ವಾರ್ತಾ ಮತ್ತು ಪ್ರಸಾರ ಸಚಿವಾಲಯ
ತಳಮಟ್ಟದ ಡಿಜಿಟಲ್ ಸೃಜನಕಾರರನ್ನು ಗುರುತಿಸಲು 'ಜೆಮ್ಸ್ ಆಫ್ ಇಂಡಿಯಾ' ಸ್ಪರ್ಧೆಯ ಪ್ರಾಯೋಗಿಕ ಹಂತ ಆರಂಭಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಶೂಟ್, ಅಪ್‌ಲೋಡ್, ಶೈನ್: ಆಗಸ್ಟ್ 1 ರಿಂದ MyWAVES ನಲ್ಲಿ "ಜೆಮ್ಸ್ ಆಫ್ ಇಂಡಿಯಾ" ಸ್ಪರ್ಧೆ ನೋಂದಣಿ ಆರಂಭ
ತಳಮಟ್ಟದಲ್ಲಿ ರಾಜ್ಯಗಳು ಮತ್ತು ಜಿಲ್ಲಾಡಳಿತಗಳು ಸ್ಪರ್ಧೆಯನ್ನು ಮುನ್ನಡೆಸಲಿವೆ, ತೀರ್ಪುಗಾರರ ಮೌಲ್ಯಮಾಪನಕ್ಕೆ ಸೃಜನಕಾರರನ್ನು ಸಜ್ಜುಗೊಳಿಸಲಿವೆ
ತಮ್ಮ ಕ್ರಿಯೇಟರ್ಸ್ ಪೂರಕ ವ್ಯವಸ್ಥೆಗಳನ್ನು ಹಂಚಿಕೊಳ್ಳುವ ಮೂಲಕ ಸ್ಪರ್ಧೆ ಎದುರಿಸಲು ಪಾಲುದಾರಿಕೆ ಮಾಡಿಕೊಂಡ ಯೂಟ್ಯೂಬ್ ಮತ್ತು ಮೆಟಾ
प्रविष्टि तिथि:
21 JUL 2026 1:52PM by PIB Bengaluru
ಭಾರತದ ಸೃಜನಶೀಲ ವಲಯವನ್ನು ಬಲವರ್ಧನೆಗೊಳಿಸಲು ಮತ್ತು ಉದಯೋನ್ಮುಖ ಆರೆಂಜ್ ಆರ್ಥಿಕತೆಯನ್ನು ಉತ್ತೇಜಿಸಲು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು 'ಜೆಮ್ಸ್ ಆಫ್ ಇಂಡಿಯಾ' ಸ್ಪರ್ಧೆಯ ಪ್ರಾಯೋಗಿಕ ಹಂತವನ್ನು ಆರಂಭಿಸಿದೆ, ಇದು ದೇಶಾದ್ಯಂತ ತಳಮಟ್ಟದ ಡಿಜಿಟಲ್ ಸೃಷ್ಟಿಕರ್ತರನ್ನು ಗುರುತಿಸಲು, ಪೋಷಿಸಲು ಮತ್ತು ಉತ್ತೇಜಿಸಲು ರಚನಾತ್ಮಕ ರಾಷ್ಟ್ರೀಯ ಉಪಕ್ರಮವಾಗಿದೆ.
ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ತಂತ್ರಜ್ಞಾನವನ್ನು ಸಬಲೀಕರಣ, ಎಲ್ಲರನ್ನೂ ಒಳಗೊಳ್ಳುವುದು ಮತ್ತು ರಾಷ್ಟ್ರ ನಿರ್ಮಾಣದ ಪ್ರಬಲ ಸಾಧನವಾಗಿ ಸ್ವೀಕರಿಸಿದೆ. ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ತಂತ್ರಜ್ಞಾನದ ಲಭ್ಯತೆಯನ್ನು ಅಪಾರವಾಗಿ ವಿಸ್ತರಿಸಿವೆ ಮತ್ತು ಅಭೂತಪೂರ್ವ ಪ್ರಮಾಣದಲ್ಲಿ ನಾವೀನ್ಯತೆಗೆ ಅವಕಾಶಗಳನ್ನು ಸೃಷ್ಟಿಸಿವೆ.
ಈ ಉಪಕ್ರಮವು WAVES OTT ಅಡಿಯಲ್ಲಿ ಸಿಟಿಜನ್ ಕ್ರಿಯೇಟರ್ಸ್ ಪ್ಲಾಟ್ ಫಾರಂ ಆದ MyWAVES ಅನ್ನು ಆಧರಿಸಿದೆ. ಇದಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಿದ್ದಾರೆ, ಇದು ನಾಗರಿಕರು ಮೂಲ ವಿಷಯವನ್ನು ಸೃಷ್ಟಿಸಲು, ಅಪ್‌ಲೋಡ್ ಮಾಡಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಭಾರತದ ಡಿಜಿಟಲ್ ಕ್ರಿಯೇಟರ್ಸ್ ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬಳಕೆದಾರ-ಸೃಷ್ಟಿಸಿದ ವಿಷಯ (ಕಟೆಂಟ್) ಅನ್ನು ಪ್ರೋತ್ಸಾಹಿಸಲು ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿ ಕಲ್ಪಿಸಲಾಗಿರುವ MyWAVES, ಈಗ ಜೆಮ್ಸ್ ಆಫ್ ಇಂಡಿಯಾ ಸ್ಪರ್ಧೆಗೆ ಅಡಿಪಾಯವನ್ನು ಒದಗಿಸುತ್ತದೆ, ಇದು ಸೃಷ್ಟಿಕರ್ತರನ್ನು ಅಧಿಕೃತ ಡಿಜಿಟಲ್ ಕಥೆ ಹೇಳುವ ಮೂಲಕ ತಮ್ಮ ಜಿಲ್ಲೆಗಳ ವಿಶಿಷ್ಟ ಕಥೆಗಳನ್ನು ಹೇಳಲು ಆಹ್ವಾನಿಸುತ್ತದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ "ಭಾರತದ ಪ್ರತಿಯೊಂದು ಜಿಲ್ಲೆಯೂ ಹೇಳಲು ಕಾಯುತ್ತಿರುವ ಕಥೆಯನ್ನು ಹೊಂದಿದೆ ಮತ್ತು ಜೆಮ್ಸ್ ಆಫ್ ಇಂಡಿಯಾ ನಮ್ಮ ಕ್ರಿಯಟರ್ಸ್ ಗೆ ಅದನ್ನು ಹೇಳಲು ವೇದಿಕೆಯನ್ನು ನೀಡುತ್ತದೆ" ಎಂದರು. ಇದು ನಮ್ಮ ಯುವಜನರ ಸೃಜನಶೀಲತೆಯನ್ನು ಸಂಭ್ರಮಿಸುವುದರ ಜೊತೆಗೆ ನಮ್ಮ ಜಿಲ್ಲೆಗಳ ಅಸಾಧಾರಣ ವೈವಿಧ್ಯತೆಯನ್ನು ಆಚರಿಸುವುದರ ಬಗ್ಗೆಯೂ ಸಂಭ್ರಮಿಸುವುದೂ ಸೇರಿದೆ ಎಂದರು.
ಭಾರತದ ಪ್ರತಿಯೊಂದು ಜಿಲ್ಲೆಯ ವಿಶಿಷ್ಟ ಗುರುತನ್ನು ಆಚರಿಸುವಾಗ, ಅಧಿಕೃತ ಡಿಜಿಟಲ್ ಕಥೆ ಹೇಳುವ ಮೂಲಕ ತಮ್ಮ ಜಿಲ್ಲೆಗಳ ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಸಂಪ್ರದಾಯಗಳು, ಇತಿಹಾಸ ಮತ್ತು ವಿಶಿಷ್ಟ ಸಾಧನೆಗಳನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವ ಮೂಲಕ ರಾಷ್ಟ್ರವ್ಯಾಪಿ ಸೃಷ್ಟಿಕರ್ತರ ಜಾಲವನ್ನು ರಚಿಸಲು ಈ ಸ್ಪರ್ಧೆ ಪ್ರಯತ್ನಿಸುತ್ತದೆ.
ಭಾಗವಹಿಸುವುದು ಹೇಗೆ: ಸ್ಪರ್ಧೆಗೆ ಸೇರಲು ಕ್ರಿಯೇಟರ್ಸ್ WAVES OTT ಪ್ಲಾಟ್‌ಫಾರ್ಮ್‌ನಲ್ಲಿ MyWAVES ವಿಭಾಗದ ಮೂಲಕ 1 ರಿಂದ 3 ನಿಮಿಷಗಳ ಅವಧಿಯ ವೀಡಿಯೊಗಳನ್ನು ಸಲ್ಲಿಸಬಹುದು. ಪ್ರಾಯೋಗಿಕ ಹಂತಕ್ಕೆ ಸಲ್ಲಿಕೆ ನೋಂದಾಯಿಸಿ 2026ರ ಆಗಸ್ಟ್ 1 ರಿಂದ ಆಗಸ್ಟ್ 31 ರವರೆಗೆ ತೆರೆದಿರುತ್ತದೆ.
ಪ್ರಾಯೋಗಿಕ ಹಂತದ ವ್ಯಾಪ್ತಿ ಮತ್ತು ಪಾಲುದಾರಿಕೆಗಳು: ಪ್ರಾಯೋಗಿಕ ಹಂತವನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಗೋವಾ ಮತ್ತು ಲಡಾಖ್‌ನಲ್ಲಿ ಆರಂಭಿಸಲಾಗುತ್ತಿದೆ. ಈ ಹಂತವು ಪ್ರಸಾರ ಭಾರತಿ, ಮೈ ಭಾರತ್ ಮತ್ತು ಆಯಾ ರಾಜ್ಯ ಮತ್ತು ಜಿಲ್ಲಾ ಆಡಳಿತಗಳನ್ನು ಒಳಗೊಂಡ ಸಹಯೋಗದ ಪ್ರಯತ್ನವಾಗಿದೆ. ಸ್ಥಳೀಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಸಹ ಸೃಷ್ಟಿಕರ್ತರ ಸಜ್ಜುಗೊಳಿಸುವಿಕೆ ಮತ್ತು ವಿಷಯ ಅಭಿವೃದ್ಧಿಯನ್ನು ಸುಗಮಗೊಳಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತವೆ.
