೆಸಲು ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ಇ ಮತದಾನ ಸೌಲಭ್ಯ ಒದಗಿಸುವುದು ಅಗತ್ಯವಾಗಿರುತ್ತದೆ, ಇದರ ಸರಳ ಅನುಸರಣೆಗಾಗಿ ಇತರ ಕಂಪನಿಗಳಿಗೆ ಉನ್ನತ ಸರಳೀಕೃತ ವ್ಯವಸ್ಥೆಯನ್ನು ನೋಂದಾಯಿತ ಇ ಮೇಲ್ ಮೂಲಕ ಮಾಡಲು ಅವಕಾಶ ನೀಡಲಾಗಿದೆ.

https://pib.gov.in/PressReleseDetail.aspx?PRID=1612446

ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ರಾಜ್ಯಗಳ ಕೃಷಿ ಸಚಿವರೊಂದಿಗೆ ಸಭೆ ನಡೆಸಿ ರೈತರಿಗಾಗಿ ಇರುವ ಪರಿಹಾರ ಕ್ರಮಗಳನ್ನು ಪರಿಶೀಲಿಸಿದರು

ಕೋವಿಡ್ ಮಹಾಮಾರಿಯ ಸವಾಲಿನ ಸಂದರ್ಭದಲ್ಲೂ ಕೃಷಿ ಚಟುವಟಿಕೆ ನಡೆಯಲು ಸಕಾರಾತ್ಮಕ ಕ್ರಮ ಕೈಗೊಂಡಿರುವ ರಾಜ್ಯ ಕೃಷಿ ಸಚಿವರುಗಳ ಪಾತ್ರಕ್ಕೆ ಕೇಂದ್ರ ಕೃಷಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.  ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಾಯಿತಿ ನೀಡುವ ಬಗ್ಗೆ ಕ್ಷೇತ್ರ ಏಜೆನ್ಸಿಗಳನ್ನು ಸಂವೇದನಾತ್ಮಕಗೊಳಿಸಲು ಮತ್ತು ಕೃಷಿ ಉತ್ಪನ್ನಗಳುರಸಗೊಬ್ಬರಗಳು ಮತ್ತು ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಸಾಗಾಟಕ್ಕೆ ಅನುಮತಿಸಲು ರಾಜ್ಯಗಳು ಕೋರಿದವು.

https://pib.gov.in/PressReleseDetail.aspx?PRID=1612514

ಕೈಗಾರಿಕೆ ಮತ್ತು ವಾಣಿಜ್ಯ ಸಂಘಟನೆಗಳನ್ನು ಭೇಟಿಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು; ಸಮಸ್ಯೆಗಳನ್ನು ಪರಿಹರಿಸಲು ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಭರವಸೆ

ದೇಶದ ವಿವಿಧ ಕೈಗಾರಿಕೆ ಮತ್ತು ವಾಣಿಜ್ಯ ಸಂಘಟನೆಗಳೊಂದಿಗೆ ಸಂವಾದ ನಡೆಸಿದ ಶ್ರೀ ಪಿಯೂಷ್ ಗೋಯಲ್ಕೋವಿಡ್ -19 ಮತ್ತು ನಂತರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರು ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ನಿವಾರಿಸಲು. ಸಾರಿಗೆ ಮತ್ತು ರಫ್ತು-ಆಮದು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಚಿವಾಲಯ ಈಗಾಗಲೇ ವಿವಿಧ ಸಚಿವಾಲಯಗಳೊಂದಿಗೆ ಶ್ರಮಿಸುತ್ತಿದ್ದುಉದ್ಯಮ ಮತ್ತು ವಾಣಿಜ್ಯೋದ್ಯಮಿಗಳು ಹಾಗೂ ಇತರರ ಕಾಳಜಿ ವಹಿಸಿದೆ ಎಂದು ಹೇಳಿದರು.

https://pib.gov.in/PressReleseDetail.aspx?PRID=1612824

ಕೋವಿಡ್ ನಂತರದ ಕಾಲದಲ್ಲಿ ಸಾಮರ್ಥ್ಯದ ಬಳಕೆಗೆ ಮತ್ತು ಬೃಹತ್ತಾಗಿ ಚಿಂತಿಸುವಂತೆ ರಫ್ತುದಾರರಿಗೆ ಶ್ರೀ ಪೀಯೂಷ್ ಗೋಯೆಲ್ ಕರೆ: ಜಾಗತಿಕವಾಗಿ ನಾವು ಜವಾಬ್ದಾರಿಯುತ ನಾಗರಿಕರು ಎಂದು ಹೇಳಿಕೆ

ಕೋವಿಡ್ 19 ಮಹಾಮಾರಿ ಮತ್ತು ಅದರ ನಿಗ್ರಹಕ್ಕೆ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ವಿವಿಧ ರಫ್ತು ಉತ್ತೇಜನ ಮಂಡಳಿಗಳೊಂದಿಗೆ ವಾಸ್ತವ ಸ್ಥಿತಿಯ ಪರಾಮರ್ಶೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆ ಕುರಿತು ಸಂವಾದ ನಡೆಸಿದರು.

https://pib.gov.in/PressReleseDetail.aspx?PRID=1612443

ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮಾ ಕಂತುಗಳ ಪಾವತಿಯ ಅವಧಿ 2020ರ ಜೂನ್ 30ರವರೆಗೆ ವಿಸ್ತರಣೆ

ಪಿಎಲ್ಐ/ಆರ್.ಪಿ.ಎಲ್.ಐ. ಗ್ರಾಹಕರುಗಳ ಅನುಕೂಲತೆಯ ಕ್ರಮವಾಗಿ ಸಂವಹನ ಸಚಿವಾಲಯದ, ಅಂಚೆ ಇಲಾಖೆಯ ಅಂಚೆ ವಿಮಾ ನಿರ್ದೇಶನಾಲಯವು ಮಾರ್ಚ್ 2020, ಏಪ್ರಿಲ್ 2020 ಮತ್ತು ಮೇ 2020ಕ್ಕೆ ಬಾಕಿ ಇರುವ ಕಂತುಗಳ ಪಾವತಿಯ ದಿನಾಂಕವನ್ನು 2020ರ ಜೂನ್ 30ರವರೆಗೆ ಯಾವುದೇ ದಂಡ/ಸುಸ್ತಿ ಶುಲ್ಕವಿಲ್ಲದೆ ವಿಸ್ತರಣೆ ಮಾಡಿದೆ.

https://pib.gov.in/PressReleseDetail.aspx?PRID=1612659

ಕೋವಿಡ್ ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಎಂ.ಓ.ಎಚ್.ಯು.ಎನಿಂದ ಸ್ವಚ್ಛತಾ ಆಪ್ ನ ಪರಿಷ್ಕೃತ ಆವೃತ್ತಿ ಬಿಡುಗಡೆ

ಸ್ವಚ್ಛತಾ ಎಂಓಎಚ್.ಯುಎ ಆಪ್, ಸ್ವಚ್ಛ ಭಾರತ ಅಭಿಯಾನ (ನಗರ) ಅಡಿಯಲ್ಲಿ ನಾಗರಿಕರಿಗೆ ಅತ್ಯಂತ ಹೆಚ್ಚು ಜನಪ್ರಿಯವಾದ ಕುಂದುಕೊರತೆ ಪರಿಹರಿಸುವ ಸಾಧನವಾಗಿದ್ದು ದೇಶದಾದ್ಯಂತ 1.7 ಕೋಟಿಗೂ ಹೆಚ್ಚು ನಗರ ಬಳಕೆದಾರರನ್ನು ಒಳಗೊಂಡಿದೆ. ಈಗ ಈ ಆಪ್ ಅನ್ನು ಪರಿಷ್ಕರಿಸಲಾಗಿದ್ದು, ನಾಗರಿಕರಿಗೆ ಕೋವಿಡ್ ಸಂಬಂಧಿತ ದೂರುಗಳು ಮತ್ತು ಸಂಬಂಧಿತ ಯುಎಲ್.ಬಿ.ಗಳಿಂದ ಪರಿಹಾರಕ್ಕಾಗಿ ಅಣಿಗೊಳಿಸಲಾಗಿದೆ.

https://pib.gov.in/PressReleseDetail.aspx?PRID=1612690

ಭಾರತೀಯ ರೈಲ್ವೆಯಿಂದ 6 ಲಕ್ಷ  ಮರುಬಳಕೆ ಮಾಸ್ಕ್ ಹಾಗೂ 40000 ಲೀಟರಿಗೂ ಹೆಚ್ಚು ಕರ ನೈರ್ಮಲ್ಯಕಗಳ ತಯಾರಿಕೆ

ಕೋವಿಡ್ -19 ಹರಡುವಿಕೆ ತಡೆಯುವ ತನ್ನ ಕ್ರಮದ ಮುಂದುವರಿಕೆಯಾಗಿ ಭಾರತೀಯ ರೈಲ್ವೆ ಭಾರತ ಸರ್ಕಾರದ ಆರೋಗ್ಯ ಆರೈಕೆ ಉಪಕ್ರಮಗಳಿಗೆ ಪೂರಕವಾಗಿ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಪುನರ್ಬಳಕೆಯ ಮಾಸ್ಕ್ ಗಳು ಮತ್ತು ಆಂತರಿಕವಾಗಿ ತನ್ನ ವಿಭಾಗೀಯ ರೈಲ್ವೆಗಳ ಉತ್ಪಾದನಾ ಘಟಕ ಮತ್ತು ಪಿ.ಎಸ್.ಯು.ಗಳಲ್ಲಿ ಕರ ನೈರ್ಮಲ್ಯಕಗಳನ್ನು ಉತ್ಪಾದಿಸುತ್ತಿದೆ.

https://pib.gov.in/PressReleseDetail.aspx?PRID=1612513

ತನ್ನ ಸಾಮಾಜಿಕ ಸೇವೆಯ ಬದ್ಧತೆಯಡಿ ಭಾರತೀಯ ರೈಲ್ವೆಯಿಂದ ಅಗತ್ಯ ಇರುವವರಿಗೆ ಮಾರ್ಚ್ 28ರಿಂದ 8.5 ಲಕ್ಷ ತಯಾರಿಸಿದ ಊಟದ ಸರಬರಾಜು

ಕೋವಿಡ್ 19ರ ಕಾರಣದಿಂದ ಲಾಕ್ ಡೌನ್ ವಿಧಿಸಿದ ಬಳಿಕ ತಯಾರಿಸಿದ ಊಟವನ್ನು ಅಗತ್ಯ ಇರುವವರಿಗೆ ಪೂರೈಸಲು ಆರಂಭಿಸಿದ ಭಾರತೀಯ ರೈಲ್ವೆ ತನ್ನ ಸಮಾಜ ಸೇವೆಯ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಎನ್.ಜಿ.ಓ ಕೊಡುಗೆ ಮತ್ತು ಆರ್.ಪಿ.ಎಫ್. ಸಂಪನ್ಮೂಲದೊಂದಿಗೆ ಐಆರ್.ಸಿ.ಟಿ.ಸಿ. ಆಧಾರಿತ ಅಡುಗೆ ಮನೆಗಳಿಂದ ಬೃಹತ್ ಪ್ರಮಾಣದಲ್ಲಿ ಆಹಾರ ತಯಾರಿಸಿ ಮಧ್ಯಾಹ್ನದ ಊಟಕ್ಕೆ ಕಾಗದದ ತಟ್ಟೆಗಳಲ್ಲಿ ಮತ್ತು ರಾತ್ರಿಯ ಊಟಕ್ಕೆ ಆಹಾರ ಪೊಟ್ಟಣ ಪೂರೈಸುತ್ತಿದೆ. ಬಡವರು, ನಿರ್ಗತಿಕರು, ಭಿಕ್ಷುಕರು, ಮಕ್ಕಳು, ಕೂಲಿಗಳು, ವಲಸೆ ಕಾರ್ಮಿಕರು, ಉಳಿದಲ್ಲೇ ಉಳಿದಿರುವ ವ್ಯಕ್ತಿಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಹತ್ತಿರದಲ್ಲಿ ಮತ್ತು ರೈಲ್ವೆ ನಿಲ್ದಾಣಗಳ  ಬಳಿಯಲ್ಲಿ ಆಹಾರ ಹುಡುಕುತ್ತಿರುವ ಬೇರೆ ಯಾರಿಗೇ ಆದರೂ ಆಹಾರ ವಿತರಣೆಯನ್ನು ಮಾಡಲಾಗುತ್ತಿದೆ.

https://pib.gov.in/PressReleseDetail.aspx?PRID=1612535

ಕೊರಿಯಾ ಗಣರಾಜ್ಯದ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಯವರೊಂದಿಗೆ ದೂರವಾಣಿ ಸಂಭಾಷಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೂರವಾಣಿ ಮೂಲಕ ಇಂದು ಕೊರಿಯಾ ಗಣರಾಜ್ಯದ ಘನತೆವೆತ್ತ ಮೂನ್ ಜೆ ಇನ್ ಅವರೊಂದಿಗೆ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ 19 ಜಾಗತಿಕ ಮಹಾಮಾರಿ ಮತ್ತು ಅದು ಜಾಗತಿಕ ಆರೋಗ್ಯ ವ್ಯವಸ್ಥೆ ಮತ್ತು ಆರ್ಥಿಕತೆಯ ಮೇಲೆ ಒಡ್ಡಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.  ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ತಮ್ಮ ತಮ್ಮ  ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.

https://pib.gov.in/PressReleseDetail.aspx?PRID=1612531

ಉಗಾಂಡಾ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ದೂರವಾಣಿ ಮಾತುಕತೆ

ಪ್ರಧಾನ ಮಂತ್ರಿ  ಶ್ರೀ ನರೇಂದ್ರ  ಮೋದಿ ಅವರಿಂದು  ಉಗಾಂ ಗಣರಾಜ್ಯದ ಅಧ್ಯಕ್ಷ  ಘನತೆವೆತ್ತ  ಯೋವೆರಿ  ಕಗುತಾ  ಮುಸೆವೆನಿ  ಅವರೊಂದಿಗೆ ದೂರವಾಣಿ  ಮಾತುಕತೆ  ನಡೆಸಿದರು. ಕೋವಿಡ್-19  ಸಾಂಕ್ರಾಮಿಕದಿಂದ  ಉಂಟಾಗಿರುವ  ಆರೋಗ್ಯ  ಮತ್ತು  ಆರ್ಥಿಕ  ಸವಾಲುಗಳ ಕುರಿತು  ಉಭಯ  ನಾಯಕರು  ಚರ್ಚಿಸಿದರು.  ಪ್ರಸ್ತುತ  ಆರೋಗ್ಯ  ಬಿಕ್ಕಟ್ಟಿನ  ಸಂದರ್ಭದಲ್ಲಿ  ಭಾರತವು  ಆಫ್ರಿಕಾದ  ತನ್ನ  ಸ್ನೇಹಿತರೊಂದಿಗೆ ಏಕಮತ್ಯದಿಂದ ನಿಲ್ಲುತ್ತದೆ  ಮತ್ತು  ಉಗಾಂಡಾ  ಸರ್ಕಾರವು  ತನ್ನ  ಭೂಪ್ರದೇಶದಲ್ಲಿ  ವೈರಾಣು  ನಿಯಂತ್ರಣಕ್ಕೆ  ಕೈಗೊಳ್ಳುವ  ಪ್ರಯತ್ನಗಳಿಗೆ  ಸಾಧ್ಯವಿರುವ  ಎಲ್ಲ  ಬೆಂಬಲವನ್ನು  ನೀಡುತ್ತದೆ  ಎಂದು  ಅಧ್ಯಕ್ಷ  ಮುಸೆವೆನಿ  ಅವರಿಗೆ  ಪ್ರಧಾನಿಯವರು  ಭರವಸೆ  ನೀಡಿದರು.

 https://pib.gov.in/PressReleseDetail.aspx?PRID=1612646

ಕೋವಿಡ್ 19 ವಿರುದ್ಧ ಹೋರಾಟಕ್ಕೆ ಸಂಘಟಿತವಾಗಿ ದಣಿವರಿಯದೆ ಶ್ರಮಿಸುತ್ತಿರುವ ಸಾರ್ವಜನಿಕ ಮತ್ತು ಖಾಸಗಿ ಏರ್ ಲೈನ್ ನಿರ್ವಹಣೆದಾರರು ಮತ್ತು ಸಂಬಂಧಿತ ಸಂಸ್ಥೆಗಳು

ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಐಸಿಎಂಆರ್, ಎಚ್.ಎಲ್.ಎಲ್. ಮತ್ತು ಇತರರ ಅಗತ್ಯ ಔಷಧೀಯ ಪೂರೈಕೆಯನ್ನು ದೇಶದಾದ್ಯಂತ ನಿರಂತರವಾಗಿ ರವಾನಿಸಲಾಗಿದೆ. ದೇಶೀಯ ಸಾರ್ವಜನಿಕ ಮತ್ತು ಖಾಸಗಿ ವಿಮಾನ ಯಾನ ಸಂಸ್ಥೆಗಳು ಅಂದರೆ ಏರ್ ಇಂಡಿಯಾ, ಐ.ಎ.ಎಫ್, ಪವನ್ ಹಂಸ್, ಇಂಡಿಗೋ ಮತ್ತು ಬ್ಲೂ ಡಾರ್ಟ್ ಔಷಧಗಳು, ಐಸಿಎಂ.ಆರ್. ಸರಕುಗಳು, ಎಚ್.ಎಲ್.ಎಲ್. ಸರಕುಗಳು ಮತ್ತು ಇತರ ಅಗತ್ಯ ಪೂರೈಕೆಗಳನ್ನು ಶ್ರೀನಗರ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಭುವನೇಶ್ವರ ಮತ್ತು ಇತರ ಪ್ರದೇಶಗಳಿಗೆ ಏಪ್ರಿಲ್ 8, 2020ರಂದು ಸಾಗಿಸಿದೆ.

https://pib.gov.in/PressReleseDetail.aspx?PRID=1612752

ಕೋವಿಡ್ -19: ಸ್ಮಾರ್ಟ್ ಸಿಟಿಗಳ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕುರಹಿತೀಕರಣ

ಕೋವಿಡ್ -19ನ್ನು ಜಾಗತಿಕ ಸಾಂಕ್ರಾಮಿಕ ಎಂದು ಘೋಷಿಸಿದಾಗಿನಿಂದ, ಭಾರತದ ನಗರಗಳು ನೈರ್ಮಲ್ಯೀಕರಣಕ್ಕೆ ಸತತ ಪ್ರಯತ್ನ ಮಾಡುತ್ತಿವೆ. ಅದರಲ್ಲೂ ಸಾರ್ವಜನಿಕ ಸ್ಥಳಗಳು ವೈರಾಣು ಹರಡುವ ಸ್ಥಳೀಯ  ಅಪಾಯದ ಸ್ಥಳಗಳೆಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಅವುಗಳ ನೈರ್ಮಲ್ಯಕ್ಕೆ ಶ್ರಮಿಸುತ್ತಿವೆ. 2020ರ ಮಾರ್ಚ್ 25ರಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ತರುವಾಯ ನಗರಗಳು ಬಸ್ ನಿಲ್ದಾಣ, ರೈಲು ನಿಲ್ದಾಣ, ರಸ್ತೆಗಳು, ಮಾರುಕಟ್ಟೆ, ಆಸ್ತ್ರೆ ಸಮುಚ್ಛಯ, ಬ್ಯಾಂಕ್ ಇತ್ಯಾದಿ ಸಾರ್ವಜನಿಕ ಸ್ಥಳಗಳನ್ನು ಸೋಂಕುರಹಿತಗೊಳಿಸಲು ಹಲವಾರು ಕ್ರಮ ಕೈಗೊಂಡಿವೆ.

 https://pib.gov.in/PressReleseDetail.aspx?PRID=1612549

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ (ಮೈನ್) 2020 ಆನ್ ಲೈನ್ ಅರ್ಜಿ ನಮೂನೆಯಲ್ಲಿ ಪರೀಕ್ಷಾ ಕೇಂದ್ರದ ನಗರ ಇತ್ಯಾದಿ ತಿದ್ದುಪಡಿ ಅವಕಾಶ ವಿಸ್ತರಿಸಿದೆ

ಕೋವಿಡ್ 19 ಪ್ರಸಕ್ತ ಸನ್ನಿವೇಶದ ಹಿನ್ನೆಲೆಯಲ್ಲಿ ಮತ್ತು ಜೆಇಇ (ಮೇನ್ಸ್)2020 ಆಕಾಂಕ್ಷಿಗಳು ಎದುರಿಸುತ್ತಿರುವ ಕಷ್ಟವನ್ನು ಮನಗಂಡು ಎಚ್.ಆರ್.ಡಿ. ಸಚಿವರು, ವಿದ್ಯಾರ್ಥಿಗಳು ಅರ್ಜಿಗಳಲ್ಲಿ  ಪರೀಕ್ಷಾ ಕೇಂದ್ರದ ನಗರಗಳ ಆಯ್ಕೆ ಸೇರ್ಪಡೆಗೆ ಅವಕಾಶ ಕಲ್ಪಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ  ಸಲಹೆ ಮಾಡಿದ್ದಾರೆ. ಆ ಪ್ರಕಾರವಾಗಿ ಎನ್.ಟಿ.ಎ. ಮತ್ತಷ್ಟು ಅರ್ಜಿ ನಮೂನೆಗಳಲ್ಲಿ ತಿದ್ದುಪಡಿ ಮಾಡುವ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ಅದು ಈಗ ಕೇಂದ್ರಕ್ಕಾಗಿ ನಗರಗಳ ಆಯ್ಕೆಯನ್ನು ಸಹ ಒಳಗೊಂಡಿದೆ.

https://pib.gov.in/PressReleseDetail.aspx?PRID=1612565

ಕೋವಿಡ್ -19 ನಿರ್ವಹಣೆಯ ತರಬೇತಿಗಾಗಿ ಎಂ.ಎಚ್.ಆರ್.ಡಿ.ಯ ದೀಕ್ಷಾ ವೇದಿಕೆಯಲ್ಲಿ ಸಮಗ್ರ ಸರ್ಕಾರಿ ಆನ್ ಲೈನ್ ಟ್ರೈನಿಂಗ್ (ಐಜಿಓಟಿ) ಪೋರ್ಟಲ್ ಅನ್ನು ಆರಂಭಿಸಲಾಗಿದೆ

ಐಜಿಓಟಿಯಲ್ಲಿನ ಕೋರ್ಸ್ ಗಳನ್ನು ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ತಾಂತ್ರಿಕ ವರ್ಗದವರು, ಎಎನ್.ಎಂ.ಎಸ್.ಗಳು, ರಾಜ್ಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ಅಧಿಕಾರಿಗಳು, ವಿವಿಧ ಪೊಲೀಸ್ ಸಂಘಟನೆಗಳು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎಸ್.ಸಿ.ಸಿ.), ನೆಹರೂ ಯುವಕ ಕೇಂದ್ರ ಸಂಘಟನೆ (ಎನ್.ವೈ,ಕೆ.ಎಸ್.) ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಮತ್ತು ಇತರ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದೆ.

https://pib.gov.in/PressReleseDetail.aspx?PRID=1612511

ಐಜಿಓಟಿ ಇ ಕಲಿಕಾ ವೇದಿಕೆಯೊಂದಿಗೆ ಕೋವಿಡ್ -19 ಮುಂಪಡೆಯ ಯೋಧರ ಸಬಲೀಕರಣ ಮಾಡಲಿರುವ ಡಿಓಪಿಟಿ

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೋವಿಡ್ 19 ನಿಗ್ರಹಕ್ಕಾಗಿ ಎಲ್ಲ ಮುಂಪಡೆಯ ಕಾರ್ಯಕರ್ತರನ್ನು ಈ ಮಹಾಮಾರಿಯ ವಿರುದ್ಧ ಹೋರಾಡಲು ಅಣಿಗೊಳಿಸುವ ಸಲುವಾಗಿ ಇ ಕಲಿಕಾ ವೇದಿಕೆಯ (https://igot.gov.in) ಪ್ರಕಟಣೆ ಮಾಡಿದೆ. ಎರಡನೇ ಸಾಲಿನ ಕಾರ್ಯಪಡೆಗೂ ಕೋವಿಡ್ 19 ತರಬೇತಿ ನೀಡುವ ಮೂಲಕ, ಭಾರತ ಹೊರಹೊಮ್ಮಬಹುದಾದ ಎಂಥ ಪರಿಸ್ಥಿತಿಯನ್ನೂ ಎದುರಿಸಲು ಸಜ್ಜಾಗುತ್ತಿದೆ.

https://pib.gov.in/PressReleseDetail.aspx?PRID=1612451

ಭಾರತೀಯ ರೈಲ್ವೆ 109 ಪಾರ್ಸಲ್ ರೈಲುಗಳ ವೇಳಾಪಟ್ಟಿ ಪ್ರಕಟಿಸಿದ್ದು, 58ಕ್ಕೂ ಹೆಚ್ಚು ಮಾರ್ಗಗಳಲ್ಲಿ ಇದು ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸಲಿದೆ

ದೇಶದಾದ್ಯಂತ ಪೂರೈಕೆ ಸರಪಣಿಯನ್ನು ನಿರತಂರವಾಗಿಡುವ ಮಹತ್ವದ ಹೆಜ್ಜೆಯಲ್ಲಿ, ಭಾರತೀಯ ರೈಲ್ವೆ ದೇಶದಾದ್ಯಂತ ತಡೆರಹಿತವಾಗಿ ಅವಶ್ಯಕ ವಸ್ತುಗಳು ಮತ್ತು ಇತರ ವಸ್ತುಗಳ ಸಾಗಾಟಕ್ಕಾಗಿ  ಪಾರ್ಸಲ್ ರೈಲುಗಳ ವೇಳಾಪಟ್ಟಿ ಪ್ರಕಟಿಸಿದೆ.  ಶ್ರೀಸಾಮಾನ್ಯರಿಗೆ ಅಗತ್ಯವಾದ ವಸ್ತುಗಳ ಲಭ್ಯತೆಗೆ ಮತ್ತು ಕೃಷಿ ಹಾಗೂ ಕೈಗಾರಿಕೆಗಳಿಗೆ ಇದು ನೆರವಾಲಿದೆ..

https://pib.gov.in/PressReleseDetail.aspx?PRID=1612370

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಡಿಜಿಟಲ್ ಕಲಿಕೆಯಲ್ಲಿ ದೊಡ್ಡ ಮಟ್ಟದ ವೃದ್ಧಿ

ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳೆರೆಡೂ  ಆನ್ಲೈನ್  ಕಲಿಕಾ ಕ್ರಮಗಳನ್ನು ಆರಂಭಿಸಿದ್ದು, ತಮ್ಮ ಬಳಿ ಮತ್ತು ವಿದ್ಯಾರ್ಥಿಗಳ ಬಳಿ ಇರುವ ಅಧ್ಯಯನದ ಸಾಮಗ್ರಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಈ ಆನ್ ಲೈನ್ ಕಲಿಕಾ ಸ್ವರೂಪವು, ಸ್ಕೈಪ್, ಝೂಮ್, ಗೂಗಲ್ ಕ್ಲಾಸ್ ರೂಂ, ಗೂಗಲ್ ಹ್ಯಾಂಗ್ ಔಟ್ ಮೂಲಕ ನಡೆಯುತ್ತದೆ. ಪಿಜ್ಜಾ ಟು ಟೀಚರ್ಸ್ ಯೂಟ್ಯೂಬ್, ವಾಟ್ಸ್ ಅಪ್ ಮೂಲಕ ಬೋಧನೆ ಮತ್ತು ಕ್ಲಾಸ್ ನೋಟ್ಸ್ ಗಳನ್ನು ಅಪ್ ಲೋಡ್ ಮಾಡುತ್ತಿದೆ. ಸ್ವಯಂ, ಎನ್.ಪಿ.ಟಿ.ಇ.ಎಲ್. ನಂಥ ಡಿಜಿಟಲ್ ಕಲಿಕಾ ಲಿಂಕ್ ಗಳನ್ನೂ ಹಂಚಿಕೊಳ್ಳಲಾಗುತ್ತಿದ್ದು, ಆನ್ ಲೈನ್ ಪತ್ರಿಕೆಗಳಿಗೂ ಪ್ರವೇಶ ಲಭಿಸುತ್ತಿದೆ.

https://pib.gov.in/PressReleseDetail.aspx?PRID=1612761

ಕೋವಿಡ್ 19 ಸಂದರ್ಭದಲ್ಲಿ ಇಎಸ್ಐಸಿಯಿಂದ ಪರಿಹಾರ ನೀಡುವ ಸಲುವಾಗಿ ಹಲವು ಕ್ರಮ

ಕೋವಿಡ್ 19 ಮಹಾಮಾರಿಯಿಂದಾಗಿ ದೇಶ ದೊಡ್ಡ ಸವಾಲು ಎದುರಿಸುತ್ತಿದೆ. ದೇಶದ ಹಲವು ಭಾಗಗಳು ಲಾಕ್ ಡೌನ್ ಆಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ನೌಕರರ ರಾಜ್ಯ ವಿಮಾ ನಿಗಮ (ಇಎಸ್.ಐ.ಸಿ) ಹಲವು ಕ್ರಮಗಳನ್ನು ಕೈಗೊಂಡಿದ್ದು, ಬಾಧ್ಯಸ್ಥರಿಗೆ ಮತ್ತು ಸಾರ್ವಜನಿಕ ಸದಸ್ಯರಿಗೆ ಪರಿಹಾರ ಒದಗಿಸುತ್ತಿದೆ.

