ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಬಗ್ಗೆ ಹೊಸ ಮಾಹಿತಿ

Posted On: 01 APR 2020 5:37PM by PIB Bengaluru

ಕೋವಿಡ್ – 19 ಬಗ್ಗೆ ಹೊಸ ಮಾಹಿತಿ

 

ದೇಶದಲ್ಲಿ ಕೋವಿಡ್ -19ರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯ / ಕೇಂದ್ರಾಡಳಿದ ಪ್ರದೇಶಗಳ ಜೊತೆಗೆ ಭಾರತ ಸರ್ಕಾರದ ಸಹಯೋಗದೊಂದಿಗೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಲಾಕ್ ಡೌನ್ ಕ್ರಮಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ಸಮನ್ವಯಗೊಳಿಸಲು ಮತ್ತು ನಿರ್ವಹಿಸಲು ಕ್ಯಾಬಿನೆಟ್ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳು / ಕೆಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನವನ್ನು ನೀಡಿದ್ದಾರೆ, ಪರಿಹಾರ ಕೇಂದ್ರಗಳು / ಪ್ರತ್ಯೇಕತೆಯ ಕೇಂದ್ರಗಳಲ್ಲಿ ಆಹಾರ, ನೀರು, ವೈದ್ಯಕೀಯ ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಸರಿಯಾಗಿ ನೋಡಿಕೊಳ್ಳಲಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿನ್ನೆ ವಲಸೆ ಕಾರ್ಮಿಕರಿಗೆ ಸರಿಯಾದ ಪ್ರತ್ಯೇಕತೆಯ ಸೌಲಭ್ಯ ಮತ್ತು ಮಾನಸಿಕ-ಸಾಮಾಜಿಕ ಭದ್ರತೆಯ ಕ್ರಮದ ಬಗ್ಗೆ ಸಲಹೆಯನ್ನು ನೀಡಿದೆ, ಇದು https://www.mohfw.gov.in/pdf/RevisedPsychosocialissuesofmigrantsCOVID19.pdf ನಲ್ಲಿ ಲಭ್ಯವಿದೆ.

ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ, ತರಬೇತಿ ಪಡೆದ ಎಲ್ಲಾ ಧರ್ಮಗಳ ಸಲಹೆಗಾರರು ಮತ್ತು / ಅಥವಾ ಸಮುದಾಯದ ನಾಯಕರು ಭೇಟಿ ನೀಡಿ ಪರಿಹಾರ ಶಿಬಿರಗಳಲ್ಲಿ ವಲಸೆ ಬಂದವರಿಗೆ ಮಾನಸಿಕ-ಸಾಮಾಜಿಕ ಬೆಂಬಲವನ್ನು ನೀಡಬೇಕು ಎಂದು ರಾಜ್ಯಗಳಿಗೆ ನಿರ್ದೇಶಿಸಲಾಗಿದೆ. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ, ತಾಂತ್ರಿಕ ಪ್ರಶ್ನೆಗಳನ್ನು ಕೇಳಲು, ಆರೋಗ್ಯ ಸಚಿವಾಲಯವು ಇಮೇಲ್ ಅನ್ನು ಒದಗಿಸಿದೆ (technicalquery.covid19[at]gov[dot]in ) ಇದು ಸಂದೇಹಗಳಿಗೆ, ಪ್ರಶ್ನೆಗಳಿಗೆ ನವದೆಹಲಿಯ ಏಮ್ಸ್ ನಂತಹ ಸಂಸ್ಥೆಗಳಿಂದ ಅಧಿಕೃತ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತದೆ. ಎಲ್ಲಾ ತಾಂತ್ರಿಕ ಮಾರ್ಗಸೂಚಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಾಲತಾಣದಲ್ಲಿ ಸಹ ಲಭ್ಯವಿದೆ (https://www.mohfw.gov.in ). ಕೋವಿಡ್-19ಕ್ಕೆ ಸಂಬಂಧಿತ ಪ್ರಶ್ನೆಗಳಿಗೆ ಶುಲ್ಕ ರಹಿತ ಸಂಖ್ಯೆ (1075) ಮತ್ತು ಸಹಾಯವಾಣಿ ಇಮೇಲ್ ಐಡಿ (ncov2019[at]gov[dot]in ) ಯು ಕೆಲವು ಸಮಯದಿಂದ ಕಾರ್ಯನಿರ್ವಹಿಸುತ್ತಿವೆ.

ಇದಲ್ಲದೆ, ಔಷಧ (ಬೆಲೆ ನಿಯಂತ್ರಣ) ಆದೇಶ 2013 ರ ನಿಬಂಧನೆಗಳ ಪ್ರಕಾರ 2020 ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಎಲ್ಲಾ 24 ವರ್ಗದ ವೈದ್ಯಕೀಯ ಸಾಧನಗಳನ್ನು ಗುಣಮಟ್ಟದ ನಿಯಂತ್ರಣ ಮತ್ತು ಬೆಲೆ ಮೇಲ್ವಿಚಾರಣೆಗೆಯ ಉದ್ದೇಶಕ್ಕಾಗಿ ಔಷಧಿಗಳಂತೆ ಪರಿಗಣಿಸಿ ನಿಯಂತ್ರಿಸಲಾಗುವುದು ಮತ್ತು ಕಳೆದ 12 ತಿಂಗಳುಗಳಲ್ಲಿ ಯಾವುದೇ ತಯಾರಕರು ಈ ವಸ್ತುಗಳ ಗರಿಷ್ಙ ಮಾರಾಟ ಬೆಲೆ (ಎಂಆರ್‌ ಪಿ) ಯನ್ನು 10% ಕ್ಕಿಂತ ಹೆಚ್ಚಿಸಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಸೂಚಿಸಿದೆ.

ಆಯುಷ್ ಸಚಿವಾಲಯವು ಆರೋಗ್ಯ ರಕ್ಷಣೆಯಲ್ಲಿ ಸ್ವಯಂ ಆರೈಕೆಯ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ. ಇದು ವಿಶೇಷವಾಗಿ ಕೋವಿಡ್-19ರ ಸಮಸ್ಯೆಯಿಂದಾಗುವ ಉಸಿರಾಟದ ಆರೋಗ್ಯಕ್ಕಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಲಾಕ್ ಡೌನ್ ಗೆ ಸಂಬಂಧಿಸಿದಂತೆ, ಪ್ರಸ್ತಾವಿತ ಸಾಮಾಜಿಕ ಅಂತರದ ಕ್ರಮಗಳು ಮತ್ತು ಧಾರ್ಮಿಕ ಸಭೆಗಳಿಗೆ ದೊಡ್ಡ ಗುಂಪುಗಳಾಗಿ ಸೇರುವುದನ್ನು ತಪ್ಪಿಸಬೇಕು ಎನ್ನುವ ನಿರ್ದೇಶನವನ್ನು ಹೆಚ್ಚು ಒತ್ತು ನೀಡಿ ತಿಳಿಸಲಾಗಿದೆ.

ಇದುವರೆಗೆ 1637 ದೃಢಪಡಿಸಿದ ಪ್ರಕರಣಗಳು ಮತ್ತು 38 ಸಾವುಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ, 376 ಹೊಸ ದೃಢ ಪಡಿಸಿದ ಪ್ರಕರಣಗಳು ಮತ್ತು 3 ಹೊಸ ಸಾವುಗಳು ವರದಿಯಾಗಿವೆ. 132 ಜನರನ್ನು ಗುಣಪಡಿಸಲಾಗಿದೆ / ಚೇತರಿಸಿಕೊಂಡ ನಂತರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

 


(Release ID: 1610061)