ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಳು 2026 ಕ್ಕೆ ನಾಮನಿರ್ದೇಶನಗಳ ಆಹ್ವಾನ
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ
प्रविष्टि तिथि:
02 JUL 2026 1:10PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಳು (ಪಿಎಂಆರ್ ಬಿ ಪಿ) 2026 ರ ನಾಮನಿರ್ದೇಶನಗಳಿಗಾಗಿ ಅರ್ಜಿಗಳಿಗೆ ಮತ್ತೊಮ್ಮೆ ಕರೆ ನೀಡಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2026. ಪಿಎಂಆರ್ ಬಿ ಪಿ ಪ್ರಶಸ್ತಿಗಾಗಿ ಎಲ್ಲಾ ನಾಮನಿರ್ದೇಶನಗಳನ್ನು https://awards.gov.in ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು.
ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 5 ರಿಂದ 18 ವರ್ಷದೊಳಗಿನ ಮಕ್ಕಳ ಅಸಾಧಾರಣ ಸಾಧನೆಗಳನ್ನು ಆಚರಿಸಲು ನೀಡಲಾಗುವ ವಿಶಿಷ್ಟ ಮಾನ್ಯತೆ ಇದಾಗಿದೆ. ಕಠಿಣ ಸಂದರ್ಭಗಳಲ್ಲಿಯೂ ಅತ್ಯಂತ ಶೌರ್ಯವನ್ನು ಪ್ರದರ್ಶಿಸಿದವರಿಗೂ ಸಹ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಯಾವುದೇ ನಾಗರಿಕರು, ಶಾಲೆ, ಸಂಸ್ಥೆ ಅಥವಾ ಸಂಘಟನೆಗಳು ತಮಗೆ ಅರ್ಹರೆಂದು ಭಾವಿಸುವ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಸ್ವಯಂ-ನಾಮನಿರ್ದೇಶನದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಪ್ರಕ್ರಿಯೆಯ ವಿವರಗಳು ಹೀಗಿವೆ:
ಅರ್ಜಿದಾರರು ತಮ್ಮ ಮೂಲಭೂತ ವೈಯಕ್ತಿಕ ವಿವರಗಳನ್ನು ಮತ್ತು ಪ್ರಶಸ್ತಿಯ ವರ್ಗವನ್ನು ಭರ್ತಿ ಮಾಡಿ, ನಂತರ ಇತ್ತೀಚಿನ ಭಾವಚಿತ್ರ ಹಾಗೂ ಪೂರಕ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು. ಅವರು ತಮ್ಮ ಸಾಧನೆ ಮತ್ತು ಅದರ ಪ್ರಭಾವದ ಕುರಿತು ಬರೆದ ಲೇಖನವನ್ನು (ಗರಿಷ್ಠ 1000 ಪದಗಳವರೆಗೆ) ಸಲ್ಲಿಸಬೇಕು.
ಸಂಭಾವ್ಯ ನಾಮನಿರ್ದೇಶಿತರನ್ನು ಗುರುತಿಸಲು ಮತ್ತು ಬೆಂಬಲಿಸಲು ಈ ಕೊನೆಯ ತಿಂಗಳನ್ನು ಬಳಸಿಕೊಳ್ಳುವಂತೆ ಶಾಲೆಗಳು, ಯುವ ಸಂಘಟನೆಗಳು, ಎನ್ ಜಿಒಗಳು, ಪಂಚಾಯತ್ ಗಳು ಮತ್ತು ವ್ಯಕ್ತಿಗಳನ್ನು ಸಚಿವಾಲಯವು ಪ್ರೋತ್ಸಾಹಿಸುತ್ತದೆ. ಭಾರತದ ಅತ್ಯಂತ ಕಿರಿಯ ಸಾಧಕರಿಗೆ ಅರ್ಹವಾದ ಮನ್ನಣೆ ಸಿಗುವಂತೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.
*****
(रिलीज़ आईडी: 2280254)
आगंतुक पटल : 17
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam