ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಭಾರತದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯು ಆಹಾರ ಭದ್ರತೆ, ರೈತರ ಕಲ್ಯಾಣ ಮತ್ತು ಇಂಧನ ಭದ್ರತೆಯನ್ನು ಸಮತೋಲನಗೊಳಿಸುತ್ತದೆ
ಎಥೆನಾಲ್ ಮಿಶ್ರಣವಿಲ್ಲದಿದ್ದರೆ, ಜಾಗತಿಕ ತೈಲ ಬೆಲೆ ಏರಿಕೆಯ ಸಮಯದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 125 ರೂ. ತಲುಪುತ್ತಿತ್ತು
प्रविष्टि तिथि:
31 JUL 2026 12:17PM by PIB Bengaluru
ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವು ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸಲು, ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಆಹಾರ ಭದ್ರತೆಯನ್ನು ಕಾಪಾಡುವುದರ ಜೊತೆಗೆ ರೈತರನ್ನು ಬೆಂಬಲಿಸಲು ಕೈಗೊಳ್ಳಲಾದ ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿದೆ. ಇತ್ತೀಚಿನ ಕೆಲವು ಆರೋಪಗಳು ಕಾರ್ಯಕ್ರಮದ ಬಗ್ಗೆ ಅಪೂರ್ಣ ಮತ್ತು ತಪ್ಪುದಾರಿಗೆಳೆಯುವ ಚಿತ್ರಣವನ್ನು ಸೃಷ್ಟಿಸಿವೆ. ಈ ಕೆಳಗಿನ ಸ್ಪಷ್ಟೀಕರಣಗಳು ಈ ಆತಂಕಗಳನ್ನು ಪರಿಹರಿಸುತ್ತವೆ ಮತ್ತು ವಾಸ್ತವನ್ನು ಖಚಿತಪಡಿಸುತ್ತವೆ.
ಆರೋಪ: ಸರ್ಕಾರವು ಪ್ರತಿ ಕೆ.ಜಿ.ಗೆ 37 ರೂ. ಮೌಲ್ಯದ ʻಎಫ್‌ಸಿಐʼಅಕ್ಕಿಯನ್ನು ಡಿಸ್ಟಿಲರಿಗಳಿಗೆ 23 ರೂ.ಗೆ ಮಾರಾಟ ಮಾಡಿದೆ, ಇದರಿಂದಾಗಿ 10,000 ಕೋಟಿ ರೂ. ನಷ್ಟವಾಗಿದೆ. ಪೆಟ್ರೋಲ್‌ಗಿಂತ ಎಥೆನಾಲ್ ಹೆಚ್ಚು ದುಬಾರಿ ಎಂದು ಸರ್ಕಾರ ಒಪ್ಪಿಕೊಂಡಿದೆ, ಆದ್ದರಿಂದ ತೆರಿಗೆದಾರರು ನೀಡುವ ತೆರಿಗೆಯಿಂದ ಮಾತ್ರ ಇ20 ಉಳಿದುಕೊಂಡಿದೆ.
ಆಹಾರ ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ - ಎಥೆನಾಲ್ ಎಂದಿಗೂ ಬಡವರ ವೆಚ್ಚದ ಮೇಲೆ ನಿಲ್ಲುವುದಿಲ್ಲ
- ಈ ಆರೋಪವು ಕೇವಲ ದಾರಿತಪ್ಪಿಸುವಂತಿರುವುದಷ್ಟೇ ಅಲ್ಲ, ಇದು ವಾಸ್ತವಕ್ಕೆ ತದ್ವಿರುದ್ಧವಾಗಿದೆ.
- ಪ್ರತಿ ಆಹಾರ ಧಾನ್ಯವು ಮೊದಲು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್), ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ), ಕಲ್ಯಾಣ ಯೋಜನೆಗಳು ಮತ್ತು ಕಡ್ಡಾಯ ಬಫರ್ ಸ್ಟಾಕ್‌ಗಳಿಗೆ ಬಳಕೆಯಾಗುತ್ತದೆ. ʻಎಂಎಸ್‌ಪಿʼಯಲ್ಲಿ ಖರೀದಿಸಿದ ಒಂದೇ ಒಂದು ಧಾನ್ಯವನ್ನು ಭಾರತದ ಆಹಾರ ಭದ್ರತೆಯನ್ನು ಖಾತರಿಪಡಿಸುವ ಮೊದಲು ಎಥೆನಾಲ್ ಉದ್ದೇಶಕ್ಕೆ ಬಳಸುವುದಿಲ್ಲ.