ಈ ಉಪಕ್ರಮವನ್ನು ಮತ್ತಷ್ಟು ವರ್ಧಿಸಲು, ಸಚಿವಾಲಯವು ಉದ್ಯಮದ ದೈತ್ಯ ಕಂಪನಿಗಳಾದ ಯೂಟ್ಯೂಬ್ ಮತ್ತು ಮೆಟಾ ಜೊತೆ ಸಹಕರಿಸುತ್ತಿದೆ. ಎರಡೂ ವೇದಿಕೆಗಳು ತಮ್ಮ ಕ್ರಿಯೇಟರ್ಸ್ ಸಮುದಾಯಗಳನ್ನು ಸಜ್ಜುಗೊಳಿಸಲು ಮತ್ತು ಅವರ ನೆಟ್‌ವರ್ಕ್‌ಗಳಲ್ಲಿ ಸವಾಲಿನ ವ್ಯಾಪ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
ಪ್ರಶಸ್ತಿಗಳು ಮತ್ತು ಮನ್ನಣೆ: ಅತ್ಯುತ್ತಮ ಪ್ರತಿಭೆಯನ್ನು ಗೌರವಿಸಲು, ಕಾರ್ಯಕ್ರಮವು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುತ್ತದೆ
- ಜಿಲ್ಲಾ ಮಟ್ಟ: ಪ್ರತಿ ಜಿಲ್ಲೆಗೆ ತಲಾ ₹50,000 ರವರೆಗೆ 20 ಪ್ರಶಸ್ತಿಗಳು.
- ರಾಜ್ಯ ಮಟ್ಟ: ಪ್ರತಿ ಜಿಲ್ಲೆಯಿಂದ ಒಬ್ಬ ಅಸಾಧಾರಣ ಸೃಷ್ಟಿಕರ್ತನನ್ನು 2 ಲಕ್ಷ ರೂಪಾಯಿಗಳ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
- ರಾಷ್ಟ್ರೀಯ ಮಟ್ಟ: ನಂತರದ ರಾಷ್ಟ್ರೀಯ ಬಿಡುಗಡೆಯ ಸಮಯದಲ್ಲಿ, ತಲಾ 5 ಲಕ್ಷ ರೂಪಾಯಿಗಳ ರಾಷ್ಟ್ರೀಯ ಪ್ರಶಸ್ತಿಗಳಿಗೆ ಆಯ್ಕೆಯಾದ ರಾಜ್ಯ ನಮೂದುಗಳು.
ನ್ಯಾಯಯುತ ಮೌಲ್ಯಮಾಪನವನ್ನು ಖಾತ್ರಿಪಡಿಸಿಕೊಳ್ಳಲು, ಜಿಲ್ಲಾ ಮತ್ತು ರಾಜ್ಯ ತೀರ್ಪುಗಾರರ ಸಮಿತಿಗಳನ್ನು ಆಯಾ ಆಡಳಿತವು ರಚಿಸುತ್ತದೆ. ಈ ಫಲಕಗಳು ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಮಾಧ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಒಳಗೊಂಡಿರುತ್ತವೆ

ಭವಿಷ್ಯದಲ್ಲಿ ರಾಷ್ಟ್ರವ್ಯಾಪಿ ಬಿಡುಗಡೆ: ಈ ಪ್ರಾಯೋಗಿಕ ಹಂತದಲ್ಲಿ ಪಡೆದ ಒಳನೋಟಗಳು ಮತ್ತು ಅನುಭವದ ಆಧಾರದ ಮೇಲೆ, ಜೆಮ್ಸ್ ಆಫ್ ಇಂಡಿಯಾ ಸ್ಪರ್ಧೆಯನ್ನು ಅಂತಿಮವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುವಂತೆ ವಿಸ್ತರಣೆ ಮಾಡಲಾಗವುದು. ಭಾರತದ ಪ್ರತಿಯೊಂದು ಜಿಲ್ಲೆಯ ವಿಶಿಷ್ಟ ಗುರುತು ಮತ್ತು ಪರಂಪರೆಯನ್ನು ಆಚರಿಸುವ ಡಿಜಿಟಲ್ ಸೃಷ್ಟಿಕರ್ತರ ರೋಮಾಂಚಕ, ರಾಷ್ಟ್ರವ್ಯಾಪಿ ಪರಿಸರ ವ್ಯವಸ್ಥೆ ಸ್ಥಾಪಿಸುವುದು ಅಂತಿಮ ಗುರಿಯಾಗಿದೆ.
*****
(रिलीज़ आईडी: 2286983)
आगंतुक पटल : 36
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam