ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
COVID-19 ಇತ್ತೀಚಿನ ಮಾಹಿತಿ
Posted On:
05 APR 2020 6:48PM by PIB Bengaluru
COVID-19 ಇತ್ತೀಚಿನ ಮಾಹಿತಿ
ದೇಶದಲ್ಲಿ COVID-19 ರತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ದೇಶಾದ್ಯಂತ COVID-19 ಕುರಿತು ಯೋಜನೆ, ಸನ್ನದ್ಧತೆ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿನ್ನೆ ನಡೆದ ಸಶಕ್ತ ಗುಂಪುಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಗಳ ಲಭ್ಯತೆ, ಐಸೋಲೇಷನ್ ಮತ್ತು ಕ್ವಾರಂಟೈನ್ ಸೌಲಭ್ಯಗಳು, ಪರೀಕ್ಷೆ ಮತ್ತು ತೀವ್ರ ಆರೈಕೆ ತರಬೇತಿ ಇತ್ಯಾದಿಗಳನ್ನು ಹೆಚ್ಚಿಸಲು ಇಲ್ಲಿಯವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಗುಂಪುಗಳು ಮಾಹಿತಿ ನೀಡಿದವು.
COVID-19 ಸಾಂಕ್ರಾಮಿಕದ ನಿಗ್ರಹದ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ಜಜ್ಜರ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ಭೇಟಿ ನೀಡಿದರು. 300 ಹಾಸಿಗೆಗಳ ಪ್ರತ್ಯೇಕತಾ ವಾರ್ಡ್ಗಳನ್ನು ಒಳಗೊಂಡಿರುವ ಏಮ್ಸ್ ಜಜ್ಜರ್ COVID-19 ಕ್ಕೆ ಮೀಸಲಾದ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದ್ದು, ಐಸೋಲೇಷನ್ ನಲ್ಲಿರುವ ರೋಗಿಗಳಿಗೆ ಅಗತ್ಯವಾದ ವೈದ್ಯಕೀಯ ಬೆಂಬಲಗಳೊಂದಿಗೆ ಆರೈಕೆ ಮಾಡಲಾಗುವುದು ಎಂದು ಡಾ.ಹರ್ಷವರ್ಧನ್ ಹೇಳಿದರು. "ಭೀತಿ ಹುಟ್ಟಿಸಿರುವ ವೈರಸ್ ವಿರುದ್ಧ ಲಸಿಕೆ ಕಂಡುಹಿಡಿಯಲು ಪ್ರಪಂಚದಾದ್ಯಂತ ಜನರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಮತ್ತು ಆದರೆ ಅದಿನ್ನೂ ಪತ್ತೆಯಾಗಿಲ್ಲ, ನಾವು ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರವನ್ನು COVID-19 ವಿರುದ್ಧ ಪರಿಣಾಮಕಾರಿ ಸಾಮಾಜಿಕ ಲಸಿಕೆ ಎಂದು ಪರಿಗಣಿಸಬೇಕು" ಎಂದು ಅವರು ಹೇಳಿದರು.
ಸಂಪುಟ ಕಾರ್ಯದರ್ಶಿಯವರು ಇಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಮತ್ತು ಎಲ್ಲಾ ಜಿಲ್ಲೆಗಳ ಡಿಎಂ, ಎಸ್ಎಸ್ಪಿ, ಸಿಎಮ್ಒ, ಐಡಿಎಸ್ಪಿ ಸಿಬ್ಬಂದಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗಾಗಿ ಫಾರ್ಮಾ ಘಟಕಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಅವರು ಎಲ್ಲಾ ಡಿಎಂಗಳಿಗೆ ನಿರ್ದೇಶನ ನೀಡಿದರು. COVID-19 ಬಿಕ್ಕಟ್ಟು ನಿರ್ವಹಣಾ ಯೋಜನೆಯನ್ನು ರೂಪಿಸಲು ಎಲ್ಲಾ ಜಿಲ್ಲೆಗಳಿಗೆ ಮತ್ತೊಮ್ಮೆ ಸೂಚಿಸಲಾಗಿದೆ. ಇಂದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಆರು ಜಿಲ್ಲೆಗಳ (ಭಿಲ್ವಾರ, ಆಗ್ರಾ, ಗೌತಮ್ ಬುದ್ಧ ನಗರ, ಪಥನಮತ್ತಟ್ಟ (ಕೇರಳ), ಪೂರ್ವ ದೆಹಲಿ ಮತ್ತು ಮುಂಬೈ ಮುನ್ಸಿಪಲ್) ಜಿಲ್ಲಾ ಆಯುಕ್ತರು ಮತ್ತು ಪುರಸಭೆ ಆಯುಕ್ತರು ತಮ್ಮ ಕಾರ್ಯತಂತ್ರ ಮತ್ತು ಅನುಭವವನ್ನು ಹಂಚಿಕೊಂಡರು.
