ಸಂಪುಟ
ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಭಾರತ ಮತ್ತು ಥೈಲ್ಯಾಂಡ್ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
प्रविष्टि तिथि:
12 JUN 2019 8:10PM by PIB Bengaluru
ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಭಾರತ ಮತ್ತು ಥೈಲ್ಯಾಂಡ್ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಥೈಲ್ಯಾಂಡ್ ನಡುವೆ ಖಗೋಳಶಾಸ್ತ್ರ /ಖಭೌತಶಾಸ್ತ್ರ /ವಾಯು ಮಂಡಳ ವಿಜ್ಞಾನ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.
ಈ ತಿಳಿವಳಿಕೆ ಒಪ್ಪಂದವು, ಹೊಸ ವೈಜ್ಞಾನಿಕ ಫಲಿತಾಂಶ, ಮಾನವ ಸಂಪನ್ಮೂಲ ಅಭಿವೃದ್ಧಿ ಮೂಲಕ ಹೆಚ್ಚಿನ ವೈಜ್ಞಾನಿಕ ಸಂವಾದಕ್ಕೆ ಮತ್ತು ತರಬೇತಿಗೆ ಹಾಗೂ ವೈಜ್ಞಾನಿಕ ಮೂಲಸೌಕರ್ಯ ಇತ್ಯಾದಿಗಳ ಜಂಟಿ ಬಳಕೆಗೆ ಇಂಬು ನೀಡುತ್ತದೆ.
ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ನವೆಂಬರ್ ನಲ್ಲಿ ಅಂಕಿತ ಹಾಕಲಾಗಿತ್ತು.
(रिलीज़ आईडी: 1574192)
आगंतुक पटल : 101