ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಕೋವಿಡ್-19 ಕುರಿತ ನಿರ್ದಿಷ್ಟ ಪ್ರಶ್ನೆಗಳ ನಿರ್ವಹಣೆಗೆ ಪರಿಷ್ಕೃತ ಆವೃತ್ತಿಯ ಸ್ವಚ್ಛತಾ ಆಪ್ ಬಿಡುಗಡೆ ಮಾಡಿದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
Posted On:
09 APR 2020 1:08PM by PIB Bengaluru
ಕೋವಿಡ್-19 ಕುರಿತ ನಿರ್ದಿಷ್ಟ ಪ್ರಶ್ನೆಗಳ ನಿರ್ವಹಣೆಗೆ ಪರಿಷ್ಕೃತ ಆವೃತ್ತಿಯ ಸ್ವಚ್ಛತಾ ಆಪ್ ಬಿಡುಗಡೆ ಮಾಡಿದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಬಿಕ್ಕಟ್ಟು ಕುರಿತಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ ಯುಎ) ಕಾರ್ಯದರ್ಶಿ ಶ್ರೀ ದುರ್ಗಾಶಂಕರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತ್ತು ನಗರಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಎಂಒಎಚ್ ಯುಎ, ಹಾಲಿ ಇರುವ ಸ್ವಚ್ಛತಾ-ಎಂಒಎಚ್ ಯುಎ ಆಪ್ ನ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿರುವುದಾಗಿ ನಿನ್ನೆ ಪ್ರಕಟಿಸಿದೆ. ಸ್ವಚ್ಛತಾ- ಎಂಒಎಚ್ ಯುಎ ಆಪ್, ಸ್ವಚ್ಛ ಭಾರತ ಮಿಷನ್(ನಗರ)ದಡಿ ನಾಗರಿಕರ ಸಮಸ್ಯೆಗಳನ್ನು ನಿವಾರಿಸುವ ಅತ್ಯಂತ ಜನಪ್ರಿಯ ದೂರು ಇತ್ಯರ್ಥ ವೇದಿಕೆಯಾಗಿದೆ. ಇದರಡಿ ಈಗಾಗಲೇ ಇದನ್ನು ದೇಶಾದ್ಯಂತ 1.7 ಕೋಟಿಗೂ ಅಧಿಕ ಮಂದಿ ಬಳಕೆ ಮಾಡುತ್ತಿದ್ದಾರೆ. ಈ ಆಪ್ಅನ್ನು ಇನ್ನಷ್ಟು ಬಲವರ್ಧನೆ ಮಾಡಿ ಆಧುನೀಕರಿಸಲಾಗಿದೆ ಮತ್ತು ಅದರಲ್ಲಿ ಕೋವಿಡ್ ಸಂಬಂಧಿ ದೂರುಗಳನ್ನು ಸಲ್ಲಿಸಲು ಮತ್ತು ಆ ದೂರುಗಳನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳು(ಯುಎಲ್ ಬಿ) ಇತ್ಯರ್ಥಪಡಿಸುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಈ ಪರಿಷ್ಕೃತ ಆವೃತ್ತಿಯ ಸ್ವಚ್ಛತಾ ಆಪ್ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಕೋವಿಡ್ ಸಾಂಕ್ರಾಮಿಕ ಹರಡುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಿಗೆ ಉತ್ತಮ ಬೆಂಬಲ ನೀಡಲು ಸಹಾಯಕವಾಗಲಿದೆ. ಅಲ್ಲದೆ ಹಲವು ಹೆಚ್ಚುವರಿ ವಿಭಾಗಗಳನ್ನು ಈ ಆಪ್ ನಲ್ಲಿ ಸೃಷ್ಟಿಸಲಾಗಿದೆ. ಅದರಡಿ ನಾಗರಿಕರು ಯಾವುದೇ ವಿಭಾಗದಲ್ಲಾದರೂ ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದಾಗಿದೆ.
ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಮಾತನಾಡಿದ ಶ್ರೀ ಮಿಶ್ರಾ ಅವರು, “ಸ್ವಚ್ಛ ಭಾರತ ಮಿಷನ್ – ನಗರ (ಎಸ್ ಬಿಎಂ-ಯು) ಅಡಿಯಲ್ಲಿ ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎಲ್ಲ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಗೆ ಕಾರ್ಯೋನ್ಮುಖವಾಗಿದ್ದೇವೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರಗಳಿಗೆ ಇನ್ನಷ್ಟು ಬೆಂಬಲ ನೀಡಲು ಕೋವಿಡ್-19ಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ದೂರುಗಳನ್ನು ದಾಖಲಿಸಲು 9 ಹೆಚ್ಚುವರಿ ವಿಭಾಗಗಳನ್ನು ಸ್ವಚ್ಛತಾ- ಎಂಒಎಚ್ ಯುಎ ಆಪ್ ನಲ್ಲಿ ಸೃಷ್ಟಿಸಲಾಗಿದೆ. ಪ್ರಸಕ್ತ ಸಮಯದ ಅಗತ್ಯತೆಗಳಿಗೆ ಹೆಚ್ಚು ಕ್ರಿಯಾಶೀಲವಾಗಿ ಸ್ಪಂದಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದರು.
ಹೆಚ್ಚುವರಿ 9 ವಿಭಾಗಗಳು
· ಕೋವಿಡ್-19 ವೇಳೆ ಫಾಗಿಂಗ್(ಧೂಮೀಕರಣ)/ನೈರ್ಮಲೀಕರಣಕ್ಕೆ ಮನವಿ
· ಕೋವಿಡ್-19 ವೇಳೆ ಕ್ವಾರಂಟೈನ್ ಉಲ್ಲಂಘನೆ
· ಕೋವಿಡ್-19 ವೇಳೆ ಲಾಕ್ ಡೌನ್ ನಿಯಮಾವಳಿ ಉಲ್ಲಂಘನೆ
· ಕೋವಿಡ್-19 ಶಂಕಿತ ಪ್ರಕರಣದ ವರದಿ
· ಕೋವಿಡ್-19 ವೇಳೆ ಆಹಾರಕ್ಕಾಗಿ ಮನವಿ
· ಕೋವಿಡ್-19 ಸಮಯದಲ್ಲಿ ವಸತಿಗಾಗಿ ಮನವಿ
· ಕೋವಿಡ್-19 ವೇಳೆ ಅಗತ್ಯ ಔಷಧಿಗಾಗಿ ಮನವಿ
· ಕೋವಿಡ್-19 ರೋಗಿಯ ಸಂಚಾರಕ್ಕೆ ಅಗತ್ಯ ನೆರವಿಗೆ ಮನವಿ.
· ಕ್ವಾರಂಟೈನ್ ಪ್ರದೇಶದಿಂದ ತ್ಯಾಜ್ಯ ತೆಗೆಯಲು ಮನವಿ.
ಪರಿಷ್ಕೃತ ಆವತ್ತಿಯ ಆಪ್ ಪ್ರಾಯೋಗಿಕ ಆವೃತ್ತಿಯನ್ನು ಆಯ್ದ ನಗರಗಳು ಮತ್ತು ರಾಜ್ಯಗಳೊಂದಿಗೆ ಈ ಮೊದಲೇ ಹಂಚಿಕೊಳ್ಳಲಾಗಿತ್ತು. ಅವುಗಳು ನೀಡಿದ ಪ್ರತಿಕ್ರಿಯೆ ಆಧರಿಸಿ ಇದೀಗ ಭಾರತದಾದ್ಯಂತ ಅದನ್ನು ಬಿಡುಗಡೆಗೊಳಿಸಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಹಲವು ರಾಜ್ಯಗಳ ಯೋಜನಾ ನಿರ್ದೇಶಕರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಆಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಆ ಸ್ವಚ್ಛತಾ-ಎಂಒಎಚ್ ಯುಎ ಆಪ್ ನಲ್ಲಿ ಕೋವಿಡ್-19ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಅಂಶ ಸೇರಿಸಿರುವುದು ಉತ್ತಮ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸ್ವಚ್ಛತಾ ಆಪ್ ನಗರಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಲ್ಲಿ ನಾಗರಿಕರು ಕ್ರಿಯಾಶೀಲ ಪಾತ್ರವಹಿಸಲು ಪರಿಣಾಮಕಾರಿ ಡಿಜಿಟಲ್ ತಂತ್ರವಾಗಿದೆ ಮತ್ತು ಇದು ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿಎಸ್) ಹೊಣೆಗಾರಿಗೆ ಹೆಚ್ಚಿಸುತ್ತದೆ.
ನಿರಂತರ ಅಪ್ ಡೇಟ್ ಗಳಿಗೆ ಸ್ವಚ್ಛ ಭಾರತ ಮಿಷನ್ ನ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಇವುಗಳನ್ನು ಫಾಲೋ ಮಾಡಬಹುದು:
ವೆಬ್ ಪೋರ್ಟಲ್ : www.swachhbharaturban.gov.in
ಫೇಸಬುಕ್ : Swachh Bharat Mission - Urban
ಟ್ವಿಟರ್: @SwachhBharatGov
ಅನುಬಂಧ – ‘ಎ’ - ಸ್ವಚ್ಛತಾ-ಎಂಒಎಚ್ ಯುಎ ಆಪ್ ನ ವಿಭಾಗಗಳ ಬಗ್ಗೆ ಪದೇ ಪದೇ ಕೇಳುವ ಪ್ರಶ್ನೆಗಳಿಗೆ(ಎಫ್ಎಕ್ಯೂ) ಉತ್ತರ
ಕ್ರ.ಸಂ
|
ಪ್ರಶ್ನೆಗಳು
|
ಉತ್ತರಗಳು
|
1
|
ಸ್ವಚ್ಛತಾ-ಎಂಒಎಚ್ ಯುಎ ಆಪ್ ನ ಕೋವಿಡ್-19 ವಿಭಾಗದಲ್ಲಿ ಸಲ್ಲಿಸಲಾಗಿರುವ ದೂರುಗಳನ್ನು ಇತ್ಯರ್ಥಪಡಿಸುವ ಹೊಣೆಗಾರಿಕೆ ಯಾರದು ?
|
ಸ್ವಚ್ಛತಾ-ಎಂಒಎಚ್ ಯುಎ ಆಪ್ ನಲ್ಲಿ ದಾಖಲಾಗುವ ಎಲ್ಲಾ ದೂರುಗಳನ್ನು ಇತ್ಯರ್ಥಪಡಿಸುವ ಹೊಣೆ ಆಯಾ ನಗರ ಸ್ಥಳೀಯ ಸಂಸ್ಥೆಗಳದ್ದು(ಯುಎಲ್ ಬಿಎಸ್). ಕೋವಿಡ್-19 ವಿಭಾಗದಲ್ಲಿ ದಾಖಲಿಸಲಾದ ದೂರು ಗಂಭೀರವಾಗಿದ್ದರೆ, ಯುಎಲ್ ಬಿಗಳು ತಕ್ಷಣ ನೇರವಾಗಿ ದೂರುಗಳನ್ನು ಬಗೆಹರಿಸಬೇಕು, ಅಥವಾ ಸಂಬಂಧಿಸಿದ ಇಲಾಖೆ ಜೊತೆ ನಾಗರಿಕರಿಗೆ ಸಂಪರ್ಕ ಒದಗಿಸಬೇಕು. ಯುಎಲ್ ಬಿಗಳು ದೂರಿನ ಸ್ಥಿತಿಗತಿ ಬಗ್ಗೆ ನಿಗಾವಹಿಸಬೇಕು ಮತ್ತು ಅವುಗಳ ಇತ್ಯರ್ಥವನ್ನು ಖಾತ್ರಿಪಡಿಸಬೇಕು.
|
2
|
ಕೋವಿಡ್-19 ವಿಭಾಗ, ಯುಎಲ್ ಬಿಗಳಿಗೆ ಸ್ವಚ್ಛ ಸರ್ವೇಕ್ಷಣಾ/ಜಿಎಫ್ ಸಿ/ಒಡಿಎಫ್ ನ ಅಂಕಗಳ ಭಾಗವಾಗುತ್ತದೆಯೇ ?
|
ಇಲ್ಲ, ಕೋವಿಡ್-19 ವಿಭಾಗದಲ್ಲಿನ ದೂರುಗಳು ಮತ್ತು ಇತ್ಯರ್ಥಪಡಿಸುವುದು ಸ್ವಚ್ಛ ಸರ್ವೇಕ್ಷಣಾ/ಜಿಎಫ್ ಸಿ/ಒಡಿಎಫ್ ನ ಮಾನದಂಡಗಳಿಗೆ ಒಳಪಡುವುದಿಲ್ಲ. ಈ ವಿಭಾಗಗಳು ಕೋವಿಡ್-19 ಹಿನ್ನೆಲೆಯಲ್ಲಿ ನಾಗರಿಕರಿಗೆ ನೆರವಾಗಲು ಮಾತ್ರ ಸೇರಿಸಲಾಗಿದೆ ಹಾಗೂ ನಾಗರಿಕರ ಬಗ್ಗೆ ಯುಎಲ್ ಬಿಗಳಿಗೆ ಮಾಹಿತಿ ದೊರಕಿಸುವುದು ಉದ್ದೇಶವಾಗಿದೆ.
|
3
|
ಕೋವಿಡ್-19 ಹೊಸ ವಿಭಾಗ ಸೇರ್ಪಡೆ ಮಾಡಿರುವುದರಿಂದ ಸ್ವಚ್ಛತಾ-ಎಂಒಎಚ್ ಯುಎ ಆಪ್ ನಲ್ಲಿನ ಹಾಲಿ ಇರುವ ವಿಭಾಗಗಳ ಸ್ಥಿತಿ ಏನು ?
