ನಾಗರೀಕ ವಿಮಾನಯಾನ ಸಚಿವಾಲಯ

ಜೀವನಾಡಿ ಉಡಾನ್ ವಿಮಾನಗಳ ಮೂಲಕ ಜೊರಾಹಟ್, ಲೆಂಗ್ ಪುಯಿ , ದಿಮಾಪುರ್, ಇಂಪಾಲ ಮತ್ತು ಈಶಾನ್ಯ ಪ್ರಾಂತ್ಯಕ್ಕೆ ವೈದ್ಯಕೀಯ ಉಪಕರಣಗಳ ಸಾಗಾಣೆ

Posted On: 07 APR 2020 5:03PM by PIB Bengaluru

ಜೀವನಾಡಿ ಉಡಾನ್ ವಿಮಾನಗಳ ಮೂಲಕ ಜೊರಾಹಟ್, ಲೆಂಗ್ ಪುಯಿ , ದಿಮಾಪುರ್, ಇಂಪಾಲ ಮತ್ತು ಈಶಾನ್ಯ ಪ್ರಾಂತ್ಯಕ್ಕೆ ವೈದ್ಯಕೀಯ ಉಪಕರಣಗಳ ಸಾಗಾಣೆ

ಚಿಂತನ ಮತ್ತು ಮಂಥನ ಸಭೆಗಳ ಮೂಲಕ ಪ್ರತಿ ದಿನ ನಾಗರಿಕ ವಿಮಾನಯಾನ ಸಚಿವಾಲಯದಿಂದ ಮುಂದಿನ ಯೋಜನೆ ಮತ್ತು ಕಾರ್ಯ ನಿರ್ವಹಣೆ ಪರಿಶೀಲನೆ

152 ಜೀವನಾಡಿ ಉಡಾನ್ ವಿಮಾನಗಳಿಂದ ಭಾರತದಾದ್ಯಂತ 200 ಟನ್ ಗಳಿಗೂ ಅಧಿಕ ವೈದ್ಯಕೀಯ ಸಾಮಗ್ರಿ ಸಾಗಾಣೆ

 

ನಾಗರಿಕ ವಿಮಾನಯಾನ ಸಚಿವಾಲಯ, ಆನ್ ಲೈನ್ ಸಭೆಗಳು ಮತ್ತು ವಸ್ತುಶಃ ವಾರ್ ರೂಮ್ ಗಳ ಮೂಲಕ ಬೇಡಿಕೆ ಮತ್ತು ಪೂರೈಕೆ ನಡುವೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಿದೆ ಮತ್ತು ಕೋವಿಡ್-19 ವಿರುದ್ಧದ ಸಮರದಲ್ಲಿ ವೈಮಾನಿಕ ವಲಯದ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ.

ನಾಗರಿಕ ವಿಮಾನಯಾನ ಸಚಿವಾಲಯ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಚಿಂತನ ಸಭೆ ನಡೆಸಿ, ಆಯಾ ದಿನದ ಯೋಜನೆ ಮತ್ತು ಹಿಂದಿನ ದಿನದ ಪ್ರಗತಿಯನ್ನು ಪರಾಮರ್ಶಿಸುತ್ತಿದೆ. ಅಲ್ಲದೆ ಪ್ರತಿ ದಿನ ಮಧ್ಯಾಹ್ನ 3 ಗಂಟೆಗೆ ಮಂಥನ ಸಭೆ ನಡೆಸಿ, ಆಯಾ ದಿನದ ಕಾರ್ಯನಿರ್ವಹಣೆ ಪರಿಶೀಲನೆ ಮತ್ತು ಯಾವುದಾದರೂ ಅಗತ್ಯ ಹಂತದಲ್ಲಿ ಬದಲಾವಣೆಗಳ ಬಗ್ಗೆ ಪರಿಶೀಲಿಸಲಿದೆ. ಈ ಸಭೆಯಲ್ಲಿ ಸಂಪನ್ಮೂಲಗಳ ವಿತರಣೆ ಮತ್ತು ಅಗತ್ಯತೆಗಳ ಮೌಲ್ಯಮಾಪನದ ಬಗ್ಗೆ ಮುಂದಿನ ಯೋಜನೆಗಳನ್ನು ರೂಪಿಸಲಾಗುವುದು.

ನಾಗರಿಕ ವಿಮಾನಯಾನ ಸಚಿವಾಲಯದಿಂದ ಜೀವನಾಡಿ ಉಡಾನ್ ಯೋಜನೆಯಡಿ, ದೇಶಾದ್ಯಂತ ಈವರೆಗೆ 152 ಸರಕು ವಿಮಾನಗಳ ಕಾರ್ಯಾಚರಣೆ ನಡೆಸಲಾಗಿದ್ದು, ಅವುಗಳ ಮೂಲಕ ದೇಶದ ನಾನಾ ಭಾಗಗಳಿಗೆ ವಿಶೇಷವಾಗಿ ದೂರದ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ವೈದ್ಯಕೀಯ ಸರಕು ಸಾಮಗ್ರಿ ಸಾಗಾಣೆ ಮಾಡಲಾಗಿದೆ. ಏರ್ ಇಂಡಿಯಾ, ಅಲಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಿಮಾನಗಳ ಬೆಂಬಲದೊಂದಿಗೆ ಲಾಕ್ ಡೌನ್ ಸಮಯದಲ್ಲಿ ಈವರೆಗೆ 200 ಟನ್ ಗೂ ಅಧಿಕ ವೈದ್ಯಕೀಯ ಸಾಮಗ್ರಿಗಳನ್ನು ಸಾಗಾಣೆ ಮಾಡಲಾಗಿದೆ.

2020ರ ಏಪ್ರಿಲ್ 6 ರಂದು ಜೀವನಾಡಿ ಉಡಾನ್ ವಿಮಾನಗಳು ಹಲವು ಈಶಾನ್ಯ ಪ್ರದೇಶಗಳು ಮತ್ತು ಕೇಂದ್ರ ಹಾಗೂ ಈಶಾನ್ಯ ರಾಜ್ಯಗಳಿಗೆ ಐಸಿಎಂಆರ್ ಕಿಟ್, ಎಚ್ಎಲ್ಎಲ್ ಕನ್ಸೈನ್ ಮೆಂಟ್ ಹಾಗೂ ಇತರೆ ಅವಶ್ಯಕ ಸರಕನ್ನು ಸಾಗಿಸಿವೆ. ಅದರ ವಿವರಗಳು ಈ ಕೆಳಗಿನಂತಿವೆ:

ಜೀವನಾಡಿ ಉಡಾನ್ 1 (ಐಎಎಫ್): ದೆಹಲಿ-ರಾಂಚಿ-ಪಾಟ್ನಾ-ಜೊರಾಹಟ್- ಲೆಂಗ್ ಪುಯಿ -ಇಂಪಾಲ-ದಿಮಾಪುರ್-ಗುವಾಹತಿಗೆ ಐಸಿಎಂಆರ್ ಕಿಟ್ ಗಳನ್ನು ಸಾಗಿಸಲಾಗಿದೆ. ಗುವಾಹತಿಗೆ(50 ಕೆ.ಜಿ.), ಅಸ್ಸಾಂಗೆ ರೆಡ್ ಕ್ರಾಸ್ ಸೇರಿ ಕನ್ಸೈನ್ ಮೆಂಟ್(800 ಕೆ.ಜಿ.), ಮೇಘಾಲಯಕ್ಕೆ ಕನ್ಸೈನ್ ಮೆಂಟ್(672 ಕೆ.ಜಿ.) ಉಳಿದ ಕನ್ಸೈನ್ ಮೆಂಟ್ ಅನ್ನು ಮಣಿಪುರ, ನಾಗಾಲ್ಯಾಂಡ್ ಮತ್ತು ಐಸಿಎಂಆರ್ ನ ಕನ್ಸೈನ್ ಮೆಂಟ್ ಅನ್ನು ದಿಬ್ರುಗಡ, ಮತ್ತೊಂದು ಕನ್ಸೈನ್ ಮೆಂಟ್ ಮಿಝೋರಾಂ(300 ಕೆ.ಜಿ) ರಾಂಚಿಗೆ(500 ಕೆ.ಜಿ.) ಮತ್ತು ಪಾಟ್ನಾಗೆ(50 ಕೆ.ಜಿ.) ಐಸಿಎಂಆರ್ ಕಿಟ್ ಗಳನ್ನು ರವಾನಿಸಲಾಗಿದೆ.

  • ಉಡಾನ್ 2 ಅಲಯನ್ಸ್ ಏರ್ (ಎಟಿಆರ್): ದೆಹಲಿ-ವಾರಣಾಸಿ-ರಾಯ್ ಪುರ್-ಹೈದ್ರಾಬಾದ್-ದೆಹಲಿಗೆ ಐಸಿಎಂಆರ್ ಕಿಟ್ ಗಳ ರವಾನೆ, ವಾರಣಾಸಿಗೆ(50 ಕೆ.ಜಿ) ಐಸಿಎಂಆರ್ ಕಿಟ್, ರಾಯ್ ಪುರ್ ಗೆ(50.ಕೆ.ಜಿ.) ಐಸಿಎಂಆರ್ ಕಿಟ್, ಹೈದ್ರಾಬಾದ್ ಗೆ(50.ಕೆ.ಜಿ.) ಐಸಿಎಂಆರ್ ಕಿಟ್, ವಿಜಯವಾಡಾಕ್ಕೆ(50.ಕೆ.ಜಿ.) ಐಸಿಎಂಆರ್ ಕಿಟ್ ಮತ್ತು ಹೈದ್ರಾಬಾದ್ ಗೆ(1600 ಕೆ.ಜಿ.) ಕನ್ಸೈನ್ ಮೆಂಟ್

ಜೀವನಾಡಿ ಉಡಾನ್ 3 ಏರ್ ಇಂಡಿಯಾ ( 320): ಮುಂಬೈ-ಬೆಂಗಳೂರು-ಚೆನ್ನೈ-ಮುಂಬೈಗೆ ಜವಳಿ ಸಚಿವಾಲಯದ ಕನ್ಸೈನ್ ಮೆಂಟ್ ಗಳು, ಬೆಂಗಳೂರಿಗೆ ಎಚ್ಎಲ್ಎಲ್ ಕನ್ಸೈನ್ ಮೆಂಟ್ ಮತ್ತು ಚೆನ್ನೈಗೆ ಎಚ್ಎಲ್ಎಲ್ ಕನ್ಸೈನ್ ಮೆಂಟ್.

ಜೀವನಾಡಿ ಉಡಾನ್ 4 ಸ್ಪೈಸ್ ಜೆಟ್ ಎಸ್ ಜಿ(7061): ದೆಹಲಿ-ಚೆನ್ನೈಗೆ, ಐಸಿಎಂಆರ್ ಕನ್ಸೈನ್ ಮೆಂಟ್

ಜೀವನಾಡಿ ಉಡಾನ್ 5 : ಏರ್ ಇಂಡಿಯಾ ವಿಮಾನ( 320) : ದೆಹಲಿ-ಡೆಹ್ರಾಡೂನ್ ಗೆ ಐಸಿಎಂಆರ್ ಕನ್ಸೈನ್ ಮೆಂಟ್

 

ದಿನಾಂಕಾವಾರು ವಿವರ

ಕ್ರ.ಸಂಖ್ಯೆ

ದಿನಾಂಕ

ಏರ್ ಇಂಡಿಯಾ

ಅಲಯನ್ಸ್

ಐಎಎಫ್

ಇಂಡಿಗೊ

ಸ್ಪೈಸ್ ಜೆಟ್

ಒಟ್ಟು ವಿಮಾನಗಳ ಹಾರಾಟ

1

26.3.2020

02

--

-

-

02

04

2

27.3.2020

04

09

01

-

--

14

3

28.3.2020

04

08

-

06

--

18

4

29.3.2020

04

10

06

--

--

20

5

30.3.2020

04

-

03

--

--

07

6

31.3.2020

09

02

01

 

--

12

7

01.4.2020

03

03

04

--

-

10

8

02.4.2020

04

05

03

--

--

12

9

03.4.2020

08

--

02

--

--

10

10

04.4.2020

04

03

02

--

--

09

11

05.4.2020

--

--

16

--

--

16

12

06.4.2020

03

04

13

 

 

20

 

ಒಟ್ಟು ವಿಮಾನಗಳು

49

44

51

06

02

152

 

· ಏರ್ ಇಂಡಿಯಾ ಮತ್ತು ಐಎಎಫ್ ಸಹಭಾಗಿತ್ವದಲ್ಲಿ ಲಡಾಕ್, ಕಾರ್ಗಿಲ್, ದಿಮಾಪುರ್, ಇಂಪಾಲ, ಗುವಾಹತಿ, ಚೆನ್ನೈ, ಅಹಮದಾಬಾದ್, ಪಾಟ್ನಾ, ಜೊರಾಹಟ್, ಲೆಂಗ್ ಪುಯಿ, ಮೈಸೂರು, ಹೈದ್ರಾಬಾದ್, ರಾಂಚಿ, ಜಮ್ಮು, ಶ್ರೀನಗರ, ಚಂಡಿಗಢ ಮತ್ತು ಪೋರ್ಟ್ ಬ್ಲೇರ್.

· ಗುವಾಹತಿ, ದಿಬ್ರುಗಢ, ಅಗರ್ತಲಾ, ಐಸ್ವಾಲ್, ದಿಮಾಪುರ್, ಇಂಪಾಲ, ಜೊರಾಹಟ್, ಲೆಂಗ್ ಪುಯಿ, ಮೈಸೂರು, ಕೊಯಮತ್ತೂರು, ತ್ರಿವೇಂಡ್ರಮ್, ಭುವನೇಶ್ವರ, ರಾಯ್ ಪುರ್, ರಾಂಚಿ, ಶ್ರೀನಗರ, ಪೋರ್ಟ್ ಬ್ಲೇರ್, ಪಾಟ್ನಾ, ಕೊಚ್ಚಿನ್, ವಿಜಯವಾಡ, ಅಹಮದಾಬಾದ್, ಜಮ್ಮು, ಕಾರ್ಗಿಲ್, ಲಡಾಕ್, ಚಂಡಿಗಢ ಮತ್ತು ಗೋವಾ ಮತ್ತಿತರ ತಾಣಗಳಿಗೆ ರವಾನೆ.

ಒಟ್ಟು ಕ್ರಮಿಸಲಾದ ಕಿ.ಮೀ.

1,32,029 ಕಿ,ಮೀ.

ಒಟ್ಟು ಸರಕು ಸಾಗಾಣೆ 06.04.2020

 

15.54 ಟನ್

06.04.2020 ಈವರೆಗೆ ಸಾಗಾಣೆ ಮಾಡಲಾದ ಸರಕು

­

184.66 + 15.54 = 200.20 ಟನ್ ಗಳು

 

ಅಂತಾರಾಷ್ಟ್ರೀಯ

· ಶಾಂಘೈ ಮತ್ತು ದೆಹಲಿ ನಡುವೆ ವಾಯು ಸೇತುವೆ ಸ್ಥಾಪಿಸಲಾಗಿದೆ. ಏರ್ ಇಂಡಿಯಾದ ಮೊದಲ ಸರಕು ವಿಮಾನ 2020ರ ಏಪ್ರಿಲ್ 4 ರಂದು 21 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕೊಂಡೊಯ್ದಿದೆ. ಹಾಂಕಾಂಗ್ ಗೆ ಮತ್ತೊಂದು ವಿಮಾನ ಅವಶ್ಯಕ ಸಾಮಗ್ರಿ ಕೊಂಡೊಯ್ದಿದೆ. ಏರ್ ಇಂಡಿಯಾ, ಚೀನಾಕ್ಕೆ ನಿಗದಿತ ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಸುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಗಂಭೀರ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡುತ್ತಿದೆ.

ಖಾಸಗಿ ಆಪರೇಟರ್ ಗಳು:

· ದೇಶೀಯ ಸರಕು ಆಪರೇಟರ್ ಗಳು: ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೋ ವಾಣಿಜ್ಯ ದರದಲ್ಲಿ ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಸುತ್ತಿದೆ. ಸ್ಪೈಸ್ ಜೆಟ್ ಮಾರ್ಚ್ 24 ರಿಂದ ಏಪ್ರಿಲ್ 6ರ ವರೆಗೆ 189 ಸರಕು ಸಾಗಾಣೆ ವಿಮಾನಗಳ ಮೂಲಕ 2,58,210 ಕಿ.ಮೀ. ಕ್ರಮಿಸಿ, 1530.13 ಟನ್ ಸರಕು ಸಾಗಿಸಿದೆ. ಇದರಲ್ಲಿ 53 ಅಂತಾರಾಷ್ಟ್ರೀಯ ಸರಕು ಸಾಗಾಣೆ ವಿಮಾನಗಳಿವೆ. ಬ್ಲೂ ಡಾರ್ಟ್ 58 ದೇಶೀಯ ಸರಕು ಸಾಗಾಣೆ ವಿಮಾನಗಳ ಮೂಲಕ 2020ರ ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ 5,51,14ಕಿ.ಮೀ. ಕ್ರಮಿಸಿ 862.2 ಟನ್ ಸರಕು ಸಾಗಿಸಿದೆ. ಇಂಡಿಗೋ ಏಪ್ರಿಲ್ 3 ಮತ್ತು 4 ರ ಅವಧಿಯಲ್ಲಿ 8 ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಸಿ, 6103 ಕಿ.ಮೀ. ವ್ಯಾಪ್ತಿ ಕ್ರಮಿಸಿ, 3.14 ಟನ್ ಸರಕು ಸಾಗಿಸಿದೆ.

 

*****

 



(Release ID: 1612109) Visitor Counter : 204