ಇಂಧನ ಸಚಿವಾಲಯ
ಏಪ್ರಿಲ್ 5ರ ರಾತ್ರಿ 9 ಗಂಟೆಗೆ ವಿದ್ಯುದೀಪ ಆರಿಸುವ ವೇಳೆ ಗ್ರಿಡ್ ಸ್ಥಿರತೆ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ
Posted On:
04 APR 2020 3:56PM by PIB Bengaluru
ಏಪ್ರಿಲ್ 5ರ ರಾತ್ರಿ 9 ಗಂಟೆಗೆ ವಿದ್ಯುದೀಪ ಆರಿಸುವ ವೇಳೆ ಗ್ರಿಡ್ ಸ್ಥಿರತೆ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ
ಗೌರವಾನ್ವಿತ ಪ್ರಧಾನಮಂತ್ರಿ ಅವರು, ಇದೇ ಏಪ್ರಿಲ್ 5ರಂದು ರಾತ್ರಿ 9 ಗಂಟೆಯಿಂದ 9 ಗಂಟೆ 9 ನಿಮಿಷದ ವರೆಗೆ ಸ್ವಯಂ ಪ್ರೇರಿತವಾಗಿ ವಿದ್ಯುತ್ ದೀಪಗಳನ್ನು ಆರಿಸುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಆದರೆ ಇದರಿಂದಾಗಿ ಗ್ರಿಡ್ ನಲ್ಲಿ ಅಸ್ಥಿರತೆ ಉಂಟಾಗಲಿದೆ ಮತ್ತು ವೋಲ್ಟೇಜ್ ನಲ್ಲಿ ವ್ಯತ್ಯಯವಾಗಿ, ಗೃಹೋಪಯೋಗಿ ವಿದ್ಯುನ್ಮಾನ ಉಪಕರಣಗಳಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಆತಂಕಗಳು ತಪ್ಪು ಗ್ರಹಿಕೆಯವು.
ಭಾರತದ ವಿದ್ಯುತ್ ಗ್ರಿಡ್ ಸ್ಥಿರವಾಗಿದ್ದು, ಬೇಡಿಕೆಯಲ್ಲಿನ ವ್ಯತ್ಯಯಗಳನ್ನು ನಿರ್ವಹಿಸಲು ಅಗತ್ಯ ವ್ಯವಸ್ಥೆಗಳು ಮತ್ತು ಶಿಷ್ಟಾಚಾರಗಳನ್ನು ರೂಪಿಸಲಾಗಿದೆ. ಈ ಕೆಳಗಿನ ಅಂಶವನ್ನು ಸೂಕ್ಷ್ಮವಾಗಿ ಗಮನಿಸಬಹುದು.
ಗೌರವಾನ್ವಿತ ಪ್ರಧಾನಮಂತ್ರಿಗಳು, ಏಪ್ರಿಲ್ 5ರಂದು ರಾತ್ರಿ 9 ಗಂಟೆಯಿಂದ 9 ಗಂಟೆ 9 ನಿಮಿಷದ ವರೆಗೆ ಮನೆಗಳಲ್ಲಿನ ವಿದ್ಯುತ್ ದೀಪಗಳನ್ನು ಆರಿಸಲು ಮಾತ್ರ ಮನವಿ ಮಾಡಿದ್ದಾರೆ. ಆದರೆ ಬೀದಿ ದೀಪಗಳು ಅಥವಾ ವಿದ್ಯುತ್ ಉಪಕರಣಗಳಾದ ಕಂಪ್ಯೂಟರ್, ಟಿವಿ, ಫ್ಯಾನ್, ರೆಫ್ರಿಜರೇಟರ್ ಮತ್ತು ಹವಾನಿಯಂತ್ರಿತ ಯಂತ್ರಗಳನ್ನು ಸ್ವಿಚ್ ಆಫ್ ಮಾಡಲು ಕರೆ ನೀಡಿಲ್ಲ.
ಆಸ್ಪತ್ರೆಗಳಲ್ಲಿನ ವಿದ್ಯುತ್ ದೀಪಗಳು ಮತ್ತು ಪೌರಾಡಳಿತ ಸೇವೆ, ಕಚೇರಿಗಳು, ಪೊಲೀಸ್ ಠಾಣೆಗಳು, ಉತ್ಪಾದನಾ ಘಕಟಗಳು ಮತ್ತಿತರ ಸಾರ್ವಜನಿಕ ಬಳಕೆಯ ಅವಶ್ಯಕ ಸೇವೆಗಳಲ್ಲಿ ವಿದ್ಯುತ್ ದೀಪ ಉರಿಯುವುದು ಮುಂದುವರಿಯುತ್ತವೆ. ಗೌರವಾನ್ವಿತ ಪ್ರಧಾನಮಂತ್ರಿಗಳು ಕರೆ ನೀಡಿರುವುದು ಕೇವಲ ಮನೆಗಳಲ್ಲಿನ ವಿದ್ಯುತ್ ದೀಪಗಳನ್ನು ಆರಿಸಲು ಮಾತ್ರ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಬೀದಿ ದೀಪಗಳನ್ನು ಆನ್ ನಲ್ಲಿ ಇಡುವಂತೆ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ.
***
(Release ID: 1611153)
Visitor Counter : 252
Read this release in:
Assamese
,
Hindi
,
Marathi
,
Punjabi
,
Gujarati
,
Telugu
,
Bengali
,
English
,
Urdu
,
Odia
,
Tamil
,
Malayalam