ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸೆಮಿಕಾನ್ 2.0 ಕುರಿತು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು


ಸೆಮಿಕಾನ್ 2.0 ರ ಎಲ್ಲಾ 6 ಸ್ತಂಭಗಳಿಗೆ ಅಧಿಸೂಚನೆಗಳನ್ನು ಹೊರಡಿಸಲಾಗಿದೆ

10 ವರ್ಷಗಳ ಗುರಿಗೆ ಬದಲಾಗಿ ಭಾರತವು ನಾಲ್ಕು ವರ್ಷಗಳಲ್ಲಿಯೇ 85,000 ಸೆಮಿಕಂಡಕ್ಟರ್ ಎಂಜಿನಿಯರ್‌ ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸಾಧಿಸಿದೆ: ಅಶ್ವಿನಿ ವೈಷ್ಣವ್

ಮುಂಬರುವ ವರ್ಷಗಳಲ್ಲಿ ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಮಾರುಕಟ್ಟೆಯ ಸುಮಾರು ಶೇ.10 ರಷ್ಟು ಭಾರತದಲ್ಲಿರಲಿದೆ: ಅಶ್ವಿನಿ ವೈಷ್ಣವ್

ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ವಿದ್ಯಾರ್ಥಿಗಳು 250ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಚಿಪ್‌ ಗಳನ್ನು ವಿನ್ಯಾಸಗೊಳಿಸಿದ್ದಾರೆ: ಅಶ್ವಿನಿ ವೈಷ್ಣವ್

ಪ್ರಕಟಣಾ ದಿನಾಂಕ: 31 AUG 2026 4:12PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸರ್ಕಾರದ ದೃಷ್ಟಿಕೋನವನ್ನು ವಿವರಿಸಿದರು. ಈ ಸಂದರ್ಭದಲ್ಲಿ, ಸೆಮಿಕಾನ್ 2.0 ಯೋಜನೆಯ ಎಲ್ಲಾ ಆರು ಸ್ತಂಭಗಳಿಗೆ ಅಧಿಸೂಚನೆಗಳನ್ನು ಹೊರಡಿಸಲಾಯಿತು, ಇದು ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಈ ಯೋಜನೆಯು ಮೊದಲ 'ಸೆಮಿಕಾನ್ ಇಂಡಿಯಾ ಕಾರ್ಯಕ್ರಮ'ದಿಂದ ಪಡೆದ ವೇಗವನ್ನು ಆಧರಿಸಿದೆ ಮತ್ತು ಚಿಪ್ ವಿನ್ಯಾಸ, ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್‌ ನಿಂದ ಉಪಕರಣಗಳು, ಸಾಮಗ್ರಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಪ್ರತಿಭಾ ವಿಕಸನದವರೆಗೆ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ಹಣಕಾಸು ಮತ್ತು ಮೂಲಸೌಕರ್ಯ ಬೆಂಬಲವನ್ನು ಒದಗಿಸುತ್ತದೆ.

ಸೆಮಿಕಂಡಕ್ಟರ್ ಪೂರೈಕೆ-ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಮೂಲಕ ಮತ್ತು ನಿರ್ಣಾಯಕ ವಲಯಗಳಲ್ಲಿ ತಾಂತ್ರಿಕ ನಾಯಕತ್ವವನ್ನು ಸ್ಥಾಪಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದು 10 ವರ್ಗಗಳನ್ನು ಒಳಗೊಂಡಿರುವ ಆರು ಸ್ತಂಭಗಳ ಮೂಲಕ ಕಾರ್ಯನಿರ್ವಹಿಸುತ್ತದೆ.

ಸೆಮಿಕಾನ್ 2.0 ಅಡಿಯಲ್ಲಿರುವ ಆರು ಸ್ತಂಭಗಳು:

• ಸ್ತಂಭ 1 - ವಿನ್ಯಾಸ

• ಸ್ತಂಭ 2 - ಯಂತ್ರಗಳು ಮತ್ತು ಸಾಮಗ್ರಿಗಳು

• ಸ್ತಂಭ 3 - ಹೆಚ್ಛು ಫ್ಯಾಬ್‌ ಗಳನ್ನು ಸ್ಥಾಪನೆ

• ಸ್ತಂಭ 4 - ATMP/OSAT ಉದ್ಯಮವನ್ನು ಮತ್ತಷ್ಟು ಬಲಪಡಿಸುವುದು

• ಸ್ತಂಭ 5 - ಸಂಶೋಧನೆ ಮತ್ತು ಅಭಿವೃದ್ಧಿ

• ಸ್ತಂಭ 6 - ಪ್ರತಿಭಾ ವಿಕಸನ

ಸ್ತಂಭ 1 - ವಿನ್ಯಾಸ:

