ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಲಾಕ್‌ಡೌನ್ ಅವಧಿಯಲ್ಲಿ ವಿಕಲಚೇತನರಿಗೆ ಕನಿಷ್ಠ ಬೆಂಬಲ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಗೃಹ ವ್ಯವಹಾರಗಳ ಸಚಿವಾಲಯವನ್ನು ವಿಕಲಚೇತನರ ಸಬಲೀಕರಣ ಇಲಾಖೆಯು ಕೋರಿದೆ

Posted On: 28 MAR 2020 12:33PM by PIB Bengaluru

ಲಾಕ್‌ಡೌನ್ ಅವಧಿಯಲ್ಲಿ ವಿಕಲಚೇತನರಿಗೆ ಕನಿಷ್ಠ ಬೆಂಬಲ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಗೃಹ ವ್ಯವಹಾರಗಳ ಸಚಿವಾಲಯವನ್ನು   ವಿಕಲಚೇತನರ ಸಬಲೀಕರಣ ಇಲಾಖೆಯು ಕೋರಿದೆ

 

 

ಲಾಕ್ ಡೌನ್ ಅವಧಿಯಲ್ಲಿ ವಿಕಲಚೇತನರಿಗೆ (ಪಿಡಬ್ಲ್ಯುಡಿ) ಕನಿಷ್ಠ ಬೆಂಬಲ ಸೇವೆಗಳನ್ನು ಖಾತ್ರಿಪಡಿಸಿಕೊಳ್ಳುವಂತೆ ವಿಕಲಚೇತನರ ಸಬಲೀಕರಣ ಇಲಾಖೆ (ಡಿಇಪಿಡಬ್ಲ್ಯುಡಿ) ಮತ್ತು  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗೃಹ ವ್ಯವಹಾರ ಸಚಿವಾಲಯವನ್ನು ಕೋರಿದೆ.

ವಿಕಲಚೇತನ ವ್ಯಕ್ತಿಗಳು ಅಪಾಯದ ಸಂದರ್ಭಗಳಲ್ಲಿ ಬಹಳ ದುರ್ಬಲರಾಗಿರುತ್ತಾರೆ  ಎಂದು ಗೃಹ ಸಚಿವಾಲಯದ ಕಾರ್ಯದರ್ಶಿಯವರಿಗೆ ಡಿಇಪಿಡಬ್ಲ್ಯುಡಿ ಇಲಾಖೆಯು ಪತ್ರದಲ್ಲಿ ಬರೆದಿದೆ.  ಅವರ ಅಂಗವೈಕಲ್ಯದಿಂದಾಗಿ ಅವರಿಗೆ ನಿರಂತರ ಆರೈಕೆ ಮತ್ತು ಬೆಂಬಲ ಬೇಕು. ಅವರಲ್ಲಿ ಹಲವರು ತಮ್ಮ ದೈನಂದಿನ ಚಟುವಟಿಕೆಗಳಿಗೆ / ಜೀವನ ಸಾಗಿಸಲು  ನೋಡಿಕೊಳ್ಳುವವರು, ಕೆಲಸದವರು ಮತ್ತು ಇತರ ಸೇವಾ ಪೂರೈಕೆದಾರರನ್ನು ಅವಲಂಬಿಸಿದ್ದಾರೆ.  ಲಾಕ್‌ಡೌನ್ ಅವಧಿಯಲ್ಲಿ ವಿಕಲಚೇತನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಡಿಇಪಿಡಬ್ಲ್ಯುಡಿ ಹಲವಾರು ಭಾಗಗಳಿಂದ ಹಲವಾರು ಕರೆಗಳನ್ನು ಸ್ವೀಕರಿಸುತ್ತಿದೆ, ಏಕೆಂದರೆ ಅವರ ಸೇವೆ ಮಾಡುತ್ತಿರುವವರು / ಪಾಲನೆ ಮಾಡುವವರು ಈ ಅವಧಿಯಲ್ಲಿ ತಮ್ಮ ಮನೆಗಳನ್ನು ತಲುಪಲು ಕಷ್ಟಪಡುತ್ತಿದ್ದಾರೆ. ಸಾಮಾಜಿಕ ಅಂತರವಿಡುವ ಕ್ರಮಗಳನ್ನು ಅನುಸರಿಸಬೇಕೆನ್ನುವುದನ್ನು ಅಲ್ಲಗಳೆಯುವಂತಿಲ್ಲ, ಆದರೆ ಅದೇ ಸಮಯದಲ್ಲಿ ಜನರ ಓಡಾಟಕ್ಕೆ ಕಠಿಣವಾದ ನಿರ್ಬಂಧಗಳನ್ನು ನೀಡಿದರೆ, ಅಗತ್ಯ ಬೆಂಬಲ ಸೇವೆಗಳಿನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. 

ಆದ್ಯತೆಯ ಆಧಾರದ ಮೇಲೆ ವಿಕಲಚೇತನರ ಆರೈಕೆದಾರರು / ಸೇವೆ ಮಾಡುವವರಿಗೆ  ಪಾಸ್‌ಗಳನ್ನು ನೀಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವಂತೆ ಪತ್ರದಲ್ಲಿ ಕೋರಲಾಗಿದೆ. ಅಗತ್ಯವಿದ್ದರೆ, ತ್ವರಿತ ಪರಿಶೀಲನೆಗಾಗಿ ವಿಕಲಚೇತನರೊಂದಿಗೆ ವ್ಯವಹರಿಸುವ ಜಿಲ್ಲೆಯ ಅಧಿಕಾರಿಗಳ ಸಹಾಯವನ್ನು ಪಡೆಯಬಹುದು. ವಿಕಲಚೇತನರ ಕೋರಿಕೆಯನ್ನು ವಿಳಂಬವಿಲ್ಲದೆ ಪಡೆಯಲು ಸ್ಥಳೀಯ ಪೊಲೀಸರಿಗೆ ತಮ್ಮ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಸೂಚಿಸಬಹುದು.



(Release ID: 1608911) Visitor Counter : 107