ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದ ಪ್ರಮುಖಾಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 14 JUN 2026 8:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್‌ ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣದ ಪ್ರಮುಖಾಂಶಗಳನ್ನು ಹಂಚಿಕೊಂಡಿದ್ದಾರೆ.

ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

"ಭಾರತಕ್ಕೆ ಬನ್ನಿ.

ನಮ್ಮೊಂದಿಗೆ ಕೆಲಸ ಮಾಡಿ.

ಭಾರತದಲ್ಲಿ ವಿನ್ಯಾಸ ಮಾಡಿ.

ಭಾರತದಲ್ಲಿ ಅಭಿವೃದ್ಧಿಪಡಿಸಿ.

ಮತ್ತು ಜಗತ್ತಿಗೆ ಪರಿಹಾರಗಳನ್ನು ನೀಡಿ.

@BharatInnov2026”

“ನಾವೀನ್ಯತೆಯು ಭಾರತದ ಡಿಎನ್‌ಎ ದಲ್ಲಿದೆ.

ಭಾರತದ ಯುವಕರು ವಿವಿಧ ಕ್ಷೇತ್ರಗಳಲ್ಲಿ ನವೀನ ಆವಿಷ್ಕಾರ ಮಾಡುತ್ತಿದ್ದಾರೆ. ಜಾಗತಿಕ ಸವಾಲುಗಳಿಗೂ ಅವರು ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ.

@BharatInnov2026”

"ಇಂದು, ಜಗತ್ತು ವಿಶ್ವಾಸಾರ್ಹ, ಎಲ್ಲರನ್ನೊಳಗೊಂಡ, ಮಾನವ ಕೇಂದ್ರಿತ ಮತ್ತು ಜಾಗತಿಕ ಒಳಿತಿಗೆ ಬದ್ಧವಾದ ತಂತ್ರಜ್ಞಾನಗಳೆಡೆಗೆ ನೋಡುತ್ತಿದೆ.

ಇಂತಹ ಕಾಲಘಟ್ಟದಲ್ಲಿ, ಭಾರತದ ಆದ್ಯತೆ ಸ್ಪಷ್ಟವಾಗಿದೆ... ಮಾನವೀಯತೆಗಾಗಿ ತಂತ್ರಜ್ಞಾನ ಮತ್ತು ಮಾನವ ಕೇಂದ್ರಿತ ನಾವೀನ್ಯತೆ.

@BharatInnov2026”

"ವರ್ಧಿತ ವೇಗ ಮತ್ತು ಪ್ರಮಾಣದೊಂದಿಗೆ ಭಾರತ್ ಇನ್ನೋವೇಟ್ಸ್. 

ಸುಸ್ಥಿರ ಭವಿಷ್ಯಕ್ಕಾಗಿ ಭಾರತ್ ಇನ್ನೋವೇಟ್ಸ್.

ಮತ್ತು ಇಡೀ ವಿಶ್ವಕ್ಕಾಗಿ ಭಾರತ್ ಇನ್ನೋವೇಟ್ಸ್.

@BharatInnov2026”

 

*****

 


(रिलीज़ आईडी: 2272887) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Manipuri , Assamese , Punjabi , Gujarati , Odia , Tamil , Telugu , Malayalam