https://pib.gov.in/PressReleseDetail.aspx?PRID=1612672

ಬುಡಕಟ್ಟು ಸಂಗ್ರಹಣಾಕಾರರು ಕೆಲಸವನ್ನು ಸುರಕ್ಷಿತವಾಗಿ ನಡೆಸುವುದನ್ನು ಖಾತ್ರಿ ಪಡಿಸಲು ಯುನಿಸೆಫ್ ಜೊತೆಗೂಡಿ ಸ್ವ ಸಹಾಯ ಗುಂಪುಗಳಿಗೆ ಡಿಜಿಟಲ್ ಪ್ರಚಾರ ಆರಂಭಿಸಲಿರುವ ಟ್ರೈಫೆಡ್

ಬುಡಕಟ್ಟು ಸಂಗ್ರಹಣಾಕಾರರು  ಸುರಕ್ಷಿತವಾಗಿ ತಮ್ಮ ಕೆಲಸ ಮುಂದುವರಿಸುವುದನ್ನು ಖಾತ್ರಿ ಪಡಿಸಲು, ಟ್ರೈಫೆಡ್ ಯುನಿಸೆಫ್ ಸಹಯೋಗದಲ್ಲಿ ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಸ್ವಸಹಾಯ ಗುಂಪುಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವದೊಂದಿಗೆ ಡಿಜಿಟಲ್ ಪ್ರಚಾರ ನೀಡಲು ಡಿಜಿಟಲ್ ಸಂವಹನ ಕಾರ್ಯತಂತ್ರವನ್ನು ರೂಪಿಸಿದೆ.

https://pib.gov.in/PressReleseDetail.aspx?PRID=1612839

ಸೋಂಕಿತ ಉಸಿರಾಟದ ಸ್ರವಿಸುವಿಕೆಯ ಸುರಕ್ಷಿತ ನಿರ್ವಹಣೆಗಾಗಿ ಎಸ್.ಸಿ.ಟಿ.ಎಂ.ಎಸ್.ಟಿ. ವಿಜ್ಞಾನಿಗಳು ಅದ್ಭುತವಾಗಿ ಹೀರಿಕೊಳ್ಳುವ ವಸ್ತುಗಳನ್ನು ವಿನ್ಯಾಸಗೊಳಿಸಿದ್ದಾರೆ

ಚಿತ್ರ ಅಕ್ರಿಲೋಸರ್ಬ್ ಸ್ರವಿಸುವಿಕೆಯ ಘನೀಕರಣ ವ್ಯವಸ್ಥೆ ಎಂಬ ಹೆಸರಿನ ಉಸಿರಿನ ದ್ರವ ಮತ್ತು ದೇಹದ ಇತರ ದ್ರವವನ್ನು ಘನೀಕರಣ ಮಾಡಿ, ಸೋಂಕು ರಹಿತಗೊಳಿಸಲು ಹೆಚ್ಚು ಪರಿಣಾಮಕಾರಿಯಾದ ಅದ್ಭುತ ಹೀರಿಕೊಳ್ಳುವ ವಸ್ತುವಾಗಿದೆ.

https://pib.gov.in/PressReleseDetail.aspx?PRID=1612479

 

