ಗೃಹ ವ್ಯವಹಾರಗಳ ಸಚಿವಾಲಯ
ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿಯಾಗಿ ದೇಶದ ಜನರ ಸೇವೆ ಸಲ್ಲಿಸಿರುವ ಐತಿಹಾಸಿಕ ಸಾಧನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ 12 ವರ್ಷಗಳ ಆಡಳಿತ ಭಾರತದ ಸ್ವಾಭಿಮಾನ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ವಿಮೋಚನೆಯ ಪುನರುತ್ಥಾನಕ್ಕೆ ಹೆಸರುವಾಸಿ
ದೇಶದ ನಾಗರಿಕರನ್ನು ಸುರಕ್ಷಿತವಾಗಿರಿಸುವುದು ಮತ್ತು ಅವರ ಕಳೆದುಹೋದ ಸ್ವಾಭಿಮಾನ ಮತ್ತು ಹೆಮ್ಮೆ ಪುನಃಸ್ಥಾಪನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶ್ರೇಷ್ಠ ಸಾಧನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವು ಸಂಕಲ್ಪದಿಂದ ಯಶಸ್ಸಿನತ್ತ ಮತ್ತು ಸೇವೆಯಿಂದ ಉತ್ತಮ ಆಡಳಿತದತ್ತ ಪ್ರಯಾಣದ ಸಂಕೇತ: ಅಮಿಶ್ ಶಾ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಆತ್ಮ ವಿಶ್ವಾಸ, ಅಭಿವೃದ್ಧಿ ಮತ್ತು ಜಾಗತಿಕ ಪ್ರತಿಷ್ಠೆಯ ಹೊಸ ಮಾನದಂಡ ಸ್ಥಾಪನೆ: ಕೇಂದ್ರ ಗೃಹ ಸಚಿವರು
प्रविष्टि तिथि:
10 JUN 2026 3:43PM by PIB Bengaluru
ದೇಶದ ದೀರ್ಘಕಾಲ ಆಯ್ಕೆಯಾದ ಪ್ರಧಾನಮಂತ್ರಿಯಾಗಿ ಜನರಿಗೆ ಸೇವೆ ಸಲ್ಲಿಸುವ ಐತಿಹಾಸಿಕ ಸಾಧನೆಗಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಅಮಿತ್ ಶಾ ತಮ್ಮ ಸಾಮಾಜಿಕ ಮಾಧ್ಯಮ ಸರಣಿ ಪೋಸ್ಟ್ ನಲ್ಲಿ, “ದೇಶದ ಜನರಿಗೆ ಸೇವೆ ಸಲ್ಲಿಸಲು ದೀರ್ಘಕಾಲದಿಂದ ಆಯ್ಕೆಯಾದ ಪ್ರಧಾನಮಂತ್ರಿಯೆಂಬ ಐತಿಹಾಸಿಕ ಸಾಧನೆಗಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಮೋದಿ ಅವರ ಈ 12 ವರ್ಷಗಳು ಭಾರತದ ಸ್ವಾಭಿಮಾನದ ಪುನರುತ್ಥಾನ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ರಾಷ್ಟ್ರದ ವಿಮೋಚನೆಯಿಂದ ಹೆಸರುವಾಸಿಯಾಗಿದೆ. ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲಾಯಿತು, ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸಲಾಯಿತು, ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಲಾಯಿತು ಮತ್ತು ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಹಾದಿ ಸುಗಮಗೊಳಿಸಲಾಯಿತು. ಇದೇ ವೇಳೆ, ಆತ್ಮನಿರ್ಭರ ಭಾರತ ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ. ಈ 12 ವರ್ಷಗಳಲ್ಲಿ, ರಾಷ್ಟ್ರದ ಗಡಿಗಳು ಹೆಚ್ಚು ಸುರಕ್ಷಿತವಾದವು, ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು, ರಾಮ ಮಂದಿರವನ್ನು ನಿರ್ಮಿಸಲಾಯಿತು, ನಕ್ಸಲಿಸಂ ವಿರುದ್ಧ ನಿರ್ಣಾಯಕ ಯಶಸ್ಸನ್ನು ಸಾಧಿಸಲಾಯಿತು ಮತ್ತು ಪ್ರತಿ ಭಯೋತ್ಪಾದಕ ಘಟನೆಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಭಯೋತ್ಪಾದನೆಯನ್ನು ದೃಢವಾಗಿ ಎದುರಿಸಲಾಯಿತು. ಜತೆಗೆ ರಾಷ್ಟ್ರದ ಸಾಮೂಹಿಕ ಶಕ್ತಿಯು ಕೀಳರಿಮೆ ಮತ್ತು ಕಲಿತ ಭಾವನೆಯಿಂದ ಹೊರಹೊಮ್ಮಿತು. ತನ್ನ ಪರಂಪರೆ, ಸಂಸ್ಕೃತಿ ಮತ್ತು ಸಾಮರ್ಥ್ಯಗಳ ಬಗ್ಗೆ ಹೆಮ್ಮೆ ಪಡುವುದು. ದೇಶದ ಜನರನ್ನು ಸುರಕ್ಷಿತವಾಗಿರಿಸುವುದು ಮತ್ತು ಅವರ ಕಳೆದುಹೋದ ಸ್ವಾಭಿಮಾನ ಮತ್ತು ಘನತೆಯನ್ನು ಪುನಃಸ್ಥಾಪಿಸುವುದು ಮೋದಿ ಅವರ ಶ್ರೇಷ್ಠ ಸಾಧನೆಯಾಗಿದೆ. ಇಂದು ನವ ಭಾರತವು ಪ್ರತಿಯೊಂದು ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ತನ್ನ ಗುರುತನ್ನು ಸ್ಥಾಪಿಸುತ್ತಿದೆ ಮತ್ತು ಜಗತ್ತು ಸಮರ್ಥ, ಸದೃಢ ಮತ್ತು ರೂಪಾಂತರಗೊಂಡ ಭಾರತದ ಉದಯಕ್ಕೆ ಸಾಕ್ಷಿಯಾಗುತ್ತಿದೆ.’’
ಮತ್ತೊಂದು ಪೋಸ್ಟ್‌ನಲ್ಲಿ, ಗೃಹ ಸಚಿವರಾದ ಶ್ರೀ ಅಮಿತ್ ಶಾ, ”ನರೇಂದ್ರ ಮೋದಿ ಅವರ ನಾಯಕತ್ವವು ಸಂಕಲ್ಪದಿಂದ ಯಶಸ್ಸಿನತ್ತ ಮತ್ತು ಸೇವೆಯಿಂದ ಉತ್ತಮ ಆಡಳಿತದತ್ತ ಪಯಣದ ಸಂಕೇತವಾಗಿದೆ. ಅವರ ನಾಯಕತ್ವದಲ್ಲಿ ಭಾರತವು ಆತ್ಮ ವಿಶ್ವಾಸ, ಅಭಿವೃದ್ಧಿ ಮತ್ತು ಜಾಗತಿಕ ಪ್ರತಿಷ್ಠೆಯ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.’’
*****
(रिलीज़ आईडी: 2271176)
आगंतुक पटल : 18
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali-TR
,
Bengali
,
Assamese
,
Gujarati
,
Tamil
,
Telugu
,
Malayalam