ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸರ್ವೇಶ್ ಕುಶಾರೆ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

प्रविष्टि तिथि: 28 JUL 2026 2:10PM by PIB Bengaluru

2026ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸರ್ವೇಶ್ ಕುಶಾರೆ ಅವರನ್ನು ಪ್ರಧಾನ ಮಂತ್ರಿಯವರು ಅಭಿನಂದಿಸಿದ್ದಾರೆ.

ಸರ್ವೇಶ್ ಕುಶಾರೆ ಅವರ ದೃಢನಿಶ್ಚಯ ಮತ್ತು ಸ್ಥಿರತೆಯನ್ನು ಪ್ರಧಾನಿಯವರು ಶ್ಲಾಘಿಸಿ, ಈ ಸಾಧನೆಯನ್ನು ಅತ್ಯುತ್ತಮವೆಂದು ಬಣ್ಣಿಸಿದ್ದಾರೆ.

ಭಾರತವು ಸರ್ವೇಶ್ ಕುಶಾರೆ ಅವರ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ಭವಿಷ್ಯದಲ್ಲಿ ಅವರು ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದೆ ಎಂದು ಶ್ರೀ ಮೋದಿಯವರು ಹೇಳಿದರು.

ಪ್ರಧಾನ ಮಂತ್ರಿಯವರು X ನಲ್ಲಿ;

“#CWG2026ರಲ್ಲಿ ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಕುಶಾರೆ ಅವರಿಗೆ ದೊರೆತಿದೆ ಅದ್ಭುತ ಬೆಳ್ಳಿ! ಅವರ ದೃಢನಿಶ್ಚಯ ಮತ್ತು ಸ್ಥಿರತೆ ಗಮನಾರ್ಹವಾಗಿವೆ. ಈ ಅತ್ಯುತ್ತಮ ಸಾಧನೆಗೆ ಅವರಿಗೆ ಅಭಿನಂದನೆಗಳು. ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ. ಮುಂದೆ ಅವರಿಗೆ ಇನ್ನೂ ಅನೇಕ ಯಶಸ್ಸನ್ನು ಹಾರೈಸುತ್ತದೆ.”

 

*****


(रिलीज़ आईडी: 2290404) आगंतुक पटल : 10
इस विज्ञप्ति को इन भाषाओं में पढ़ें: Telugu , Assamese , English , Urdu , हिन्दी , Marathi , Bengali , Manipuri , Punjabi , Gujarati , Tamil , Malayalam