- ಆಹಾರ ಭದ್ರತಾ ಬಾಧ್ಯತೆಯನ್ನು ಪೂರೈಸಿದ ನಂತರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ ಹೆಚ್ಚುವರಿ ಧಾನ್ಯವನ್ನು ಮಾತ್ರ ಎಥೆನಾಲ್ ಉತ್ಪಾದನೆಗೆ ಅನುಮೋದಿಸಲಾಗುತ್ತದೆ.
- ಎಥೆನಾಲ್ ಕಾರ್ಯಕ್ರಮಕ್ಕೆ ವಾಸ್ತವವಾಗಿ ಹೋಗುವುದು ಹಾನಿಗೊಳಗಾದ ಧಾನ್ಯ, ನುಚ್ಚು ಅಕ್ಕಿ ಮತ್ತು ಮಾನವ ಬಳಕೆಗೆ ಅನರ್ಹವಾದ ಆಹಾರ ಧಾನ್ಯಗಳು – ಅಂದರೆ ಗೋದಾಮುಗಳಲ್ಲಿ ಕೊಳೆಯುವಂತಹ ದಾಸ್ತಾನುಗಳು.
- ಇದು ಬಡವರಿಂದ ಆಹಾರವನ್ನು ಕಸಿದುಕೊಳ್ಳುತ್ತಿಲ್ಲ; ಇದು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುತ್ತಿದೆ, ಆಮದನ್ನು ಕಡಿಮೆ ಮಾಡುತ್ತಿದೆ ಮತ್ತು ಭಾರತೀಯ ರೈತರ ಕೈಗೆ ಹೆಚ್ಚಿನ ಹಣವನ್ನು ನೀಡುತ್ತಿದೆ.
- ಈ ಕಾರ್ಯಕ್ರಮವು ಮತ್ತಷ್ಟು ಮುಂದೆ ಸಾಗುತ್ತಿದೆ. ಪ್ರಧಾನ ಮಂತ್ರಿ ಜಿ-ವಿಎಎನ್ ಯೋಜನೆಯ ಮೂಲಕ, ಭಾರತವು ಕೃಷಿ ಶೇಷಗಳಿಂದ 2ಜಿ (ಎರಡನೇ ತಲೆಮಾರಿನ) ಎಥೆನಾಲ್ ಅನ್ನು ತಯಾರಿಸುವತ್ತ ವೇಗವಾಗಿ ಸಾಗುತ್ತಿದೆ. ಆ ಮೂಲಕ ಎಥೆನಾಲ್ ತಯಾರಿಸಲು ಆಹಾರ ಧಾನ್ಯಗಳ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತಿದೆ.
- ವಾಸ್ತವಾಂಶಗಳು ಸ್ಪಷ್ಟವಾಗಿವೆ: ಸರ್ಕಾರವು ಆಹಾರ ಭದ್ರತೆಗೆ ಅಗತ್ಯವಿರುವ ಪ್ರತಿಯೊಂದು ಧಾನ್ಯವನ್ನು ಮೊದಲು ರಕ್ಷಿಸುತ್ತದೆ, ಮತ್ತು ನಂತರ ಮಾತ್ರ ಹೆಚ್ಚುವರಿ ಮತ್ತು ತ್ಯಾಜ್ಯವನ್ನು ಶುದ್ಧ ಶಕ್ತಿಯಾಗಿ ಪರಿವರ್ತಿಸುತ್ತದೆ. ಈ ಕುರಿತ ಅಪ ಪ್ರಚಾರ ಕೇವಲ ತಪ್ಪು ಮಾಹಿತಿ ಮಾತ್ರವಲ್ಲ, ಇದು ಭಾರತದ ಎಥೆನಾಲ್ ಕಾರ್ಯಕ್ರಮವನ್ನು ವಿಶ್ವದ ಅತ್ಯಂತ ಜವಾಬ್ದಾರಿಯುತ ಯೋಜನೆಯನ್ನಾಗಿ ಮಾಡುವ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುತ್ತದೆ.
ಅಕ್ಕಿಗೆ ವಿಶೇಷ ಆದ್ಯತೆ ನೀಡಿಲ್ಲ
- ʻಎಫ್‌ಸಿಐʼ ಅಕ್ಕಿಯನ್ನು ಎಥೆನಾಲ್ ಉತ್ಪಾದಕರಿಗೆ ಅತ್ಯಂತ ಅಗ್ಗದ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬ ಭಾವನೆಯನ್ನು ಈ ಅರೋಪವು ಸೃಷ್ಟಿಸಿದೆ. ಆದರೆ ಅದು ನಿಜವಲ್ಲ.
- ʻಎಫ್‌ಸಿಐʼ ಅಕ್ಕಿಯು ಎಥೆನಾಲ್ ತಯಾರಿಸಲು ಬಳಸುವ ಹಲವಾರು ಅನುಮೋದಿತ ಕಚ್ಚಾ ವಸ್ತುಗಳಲ್ಲಿ ಒಂದಾಗಿದೆ ಮತ್ತು ಅದರ ಬೆಲೆಯನ್ನು ಇತರ ಕಚ್ಚಾ ವಸ್ತುಗಳಂತೆಯೇ ಅದೇ ಸರ್ಕಾರಿ ಬೆಲೆ ಚೌಕಟ್ಟಿನಡಿಯಲ್ಲಿ ನಿಗದಿಪಡಿಸಲಾಗುತ್ತದೆ.
|
ಕಚ್ಚಾ ವಸ್ತು (ಇಎಸ್ ವೈ 2025-26)
|
ಪಾವತಿಸಿದ ಎಥೆನಾಲ್ ಬೆಲೆ
|
|
ಮೆಕ್ಕೆಜೋಳ
|
71.86 ರೂ./ಲೀಟರ್
|
|
ಕಬ್ಬಿನ ಹಾಲು/ಸಿರಪ್
|
65.61 ರೂ.ಗೆ ಪ್ರತಿ ಲೀಟರ್
|
|
ಹಾನಿಗೊಳಗಾದ ಆಹಾರ ಧಾನ್ಯಗಳು
|
₹64.00/ಲೀಟರ್
|
|
ಬಿ-ಹೆವಿ ಕಾಕಂಬಿ
|
60.73 ರೂ./ಲೀಟರ್
|
|
ಎಫ್‌ಸಿಐ ಅಕ್ಕಿ
|
60.32 ರೂ./ಲೀಟರ್
|
|
ಸಿ-ಹೆವಿ ಕಾಕಂಬಿ
|
ರೂ.57.97/ಲೀಟರ್
|
ಕಾರ್ಯಕ್ರಮವು ಅಕ್ಕಿಯ ಮೇಲೆ ಅವಲಂಬಿತವಾಗಿಲ್ಲ. ಇದು ಲಭ್ಯವಿರುವ ಯಾವುದೇ ಅನುಮೋದಿತ ಕಚ್ಚಾವಸ್ತುವನ್ನು ಬಳಸುತ್ತದೆ.
- 2023-24ರ ಎಥೆನಾಲ್ ಪೂರೈಕೆ ವರ್ಷದಲ್ಲಿ, ʻಎಫ್‌ಸಿಐʼ ಅಕ್ಕಿ ವಾಸ್ತವಿಕವಾಗಿ ಎಥೆನಾಲ್ ಉತ್ಪಾದನೆಗೆ ಯಾವುದೇ ಕೊಡುಗೆ ನೀಡಿಲ್ಲ - ಎಥೆನಾಲ್ ಉತ್ಪಾದನೆಯಲ್ಲಿ ಇದರ ಪಾಲು ಕೇವಲ 0.02%.
- 2025-26ರ ಎಥನಾಲ್ ಪೂರೈಕೆ ವರ್ಷದ ವೇಳೆಗೆ, ಎಲ್ಲಾ ಆಹಾರ ಭದ್ರತಾ ಅಗತ್ಯಗಳನ್ನು ಪೂರೈಸಿದ ನಂತರ ಹೆಚ್ಚುವರಿ ʻಎಫ್‌ಸಿಐʼ ದಾಸ್ತಾನುಗಳು ಲಭ್ಯವಾದದ್ದರಿಂದ ಅದರ ಪಾಲು ಶೇ.24.64ಕ್ಕೆ ಏರಿತು.
