ನೌಕಾ ಸಚಿವಾಲಯ

ದೇಶದಲ್ಲಿ ಲಾಕ್ ಡೌನ್ ಮತ್ತು ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಹಡಗುಗಳ ಸುಗಮ ಕಾರ್ಯಾಚರಣೆಗೆ ಕ್ರಿಯಾಶೀಲ ಪಾತ್ರವಹಿಸುತ್ತಿರುವ ಬಂದರು ಸಚಿವಾಲಯ

Posted On: 07 APR 2020 12:45PM by PIB Bengaluru

ದೇಶದಲ್ಲಿ ಲಾಕ್ ಡೌನ್ ಮತ್ತು ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಹಡಗುಗಳ ಸುಗಮ ಕಾರ್ಯಾಚರಣೆಗೆ ಕ್ರಿಯಾಶೀಲ ಪಾತ್ರವಹಿಸುತ್ತಿರುವ ಬಂದರು ಸಚಿವಾಲಯ

2020ರ ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ಪ್ರಮುಖ ಬಂದರುಗಳಲ್ಲಿ ಒಟ್ಟು ಸಂಚಾರ ನಿರ್ವಹಣೆಯಲ್ಲಿ ಟನ್ ಲೆಕ್ಕದಲ್ಲಿ ಶೇ. 0.82 ಪ್ರಗತಿ

ಬಂದರುಗಳಲ್ಲಿ ಸುಮಾರು 46,000 ಸಿಬ್ಬಂದಿ/ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್

ಯಾವುದೇ ಪ್ರಮುಖ ಬಂದರು ಬಳಕೆದಾರರಿಗೆ ವಿಧಿಸುತ್ತಿದ್ದ ದಂಡ, ವಿಳಂಬ ಶುಲ್ಕ, ದಂಡಗಳ ಮನ್ನಾ

ಪ್ರಮುಖ ಬಂದರುಗಳಲ್ಲಿ ಕೋವಿಡ್-19 ಎದುರಿಸಲು ಆಸ್ಪತ್ರೆಗಳು ಸಜ್ಜು
ಪಿಎಂ-ಕೇರ್ಸ್ ನಿಧಿಗೆ ವೇತನ ಮತ್ತು ಸಿಎಸ್ಆರ್ ನಿಧಿಯಿಂದ 59 ಕೋಟಿ ರೂ. ದೇಣಿಗೆ

ಮಹಾನಿರ್ದೇಶಕರಿಂದ ನಾವಿಕರು, ಹಡಗು ಮಾರ್ಗಗಳು, ಸ್ಯಾನಿಟೈಸೇಷನ್, ಸುರಕ್ಷಾ ಪ್ರಮಾಣ ಪತ್ರಗಳಿಗೆ ಕ್ರಮ

 

ಕೋವಿಡ್-19ನಿಂದಾಗಿ ಅನಿರೀಕ್ಷಿತ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಂದರು ಸಚಿವಾಲಯ, ಬಂದರುಗಳಲ್ಲಿ ಸುಗಮ ಕಾರ್ಯಾಚರಣೆ ಹಾಗೂ ಸಾಗಾಣೆ ಖಾತ್ರಿಪಡಿಸಲು ಹಲವು ಕ್ರಿಯಾಶೀಲ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ನಿರ್ಬಂಧದ ನಡುವೆಯೂ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಮುಖ ಬಂದರುಗಳಲ್ಲಿ ನಿರ್ವಹಿಸಲಾದ ದಟ್ಟಣೆ

ಪ್ರಮುಖ ಬಂದರುಗಳಲ್ಲಿ 2020ರ ಮಾರ್ಚ್ ನಿಂದ ಏಪ್ರಿಲ್ ಅವಧಿಯ ವರೆಗೆ ಒಟ್ಟು 704.63 ಮಿಲಿಯನ್ ಟನ್ ದಟ್ಟಣೆಯನ್ನು ನಿರ್ವಹಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 699.10 ಮಿಲಿಯನ್ ಟನ್ ಇದ್ದು, ಒಟ್ಟಾರೆ ನಿರ್ವಹಣೆಯಲ್ಲಿ ಶೇ.0.82 ರಷ್ಟು ಪ್ರಗತಿ ಕಾಣಬಹುದು.

