ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂಬಂಧ ಪಿಂಚಣಿದಾರರೊಂದಿಗೆ ವೆಬ್ ಮೂಲಕ ಸಂವಾದ ನಡೆಸಿದ ಡಾ. ಜಿತೇಂದ್ರ ಸಿಂಗ್
Posted On:
09 APR 2020 4:15PM by PIB Bengaluru
ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂಬಂಧ ಪಿಂಚಣಿದಾರರೊಂದಿಗೆ ವೆಬ್ ಮೂಲಕ ಸಂವಾದ ನಡೆಸಿದ ಡಾ. ಜಿತೇಂದ್ರ ಸಿಂಗ್
ಏಮ್ಸ್ ನ ಹೆಸರಾಂತ ವೈದ್ಯರಿಂದ ಸಲಹೆ
ಕೋವಿಡ್-19 ಎದುರಿಸುವ ಸಂಬಂಧ ಹಾಗೂ ಆ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ (ಡಿಒಎನ್ಇಆರ್) ಸಚಿವ (ಸ್ವತಂತ್ರಖಾತೆ) ಹಾಗೂ ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಮಾರ್ಗದರ್ಶನದಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ(ಡಿಒಪಿಪಿಡಬ್ಲ್ಯೂ) ವೆಬ್ ಸೈಟ್ ಮೂಲಕ ಸಂವಾದ ಆಯೋಜಿಸಿತ್ತು. ಈ ವಿಡಿಯೋ ಸಂವಾದದಲ್ಲಿ 22 ನಗರಗಳ ಸುಮಾರು 100ಕ್ಕೂ ಹೆಚ್ಚು ಪಿಂಚಣಿದಾರರು ಏಮ್ಸ್ ನ ನಿರ್ದೇಶಕ ಡಾ|| ರಂದೀಪ್ ಗುಲೇರಿಯಾ ಮತ್ತು ಏಮ್ಸ್ ನ ಅಸೋಸಿಯೇಟ್ ಪ್ರೊಫಸರ್, ಜಿರಿಯಾಟ್ರಿಕ್ ಮೆಡಿಸನ್, ಡಾ|| ಪ್ರಸೂನ್ ಚಟರ್ಜಿ ಮತ್ತಿತರರು ಸಂವಾದ ನಡೆಸಿದರು. ಈ ತಜ್ಞರು ಕೊರೊನಾ ಸೋಂಕು ಹರಡುವುದು, ಪ್ರಸಕ್ತ ಆರೋಗ್ಯ ಸ್ಥಿತಿಗತಿ ಮತ್ತು ಮುಂಜಾಗ್ರತಾ ಕ್ರಮಗಳು ಹಾಗೂ ಪರಿಹಾರ ಮಾರ್ಗಗಳು ಮತ್ತು ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿಚಾರಗಳನ್ನು ಹಂಚಿಕೊಂಡರು. ಪ್ರಶ್ನೋತ್ತರದ ವೇಳೆ ದೇಶದ ನಾನಾ ಭಾಗದ ಪಿಂಚಣಿದಾರರು ತಮ್ಮ ಆತಂಕದ ಪ್ರಶ್ನೆಗಳನ್ನು ಎತ್ತಿದರು, ಅದಕ್ಕೆ ಡಾ|| ರಂದೀಪ್ ಗುಲೇರಿಯಾ, ಡಾ|| ಪ್ರಸೂನ್ ಚಟರ್ಜಿ ವಿವರವಾಗಿ ಉತ್ತರಿಸಿದರು.
ಡಾ. ಜಿತೇಂದ್ರ ಸಿಂಗ್, ಪಿಂಚಣಿದಾರರನ್ನುದ್ದೇಶಿಸಿ ಮಾತನಾಡುತ್ತಾ, ವಯಸ್ಸಾದವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ ಮತ್ತು ಯುವ ಜನರಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಿದ, ಆದರೂ ರೋಗ ನಿರೋಧಕ ಶಕ್ತಿ ದುರ್ಲಬಲವಾಗಿರುವ ಹಿನ್ನೆಲೆಯಲ್ಲಿ ವಯಸ್ಸಾದವರಿಗೆ ಕೋವಿಡ್-19 ತಗುಲುವ ಸಾಧ್ಯತೆ ಹೆಚ್ಚಿದೆ ಎಂದರು. ಈ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಉತ್ತಮ ಶುಚಿತ್ವ ಕಾಪಾಡುವ ಪದ್ಧತಿಗಳನ್ನು ಪಾಲಿಸುವುದು ಅತ್ಯಂತ ಪ್ರಮುಖವಾದುದು ಎಂದು ಹೇಳಿದ ಅವರು, ಪಿಂಚಣಿದಾರರು ಆರೋಗ್ಯಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಅದು ಕೋವಿಡ್-19 ಕುರಿತ ಅಗತ್ಯ ಅಪ್ ಡೇಟೆಡ್ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಕೋವಿಡ್-19 ಸೋಂಕಿತ ವ್ಯಕ್ತಿ ಸನಿಹಕ್ಕೆ ಬಂದರೆ ಆ ಬಗ್ಗೆ ಎಚ್ಚರಿಕಯೆನ್ನೂ ಸಹ ನೀಡುತ್ತದೆ ಎಂದು ಹೇಳಿದರು.
ಜನರ ಆರೋಗ್ಯ ಖಾತ್ರಿಪಡಿಸುವ ಸಲುವಾಗಿ ಕೊರೊನಾ ಯೋಧರು ತಮ್ಮೆಲ್ಲಾ ಪ್ರಯತ್ನಗಳನ್ನು ಕೈಗೊಂಡಿದ್ದಾರೆ ಎಂದು ವೈದ್ಯರ ಸೇವೆಯನ್ನು ಅವರು ಶ್ಲಾಘಿಸಿದರು. ಭಾರತದ ಆರೋಗ್ಯ ವಲಯ ವಿಸ್ತರಣೆಯಾಗುತ್ತಿದ್ದು, ಅದು ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ ಮತ್ತು ಭಾರತ ಸರ್ಕಾರ ಎಲ್ಲ ಜನರ ಸುರಕ್ಷತೆ ಖಾತ್ರಿಪಡಿಸಲು ಕ್ರಮಗಳನ್ನು ಕೈಗೊಂಡಿದೆ ಮತ್ತು ಅಗತ್ಯ ವಸ್ತುಗಳು ಸುಗಮ ರೀತಿಯಲ್ಲಿ ಪೂರೈಕೆಯಾಗಲು ಕ್ರಮ ಕೈಗೊಂಡಿದೆ ಎಂದು ಪಿಂಚಣಿದಾರರಿಗೆ ಭರವಸೆ ನೀಡಿದರು.
ಈ ಸಂವಾದ ಡಿಎಸ್/ ಡಿಒಪಿಪಿಡಬ್ಲ್ಯೂದ ಶ್ರೀ ರುಚಿರ್ ಮಿತ್ತಲ್ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಅವರು ಏಮ್ಸ್ ನ ನಿರ್ದೇಶಕ ಡಾ|| ರಂದೀಪ್ ಗುಲೇರಿಯಾ ಮತ್ತು ಏಮ್ಸ್ ನ ಅಸೋಸಿಯೇಟ್ ಪ್ರೊಫೆಸರ್, ಜಿರಿಯಾಟ್ರಿಕ್ ಮೆಡಿಸನ್, ಡಾ|| ಪ್ರಸೂನ್ ಚಟರ್ಜಿ ಅವರ ಮೌಲ್ಯಯುತ ಮಾಹಿತಿ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
***
(Release ID: 1612649)
Visitor Counter : 160
Read this release in:
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam