ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಲಹೆಯಂತೆ ಕೋವಿಡ್ -19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸೂಚನೆ ಹೊರಡಿಸಿದ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ

Posted On: 06 APR 2020 3:21PM by PIB Bengaluru

ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಲಹೆಯಂತೆ ಕೋವಿಡ್ -19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸೂಚನೆ ಹೊರಡಿಸಿದ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ

 

ಕೋವಿಡ್ -19 ಒಡ್ಡಿರುವ ಭೀತಿಯ ಪ್ರಸಕ್ತ ಸನ್ನಿವೇಶದ ಹಿನ್ನೆಲೆಯಲ್ಲಿ, ಕೇಂದ್ರ ಎಚ್.ಆರ್.ಡಿ. ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಮ್ಮ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದು, ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

ಆ ಪ್ರಕಾರವಾಗಿ, ಕೋವಿಡ್ -19 ವೇಳೆ ಮತ್ತು ನಂತರ ವಿದ್ಯಾರ್ಥಿ ಸಮುದಾಯದಲ್ಲಿ ಯಾವುದೇ ರೀತಿಯ ಮಾನಸಿಕ ಆರೋಗ್ಯ ಮತ್ತು ಮಾನಸಿಕ-ಸಾಮಾಜಿಕ ಕಾಳಜಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳ ಯೋಗಕ್ಷಂಮ ಮತ್ತು ಮಾನಸಿಕ ಆರೋಗ್ಯ ಹಾಗೂ ಮಾನಸಿಕ-ಸಾಮಾಜಿಕ ಅಂಶಗಳ ಕುರಿತಂತೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸೂಚಿಸಿದೆ:

1. ವಿಶ್ವವಿದ್ಯಾನಿಲಯಗಳು/ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ, ಮಾನಸಿಕ ಕಾಳಜಿ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಸಹಾಯವಾಣಿಗಳ ಸ್ಥಾಪನೆ. ಸಮಾಲೋಚಕರು ಮತ್ತು ಇತರ ಗುರುತಿಸಲ್ಪಟ್ಟ ಬೋಧಕ ಸದಸ್ಯರು ನಿಯಮಿತವಾಗಿ ಮೇಲ್ವಿಚಾರಣೆ ಮತ್ತು ನಿಗಾ ವಹಿಸುವುದು.

2. ವಿಶ್ವವಿದ್ಯಾಲಯಗಳು/ಕಾಲೇಜುಗಳಿಂದ ಶಾಂತ ಮತ್ತು ಒತ್ತಡ ಮುಕ್ತವಾಗಿರುವಂತೆ ನೋಡಿಕೊಳ್ಳಲು ಸಂವಾದಗಳು ಮತ್ತು ಮನವಿ/ಪತ್ರಗಳ ಮೂಲಕ ವಿದ್ಯಾರ್ಥಿಗಳ ನಿರಂತರ ನಿಗಾ. ಇದನ್ನು ಟೆಲಿಫೋನ್, ಇಮೇಲ್, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆ ಮೂಲಕ ಸಾಧಿಸಬಹುದು.

3. ವಿದ್ಯಾರ್ಥಿಗೆ ನೆರವಿನ ಅಗತ್ಯವಿದ್ದಾಗ, ಸ್ನೇಹಿತರು/ಸಹಪಾಠಿಗಳನ್ನು ಗುರುತಿಸುವ ಮತ್ತು ತತ್ ಕ್ಷಣದ ಅಗತ್ಯ ನೆರವು ಒದಗಿಸುವಂಥ ಹಾಸ್ಟೆಲ್ ವಾರ್ಡನ್ ಗಳು/ಹಿರಿಯ ಬೋಧಕರುಗಳ ನೇತೃತ್ವದ ಕೋವಿಡ್ -19 ವಿದ್ಯಾರ್ಥಿಗಳ ನೆರವು ಗುಂಪು ರೂಪಿಸುವುದು.

4. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಈ ಕೆಳಗಿನ ವಿಡಿಯೋ ಲಿಂಕ್ https://www.mohfw.gov.in/ಅನ್ನು ನಿಮ್ಮ ವಿಶ್ವವಿದ್ಯಾಲಯ/ಕಾಲೇಜು ಅಂತರ್ಜಾಲ ತಾಣದಲ್ಲಿ ಮತ್ತು  ವಿದ್ಯಾರ್ಥಿಗಳೊಂದಿಗೆ ಹಾಗೂ ಬೋಧಕರೊಂದಿಗೆ ಇ-ಮೇಲ್ ಮೂಲಕ, ಸಾಮಾಜಿಕ ತಾಣಗಳಾದ ಫೇಸ್ ಬುಕ್, ವ್ಯಾಟ್ಸ್ ಅಪ್, ಟ್ವಿಟರ್ ಇತ್ಯಾದಿಯಲ್ಲಿ ಹಂಚಿಕೊಳ್ಳಿ.:

· ಮನೆಯೊಳಗೆ ಉಳಿದಿರುವಾಗ ಮಾನಸಿಕ ಆರೋಗ್ಯದ ಕಾಳಜಿ ವಹಿಸಲು ಪ್ರಾಯೋಗಿಕ ಟಿಪ್ಸ್ ಗಳು.. https://www.youtube.com/watch?v=uHB3WJsLJ8s&feature=youtu.be

· ಕೋವಿಡ್ -19 ಸಂದರ್ಭದಲ್ಲಿ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು.

https://www.mohfw.gov.in/pdf/MindingourmindsduringCoronaeditedat.pdf

· ವಿವಿಧ ಆರೋಗ್ಯ ತಜ್ಞರು ಕೋವಿಡ್ -19 ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರ್ವಹಿಸುವುದು ಹೇಗೆ ಎಂದು ತಿಳಿಸಿದ್ದಾರೆ.   https://www.youtube.com/watch?v=iuKhtSehp24&feature=youtu.be

· ನಡತೆಯ ಆರೋಗ್ಯ: ಮಾನಸಿಕ- ಸಾಮಾಜಿಕ ಉಚಿತ ಸಹಾಯವಾಣಿ - 0804611007

ಮೇಲಿನ ಕ್ರಮಗಳ ಅನುಷ್ಠಾನಕ್ಕೆ ನಿಯಮಿತವಾಗಿ ನಿಗಾವಹಿಸಬೇಕು ಮತ್ತು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಯುಜಿಸಿಯ ವಿಶ್ವವಿದ್ಯಾಲಯ ಚಟುವಟಿಕೆ ನಿಗಾ ಪೋರ್ಟಲ್ ugc.ac.in/uamp.ನಲ್ಲಿ ಸಲ್ಲಿಸಬೇಕು.

 

*****

 



(Release ID: 1611677) Visitor Counter : 222