https://ci5.googleusercontent.com/proxy/dTD5z1JezdgcWYsLn8NXEsRK4MkLWOzQPHOUJMKLipivjfy7FmOQEgRDOKBjruNzHUELmvfzMH8StQrtqmiKIqdyp2NMLvHgiPdW06kUXD4thtomwzHY=s0-d-e1-ft#https://static.pib.gov.in/WriteReadData/userfiles/image/image001K8YZ.gif

2020ರ ಮಾರ್ಚ್ ನಿಂದ ಏಪ್ರಿಲ್ ಅವಧಿಯಲ್ಲಿ ಕಂಟೈನರ್ ಟನ್ ತೂಕದಲ್ಲಿ ಮತ್ತು ಟಿಇಯುಎಸ್ ಗಳಲ್ಲಿ ಕ್ರಮವಾಗಿ 146934 ಮತ್ತು 9988 ಸಾಗಿಸಲಾಗಿದೆ. 2019ರ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಈ ಪ್ರಮಾಣ ಕ್ರಮವಾಗಿ 145451 ಮತ್ತು 9877 ಸಾಗಿಸಲಾಗಿದೆ. ಒಟ್ಟು ಕಂಟೈನರ್ ಟನ್ನೇಜ್ ನಲ್ಲಿ ಶೇ. 1.02 ರಷ್ಟು ಮತ್ತು ಕಂಟೈನರ್ ಟಿಇಯುನಲ್ಲಿ ಶೇ.1.12ರಷ್ಟು ಪ್ರಗತಿ ಸಾಧಿಸಲಾಗಿದೆ.

https://ci3.googleusercontent.com/proxy/gTq6si002NDu5jQOF0FZPYatJ0IZTwsICQkg1wLjcLB0NvHIxOusQhjFqlV5tw85GIEahLd_7eyMMZo1SMZ40nt_O-gCjqRebVe8ZdJwREA1_zn4slrj=s0-d-e1-ft#https://static.pib.gov.in/WriteReadData/userfiles/image/image002N6E0.gif

ಮಾರ್ಚ್ 2020ರಲ್ಲಿ ಒಟ್ಟು ದಟ್ಟಣೆ 61120 ಟನ್ ಗಳಾಗಿದ್ದು, ಇದು ಫೆಬ್ರವರಿ 2020ಕ್ಕೆ ಹೋಲಿಸಿದರೆ 57233 ಟನ್ ಆಗಿದೆ ಮತ್ತು 2019ರ ಮಾರ್ಚ್ ಗೆ ಹೋಲಿಸಿದರೆ (64510 ಟನ್) ಶೇ.5.25ರಷ್ಟು ಕಡಿಮೆ.

ಒಟ್ಟು ಹಗಡುಗಳ ನಿರ್ವಹಣೆ

2019-20ರ ಅವಧಿಯಲ್ಲಿ ಬಂದರುಗಳಲ್ಲಿ ಒಟ್ಟು ಸುಮಾರು 20837 ಹಡಗುಗಳನ್ನು ನಿರ್ವಹಿಸಲಾಗಿದೆ, 2018-19ರ ಅವಧಿಯಲ್ಲಿ 20853 ನಿರ್ವಹಿಸಲಾಗಿತ್ತು. ಹಡಗುಗಳ ಸಂಚಾರ ದಟ್ಟಣೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 0.08ರಷ್ಟು ಕಡಿಮೆಯಾಗಿದೆ.

ಕೋವಿಡ್-19 ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು:

1. ಥರ್ಮಲ್ ಸ್ಕ್ರೀನಿಂಗ್

ಭಾರತದ ಬಂದರುಗಳಲ್ಲಿ ಥರ್ಮಲ್ ಸ್ಕ್ಯಾನರ್ ಗಳನ್ನು ಬಳಸಿ 2020ರ ಜನವರಿ 27ರಿಂದ 2020ರ ಏಪ್ರಿಲ್ 4ರ ವರೆಗೆ ಒಟ್ಟು 46,202 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 39,225 ಮಂದಿಯನ್ನು ಪ್ರಮುಖ ಬಂದರುಗಳಲ್ಲಿ ತಪಾಸಣೆ ಮಾಡಲಾಗಿದೆ.

2. ದಂಡ ಶುಲ್ಕ ಮನ್ನ

ಬಂದರು ಸಚಿವಾಲಯ ತನ್ನ ಆದೇಶ ಸಂಖ್ಯೆ: ಪಿಡಿ-14300/4/2020-ಪಿಡಿ VII, ದಿನಾಂಕ 31

ಮಾರ್ಚ್ 2020ರಂದು ಪ್ರಮುಖ ಬಂದರುಗಳಿಗೆ ಕೆಲವು ನಿರ್ದೇಶನ ನೀಡಲಾಗಿದೆ.

i. ಎಲ್ಲ ಪ್ರಮುಖ ಬಂದರುಗಳು ಲಾಕ್ ಡೌನ್ ಅವಧಿಯಲ್ಲಿ 2020ರ ಮಾರ್ಚ್ 22 ರಿಂದ ಏಪ್ರಿಲ್ 14ರ ವರೆಗೆ ಯಾವುದೇ ರೀತಿಯ ಸರಕು ತೆರವು ಅಥವಾ ಭರ್ತಿ ಮಾಡುವುದು/ಅನ್ ಲೋಡ್ ಮಾಡುವ ಕಾರ್ಯಾಚರಣೆ ಅಥವಾ ಇನ್ನಿತರ ವಿಳಂಬಕ್ಕೆ(ವರ್ತಕರಿಗೆ, ಶಿಪ್ಪಿಂಗ್ ಮಾರ್ಗಗಳು, ಕನ್ಸೆಶನರೀಸ್, ಲೈಸೆನ್ಸ್ ಗಳು ಇತ್ಯಾದಿ.) ಎಲ್ಲ ಪ್ರಮುಖ ಬಂದರುಗಳಲ್ಲಿ ದಂಡ, ವಿಳಂಬ ಶುಲ್ಕ, ಸುಂಕ, ಬಾಡಿಗೆಗಳನ್ನು ವಿಧಿಸುವಂತಿಲ್ಲ.

ii. ಆದ್ದರಿಂದ ಎಲ್ಲ ಪ್ರಮುಖ ಬಂದರುಗಳು ನೆಲದ ಬಾಡಿಗೆಯಿಂದ ವಿನಾಯಿತಿ ನೀಡಬೇಕು ಮತ್ತು ಮೇಲಿನ ಅವಧಿಯಲ್ಲಿ ಯಾವುದೇ ದಂಡಶುಲ್ಕ, ಬಾಡಿಗೆ ಶುಲ್ಕ ಅಥವಾ ಇತರೆ ದಂಡಗಳನ್ನು ಕನಿಷ್ಠ ಸಾಧನೆ ಖಾತ್ರಿ ಸೇರಿದಂತೆ ಬಂದರು ಚಟುವಟಿಕೆಗಳ ಮೇಲೆ ಶುಲ್ಕವನ್ನು ವಿಧಿಸುವಂತಿಲ್ಲ.

3. ಅನಿವಾರ್ಯ ನಿರ್ಬಂಧ

ಬಂದರು ಸಚಿವಾಲಯ ತನ್ನ ಆದೇಶ ಸಂಖ್ಯೆ: ಪಿಡಿ-14300/4/2020-ಪಿಡಿ VII, ದಿನಾಂಕ 31

ಮಾರ್ಚ್ 2020ರಂದು ಪ್ರಮುಖ ಬಂದರುಗಳಿಗೆ ಕೆಲವು ನಿರ್ದೇಶನ ನೀಡಲಾಗಿದೆ.

i. ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಪದ್ಧತಿ ಅಥವಾ ಇತರೆ ಯಾವುದೇ ಯೋಜನೆಗಳ ಅನುಷ್ಠಾನ ಪೂರ್ಣಗೊಳ್ಳಬೇಕಾದ ಅವಧಿಯನ್ನು ಬಂದರುಗಳಲ್ಲಿ ವಿಸ್ತರಿಸಲಾಗುವುದು.

