ಪ್ರಧಾನ ಮಂತ್ರಿಯವರ ಕಛೇರಿ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಅನಂತ್ ನಾಗ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
16 SEP 2026 6:13PM by PIB Bengaluru
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ನಟ ಶ್ರೀ ಅನಂತ್ ನಾಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀ ಅನಂತ್ ನಾಗ್ ಅವರ ಹಲವು ದಶಕಗಳ ಅವಿರತ ಪ್ರದರ್ಶನ, ಅದ್ಭುತ ಬಹುಮುಖ ಪ್ರತಿಭೆ ಮತ್ತು ಅಮೋಘ ಕಲಾತ್ಮಕತೆಯು ಭಾರತೀಯ ಸಿನಿಮಾದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಈ ಗೌರವವು ಭಾರತೀಯ ಚಿತ್ರರಂಗಕ್ಕೆ ಶ್ರೀ ಅನಂತ್ ನಾಗ್ ಅವರ ಅತ್ಯಂತ ಅರ್ಹವಾದ ಅಪಾರ ಕೊಡುಗೆಯನ್ನು ಪ್ರತಿಬಿಂಬಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ಅವರು ಮಹಾನ್ ಕಲಾವಿದರಾದ ಅನಂತ್ ನಾಗ್ ಅವರಿಗೆ ಶುಭ ಹಾರೈಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ನಟರಾದ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಹಲವು ದಶಕಗಳಿಂದ, ಅವರ ನಿರಂತರ ಅಭಿನಯ, ಅಮೋಘ ಬಹುಮುಖ ಪ್ರತಿಭೆ ಮತ್ತು ಕಲಾತ್ಮಕತೆಯು ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಅವರು ಅಭಿನಯಿಸಿದ ಎಲ್ಲಾ ಪಾತ್ರಗಳಲ್ಲೂ ತಮ್ಮ ಅಪರೂಪದ ಆಳವಾದ ನೈಜತೆಯ ಭಾವ ತುಂಬಿದ್ದರು.
ಇದು ದಿಗ್ಗಜ ಕಲಾವಿರಿಗೆ ನಿಜಕ್ಕೂ ಸಲ್ಲಬೇಕಾದ ಅತ್ಯಂತ ಅರ್ಹ ಗೌರವವಾಗಿದೆ.
*****
(ಪ್ರಕಟಣೆ ಐ.ಡಿ.: 2311171)
ವಿಸಿಟರ್ ಕೌಂಟರ್ : 48