ಸಂಪುಟ

ಸ್ವದೇಶ್ ದರ್ಶನ ಯೋಜನೆಯಲ್ಲಿ 2018-19ರ ಸಾಲಿನಲ್ಲಿ ಮಂಜೂರಾದ 10 ಯೋಜನೆಗಳಿಗೆ 627.40 ಕೋಟಿ ರೂ. ಹಣ ನೀಡಿಕೆಗೆ ಸಂಪುಟದ ಅನುಮೋದನೆ ಹೊಸ ಯೋಜನೆಗಳ ಮಂಜೂರಾತಿಗಾಗಿ 2019-20ರ ಅವಧಿಯಲ್ಲಿ ಹೆಚ್ಚುವರಿಯಾಗಿ 1854.6 ಕೋಟಿ ರೂಪಾಯಿ

प्रविष्टि तिथि: 24 DEC 2019 4:24PM by PIB Bengaluru

ಸ್ವದೇಶ್ ದರ್ಶನ ಯೋಜನೆಯಲ್ಲಿ 2018-19ರ ಸಾಲಿನಲ್ಲಿ ಮಂಜೂರಾದ 10 ಯೋಜನೆಗಳಿಗೆ 627.40 ಕೋಟಿ ರೂ. ಹಣ ನೀಡಿಕೆಗೆ ಸಂಪುಟದ ಅನುಮೋದನೆ

ಹೊಸ ಯೋಜನೆಗಳ ಮಂಜೂರಾತಿಗಾಗಿ 2019-20ರ ಅವಧಿಯಲ್ಲಿ ಹೆಚ್ಚುವರಿಯಾಗಿ 1854.6 ಕೋಟಿ ರೂಪಾಯಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸ್ವದೇಶ ದರ್ಶನ ಯೋಜನೆಯಡಿ 2018-19ರ ಸಾಲಿನಲ್ಲಿ ಮಂಜೂರಾಗಿರುವ 10 ಯೋಜನೆಗಳಿಗೆ 627.40 ಕೋಟಿ ರೂಪಾಯಿಗಳವರೆಗೆ ಹಣ ಬಿಡುಗಡೆ ಮಾಡಲು ಮತ್ತು 2019-20ರ ಅವಧಿಯಲ್ಲಿ ಹೊಸ ಯೋಜನೆಗಳ ಮಂಜೂರಾತಿಗಾಗಿ 1854.67 ಕೋಟಿ ರೂಪಾಯಿಗಳಿಗೆ ತನ್ನ ಅನುಮೋದನೆ ನೀಡಿದೆ.

ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ವಿಶ್ವದರ್ಜೆಯ ಪ್ರವಾಸೋದ್ಯಮ ತಾಣಕ್ಕಾಗಿ, ಅತಿ ಮುಖ್ಯವಾದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ದೇಶದಲ್ಲಿ ಸುಸ್ಥಿರ ಮತ್ತು ಸಮಗ್ರ ಸ್ವರೂಪದಲ್ಲಿ ಮೇಕ್ ಇನ್ ಇಂಡಿಯಾ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ.

ಈ ಮುಖ್ಯವಾದ ಮೂಲಸೌಕರ್ಯದ ಅವಕಾಶಗಳು ಆದಾಯ ಹುಟ್ಟಿಸುವ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಪ್ರವಾಸಿಗಳಿಗೆ ಧನಾತ್ಮಕವಾದ ಒಟ್ಟಾರೆ ಅನುಭವ ಹೆಚ್ಚಾಗುತ್ತದೆ, ಜೊತಗೆ ಪ್ರದೇಶದಲ್ಲಿ ಹೆಚ್ಚಿನ ಜನರ ಆಗಮನಕ್ಕೆ ಕಾರಣವಾಗುತ್ತದೆ ಮತ್ತು ಆದಾಯ, ಉದ್ಯೋಗ ಮತ್ತು ಪ್ರಗತಿಗೂ ಕಾರಣವಾಗುತ್ತದೆ.

ಹಿನ್ನೆಲೆ

201-15ರ ಬಜೆಟ್ ಪ್ರಕಟಣೆಗೆ ಅನುಗುಣವಾಗಿ ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ ದರ್ಶನ ಯೋಜನೆಯನ್ನು (ಕೇಂದ್ರ ವಲಯದ ಯೋಜನೆ) 2015ರ ಜನವರಿಯಲ್ಲಿ ಆರಂಭಿಸಿತು. ಈ ಯೋಜನೆಯಡಿಯಲ್ಲಿ 15 ಸರ್ಕ್ಯೂಟ್ ಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಯಿತು. ಅವುಗಳೆಂದರೆ ಹಿಮಾಲಯ ಸರ್ಕ್ಯೂಟ್, ಈಶಾನ್ಯ ಸರ್ಕ್ಯೂಟ್, ಕೃಷ್ಣ ಸರ್ಕ್ಯೂಟ್, ಬೌದ್ಧ ತಾಣಗಳ ಸರ್ಕ್ಯೂಟ್ ಮತ್ತು ಕರಾವಳಿ ಸರ್ಕ್ಯೂಟ್, ಮರುಭೂಮಿ ಸರ್ಕ್ಯೂಟ್, ಗುಡ್ಡಗಾಡು ಸರ್ಕ್ಯೂಟ್, ಪರಿಸರ ಸರ್ಕ್ಯೂಟ್, ವನ್ಯಜೀವಿ ಸರ್ಕ್ಯೂಟ್, ಗ್ರಾಮೀಣ ಸರ್ಕ್ಯೂಟ್, ಆಧ್ಯಾತ್ಮಿಕ ಸರ್ಕ್ಯೂಟ್, ರಾಮಾಯಣ ಸರ್ಕ್ಯೂಟ್, ಪಾರಂಪರಿಕ ಸರ್ಕ್ಯೂಟ್, ತೀರ್ಥಂಕರ ಸರ್ಕ್ಯೂಟ್ ಮತ್ತು ಸೂಫಿ ಸರ್ಕ್ಯೂಟ್.


(रिलीज़ आईडी: 1597499) आगंतुक पटल : 105
इस विज्ञप्ति को इन भाषाओं में पढ़ें: Assamese , Telugu , English , Urdu , हिन्दी , Marathi , Punjabi , Gujarati , Tamil , Malayalam