ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿ ಹೊಸ ಸಮುದಾಯ ರೇಡಿಯೋ ಕೇಂದ್ರಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಲು ಮುಖ್ಯ ಕಾರ್ಯದರ್ಶಿಗಳು ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳಿಗೆ ಮನವಿ; ಪ್ರವಾಹ, ಭೂಕಂಪ ಮತ್ತು ಸಿಡಿಲಿನಿಂದ ಹಾನಿಗೊಳಗಾದ ಕೇಂದ್ರಗಳಿಗೆ ₹11.50 ಲಕ್ಷದ ತುರ್ತು ಅನುದಾನ ಲಭ್ಯ

प्रविष्टि तिथि: 07 AUG 2026 3:31PM by PIB Bengaluru

ಭಾರತದಲ್ಲಿ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸುವ ನೀತಿ ಮಾರ್ಗಸೂಚಿಗಳ ಪ್ರಕಾರ, ಸಮುದಾಯ ರೇಡಿಯೋ ಪ್ರಸಾರದ ಮೂಲ ಉದ್ದೇಶವು ಸಮುದಾಯ ರೇಡಿಯೋ ಕೇಂದ್ರದ (ಸಿ ಆರ್ ಎಸ್) ಸೇವಾ ವ್ಯಾಪ್ತಿಯಲ್ಲಿ ವಾಸಿಸುವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುವುದಾಗಿದೆ.

ಜೊತೆಗೆ, ನೀತಿ ಮಾರ್ಗಸೂಚಿಗಳ ಅಡಿಯಲ್ಲಿ, ನೈಸರ್ಗಿಕ ತುರ್ತು ಪರಿಸ್ಥಿತಿಗಳು, ನೈಸರ್ಗಿಕ ವಿಕೋಪಗಳು, ಸಾರ್ವಜನಿಕ ಹಿತಾಸಕ್ತಿ ಅಥವಾ ಅಂತಹ ಪರಿಸ್ಥಿತಿಗಳಿಂದ ಉದ್ಭವಿಸುವ ಆಕಸ್ಮಿಕಗಳನ್ನು ಎದುರಿಸಲು ಅಗತ್ಯವೆಂದು ಪರಿಗಣಿಸಲಾದ ಯಾವುದೇ ವಿಶೇಷ ಸಂದೇಶವನ್ನು ಪ್ರಸಾರ ಮಾಡಲು ಸಮುದಾಯ ರೇಡಿಯೋ ಕೇಂದ್ರಗಳಿಗೆ ನಿರ್ದೇಶಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ ಮತ್ತು ಅನುಮತಿ ಹೊಂದಿರುವವರು ಇಂತಹ ನಿರ್ದೇಶನಗಳನ್ನು ಪಾಲಿಸಲು ಬದ್ಧರಾಗಿರುತ್ತಾರೆ.

ಸಾರ್ವಜನಿಕ ಸೌಲಭ್ಯಗಳು, ನೈಸರ್ಗಿಕ ವಿಕೋಪಗಳು, ಆರೋಗ್ಯಕ್ಕೆ ಸಂಬಂಧಿಸಿದ ಎಚ್ಚರಿಕೆಗಳು ಮತ್ತು ಸ್ಥಳೀಯ ಆಡಳಿತ ಒದಗಿಸುವ ಇತರ ಮಾಹಿತಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಕಟಣೆಗಳನ್ನು ಪ್ರಸಾರ ಮಾಡಲು ಸಹ ನೀತಿ ಮಾರ್ಗಸೂಚಿಗಳು ಸಮುದಾಯ ರೇಡಿಯೋ ಕೇಂದ್ರಗಳಿಗೆ ಅನುಮತಿ ನೀಡುತ್ತವೆ.

ಅದರಂತೆ, ನೈಸರ್ಗಿಕ ವಿಕೋಪಗಳು ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಸಕಾಲಿಕ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಸಮುದಾಯ ರೇಡಿಯೋ ಕೇಂದ್ರಗಳು (ಸಿ ಅರ್ ಎಸ್) ಪ್ರಮುಖ ಪಾತ್ರ ವಹಿಸುತ್ತವೆ.

ಇದಲ್ಲದೆ, ಸ್ಥಳೀಯ ಸಮುದಾಯಗಳ ಮಾಹಿತಿ ಅಗತ್ಯಗಳನ್ನು ಪೂರೈಸುವಲ್ಲಿ, ವಿಶೇಷವಾಗಿ ಪ್ರವಾಹ ಪೀಡಿತ, ಕರಾವಳಿ ಮತ್ತು ಇತರ ವಿಪತ್ತು ಸಂಭವನೀಯ ಪ್ರದೇಶಗಳಲ್ಲಿ ಹಿಂದೆ ಸಮುದಾಯ ರೇಡಿಯೋ ಕೇಂದ್ರಗಳಿಂದಾದ ಉಪಯುಕ್ತತೆಯನ್ನು ಪರಿಗಣಿಸಿ, ಸಚಿವಾಲಯವು ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕಂದಾಯ ಹಾಗೂ ವಿಪತ್ತು ನಿರ್ವಹಣಾ ಇಲಾಖೆಗಳ ಆಡಳಿತಾತ್ಮಕ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ವಿಪತ್ತು ಸಂಬಂಧಿತ ಮಾಹಿತಿಯನ್ನು ಪ್ರಸಾರ ಮಾಡಲು ಈ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಳ್ಳಲು ಮತ್ತು ಅಂತಹ ಪ್ರದೇಶಗಳಲ್ಲಿ ಹೊಸ ಸಮುದಾಯ ರೇಡಿಯೋ ಕೇಂದ್ರಗಳ ಸ್ಥಾಪನೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿನಂತಿಸಿದೆ.

"ಭಾರತದಲ್ಲಿ ಸಮುದಾಯ ರೇಡಿಯೋ ಚಳವಳಿಗೆ ಬೆಂಬಲ"  ಎನ್ನುವ ಕೇಂದ್ರ ವಲಯದ ಯೋಜನೆಯಡಿಯಲ್ಲಿ ಸಮುದಾಯ ರೇಡಿಯೋ ಕೇಂದ್ರಗಳಿಗೆ ಬೆಂಬಲ ನೀಡಲಾಗುತ್ತಿದ್ದು, ಇದನ್ನು ₹50 ಕೋಟಿ ವೆಚ್ಚದೊಂದಿಗೆ 2026-27 ರಿಂದ 2030-31ರ ಅವಧಿಗೆ ಮುಂದುವರಿಸಲು ಅನುಮೋದಿಸಲಾಗಿದೆ. ಈ ಯೋಜನೆಯು ಸಮುದಾಯ ರೇಡಿಯೋ ಕೇಂದ್ರಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಅಗತ್ಯವಿರುವ ಉಪಕರಣಗಳ ಖರೀದಿ ಅಥವಾ ಬದಲಿಗಾಗಿ ಹಣಕಾಸಿನ ನೆರವು ನೀಡುವ ಮೂಲಕ ಹೊಸ ಮತ್ತು ಅಸ್ತಿತ್ವದಲ್ಲಿರುವ ಸಮುದಾಯ ರೇಡಿಯೋ ಕೇಂದ್ರಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ತುರ್ತು ಪರಿಸ್ಥಿತಿಗಳಲ್ಲಿ ಪ್ರಸಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಯುಪಿಎಸ್, ಜನರೇಟರ್ ಗಳು ಮತ್ತು ಸೌರಶಕ್ತಿಯ ಬ್ಯಾಕಪ್ ಪವರ್ ಉಪಕರಣಗಳು ಸಹ ಇದರಲ್ಲಿ ಸೇರಿವೆ.

ಈ ಯೋಜನೆಯು ಪ್ರವಾಹ, ಸಿಡಿಲು, ಭೂಕಂಪ ಇತ್ಯಾದಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ರೇಡಿಯೋ ಕೇಂದ್ರಗಳಿಗೆ ₹11.50 ಲಕ್ಷದ ತುರ್ತು ಅನುದಾನಕ್ಕೂ ಅವಕಾಶ ಒದಗಿಸುತ್ತದೆ.

ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ಇಂದು ರಾಜ್ಯಸಭೆಯಲ್ಲಿ ಶ್ರೀ ಕಾನದ್  ಪುರಕಾಯಸ್ಥ, ಶ್ರೀ ಮನನ್ ಕುಮಾರ್ ಮಿಶ್ರಾ, ಶ್ರೀಮತಿ ಸೀಮಾ ದ್ವಿವೇದಿ, ಶ್ರೀ ಶಂಭು ಶರಣ್ ಪಟೇಲ್, ಶ್ರೀಮತಿ ಸಾಧನಾ ಸಿಂಗ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರವಾಗಿ ನೀಡಿದರು.

 

*****


(रिलीज़ आईडी: 2296022) आगंतुक पटल : 26
इस विज्ञप्ति को इन भाषाओं में पढ़ें: Assamese , English , Khasi , Urdu , हिन्दी , Bengali , Bengali-TR , Tamil , Telugu , Malayalam