- ಅದೇ ಅವಧಿಯಲ್ಲಿ, ಮೆಕ್ಕೆಜೋಳದ ಪಾಲು 42.6% ರಿಂದ 35.96%ಕ್ಕೆ ಕುಸಿದಿದೆ, ಇದು ಉತ್ಪಾದಕರು ಲಭ್ಯತೆಯನ್ನು ಅವಲಂಬಿಸಿ ವಿಭಿನ್ನ ಕಚ್ಚಾವಸ್ತುಗಳನ್ನು ಬಳಸುತ್ತಾರೆ ಎಂಬುದನ್ನು ತೋರಿಸುತ್ತದೆ.
- ಎಥೆನಾಲ್ ಅನ್ನು ಅಗ್ಗದ ಅಕ್ಕಿಯಿಂದ ತಯಾರಿಸಲಾಗುತ್ತಿಲ್ಲ. ಇದನ್ನು ಅನುಮೋದಿತ ಕಚ್ಚಾವಸ್ತುಗಳ ಹೊಂದಿಕೊಳ್ಳುವ ಮಿಶ್ರಣದಿಂದ ತಯಾರಿಸಲಾಗುತ್ತಿದೆ. ಪ್ರತಿ ಆಹಾರ ಭದ್ರತಾ ಬಾಧ್ಯತೆಯನ್ನು ಪೂರೈಸಿದ ನಂತರ ಪ್ರಮಾಣೀಕೃತ ಹೆಚ್ಚುವರಿ ದಾಸ್ತಾನು ಲಭ್ಯವಿದ್ದಾಗ ಮಾತ್ರ ʻಎಫ್‌ಸಿಐʼ ಅಕ್ಕಿಯನ್ನು ಬಳಸಲಾಗುತ್ತದೆ.
ಎಥೆನಾಲ್ ಅಗ್ಗವಾಗಿದೆಯೇ ಎಂಬುದು ನಿಜವಾದ ಪ್ರಶ್ನೆಯಲ್ಲ - ಭಾರತವು ಉತ್ತಮ ರಕ್ಷಣೆ ಹೊಂದಿದೆಯೇ ಎಂಬುದು ಪ್ರಶ್ನೆ
- ನಿಜವಾದ ಪ್ರಶ್ನೆ ಇದು: ಜಾಗತಿಕ ತೈಲ ಬೆಲೆಗಳು ಏರಿದಾಗ ಎಥೆನಾಲ್ ಮಿಶ್ರಣ ಇಲ್ಲದಿದ್ದರೆ ಭಾರತೀಯರು ಪೆಟ್ರೋಲ್‌ಗೆ ಎಷ್ಟು ಹಣ ಪಾವತಿಸಬೇಕಾಗಿತ್ತು?
- ಭಾರತೀಯ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 135 ಅಮೆರಿಕನ್ ಡಾಲರ್‌ಗೆ ಏರಿಕೆಯಾದಾಗ, ಎಥೆನಾಲ್ ಮಿಶ್ರಣವಿಲ್ಲದ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ಸುಮಾರು 125 ರೂ. ಇತ್ತು.
- ಆದರೆ, ಇದರ ಬದಲಾಗಿ, ಗ್ರಾಹಕರು ಪ್ರತಿ ಲೀಟರ್‌ಗೆ 94.77 ರೂ.ಗಳನ್ನು ಪಾವತಿಸಿದರು. ಏಕೆಂದರೆ ಪ್ರತಿ ಲೀಟರ್‌ನ 20% ಅನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿತ್ತು, ಜಾಗತಿಕ ಕಚ್ಚಾ ಬೆಲೆ ಏರಿಕೆಯನ್ನು ಸ್ಥೀರೀಕರಿಸಬಲ್ಲ ಸ್ಥಿರ, ಪೂರ್ವ-ಒಪ್ಪಿತ ಬೆಲೆಗಳಲ್ಲಿ ಖರೀದಿಸಲಾಯಿತು.