ವರ್ಗಗಳು: ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಕಾರ್ಯತಂತ್ರದ ಆದ್ಯತೆಗಳಿಗಾಗಿ ಸೆಮಿಕಂಡಕ್ಟರ್ ಐಪಿಗಳು, ಚಿಪ್‌ ಗಳು, ಸಿಸ್ಟಮ್-ಆನ್-ಚಿಪ್‌ ಗಳು ಮತ್ತು ಮಾಡ್ಯೂಲ್‌ ಗಳ ವಿನ್ಯಾಸ; ವಾಣಿಜ್ಯ ವಲಯಕ್ಕಾಗಿ ಸೆಮಿಕಂಡಕ್ಟರ್ ಐಪಿಗಳು, ಚಿಪ್‌ ಗಳು ಮತ್ತು ಸಿಸ್ಟಮ್-ಆನ್-ಚಿಪ್‌ ಗಳ ವಿನ್ಯಾಸ; ಮತ್ತು ನಿಯೋಜನೆಗಾಗಿ ಸೆಮಿಕಂಡಕ್ಟರ್ ಐಪಿಗಳು/ಚಿಪ್‌ಗಳು/ ಸಿಸ್ಟಮ್-ಆನ್-ಚಿಪ್‌ ಗಳಿಗೆ ನಿಯೋಜನೆ ಆಧಾರಿತ ಪ್ರೋತ್ಸಾಹಧನ (ಡಿ ಎಲ್‌ ಐ).

ಸ್ತಂಭ 2 - ಯಂತ್ರಗಳು ಮತ್ತು ಸಾಮಗ್ರಿಗಳು:

ವರ್ಗ: ಸೆಮಿಕಂಡಕ್ಟರ್ ತಯಾರಿಕಾ ಪರಿಸರ ವ್ಯವಸ್ಥೆ.

ಸ್ತಂಭ 3 - ಹೆಚ್ಚು ಫ್ಯಾಬ್‌ ಗಳನ್ನು ಸ್ಥಾಪಿಸುವುದು:

ವರ್ಗಗಳು: ಸಿಲಿಕಾನ್ ಸೆಮಿಕಂಡಕ್ಟರ್ ವೇಫರ್ ಫ್ಯಾಬ್‌ ಗಳು; ಕಾಂಪೌಂಡ್ ಸೆಮಿಕಂಡಕ್ಟರ್‌ ಗಳು/ಫೋಟೋನಿಕ್ಸ್/ಸೆನ್ಸಾರ್‌ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್/ಡಿಸ್ಕ್ರೀಟ್ ಸೆಮಿಕಂಡಕ್ಟರ್‌ ಗಳ ಫ್ಯಾಬ್; ಮತ್ತು ಡಿಸ್ಪ್ಲೇ ಫ್ಯಾಬ್‌‌ ಗಳು.

ಸ್ತಂಭ 4 - ATMP/OSAT ಉದ್ಯಮವನ್ನು ಮತ್ತಷ್ಟು ಬಲಪಡಿಸುವುದು:

ವರ್ಗ: ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ATMP) / ಹೊರಗುತ್ತಿಗೆ ಆಧಾರಿತ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯ.

ಸ್ತಂಭ 5 - ಸಂಶೋಧನೆ ಮತ್ತು ಅಭಿವೃದ್ಧಿ:

ವರ್ಗ: ಸುಧಾರಿತ ಸೆಮಿಕಂಡಕ್ಟರ್ ತಂತ್ರಜ್ಞಾನಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ

ಸ್ತಂಭ 6 - ಪ್ರತಿಭಾ ವಿಕಸನ:

ವರ್ಗ: ಪ್ರತಿಭಾ ವಿಕಸನ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, "ಭಾರತವು 10 ವರ್ಷಗಳ ಅವಧಿಯಲ್ಲಿ 85,000 ಸೆಮಿಕಂಡಕ್ಟರ್ ಎಂಜಿನಿಯರ್‌ ಗಳನ್ನು ಅಭಿವೃದ್ಧಿಪಡಿಸುವ ತನ್ನ ಗುರಿಯನ್ನು ಕೇವಲ ನಾಲ್ಕು ವರ್ಷಗಳಲ್ಲಿ ಸಾಧಿಸಿದೆ ಮತ್ತು ಈಗ ಇನ್ನೂ ಒಂದು ಲಕ್ಷ ಎಂಜಿನಿಯರ್‌ ಗಳನ್ನು ಅಭಿವೃದ್ಧಿಪಡಿಸುವ ಹೊಸ ಗುರಿಯನ್ನು ನಿಗದಿಪಡಿಸಲಾಗಿದೆ. ಮುಂಬರುವ ವರ್ಷಗಳಲ್ಲಿ, ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಮಾರುಕಟ್ಟೆಯ ಸುಮಾರು ಶೇ.10 ರಷ್ಟು ಭಾಗವು ಭಾರತದಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ವಿದ್ಯಾರ್ಥಿಗಳು ಈಗಾಗಲೇ 250 ಕ್ಕೂ ಹೆಚ್ಚು ಚಿಪ್‌ ಗಳನ್ನು ವಿನ್ಯಾಸಗೊಳಿಸಿದ್ದಾರೆ. ಒಂದು ಪ್ರಕರಣದಲ್ಲಿ, ಭೂಮಿಪೂಜೆಯಾದ ಕೇವಲ 13 ತಿಂಗಳೊಳಗೆ ವಾಣಿಜ್ಯೋತ್ಪಾದನೆ ಪ್ರಾರಂಭವಾಯಿತು, ಹಾಗೆಯೇ ಹಲವಾರು ಪ್ರಕರಣಗಳಲ್ಲಿ 200 ದಿನಗಳು, 150 ದಿನಗಳು ಮತ್ತು 90 ದಿನಗಳ ಒಳಗಾಗಿಯೇ ಅನುಮೋದನೆಗಳನ್ನು ನೀಡಲಾಗಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು 50,000-60,000 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ" ಎಂದು ಹೇಳಿದರು.

ಸೆಮಿಕಾನ್ 2.0 ಅಡಿಯಲ್ಲಿ ಬೆಂಬಲಿತ ಯೋಜನೆಗಳು ಸಾಮಾನ್ಯವಾಗಿ ಆರು ವರ್ಷಗಳವರೆಗಿನ ಅವಧಿಯನ್ನು ಹೊಂದಿರುತ್ತವೆ, ಆದರೆ ಈ ಯೋಜನೆಯು ಆರಂಭದಲ್ಲಿ ಮೂರು ವರ್ಷಗಳ ಕಾಲ ಅರ್ಜಿ ಸಲ್ಲಿಕೆಗೆ ತೆರೆದಿರುತ್ತದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐ ಎಸ್‌ ಎಂ) ಸೆಮಿಕಾನ್ 2.0 ರ ನೋಡಲ್ ಏಜೆನ್ಸಿಯಾಗಿರುತ್ತದೆ. ಇದು ಅರ್ಜಿಗಳನ್ನು ಆಹ್ವಾನಿಸುತ್ತದೆ, ತಾಂತ್ರಿಕ ಮತ್ತು ಹಣಕಾಸು ಮೌಲ್ಯಮಾಪನವನ್ನು ಕೈಗೊಳ್ಳುತ್ತದೆ, ಅರ್ಜಿದಾರರನ್ನು ಶಿಫಾರಸು ಮಾಡುತ್ತದೆ ಮತ್ತು ಅನುಷ್ಠಾನದ ಮೇಲ್ವಿಚಾರಣೆ ನಡೆಸುತ್ತದೆ. C-DAC ನೆರವಿನೊಂದಿಗೆಐ ಎಸ್‌ ಎಂ ವಿನ್ಯಾಸ ಮತ್ತು ನಿಯೋಜನೆ ವರ್ಗಗಳನ್ನು ಅನುಷ್ಠಾನಗೊಳಿಸಬಹುದು. ನಿರ್ದಿಷ್ಟ ಕ್ಷೇತ್ರಗಳಲ್ಲಿನ ನಾವೀನ್ಯತೆಯನ್ನು ಉತ್ತೇಜಿಸಲು ಮಿಷನ್ 2026ರಿಂದ ಸೆಮಿಕಂಡಕ್ಟರ್ ಡೀಪ್-ಟೆಕ್ ಪ್ರಶಸ್ತಿಗಳನ್ನು ಸಹ ಘೋಷಿಸಬಹುದು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹಣಕಾಸಿನ ನೆರವಿಗಾಗಿ ಬಜೆಟ್ ನಿಬಂಧನೆಗಳನ್ನು ಮಾಡುತ್ತದೆ, ಅನುಮೋದಿತ ಷರತ್ತುಗಳಿಗೆ ಅನುಗುಣವಾಗಿ ನೋಡಲ್ ಏಜೆನ್ಸಿಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಮತ್ತು ಮಾರ್ಪಾಡುಗಳು ಅಥವಾ ಮುಂದುವರಿಕೆಯನ್ನು ಪರಿಗಣಿಸಲು ಅನುಷ್ಠಾನದ ಮೂರು ವರ್ಷಗಳ ನಂತರ ಅಥವಾ ಅಗತ್ಯಕ್ಕೆ ಅನುಗುಣವಾಗಿ ಮಧ್ಯಂತರ ಮೌಲ್ಯಮಾಪನವನ್ನು ನಡೆಸಲಾಗುತ್ತದೆ.

For the notification, you can visit Semicon 2.0

You can watch the Press Conference here

 

*****

 


(ಪ್ರಕಟಣೆ ಐ.ಡಿ.: 2305112) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Bengali-TR , Gujarati , Tamil , Telugu