ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದ ಇಂಟರ್ ನೆಟ್ ಅನ್ನು ಕಾನೂನುಬಾಹಿರ ಮತ್ತು ಅಶ್ಲೀಲ ವಿಷಯಗಳಿಂದ ಮುಕ್ತವಾಗಿರಿಸಲು ಹಾಗೂ ಸುರಕ್ಷಿತ ಮತ್ತು ವಿಶ್ವಾಸಾರ್ಹ ಡಿಜಿಟಲ್ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ


ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಎನ್‌ ಸಿ ಆರ್‌ ಪಿ) ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳ ರಹಸ್ಯ ವರದಿಗೆ ಅವಕಾಶ ನೀಡುತ್ತದೆ; ' ಶಂಕಿತರನ್ನು ವರದಿ ಮಾಡಿ ಮತ್ತು ಪರಿಶೀಲಿಸಿ' ವ್ಯವಸ್ಥೆಯು ಡೀಪ್‌ ಫೇಕ್‌ ಗಳು ಸೇರಿದಂತೆ ಅನುಮಾನಾಸ್ಪದ ಡಿಜಿಟಲ್ ಘಟಕಗಳನ್ನು ವರದಿ ಮಾಡಲು ನಾಗರಿಕರಿಗೆ ಸಹಾಯ ಮಾಡುತ್ತದೆ

प्रविष्टि तिथि: 05 AUG 2026 5:08PM by PIB Bengaluru

ಸರ್ಕಾರದ ನೀತಿಗಳು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ತನ್ನ ಬಳಕೆದಾರರಿಗೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆಯುಳ್ಳ ಇಂಟರ್ ನೆಟ್ ಅನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ. ಭಾರತದಲ್ಲಿನ ಇಂಟರ್ ನೆಟ್ ಯಾವುದೇ ರೀತಿಯ ಕಾನೂನುಬಾಹಿರ ವಿಷಯ ಅಥವಾ ಮಾಹಿತಿಯಿಂದ, ವಿಶೇಷವಾಗಿ ಅಸಭ್ಯ ಮತ್ತು ಅಶ್ಲೀಲ ವಿಷಯಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ, 2000 (ಐಟಿ ಕಾಯಿದೆ) ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು) ಒಟ್ಟಾಗಿ ಡಿಜಿಟಲ್ ಜಾಗದಲ್ಲಿ ಕಾನೂನುಬಾಹಿರ ಮತ್ತು ಹಾನಿಕಾರಕ ವಿಷಯವನ್ನು ಎದುರಿಸಲು ಸಮಗ್ರ ಚೌಕಟ್ಟನ್ನು ಒದಗಿಸುತ್ತವೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯವರ್ತಿಗಳ ಮೇಲೆ ಸ್ಪಷ್ಟ ಬಾಧ್ಯತೆಗಳನ್ನು ವಿಧಿಸುತ್ತವೆ.

ಐಟಿ ನಿಯಮಗಳು, 2021 ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಸೇರಿದಂತೆ ಮಧ್ಯವರ್ತಿಗಳ ಮೇಲೆ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಬಾಧ್ಯತೆಗಳನ್ನು ವಿಧಿಸುತ್ತದೆ. ತಮ್ಮ ಕಂಪ್ಯೂಟರ್ ಸಂಪನ್ಮೂಲಗಳ ಬಳಕೆದಾರರು ಅಶ್ಲೀಲ, ಪೋರ್ನೋಗ್ರಾಫಿಕ್, ಪೆಡೋಫಿಲಿಕ್, ಮಗುವಿಗೆ ಹಾನಿಕರವಾದ, ಗೌಪ್ಯತೆಯನ್ನು ಅತಿಕ್ರಮಿಸುವ, ಲಿಂಗದ ಆಧಾರದ ಮೇಲೆ ನಿಂದನೆ ಅಥವಾ ಕಿರುಕುಳ ನೀಡುವ ಅಥವಾ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುವ ಮಾಹಿತಿಯನ್ನು ಹೋಸ್ಟ್ ಮಾಡದಂತೆ, ಪ್ರದರ್ಶಿಸದಂತೆ, ಅಪ್‌ಲೋಡ್ ಮಾಡದಂತೆ, ಮಾರ್ಪಡಿಸದಂತೆ, ಪ್ರಕಟಿಸದಂತೆ, ರವಾನಿಸದಂತೆ, ಶೇಖರಿಸದಂತೆ, ನವೀಕರಿಸದಂತೆ ಅಥವಾ ಹಂಚಿಕೊಳ್ಳದಂತೆ ನೋಡಿಕೊಳ್ಳಲು ಅವರು ಸೂಕ್ತ ಪ್ರಯತ್ನಗಳನ್ನು ಮಾಡಬೇಕು. ಐಟಿ ನಿಯಮಗಳು, 2021ರಲ್ಲಿ ಒದಗಿಸಲಾದ ಕಾನೂನು ಬಾಧ್ಯತೆಗಳನ್ನು ಪಾಲಿಸುವಲ್ಲಿ ಮಧ್ಯವರ್ತಿಗಳು ವಿಫಲವಾದರೆ, ಅವರು ಐಟಿ ಕಾಯಿದೆಯ ಸೆಕ್ಷನ್ 79ರ ಅಡಿಯಲ್ಲಿ ಒದಗಿಸಲಾದ ತೃತೀಯ ಪಕ್ಷದ ಮಾಹಿತಿಯ ವಿನಾಯಿತಿಯನ್ನು ಕಳೆದುಕೊಳ್ಳುತ್ತಾರೆ. ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ಒದಗಿಸಲಾದ ಪರಿಣಾಮಕಾರಿ ಕ್ರಮ ಅಥವಾ ಕಾನೂನು ಕ್ರಮಕ್ಕೆ ಅವರು ಹೊಣೆಗಾರರಾಗುತ್ತಾರೆ.

