ಪ್ರಧಾನ ಮಂತ್ರಿಯವರ ಕಛೇರಿ
ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದ ಜನತೆಗೆ ಪ್ರಧಾನಿ ಧನ್ಯವಾದ ‘ಗೆಲುವಿನ ಮೆರವಣಿಗೆಯ ಆರಂಭ’: ಪ್ರಧಾನಿ
प्रविष्टि तिथि:
22 MAR 2020 6:32PM by PIB Bengaluru
ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದ ಜನತೆಗೆ ಪ್ರಧಾನಿ ಧನ್ಯವಾದ
‘ಗೆಲುವಿನ ಮೆರವಣಿಗೆಯ ಆರಂಭ’: ಪ್ರಧಾನಿ
ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಕೃತಜ್ಞತೆ ಸಲ್ಲಿಸಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಯವರು ಸರಣಿ ಟ್ವೀಟ್‌ಗಳಲ್ಲಿ “ಕೊರನವೈರಸ್ ವಿರುದ್ಧದ ಹೋರಾಟವನ್ನು ಮುನ್ನಡೆಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ದೇಶವು ಧನ್ಯವಾದ ಅರ್ಪಿಸಿದೆ. ದೇಶಬಾಂಧವರಿಗೆ ತುಂಬು ಧನ್ಯವಾದಗಳು.” ಎಂದು ಹೇಳಿದ್ದಾರೆ.
COVID-19 ರ ಭೀತಿಯ ವಿರುದ್ಧದ ಸುದೀರ್ಘ ಯುದ್ಧದಲ್ಲಿ ಈ ಘಟನೆಯು ದೇಶದ ವಿಜಯದ ಆರಂಭವನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಜನತೆಯು ಇದೇ ಸಂಕಲ್ಪ ಮತ್ತು ಸಂಯಮದಿಂದ ಸಾಮಾಜಿಕ ದೂರ ಕಾಪಾಡಿಕೊಳ್ಳುವ ತತ್ವಕ್ಕೆ ತಮ್ಮನ್ನು ಬದ್ಧರನ್ನಾಗಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
(रिलीज़ आईडी: 1607687)
आगंतुक पटल : 215
इस विज्ञप्ति को इन भाषाओं में पढ़ें:
English
,
Marathi
,
हिन्दी
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam