ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಬ್ರೆಜಿಲ್ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

Posted On: 04 APR 2020 10:00PM by PIB Bengaluru

ಪ್ರಧಾನಮಂತ್ರಿ ಮತ್ತು ಬ್ರೆಜಿಲ್ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್  ಅಧ್ಯಕ್ಷ ಘನತೆವೆತ್ತ ಜೈರ್ ಮೆಸಿಯಸ್ ಬೋಲ್ಸನಾರೋ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು ಪ್ರಸಕ್ತ ಬಾಧಿಸುತ್ತಿರುವ ಕೋವಿಡ್-19 ಸಾಂಕ್ರಾಮಿಕ ಹಬ್ಬತ್ತಿರುವ ಜಾಗತಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.

ಪ್ರಧಾನಮಂತ್ರಿಯವರು, ಕೋವಿಡ್ -19ರಿಂದ ಬ್ರೆಜಿಲ್ ನಲ್ಲಿ ಸಂಭವಿಸಿರುವ ಪ್ರಾಣಹಾನಿಗೆ ತಮ್ಮ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಬ್ರೆಜಿಲ್ ನ ಎಲ್ಲ ಸ್ನೇಹಮಯಿ ಜನರೊಂದಿಗೆ ಪ್ರತಿಯೊಬ್ಬ ಭಾರತೀಯರ ಪ್ರಾರ್ಥನೆ ಇರುತ್ತದೆ ಎಂದು ತಿಳಿಸಿದರು.

ಇಬ್ಬರೂ ನಾಯಕರು ಕೋವಿಡ್ -19ನಿಂದ ಉದ್ಭವಿಸಿರುವ ಭೀಕರ ಬಿಕ್ಕಟ್ಟನ್ನು ಹತ್ತಿಕ್ಕಲು ಭಾರತ ಮತ್ತು ಬ್ರೆಜಿಲ್ ನಡುವಿನ ಆಪ್ತ ಸಹಕಾರ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಾಂಸ್ಥಿಕ ಚೌಕಟ್ಟು ಮಹತ್ವವನ್ನು ಪ್ರತಿಪಾದಿಸಿದರು. ಕೋವಿಡ್ ನಂತರದ ಜಗತ್ತಿನಲ್ಲಿ ಮಾನವ ಕೇಂದ್ರಿತ ಜಾಗತೀಕರಣದ ಹೊಸ ವಿಚಾರ ಹೊರಹೊಮ್ಮಿಸುವ ಅಗತ್ಯವನ್ನು ಒಪ್ಪಿಕೊಂಡರು.

ಈ ಸಂಕಷ್ಟದ ಸಮಯದಲ್ಲಿ ಬ್ರೆಜಿಲ್ ಅಧ್ಯಕ್ಷರಿಗೆ ಎಲ್ಲ ಸಾಧ್ಯ ಬೆಂಬಲದ ಭರವಸೆಯನ್ನು ಪ್ರಧಾನಮಂತ್ರಿ ನೀಡಿದರು. ಕೋವಿಡ್ 19ರ ಪರಿಸ್ಥಿತಿ ಮತ್ತು ಅದರಿಂದ ಎದುರಾಗಿರುವ ಸವಾಲುಗಳಿಗೆ ಸಂಬಂಧಿಸಿದಂತೆ ಅವರ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವುದಕ್ಕೆ ಇಬ್ಬರೂ ನಾಯಕರು ಸಮ್ಮತಿಸಿದರು.

ಈ ಸಾಲಿನ ಭಾರತದ 70ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷರು ಭಾಗವಹಿಸಿದ್ದನ್ನು ಕೃತಜ್ಞತೆಯಿಂದ ನೆನಪಿಸಿಕೊಂಡ ಪ್ರಧಾನಿಭಾರತ-ಬ್ರೆಜಿಲ್ ಬಾಂಧವ್ಯದಲ್ಲಿ ಹೆಚ್ಚುತ್ತಿರುವ ಚೈತನ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ಬ್ರಿಕ್ಸ್ ನ ನಾಯಕತ್ವಕ್ಕಾಗಿ ಬ್ರೆಜಿಲ್‌ಗೆ ಧನ್ಯವಾದ ಅರ್ಪಿಸಿದರು.

**** 



(Release ID: 1611249) Visitor Counter : 213