|
ಸ್ವಚ್ಛತಾ-ಎಂಒಎಚ್ ಯುಎ ಆಪ್ ನಲ್ಲಿ ಹೊಸ ಕೋವಿಡ್-19 ಮತ್ತು ಎಲ್ಲಾ ಹಳೆಯ ವಿಭಾಗಗಳು ಕ್ರಿಯಾಶೀಲವಾಗಿರುತ್ತವೆ. ನಾಗರಿಕರು ಯಾವುದೇ ವಿಭಾಗಗಳಲ್ಲಿ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳು(ಯುಎಲ್ ಬಿ) ಗಳಿಗೆ ತ್ವರಿತವಾಗಿ ಇತ್ಯರ್ಥಪಡಿಸಲು ದೂರುಗಳನ್ನು ದಾಖಲಿಸಬಹುದು.
|
4
|
ಯುಎಲ್ ಬಿಯಲ್ಲಿ ಯಾರು ದೂರುಗಳ ಬಗ್ಗೆ ನಿಗಾವಹಿಸುತ್ತಾರೆ ?
|
ಎಲ್ಲ ದೂರುಗಳನ್ನು ಸ್ವಚ್ಛ.ಸಿಟಿ ಡ್ಯಾಶ್ ಬೋರ್ಡ್ ನಲ್ಲಿ ನಿಗಾ ಇಡಲಾಗುವುದು ಮತ್ತು ಅದೇ ಸಮಯದಲ್ಲಿ ಸ್ವಚ್ಛತಾ ಆಪ್ ನಲ್ಲಿ ಯುಎಲ್ ಬಿಗಳು ದೂರುಗಳ ಬಗ್ಗೆ ನಿಗಾ ಇಡುತ್ತವೆ.
ವೆಬ್ ವಿಳಾಸ: www.swachh.city
|
5
|
ಧೂಮೀಕರಣ ಮತ್ತು ನೈರ್ಮಲೀಕರಣಗಳನ್ನು ಎರಡು ಪ್ರತ್ಯೇಕ ವಿಭಾಗ ಮಾಡಬಹುದೇ ?
|
ದೂರಿನ ವಿಭಾಗ ಬದಲಾವಣೆಯಾಗುವುದಿಲ್ಲ, ಆದರೆ ದೂರಿನಲ್ಲಿ ಆತ ಅಥವಾ ಆಕೆ ‘‘ಖಚಿತ ಮಾಹಿತಿ’’ ವಲಯ ಮತ್ತು ಯುಎಲ್ ಬಿಗಳಲ್ಲಿ ಸಂಪರ್ಕ ಸಂಖ್ಯೆಯನ್ನು ನಿರ್ದಿಷ್ಟ ಮನವಿಗಳೊಂದಿಗೆ ನೀಡಬಹುದು.
|
6
|
ಕೋವಿಡ್-19 ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದ ಬಗ್ಗೆ ವರದಿ ನೀಡಲು ಪ್ರತ್ಯೇಕ ವಿಭಾಗ ಸೃಷ್ಟಿಸಬಹುದೇ ?
|
ಇದನ್ನು ‘ಕ್ವಾರಂಟೈನ್ ಪ್ರದೇಶದಿಂದ ತ್ಯಾಜ್ಯ ಎತ್ತಲು ಮನವಿ’ ವಿಭಾಗದಲ್ಲಿಯೇ ಮನವಿ ಮಾಡಬಹುದು.
|
7
|
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉಲ್ಲಂಘನೆಯಾಗುವ ಬಗ್ಗೆ ವರದಿ ನೀಡಲು ಪತ್ಯೇಕ ವಿಭಾಗ ಸೃಷ್ಟಿಸಬಹುದೇ ?
|
ಇದು “ಕೋವಿಡ್-19 ಸಮಯದಲ್ಲಿ ಲಾಕ್ ಡೌನ್ ನಿಯಮಾವಳಿ ಉಲ್ಲಂಘನೆ” ಹೊಸ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ.
|
8
|
ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿರುವುದರ ಬಗ್ಗೆ ಪ್ರತ್ಯೇಕ ವಿಭಾಗ ಸೃಷ್ಟಿಸಬಹುದೇ ?
|
ಇದು “ಕೋವಿಡ್-19 ಸಮಯದಲ್ಲಿ ಲಾಕ್ ಡೌನ್ ನಿಯಮಾವಳಿ ಉಲ್ಲಂಘನೆ” ಹೊಸ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ.