10 ಫೆಬ್ರವರಿ 2026 ರಂದು, ಡೀಪ್‌ ಫೇಕ್‌ ಗಳು ಮತ್ತು ಎಐ-ಸೃಷ್ಟಿತ ವಿಷಯಗಳು ಸೇರಿದಂತೆ ಕೃತಕವಾಗಿ ಸೃಷ್ಟಿಸಲಾದ ಮಾಹಿತಿಯಿಂದ (ಎಸ್‌ ಜಿ ಐ) ಉಂಟಾಗುವ ಹಾನಿಗಳನ್ನು ತಡೆಯಲು ಐಟಿ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರವು ನಿಯಂತ್ರಣ ಚೌಕಟ್ಟನ್ನು ಬಲಪಡಿಸಿತು.

ತಿದ್ದುಪಡಿಗಳ ಪ್ರಕಾರ, ಅಶ್ಲೀಲ, ದಾರಿ ತಪ್ಪಿಸುವ, ವ್ಯಕ್ತಿಗಳ ನಕಲು ಮಾಡುವ ಅಥವಾ ಮಕ್ಕಳಿಗೆ ಹಾನಿಕಾರಕವಾದ ವಿಷಯಗಳನ್ನು ಒಳಗೊಂಡಂತೆ ಕಾನೂನುಬಾಹಿರ ಎಐ-ಸೃಷ್ಟಿತ ವಿಷಯಗಳ ನಿರ್ಮಾಣ ಮತ್ತು ಪ್ರಸಾರವನ್ನು ತಡೆಯಲು ಮಧ್ಯವರ್ತಿಗಳು ಮತ್ತು ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳು ಸೂಕ್ತ ತಾಂತ್ರಿಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023, ಅಥವಾ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೋ) ಯಂತಹ ವರದಿ ಮಾಡುವುದನ್ನು ಕಡ್ಡಾಯಗೊಳಿಸುವ ಕಾನೂನುಗಳ ಅಡಿಯಲ್ಲಿನ ಸಂಬಂಧಿತ ಅಪರಾಧಗಳ ಬಗ್ಗೆ ಸೂಕ್ತ ಪ್ರಾಧಿಕಾರಗಳಿಗೆ ವರದಿ ಮಾಡಲು ಸಹ ವೇದಿಕೆಗಳು ಬದ್ಧವಾಗಿವೆ.

ಎಲ್ಲಾ ರೀತಿಯ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಘಟನೆಗಳನ್ನು ಸಾರ್ವಜನಿಕರು ವರದಿ ಮಾಡಲು ಅನುಕೂಲವಾಗುವಂತೆ 'ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ'ದ (I4C) ಭಾಗವಾಗಿ 'ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್' (ಎನ್‌ ಸಿ ಆರ್‌ ಪಿ) (https://cybercrime.gov.in) ಅನ್ನು ಪ್ರಾರಂಭಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳನ್ನು ಅನಾಮಧೇಯವಾಗಿ ವರದಿ ಮಾಡುವ ನಿಬಂಧನೆಗಳನ್ನು ಎನ್‌ ಸಿ ಆರ್‌ ಪಿ ಒಳಗೊಂಡಿದೆ. "ಮಹಿಳೆ/ಮಕ್ಕಳಿಗೆ ಸಂಬಂಧಿಸಿದ ಅಪರಾಧವನ್ನು ವರದಿ ಮಾಡಿ" ಮಾಡ್ಯೂಲ್ ಅಡಿಯಲ್ಲಿ, ದೂರುದಾರರು "ಅನಾಮಧೇಯವಾಗಿ ವರದಿ ಮಾಡಿ" ಆಯ್ಕೆಯನ್ನು ಆರಿಸಿಕೊಳ್ಳಬಹುದು, ಇದು ವೈಯಕ್ತಿಕ ಗುರುತಿನ ವಿವರಗಳನ್ನು ಬಹಿರಂಗಪಡಿಸದೆ ದೂರುಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ಅನುಮಾನಾಸ್ಪದ ವೆಬ್‌ಸೈಟ್ ಯು ಆರ್‌ ಎಲ್‌ ಗಳು, ವಾಟ್ಸಾಪ್ ಸಂಖ್ಯೆಗಳು/ಟೆಲಿಗ್ರಾಂ ಹ್ಯಾಂಡಲ್‌ ಗಳು, ಫೋನ್ ಸಂಖ್ಯೆಗಳು, ಇಮೇಲ್ ಐಡಿಗಳು, ಎಸ್‌ ಎಮ್‌ ಎಸ್ ಹೆಡರ್‌ ಗಳು/ಸಂಖ್ಯೆಗಳು, ಡೀಪ್‌ ಫೇಕ್‌ ಮತ್ತು ಸಾಮಾಜಿಕ ಮಾಧ್ಯಮ ಯು ಆರ್‌ ಎಲ್‌ ಗಳನ್ನು ವರದಿ ಮಾಡಲು ನಾಗರಿಕರಿಗೆ ಅನುವು ಮಾಡಿಕೊಡಲು ಎನ್‌ ಸಿ ಆರ್‌ ಪಿ 'ಶಂಕಿತರನ್ನು ವರದಿ ಮಾಡಿ ಮತ್ತು ಪರಿಶೀಲಿಸಿ' ಎಂಬ ಮಾಡ್ಯೂಲ್ ಅನ್ನು ಪರಿಚಯಿಸಿದೆ.

ಸೈಬರ್ ಫೊರೆನ್ಸಿಕ್-ಕಮ್-ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು, ಕಿರಿಯ ಸೈಬರ್ ಸಲಹೆಗಾರರನ್ನು ನೇಮಿಸಿಕೊಳ್ಳುವುದು ಮತ್ತು ಕಾನೂನು ಜಾರಿ ಸಂಸ್ಥೆಗಳ ಸಿಬ್ಬಂದಿ, ಸಾರ್ವಜನಿಕ ಅಭಿಯೋಜಕರು ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡುವಂತಹ ಸಾಮರ್ಥ್ಯ ವೃದ್ಧಿಗಾಗಿ ಸರ್ಕಾರವು 'ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧ ತಡೆ' (ಸಿಸಿಪಿಡಬ್ಲೂಸಿ) ಯೋಜನೆಯಡಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ₹132.93 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಿದೆ. 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ಫೊರೆನ್ಸಿಕ್-ಕಮ್-ತರಬೇತಿ ಪ್ರಯೋಗಾಲಯಗಳನ್ನು ಆರಂಭಿಸಲಾಗಿದ್ದು, 24,600 ಕ್ಕೂ ಹೆಚ್ಚು ಕಾನೂನು ಜಾರಿ ಸಂಸ್ಥೆಗಳ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಅಭಿಯೋಜಕರಿಗೆ ಸೈಬರ್ ಅಪರಾಧ ಜಾಗೃತಿ, ತನಿಖೆ, ಫೊರೆನ್ಸಿಕ್ಸ್ ಇತ್ಯಾದಿಗಳ ಕುರಿತು ತರಬೇತಿ ನೀಡಲಾಗಿದೆ.

ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C) ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಎನ್‌ ಸಿ ಸಿ, ಎನ್‌ ಎಸ್‌ ಎಸ್ ಮತ್ತು ಎನ್‌ ವೈ ಕೆ ಎಸ್ ವಿದ್ಯಾರ್ಥಿಗಳಿಗೆ ಸೈಬರ್ ನೈರ್ಮಲ್ಯ ತರಬೇತಿಯನ್ನು ನೀಡಿದೆ.

ಸೈಬರ್ ಅಪರಾಧ ತಡೆಯುವಿಕೆ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ I4C 'ಹದಿಹರೆಯದವರು/ವಿದ್ಯಾರ್ಥಿಗಳಿಗಾಗಿ ಕೈಪಿಡಿ' ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು 'ಮಹಿಳಾ ಸುರಕ್ಷತೆಗಾಗಿ ಸೈಬರ್ ಭದ್ರತಾ ಕೈಪಿಡಿ'ಯನ್ನು ಬಿಡುಗಡೆ ಮಾಡಿದೆ.

ಮಾಹಿತಿ ಸುರಕ್ಷತೆಯಲ್ಲಿ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಮತ್ತು ಸಾರ್ವಜನಿಕರಲ್ಲಿ ಸೈಬರ್ ನೈರ್ಮಲ್ಯ ಮತ್ತು ಸೈಬರ್ ಭದ್ರತೆಯ ವಿವಿಧ ಮೌಲ್ಯಗಳ ಬಗ್ಗೆ ಸಾಮಾನ್ಯ ಅರಿವು ಮೂಡಿಸಲು ಸರ್ಕಾರವು 'ಮಾಹಿತಿ ಸುರಕ್ಷತಾ ಶಿಕ್ಷಣ ಮತ್ತು ಜಾಗೃತಿ (ಐ ಎಸ್‌ ಇ ಎ)' ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಇಂದು ಲೋಕಸಭೆಯಲ್ಲಿ ಶ್ರೀ ಪ್ರಭಾಕರ್ ರೆಡ್ಡಿ ವೇಮಿರೆಡ್ಡಿ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಾಹಿತಿಯನ್ನು ಒದಗಿಸಿದ್ದಾರೆ.

 

*****


(रिलीज़ आईडी: 2295240) आगंतुक पटल : 10
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Gujarati , Tamil , Telugu , Malayalam