ಪ್ರಧಾನ ಮಂತ್ರಿಯವರ ಕಛೇರಿ

ಸುದೀರ್ಘ ಹೋರಾಟಕ್ಕೆ ಜನತಾ ಕರ್ಫ್ಯೂ ಆರಂಭವಷ್ಟೇ : ಪ್ರಧಾನಮಂತ್ರಿ

Posted On: 22 MAR 2020 9:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಸರಣಿ ಟ್ವೀಟ್ ಗಳಲ್ಲಿ ಕೋವಿಡ್-19 ವಿರುದ್ಧ ಸುದೀರ್ಘ ಹೋರಾಟ ಇದೀಗ ಆರಂಭವಾಗಿದೆ ಮತ್ತು ನಾವು ಬಹುದೂರ ಕ್ರಮಿಸಬೇಕಿದೆ ಎಂದು ಹೇಳಿದ್ದಾರೆ. ಜನರು ಜನತಾ ಕರ್ಫ್ಯೂವನ್ನು ಯಶಸ್ಸು ಎಂದು ಪರಿಗಣಿಸಿ, ಸಂಭ್ರಮಾಚರಣೆ ಮಾಡಬಾರದು ಎಂದು ಕೋರಿರುವ ಅವರು, ಜನರು ಗೊಂದಲಕ್ಕೆ ಒಳಗಾಗದಂತೆ ಎಚ್ಚರದಿಂದಿರಬೇಕೆಂದು ಹೇಳಿದ್ದಾರೆ. ಅಲ್ಲದೆ ಅವರು “ಇಂದು ದೇಶವಾಸಿಗಳು ತಾವು ನಿರ್ಧರಿಸಿದರೆ ಎಂತಹುದೇ ದೊಡ್ಡ ಸವಾಲನ್ನಾದರೂ ಒಟ್ಟಾಗಿ ಎದುರಿಸುವ ಸಾಮರ್ಥ್ಯವಿದೆ ಎಂದು ತೋರಿಸಿ ಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.

ಕಾಲ ಕಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸಲಹೆ-ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಅನುಸರಿಸುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ. ಅಲ್ಲದೆ ಎಲ್ಲೆಲ್ಲಿ ಲಾಕ್ ಡೌನ್ ಘೋಷಿಸಲಾಗಿದೆಯೋ ಅಂತಹ ರಾಜ್ಯಗಳು ಮತ್ತು ನಗರಗಳಿಂದ ಜನರು ತಮ್ಮ ಮನೆಗಳಿಂದ ಹೊರಬರಬಾರದು ಎಂದು ಕರೆ ನೀಡಿದ್ದಾರೆ. ತೀರಾ ಅಗತ್ಯವಿಲ್ಲದಿದ್ದರೆ ಮನೆಗಳನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ಅವರು ಕರೆ ನೀಡಿದ್ದಾರೆ.(Release ID: 1607689) Visitor Counter : 54