|
9
|
ಸೋಂಕು ನಿವಾರಣೆ/ನೈರ್ಮಲೀಕರಣ ಮನವಿಗೆ ಪ್ರತ್ಯೇಕ ವಿಭಾಗ ಸೇರಿಸಬಹುದೇ ?
|
ಇದು ಹೊಸ ವಿಭಾಗ “ಕೋವಿಡ್-19 ಸಮಯದಲ್ಲಿ ಧೂಮೀಕರಣ/ನೈರ್ಮಲೀಕರಣಕ್ಕೆ ಮನವಿ” ವ್ಯಾಪ್ತಿಗೆ ಒಳಪಡುತ್ತದೆ.
|
10
|
ಆಹಾರಕ್ಕೆ ಬೇಡಿಕೆ ಸಲ್ಲಿಸುವ ಅಂಶವನ್ನು ತಪ್ಪಿಸಬಹುದು ಏಕೆಂದರೆ ಅದನ್ನು ನಾಗರಿಕರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ?
|
ಕೋವಿಡ್-19 ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ್ದಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳು ಅಗತ್ಯವಿರುವವರಿಗೆ ಆಹಾರ ಪೂರೈಕೆ ಖಾತ್ರಿಪಡಿಸಬೇಕಾಗುತ್ತದೆ.
ಆಹಾರ, ವಸತಿ, ಔಷಧಿ, ಸಾರಿಗೆಗೆ ಮನವಿ ಮತ್ತಿತರ ಅಂಶಗಳನ್ನು ಸಂಬಂಧಿಸಿದ ಏಜೆನ್ಸಿ/ಎನ್ ಜಿಒ/ಮಳಿಗೆ ಅಥವಾ ಆ ಪ್ರದೇಶದ ಮಾರಾಟಗಾರರಿಗೆ ಕಳುಹಿಸಲಾಗುವುದು ಮತ್ತು ದೂರುದಾರರು ಅಥವಾ ನಾಗರಿಕರಿಗೆ ಆ ಬಗ್ಗೆ ಮಾಹಿತಿ ನೀಡಲಾಗುವುದು. ಆದರೂ ಅಂತಿಮವಾಗಿ ದೂರುಗಳ ವಿಲೇವಾರಿ ವೇಳೆ ಎಲ್ಲಾ ಅಂಶಗಳ ಬಗ್ಗೆ ನಿಗಾ ಇಡಲಾಗುವುದು.
|
11
|
ಕ್ವಾರಂಟೈನ್ ಅಥವಾ ಲಾಕ್ ಡೌನ್ ಇತ್ಯಾದಿಗಳ ಉಲ್ಲಂಘನೆ ಬಗ್ಗೆ ಪೊಲೀಸ್/ ಜಿಲ್ಲಾ ಆಡಳಿತ ನಿಗಾವಹಿಸುತ್ತದೆ, ಆದರೆ ಯುಎಲ್ ಬಿ ನೇರವಾಗಿ ಏನು ಮಾಡುವುದಿಲ್ಲ ಅಲ್ಲವೇ ?
|
ಯುಎಲ್ ಬಿಗಳು ನಿರ್ದಿಷ್ಟ ದೂರುಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಮಾಹಿತಿಯನ್ನು ಒದಗಿಸುತ್ತವೆ ಮತ್ತು ಸ್ವಚ್ಛತಾ ಆಪ್ ನಲ್ಲಿ ಆ ಬಗ್ಗೆ ಉತ್ತರವನ್ನು ನೀಡಲಿವೆ.
|
12
|
ಆಪ್ ಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಇತ್ಯರ್ಥಕ್ಕೆ ಸಹಾಯವಾಣಿ ಇದೆಯೇ ?
|
ಎಲ್ಲಾ ದೂರುಗಳನ್ನು ಇ-ಮೇಲ್ ಮಾಡಬಹುದು.
ವಿಳಾಸ : swachhbharat@janaagraha.org
ಅನುಷ್ಕಾ ಅರೋರಾ, ಜನಾಗ್ರಹ : 9625514474
ಬಗೆಹರಿಯದ ದೂರುಗಳಿದ್ದರೆ ಅವುಗಳಿಗೆ ಇವರನ್ನು ಸಂಪರ್ಕಿಸಬಹುದು:
ಸುಮಿತ್ರಾ ಅರೋರಾ, ಜನಾಗ್ರಹ : 9818359033;
ಪ್ರಬಲ್ ಭಾರದ್ವಾಜ್, ನ್ಯಾಷನಲ್ ಪಿಎಂಯು, ಎಸ್ ಬಿಎಂ(ಯು) :7838606896
|
********
(Release ID: 1612690)
Visitor Counter : 266