ಪಿಐಬಿ ಪ್ರಾದೇಶಿಕ ಕಚೇರಿಗಳ ವರದಿ

  • ಕ್ವಾರಂಟೈನ್ ನಲ್ಲಿರುವ, ಲಕ್ಷಣಗಳಿಲ್ಲದ ಸೋಂಕು ದೃಢಪಟ್ಟ ಮತ್ತು ಕೋವಿಡ್ ರೋಗಿಗಳಿಗೆ ನೆರವಾಗಲು ಅರುಣಾಚಲ ಪ್ರದೇಶ ಸರ್ಕಾರ ಕೋವಿಡ್ ಕೇರ್ ಆಪ್ ಆರಂಭಿಸಿದೆ.
  • ಕೋವಿಡ್ 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಸ್ಸಾಂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಚ್.ಎಸ್. ಮೊದಲ ವರ್ಷದ ಪರೀಕ್ಷೆ ನಡೆಸದಿರಲು ತೀರ್ಮಾನಿಸಿದ್ದು, ಎಲ್ಲ ವಿದ್ಯಾರ್ಥಿಗಳನ್ನೂ ಪ್ರಥಮ ವರ್ಷದಿಂದ ದ್ವಿತೀಯ ವರ್ಷಕ್ಕೆ ಉತ್ತೀರ್ಣಗೊಳಿಸಲಿದೆ.
  • ಮಣಿಪುರ ಮುಖ್ಯಮಂತ್ರಿ ಮನೆಯಲ್ಲಿಯೇ ಇರುವಂತೆ, ನೈರ್ಮಲ್ಯ ಕಾಪಾಡುವಂತೆ ಮತ್ತು ಸಾಮಾಜಿಕ ಅಂತರದಲ್ಲಿರುವಂತೆ ಜಾಗೃತಿ ಮೂಡಿಸಲು ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.
  • ಮಿಜೋರಾಂ ಹೊರಗಿನಿಂದ ತರಲಾಗುವ ತರಕಾರಿಯನ್ನು ಮೊದಲು ಕೋವಿಡ್ 19 ವೈದ್ಯಕೀಯ ಕಾರ್ಯಚರಣೆ ತಂಡ ಪರೀಕ್ಷಿಸಲಿದೆ.
  • ನಾಗಾಲ್ಯಾಂಡ್ ಕೋವಿಡ್ -19 ಅನ್ನು 34 ಪ್ರತ್ಯೇಕೀಕರಣ ಮತ್ತು 43 ಸಂಪರ್ಕರಹಿತ ವ್ಯವಸ್ಥೆ ಹೊಂದಿರುವ ಕೇಂದ್ರಗಳೊಂದಿಗೆ ಎದುರಿಸಲು ಸಿದ್ಧವಾಗಿದೆ. 84 ಸರ್ಕಾರಿ ಮತ್ತು 52 ಖಾಸಗಿ ಆಂಬುಲೆನ್ಸ್‌ಗಳನ್ನು ಸೇವೆಗೆ ಒತ್ತಾಯಿಸಲಾಗಿದೆ.
  • ಸಿಕ್ಕಿಂ ರಾಜ್ಯಪಾಲರು ಕೋವಿಡ್ 19 ಪರೀಕ್ಷಾ ಪ್ರಯೋಗಾಲಯಗಳನ್ನು ತ್ವರಿತವಾಗಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
  • ರಾಜ್ಯದ ಏಕೈಕ ಸೋಂಕಿತನ ಸ್ಥಿತಿ ಸ್ಥಿರವಾಗಿದೆ ಎಂದು ತ್ರಿಪುರ ಮುಖ್ಯಮಂತ್ರಿ ತಿಳಿಸಿದ್ದಾರೆ.
  • ಕಳೆದ ಎರಡು ದಿನಗಳಿಂದ, ಕೇರಳದಲ್ಲಿ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆಗಿಂತಲೂ ರೋಗದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಕೇರಳಕ್ಕೆ ಐಸಿಎಂಆರ್ ಅನುಮತಿ ನೀಡಿದೆ. ಮುಂಬೈನಲ್ಲಿ ಮತ್ತಿಬ್ಬರು ಮಲೆಯಾಳಿ ದಾದಿಯರು ಸೋಂಕಿತರಾಗಿದ್ದಾರೆ. ನಿನ್ನೆಯವರೆಗೆ ಸೋಂಕಿತ ಪ್ರಕರಣಗಳ ಸಂಖ್ಯೆ 345 ಆಗಿದೆ.
  • ತಮಿಳುನಾಡಿನಲ್ಲಿ ಬೃಹತ್ ಚೆನ್ನೈ ಮಹಾನಗರ ಪಾಲಿಕೆಯು ವಾಣಿಜ್ಯ ಕಾಯಗಳೊಂದಿಗೆ ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಸುಗಮವಾಗಿ ಅಗತ್ಯ ವಸ್ತು ತಲುಪಿಸಲು ಮೊಬೈಲ್ ತರಕಾರಿ ಮತ್ತು ದಿನಸಿ ಅಂಗಡಿ ಪರಿಚಯಿಸಲು ನಿರ್ಧರಿಸಿದೆ. ಒಟ್ಟು ಪ್ರಕರಣಗಳ ಸಂಖ್ಯೆ 738 ಆಗಿದೆ.
  • ಬಿರ್ಲಾ ತಾಂತ್ರಿಕ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರ (ಬಿಟ್ಸ್) ಪಿಲಾನಿಯ ಸಂಶೋಧಕರು ಹೈದ್ರಾಬಾದ್ ಕ್ಯಾಂಪಸ್ ನಲ್ಲಿ ಮರು ಬಳಕೆ ಮಾಡಬಹುದಾದ 3ಡಿ ಮುದ್ರಿತ ಮುಖ ಕವಚವನ್ನು ಆರೋಗ್ಯ ಕಾರ್ಯಕರ್ತರಿಗಾಗಿ ಅಭಿವೃದ್ಧಿಪಡಿಸಿದ್ದಾರೆ. ತೆಲಂಗಾಣದ ನಿಜಾಮಾಬಾದ್ ನಿಂದ 8 ಹೊಸ ಸೋಂಕಿನ ಪ್ರಕರಣ ದೃಢಪಟ್ಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 461 ಆಗಿದೆ.
  • ಆಂಧ್ರಪ್ರದೇಶ ಸರ್ಕಾರ ಕ್ವಾರಂಟೈನ್ ನಲ್ಲಿರುವ ಎಲ್ಲರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಚಿಕಿತ್ಸೆಯ ಜೊತೆಗೆ ಪೌಷ್ಟಿಕ ಆಹಾರವನ್ನೂ ನೀಡುತ್ತಿದೆ. ಅನಂತಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತರುವ ಕಿರಿಯ ವೈದ್ಯರು ಎನ್. 95 ಮಾಸ್ಕ್ ಮತ್ತು ಪಿಪಿಇ ಕಿಟ್ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಇಬ್ಬರು ದಾದಿಯರು ಈ ಹಿಂದೆ ಸೋಂಕಿತರಾಗಿದ್ದರು. ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 348 ಆಗಿದೆ.

 

Fact Check on #Covid19

 

 

***



(Release ID: 1612798) Visitor Counter : 277