- ಫಲಿತಾಂಶ? ಬಿಕ್ಕಟ್ಟಿನ ಉತ್ತುಂಗದ ಸಮಯದಲ್ಲಿ ಪಂಪ್‌ನಲ್ಲಿ ಪ್ರತಿ ಲೀಟರ್‌ಗೆ ಸುಮಾರು 30 ರೂ. ಉಳಿತಾಯ.
- ಅದು ಎಥೆನಾಲ್ ಮಿಶ್ರಣದ ನೈಜ ಪ್ರಯೋಜನ ಮತ್ತು ಮೌಲ್ಯ. ಇದು ಪ್ರತಿದಿನ ಅಗ್ಗದ ಇಂಧನದ ಕುರತದ್ದಲ್ಲ. ಇದು ಜಾಗತಿಕ ತೈಲ ಮಾರುಕಟ್ಟೆಗಳಲ್ಲಿನ ತೀವ್ರ ಚಂಚಲತೆಯಿಂದ ಭಾರತೀಯ ಗ್ರಾಹಕರನ್ನು ರಕ್ಷಿಸುವುದು, ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವುದು ಮತ್ತು ದೇಶದ ಇಂಧನದ ಹಣವನ್ನು ವಿದೇಶಕ್ಕೆ ಕಳುಹಿಸುವ ಬದಲು ಭಾರತೀಯ ಆರ್ಥಿಕತೆಯೊಳಗೆ ಇಟ್ಟುಕೊಳ್ಳುವುದು.
- ಕಾರ್ಯಕ್ರಮದ ಫಲಿತಾಂಶಗಳು ಸ್ವತಃ ಮಾತನಾಡುತ್ತವೆ. ʻಇಬಿಪಿʼ ಕಾರ್ಯಕ್ರಮ ಈಗಾಗಲೇ ಈ ಕೆಳಗಿನವುಗಳನ್ನು ತಲುಪಿಸಿದೆ:
- ವಿದೇಶಿ ವಿನಿಮಯದಕಲ್ಲಿ 1.97 ಲಕ್ಷ ಕೋಟಿ ರೂ. ಉಳಿತಾಯ
- 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದಿಗೆ ಪರ್ಯಾಯ
- 950 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಯಾಗಿದೆ; ಮತ್ತು
- ರೈತರು ಮತ್ತು ಡಿಸ್ಟಿಲರ್‌ಗಳಿಗೆ 1.66 ಲಕ್ಷ ಕೋಟಿ ರೂ.ಗೂ ಹೆಚ್ಚು ಪಾವತಿ, ಕೃಷಿ ಉತ್ಪನ್ನಗಳಿಗೆ ಸ್ಥಿರ ದೇಶೀಯ ಮಾರುಕಟ್ಟೆಯ ಸೃಷ್ಟಿ.
- ಎಥೆನಾಲ್ ಮಿಶ್ರಣದ ಉದ್ದೇಶವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವುದಾಗಿದೆ. ಈಗಲೂ ನಮ್ಮ ತೈಲ ಅಗತ್ಯದ ಸುಮಾರು ಶೇ.88 ಅನ್ನು ಆಮದನ್ನು ಅವಲಂಬಿಸಿದೆ. ಇದು ಜಾಗತಿಕ ತೈಲ ಆಘಾತಗಳ ವಿರುದ್ಧ ʻವಿಮೆʼಯೇ ಹೊರತು ದಿನನಿತ್ಯದ ಬೆಲೆ ಸ್ಪರ್ಧೆಯಲ್ಲ.
ಎಥೆನಾಲ್ ಮಿಶ್ರಣವು ತೆರಿಗೆದಾರರ ಸಬ್ಸಿಡಿಯಿಂದ ನಡೆಯುತ್ತಿಲ್ಲ. ಇದು ಭಾರತದ ಇಂಧನ ವಿಮೆಯಾಗಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಅದರ ಪ್ರಯೋಜನ ಈಗಾಗಲೇ ಜನರಿಗೆ ತಲುಪಿದೆ.
*****
(रिलीज़ आईडी: 2292336)
आगंतुक पटल : 11