ii. ಹಾಲಿ ಇರುವ ಮತ್ತು ಕಾರ್ಯಪ್ರಗತಿಯಲ್ಲಿರುವ ಪಿಪಿಪಿ ಯೋಜನೆಗಳಿಗೆ ಎಲ್ಲಾ ಪ್ರಮುಖ ಬಂದರುಗಳಲ್ಲಿ ಪ್ರಕರಣಗಳನ್ನು ಆಧರಿಸಿ ದಂಡ ಶುಲ್ಕ ಮನ್ನಾ ಮಾಡಬಹುದು ಮತ್ತು ಒಪ್ಪಂದದ ನಿಯಮಾವಳಿಗಳಂತೆ ಕೆಲವೊಂದು ಕ್ರಮ ಕೈಗೊಳ್ಳುವುದನ್ನು ಮುಂದೂಡಬಹುದು.

ಈ ಅನಿವಾರ್ಯ ನಿರ್ಬಂಧ ಅವಧಿ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದ ದಿನದಿಂದ ಅನ್ವಯವಾಗಿ ಸಕ್ಷಮ ಪ್ರಾಧಿಕಾರದ ಆದೇಶದ ಕೊನೆಯ ದಿನ ಮುಕ್ತಾಯವಾಗುತ್ತದೆ.

4. ಆಸ್ಪತ್ರೆಗಳ ಸಜ್ಜು

ಎಲ್ಲ ಪ್ರಮುಖ ಬಂದರು ಟ್ರಸ್ಟ್ ಗಳ ಆಸ್ಪತ್ರೆಗಳಿಗೆ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ)ಗಳನ್ನು ಪೂರೈಕೆ ಮಾಡಲಾಗಿದೆ ಮತ್ತು ದಿನದ 24 ಗಂಟೆಯೂ ಕಾರ್ಯ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಬಂದರು ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸಲಾಗಿದೆ.

5. ಪಿಎಂ-ಕೇರ್ಸ್ ನಿಧಿಗೆ ಸಿಎಸ್ಆರ್ ನಿಧಿ ವರ್ಗಾವಣೆ

ಬಂದರು ಸಚಿವಾಲಯದಡಿ ಬರುವ ಎಲ್ಲ ಬಂದರುಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ಸಿಎಸ್ಆರ್ ನಿಧಿಯಿಂದ ಪಿಎಂ-ಕೇರ್ಸ್ ನಿಧಿಗೆ 52 ಕೋಟಿ ರೂ.ಗೂ ಅಧಿಕ ಹಣವನ್ನು ದೇಣಿಗೆ ನೀಡಿದೆ.

6. ಸಿಬ್ಬಂದಿಗಳಿಂದ ತಮ್ಮ ವೇತನದಲ್ಲಿ ಕೊಡುಗೆ

ಬಂದರು ಸಚಿವಾಲಯದ ಕಚೇರಿಗಳು, ಬಂದರುಗಳ ಸಿಬ್ಬಂದಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಸಿಬ್ಬಂದಿ ತಮ್ಮ ವೇತನದಿಂದ ಸುಮಾರು 7 ಕೋಟಿ ರೂ.ಗಳನ್ನು ಪಿಎಂ-ಕೇರ್ಸ್ ನಿಧಿಗೆ ಕೊಡುಗೆಯಾಗಿ ನೀಡಿದ್ದಾರೆ.

7. ಡಿಜಿ ಶಿಪ್ಪಿಂಗ್ ಕೈಗೊಂಡಿರುವ ಕ್ರಮಗಳು

ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕರು, ಆದೇಶ ಸಂಖ್ಯೆ. 02/2020 ದಿನಾಂಕ 16.03.2020,

ಆದೇಶ ಸಂಖ್ಯೆ.03/2020 ದಿನಾಂಕ 20.03.2020 ಮತ್ತು ಆದೇಶ ಸಂಖ್ಯೆ. 04/2020 ದಿನಾಂಕ 20.03.2020ಗಳಲ್ಲಿ ಮಾರಕ ಕೊರೊನಾ ಸೋಂಕು(ಕೋವಿಡ್-19) ನಿಯಂತ್ರಣ ಕುರಿತಂತೆ ನಿರ್ದೇಶನಗಳನ್ನು ನೀಡಲಾಗಿದೆ. ನಿರ್ದೇಶನಾಲಯ ಕೊರೊನಾ ಸೋಂಕು ಹರಡದಂತೆ ತಡೆಯಲು ಬಂದರು ಉದ್ಯಮಕ್ಕೆ ಸಹಾಯವಾಗುವಂತೆ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಈ ಮಾರ್ಗಸೂಚಿಯಲ್ಲಿ ಬಂದರು ಪ್ರವೇಶದ ವೇಳೆ ಕೈಗೊಳ್ಳಬೇಕಾದ ನಿರ್ಬಂಧ ಕ್ರಮ ನಾವಿಕರಿಗೆ ಕೋವಿಡ್-19 ಎದುರಿಸಲು ಕೈಗೊಳ್ಳಬೇಕಾದ ವಾಸ್ತವಿಕ ರಕ್ಷಣಾ ಕ್ರಮಗಳು, ಹಡಗು ತಂಗುವ ಮುನ್ನ ತಪಾಸಣೆ ನಡೆಸುವುದು, ಸೋಂಕು ಶಂಕಿತ ಪ್ರಕರಣಗಳಲ್ಲಿ ಏನು ಮಾಡಬೇಕು, ಹಡಗುಗಳಲ್ಲಿರುವ ನಾವಿಕರಿಗೆ ಶುಚಿತ್ವ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು, ಭಾರೀ ಅಪಾಯ ನಿರ್ವಹಣಾ ಕ್ರಮಗಳು, ಪ್ರಕರಣಗಳ ನಿರ್ವಹಣೆ, ಐಸೋಲೇಶನ್ ಮತ್ತು ಸೋಂಕು ನಿವಾರಣಾ ಮತ್ತು ತ್ಯಾಜ್ಯ ನಿರ್ವಹಣೆ ಇತ್ಯಾದಿ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಭಾರತೀಯ ಬಂದರು ಕಂಪನಿಗಳು, ಆರ್ ಪಿ ಎಸ್ ಸೇವಾ ಪೂರೈಕೆದಾರರು, ಎಂಟಿಐಗಳು, ನಾವಿಕರು ಸೇರಿದಂತೆ ಎಲ್ಲ ಸಂಬಂಧಿಸಿದವರಿಗೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ. ಬಂದರು ವ್ಯವಸ್ಥಾಪಕ ನಿರ್ದೇಶಕರು, 21.03.2020ರಂದು ಸಂಖ್ಯೆ 1 ರಿಂದ ಡಿಜಿಎಸ್ ಆದೇಶ ಸಂಖ್ಯೆ 4/2020 ತಿದ್ದುಪಡಿ ಆದೇಶವನ್ನು ಹೊರಡಿಸಿದ್ದು, ಅದರಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಯಾವ್ಯಾವ ದೇಶಗಳ ಪ್ರವಾಸ ನಿರ್ಬಂಧಿಸಿದೆ ಮತ್ತು ಕಡ್ಡಾಯ ಕ್ವಾರಂಟೈನ್ ಗೆ ಒಳಪಡಿಸಬೇಕಾದ ದೇಶಗಳ ಪಟ್ಟಿಯನ್ನು ಒದಗಿಸಲಾಯಿತು.

ಎ. ಮನ್ನಾ

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವು ಸರಕುಗಳನ್ನು ತುಂಬಿಸುವುದು, ವಿಲೇವಾರಿ ಮಾಡುವುದು ಮತ್ತು ಲೋಡಿಂಗ್ ವೇಳೆ ಆಗುವ ವಿಳಂಬಕ್ಕೆ ಯಾರನ್ನೂ ಹೊಣೆ ಮಾಡಬಾರದು ಹಾಗೂ ಇದರಿಂದ ರಫ್ತು ಮತ್ತು ಆಮದು ವ್ಯಾಪಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಯಿತು.

1. ಡಿಜಿಎಸ್ ಆದೇಶ ಸಂಖ್ಯೆ 7ರಲ್ಲಿ ಸೂಚಿಸಿರುವಂತೆ ಸಮುದ್ರ ಮಾರ್ಗಗಳಲ್ಲಿ 2020ರ ಮಾರ್ಚ್ 22 ರಿಂದ 2020ರ ಏಪ್ರಿಲ್ 14ರ ವರೆಗೆ(ಎರಡೂ ದಿನಗಳು ಸೇರಿ) ಅವಧಿಯಲ್ಲಿ ಆಮದು ಮತ್ತು ರಫ್ತಿಗಾಗಿ ಸರಕು ಸಾಗಾಣೆ ಕಂಟೈನರ್ ವಿಳಂಬಕ್ಕೆ ಒಪ್ಪಂದದ ನಿಯಮದಂತೆ ಹಾಗೂ ಪ್ರಸ್ತುತ ಒಪ್ಪಿಕೊಂಡಿರುವಂತೆ ಉಚಿತ ಸಮಯ ವ್ಯವಸ್ಥೆ ಮಾಡಿಕೊಡಬೇಕು ಮತ್ತು ಈ ಅವಧಿಯಲ್ಲಿ ಸಮುದ್ರ ಮಾರ್ಗಗಳಲ್ಲಿ ಯಾವುದೇ ಹೊಸ ಅಥವಾ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ಸೂಚಿಸಲಾಗಿದೆ.

2. ಆಮದು ಮತ್ತು ರಫ್ತು ವ್ಯಾಪಾರದಲ್ಲಿ ತೊಡಗಿರುವ ಭಾರತದ ಶಿಪ್ಪಿಂಗ್ ಕಂಪನಿಗಳು ಮತ್ತು ಕೆರಿಯರ್ ಸಂಸ್ಥೆಗಳಿಗೆ ಒಮ್ಮೆ ಪರಿಹಾರವನ್ನು ನೀಡುವ ಸಲುವಾಗಿ ಡಿಜಿಎಸ್ ಆದೇಶ ಸಂಖ್ಯೆ 8 ರಲ್ಲಿ ಯಾವುದೇ ರೀತಿಯ ವಿಳಂಬ ಶುಲ್ಕ, ಅವಧಿ ಮೀರಿದ ನಂತರದ ನೆಲದ ಬಾಡಿಗೆ, ಬಂದರಿನಲ್ಲಿ ದಾಸ್ತಾನು ಶುಲ್ಕ ಹೆಚ್ಚುವರಿ ಶುಲ್ಕಗಳು ಅಥವಾ ಯಾವುದೇ ದಂಡ ಶುಲ್ಕಗಳನ್ನು ಮಾಲಿಕರು/ಕನ್ಸೈನಿಗಳ ಮೇಲೆ ವಿಧಿಸುವಂತಿಲ್ಲ(ಭಾರೀ, ಅಲ್ಪ ಹಾಗೂ ದ್ರವ ರೂಪದ ಕಾರ್ಗೊ) 2020ರ ಮಾರ್ಚ್ 22ರಿಂದ ಏಪ್ರಿಲ್ 14 ರವರೆಗೆ(ಎರಡು ದಿನಗಳು ಸೇರಿ) 2020ರ ಮಾರ್ಚ್ 22 ರಿಂದೀಚೆಗೆ ಲಾಕ್ ಡೌನ್ ಕ್ರಮಗಳಿಂದಾಗಿ ಸರಕು ತೆರವುಗೊಳಿಸುವಲ್ಲಿ ವಿಳಂಬವಾದರೆ ದಂಡ ವಿಧಿಸುವಂತಿಲ್ಲ.

ಬಿ. ಹಡಗು ಮಾರ್ಗಗಳು

ಬಂದರು ನಿರ್ದೇಶನಾಲಯದ ವ್ಯವಸ್ಥಾಪಕ ನಿರ್ದೇಶಕರ ಆದೇಶ ಸಂಖ್ಯೆ 07/2020 ದಿನಾಂಕ 29/03/2020 ರಂದು ಭಾರತೀಯ ಬಂದರು ಮತ್ತು ಹಡಗು ಮಾರ್ಗಗಳಿಗೆ ಹೊರಡಿಸಲಾದ ಸೂಚನೆಯಲ್ಲಿ 2020ರ ಮಾರ್ಚ್ 22 ರಿಂದ 2020ರ ಏಪ್ರಿಲ್ 14ರ ವರೆಗೆ(ಎರಡೂ ದಿನಗಳು ಸೇರಿ) ಆಮದು ಮತ್ತು ರಫ್ತು ಹಡಗುಗಳಿಗೆ ಯಾವುದೇ ವಿಳಂಬ ಶುಲ್ಕ ವಿಧಿಸುವಂತಿಲ್ಲ. ಈ ಅವಧಿಯಲ್ಲಿ ಬಂದರು ಮಾರ್ಗಗಳಲ್ಲಿ ಯಾವುದೇ ಹೊಸ ಅಥವಾ ಹೆಚ್ಚುವರಿ ಶುಲ್ಕ ವಿಧಿಸದಿರಲು ಸೂಚಿಸಲಾಗಿದೆ.

ಶಿಪ್ಪಿಂಗ್ ಕಂಪನಿಗಳಿಗೆ ನೀಡಲಾದ ಪರಿಹಾರಗಳು :

1. ಎಲ್ಲಾ ಡಿಜಿಎಸ್ ಅನುಮೋದಿತ ತರಬೇತಿ ಸಂಸ್ಥೆಗಳನ್ನು ಮುಚ್ಚಿರುವುದರಿಂದ ಹಡಗುಗಳ ನಾವಿಕರು ತಮ್ಮ ಒಪ್ಪಂದ ಪೂರ್ಣಗೊಂಡಿರುವುದಕ್ಕೆ ಸಹಿ ಹಾಕಲಾಗುತ್ತಿಲ್ಲ. ಹಲವರ ಕಾರ್ಯಕ್ಷಮತೆ ಪ್ರಮಾಣ ಪತ್ರಗಳು(ಸಿಒಸಿಎಸ್), ವೃತ್ತಿಪರತೆ ಪ್ರಮಾಣ ಪತ್ರಗಳು(ಸಿಒಪಿಎಸ್) ಮತ್ತು ಕಾರ್ಯದಕ್ಷತೆ ಪ್ರಮಾಣ ಪತ್ರಗಳ(ಸಿಒಇಎಸ್)ಅವಧಿ ಮುಕ್ತಾಯಗೊಳ್ಳುವ ಸಾಧ್ಯತೆಗಳಿರುತ್ತವೆ. ಅಂತಹ ಪ್ರಮಾಣ ಪತ್ರಗಳಿಗೆ ಮಾನ್ಯತೆ ನೀಡಲು ಡಿಜಿಎಸ್ ತಾನೇ ಎಲ್ಲ ಪ್ರಮಾಣ ಪತ್ರಗಳನ್ನು ಆರು ತಿಂಗಳವರೆಗೆ ಅಂದರೆ 2020ರ ಅಕ್ಟೋಬರ್ 31ರ ವರೆಗೆ ವಿಸ್ತರಣೆ ಮಾಡಿದೆ. (ಇದರ ಅರ್ಥ 2020ರ ಮಾರ್ಚ್ 31ರ ವರೆಗೆ ಮಾನ್ಯತೆ ಇದ್ದಂತಹ ಎಲ್ಲ ಪ್ರಮಾಣ ಪತ್ರಗಳು ಅಧಿಕೃತವಾಗಿದ್ದು, ಅವುಗಳನ್ನು ಪರಿಗಣಿಸುವಂತೆ ಅಂತಾರಾಷ್ಟ್ರೀಯ ಸಾಗರ ಸಂಸ್ಥೆಗೆ ತಿಳಿಸಲಾಗಿದೆ)

2. ಅಂತೆಯೇ ಮುಕ್ತಾಯಗೊಳ್ಳಲಿದ್ದ ಭಾರತೀಯ ಹಡಗುಗಳ ಸುರಕ್ಷತಾ ಪ್ರಮಾಣ ಪತ್ರಗಳ ಮಾನ್ಯತೆಯನ್ನು ಮುಂದುವರಿಸಲಾಗಿದೆ. ಬಂದರು ಸರ್ವೇಕ್ಷಣಾಗಾರರು ಈ ಸಮಯದಲ್ಲಿ ಹಡುಗಗಳ ಸುರಕ್ಷತೆ ಪರಿಶೀಲನೆಗೆ ತೊಂದರೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಹಡಗುಗಳ ಮಾನ್ಯತಾ ಅವಧಿಯನ್ನು 2020ರ ಜೂನ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ಹಡಗಿನ ಮಾಸ್ಟರ್ ಅದನ್ನು ಪರಿಶೀಲಿಸಿ, ಅದು ಕಾರ್ಯನಿರ್ವಹಣೆಗೆ ಯೋಗ್ಯವಿದೆ ಎಂದು ಪ್ರಮಾಣೀಕರಿಸಬೇಕು.

3. ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಡಿಜಿಎಸ್ ಎಲ್ಲ ಹಡಗುಗಳ ಸ್ಯಾನಿಟೈಸೇಷನ್ ಗೆ ಪರಿಸ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಜೊತೆಗೆ ಹಡಗಿನ ಸಿಬ್ಬಂದಿಗೆ ಮತ್ತು ಪೈಲಟ್ ಗಳಿಗೆ ಅಗತ್ಯ ಪಿಪಿಇಗಳನ್ನು ಒದಗಿಸುವುದು, ಸ್ಯಾನಿಟೈಸೇಶನ್ ಮತ್ತು ಎಲ್ಲ ಪ್ರಮುಖ ಹಾಗೂ ಸಣ್ಣ ಬಂದರುಗಳಲ್ಲಿ ಸರಕು ತುಂಬುವ ಮತ್ತು ಇಳಿಸುವ ಸಿಬ್ಬಂದಿಗೆ ಪಿಪಿಇ ಒದಗಿಸುವುದು, ಹಡಗಿನಲ್ಲಿ ಕಾಯಿಲೆಗೊಳಗಾದವರ ನಿರ್ವಹಣೆಗೆ ಶಿಷ್ಟಾಚಾರ ಪಾಲಿಸುವುದು, ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸೂಚಿಸಲಾಗಿತ್ತು. ಡಿಜಿಎಸ್ ಹೊರಡಿಸಿರುವ ಪರಿಷ್ಕೃತ ಶಿಷ್ಟಾಚಾರ ನಿಯಮಾವಳಿಗಳನ್ನು ಹಲವು ವಿದೇಶಗಳು ಕೂಡ ಪಾಲಿಸುತ್ತಿವೆ.

4. ಈ ಮೇಲಿನ ಶಿಷ್ಟಾಚಾರಗಳು ಡಿಜಿಎಸ್ ಆದೇಶ ಸಂಖ್ಯೆ 1/2020 ಮತ್ತು ಡಿಜಿಎಎಸ್ ಆದೇಶ ಸಂಖ್ಯೆ 9/2020 ಮತ್ತು ತಿದ್ದುಪಡಿಗಳಲ್ಲಿ ಸೇರಿವೆ. ನಿರ್ದೇಶನಾಲಯ ನಿರಂತರವಾಗಿ ಭಾರತದ ಜಲಮಾರ್ಗದಲ್ಲಿ ಭಾರತೀಯ ಹಡಗು ಮತ್ತು ದೋಣಿ ಕಾರ್ಯ ನಿರ್ವಹಣೆ ಮೇಲೆ ನಿಗಾ ಇರಿಸಿದೆ.

5. ಬಂದರು ಆಡಳಿತದ ಕ್ರಿಯಾಶೀಲ ಕ್ರಮಗಳಿಂದಾಗಿ ಎಲ್ಲ ಭಾರತೀಯ ಹಡಗುಗಳನ್ನು ಮಾನ್ಯತಾ ಪತ್ರದೊಂದಿಗೆ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಡಲಾಗಿದೆ ಮತ್ತು ಅವುಗಳನ್ನು ಸನ್ನದ್ಧವಾಗಿಡಲಾಗಿದೆ ಹಾಗೂ ಕೆಲವನ್ನು ಸರಕು ಸಾಗಾಣೆಗೆ ಬಳಸಿಕೊಳ್ಳಲಾಗುತ್ತಿದೆ.

 

****

 



(Release ID: 1612074) Visitor Counter : 264