ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2026ಕ್ಕೆ ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 15 ರವರೆಗೆ ವಿಸ್ತರಣೆ
ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ https://awards.gov.in ಮೂಲಕ ನಾಮನಿರ್ದೇಶನ ಪ್ರಕ್ರಿಯೆ
प्रविष्टि तिथि:
31 JUL 2026 2:03PM by PIB Bengaluru
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿ ಎಂ ಆರ್ ಬಿ ಪಿ) ಗಾಗಿ ಆನ್‌ಲೈನ್ ಮೂಲಕ ನಾಮನಿರ್ದೇಶನ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2026ರ ಜುಲೈ 31 ರವರೆಗೆ ನಿಗದಿಪಡಿಸಿದ್ದ ಗಡುವನ್ನು 2026ರ ಆಗಸ್ಟ್ 15 ರವರೆಗೆ ವಿಸ್ತರಿಸಿದೆ. ನಾಮನಿರ್ದೇಶನ ಪ್ರಕ್ರಿಯೆಯು 2026ರ ಏಪ್ರಿಲ್ 1 ರಂದು ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ - (https://awards.gov.in) ಮೂಲಕ ಪ್ರಾರಂಭವಾಗಿದೆ.
ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಮಕ್ಕಳಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಭಾರತದಲ್ಲಿ ವಾಸಿಸುವ 5 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 2026ರ ಜುಲೈ 31ಕ್ಕೆ 18 ವರ್ಷ ವಯಸ್ಸು ಮೀರದ ಭಾರತೀಯ ಪ್ರಜೆಯಾಗಿರುವ ಯಾವುದೇ ಮಗು ಪ್ರಶಸ್ತಿಗೆ ಅರ್ಹವಾಗಿರುತ್ತದೆ. ಸ್ವಯಂ ನಾಮನಿರ್ದೇಶನಗಳು ಸೇರಿದಂತೆ ಯಾವುದೇ ನಾಗರಿಕರು ಸಲ್ಲಿಸುವ ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ, ದಯಮಾಡಿ ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ https://awards.gov.in ನೋಡಬಹುದು.
*****
(रिलीज़ आईडी: 2292382)
आगंतुक पटल : 8