ಇಂದಿನವರೆಗೆ, ದೇಶದಲ್ಲಿ ಒಟ್ಟು 274 ಜಿಲ್ಲೆಗಳು COVID-19 ವೈರಸ್ ಪೀಡಿತವಾಗಿವೆ.
ಕ್ಲಸ್ಟರ್‌ಗಳಲ್ಲಿ (ನಿಗ್ರಹ ವಲಯಗಳೊಂದಿಗೆ) ಮತ್ತು ದೊಡ್ಡ ವಲಸೆ ಗುಂಪುಗಳು / ಸ್ಥಳಾಂತರ ಕೇಂದ್ರಗಳಲ್ಲಿ COVID-19ಕ್ಕಾಗಿ ತ್ವರಿತ ಆಂಟಿಬಾಡಿ ಆಧಾರಿತ ರಕ್ತ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಐಸಿಎಂಆರ್ ಸೂಚನೆ ನೀಡಿದೆ. ಈ ಸೂಚನೆ ಪ್ರಕಾರ, ಪರೀಕ್ಷೆಯ ವರದಿಯನ್ನು ನೇರವಾಗಿ ಐಸಿಎಂಆರ್ ಪೋರ್ಟಲ್‌ಗೆ ನೀಡಬೇಕು. ಇದರಿಂದ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಸಮಯೋಚಿತ ಚಿಕಿತ್ಸೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಬಹುದಾಗಿದೆ.
ಐಸಿಎಂಆರ್ ಇತ್ತೀಚೆಗೆ ನೀಡಿರುವ ಸಲಹೆ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು COVID-19 ವೈರಸ್ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಹೆಚ್ಚುತ್ತಿರುವ COVID-19 ಸಾಂಕ್ರಾಮಿಕ ರೋಗದ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಹೊಗೆರಹಿತ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ಜನರಿಗೆ ಕೋರಲಾಗಿದೆ.
ಇದುವರೆಗೆ, 3374 ದೃಢಪಡಿಸಿದ ಪ್ರಕರಣಗಳು ಮತ್ತು 79 ಸಾವುಗಳು ವರದಿಯಾಗಿವೆ. ಚೇತರಿಸಿಕೊಂಡ ನಂತರ 267 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.
COVID-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಕುರಿತು ಎಲ್ಲಾ ಅಧಿಕೃತ ಮತ್ತು ಇತ್ತೀಚಿನ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ: https://www.mohfw.gov.in/
COVID-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ncov2019[at]gov[dot]in ನಲ್ಲಿ ಇಮೇಲ್ ಮಾಡಬಹುದು. COVID-19 ರ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ. +91-11-23978046 ಅಥವಾ 1075 (ಟೋಲ್-ಫ್ರೀ) ಕರೆ ಮಾಡಿ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳಪಟ್ಟಿ https://www.mohfw.gov.in/pdf/coronvavirushelplinenumber.pdf ಇಲ್ಲಿ ಲಭ್ಯವಿದೆ.
***
(Release ID: 1611471)
Visitor Counter : 233
Read this release in:
Assamese
,
English
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam