ಗೃಹ ವ್ಯವಹಾರಗಳ ಸಚಿವಾಲಯ
ಆಪರೇಷನ್ ರೇಜ್ ಪಿಲ್: ಪ್ರಮುಖ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಎನ್.ಸಿ.ಬಿ. ಭೇದಿಸಿದೆ; ಮಧ್ಯಪ್ರಾಚ್ಯ ಪ್ರದೇಶದಲ್ಲಿ ಬಳಸಲಾಗುವ ಸೈಕೋಟ್ರೋಪಿಕ್ ಮಾದಕ ವಸ್ತುವಾದ ಕ್ಯಾಪ್ಟಗನ್ ಅನ್ನು ಮೊದಲ ಬಾರಿಗೆ ಭಾರತದಲ್ಲಿ ವಶಪಡಿಸಿಕೊಳ್ಳಲಾಗಿದೆ
‘ಆಪರೇಷನ್ ರೇಜ್ ಪಿಲ್’ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಎನ್.ಸಿ.ಬಿ.ಯ ಧೈರ್ಯಶಾಲಿ ಮತ್ತು ಜಾಗರೂಕ ಯೋಧರನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಭಿನಂದಿಸಿದರು
‘ಆಪರೇಷನ್ ರೇಜ್ ಪಿಲ್’ ಮೂಲಕ, ನಮ್ಮ ಏಜೆನ್ಸಿಗಳು “ಜಿಹಾದಿ ಡ್ರಗ್” ಎಂದು ಕರೆಯಲ್ಪಡುವ “ಕ್ಯಾಪ್ಟಗನ್” ಅನ್ನು ಮೊದಲ ಬಾರಿಗೆ ಭಾರತ ವಶಪಡಿಸಿಕೊಂಡಿವೆ
ಮಧ್ಯಪ್ರಾಚ್ಯಕ್ಕೆ ಉದ್ದೇಶಿಸಲಾದ ಮಾದಕವಸ್ತು ರವಾನೆಯ ಭೇದನೆಯು ಮೋದಿ ಸರ್ಕಾರದ ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ಒಂದು ಉಜ್ವಲ ಉದಾಹರಣೆಯಾಗಿದೆ
ನಮ್ಮ ಪ್ರದೇಶವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಂಡು ಭಾರತಕ್ಕೆ ಪ್ರವೇಶಿಸುವ ಅಥವಾ ದೇಶದ ಮಾರ್ಗವಾಗಿ ಸಾಗುವ ಪ್ರತಿ ಗ್ರಾಂ ಮಾದಕವಸ್ತುಗಳನ್ನು ನಾವು ಹತ್ತಿಕ್ಕುತ್ತೇವೆ
ಖರೀದಿ ಮೂಲ, ಹವಾಲಾ ಸಂಪರ್ಕಗಳು, ಸಾಗಣಿಕೆ(ಲಾಜಿಸ್ಟಿಕ್ಸ್) ಸರಪಳಿ, ಅಂತರರಾಷ್ಟ್ರೀಯ ಗ್ರಾಹಕಗಳು ಮತ್ತು ವಿಶಾಲವಾದ ಅಂತರರಾಷ್ಟ್ರೀಯ ಮಾದಕವಸ್ತು ಜಾಲದ ಬಗ್ಗೆ ಎನ್.ಸಿ.ಬಿ ಸಮಗ್ರ ತನಿಖೆಯನ್ನು ಪ್ರಾರಂಭಿಸಿದೆ
₹182 ಕೋಟಿ ಮೌಲ್ಯದ 227.7 ಕೆಜಿ ಕ್ಯಾಪ್ಟಗನ್ ಮಾತ್ರೆಗಳು/ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ; ಮಾದಕವಸ್ತು ಸಿಂಡಿಕೇಟ್ ನೊಂದಿಗೆ ಸಂಪರ್ಕ ಹೊಂದಿರುವ ಸಿರಿಯನ್ ಪ್ರಜೆಯ ಬಂಧನಮಾಡಲಾಗಿದೆ
ಪ್ರಕಟಣಾ ದಿನಾಂಕ:
16 MAY 2026 2:06PM by PIB Bengaluru
ಅಂತಾರಾಷ್ಟ್ರೀಯ ಸಂಶ್ಲೇಷಿತ ಮಾದಕವಸ್ತು ಕಳ್ಳಸಾಗಣೆ ಜಾಲಗಳ ವಿರುದ್ಧದ ಪ್ರಮುಖ ಪ್ರಗತಿಯಲ್ಲಿ, ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್.ಸಿ.ಬಿ.), ಆಪರೇಷನ್ ರೇಜ್ ಪಿಲ್ ಅಡಿಯಲ್ಲಿ, ಕ್ಯಾಪ್ಟಗನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ, ಇದರಿಂದಾಗಿ ಸುಮಾರು 227.7 ಕೆಜಿ ಕ್ಯಾಪ್ಟಗನ್ ಮಾತ್ರೆಗಳು/ಪೌಡರ್ ವಶಪಡಿಸಿಕೊಳ್ಳಲಾಗಿದೆ ಮತ್ತು ಸಿಂಡಿಕೇಟ್ನ ಸದಸ್ಯರಾಗಿರುವ ಒಬ್ಬ ಸಿರಿಯನ್ ಪ್ರಜೆಯನ್ನು ಬಂಧಿಸಲಾಗಿದೆ. ಕ್ಯಾಪ್ಟಗನ್ ಮುಖ್ಯವಾಗಿ ಎನ್. ಡಿ. ಪಿ. ಎಸ್. ಕಾಯ್ದೆಯಡಿ ಸೈಕೋಟ್ರೋಪಿಕ್ ಪದಾರ್ಥಗಳಾದ ಫೆನೆಟಿಲಿನ್ ಮತ್ತು ಆಂಫೆಟಮೈನ್ ಅನ್ನು ಒಳಗೊಂಡಿದೆ.
'ಆಪರೇಷನ್ ರೇಜ್ ಪಿಲ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎನ್.ಸಿ.ಬಿ.ಯ ಧೈರ್ಯಶಾಲಿ ಮತ್ತು ಜಾಗರೂಕ ಯೋಧರನ್ನು ಅಭಿನಂದಿಸಿದರು. 'ಆಪರೇಷನ್ ರೇಜ್ ಪಿಲ್ ಮೂಲಕ, ನಮ್ಮ ಏಜೆನ್ಸಿಗಳು "ಜಿಹಾದಿ ಡ್ರಗ್" ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಅನ್ನು ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀ ಶಾ ಅವರು ಹೇಳಿದರು.
"ಮೋದಿ ಸರ್ಕಾರ 'ಮಾದಕವಸ್ತು ಮುಕ್ತ ಭಾರತ'ಕ್ಕೆ ಸಂಕಲ್ಪ ಮಾಡಿದೆ. 'ಆಪರೇಷನ್ ರೇಜ್ಪಿಲ್' ಮೂಲಕ, ನಮ್ಮ ಏಜೆನ್ಸಿಗಳು ₹182 ಕೋಟಿ ಮೌಲ್ಯದ "ಜಿಹಾದಿ ಡ್ರಗ್" ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಅನ್ನು ಮೊದಲ ಬಾರಿಗೆ ವಶಪಡಿಸಿಕೊಂಡಿವೆ ಎಂದು ಮಾಹಿತಿ ಹಂಚಿಕೊಳ್ಳಲು ಸಂತೋಷವಾಗಿದೆ. ಮಧ್ಯಪ್ರಾಚ್ಯಕ್ಕೆ ಸಾಗಿಸಲಾಗಿದ್ದ ಮಾದಕವಸ್ತು ಸಾಗಣೆಯನ್ನು ಭೇದಿಸುವುದು ಮತ್ತು ವಿದೇಶಿ ಪ್ರಜೆಯ ಬಂಧನವು ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಗೆ ನಮ್ಮ ಬದ್ಧತೆಯ ಹೊಳೆಯುವ ಉದಾಹರಣೆಗಳಾಗಿವೆ. ಭಾರತಕ್ಕೆ ಪ್ರವೇಶಿಸುವ ಅಥವಾ ನಮ್ಮ ಪ್ರದೇಶವನ್ನು ಸಾಗಣೆ ಮಾರ್ಗವಾಗಿ ಬಳಸಿಕೊಂಡು ಸಾಗಣೆ ಮಾರ್ಗವಾಗಿ ದೇಶದಿಂದ ಹೊರಡುವ ಪ್ರತಿ ಗ್ರಾಂ ಮಾದಕವಸ್ತುಗಳನ್ನು ನಾವು ನಿಗ್ರಹಿಸುತ್ತೇವೆ ಎಂದು ನಾನು ಪುನರಾವರ್ತಿಸುತ್ತೇನೆ. ಎನ್.ಸಿ.ಬಿ.ಯ ಧೈರ್ಯಶಾಲಿ ಮತ್ತು ಜಾಗರೂಕ ಯೋಧರಿಗೆ ಧನ್ಯವಾದಗಳು."
ಕ್ಯಾಪ್ಟಗನ್ ಕಳ್ಳಸಾಗಣೆಗಾಗಿ ಭಾರತವನ್ನು ಸಾಗಣೆಯಾಗಿ ಬಳಸಲಾಗುತ್ತಿದೆ ಎಂದು ವಿದೇಶಿ ಮಾದಕವಸ್ತು ಕಾನೂನು ಜಾರಿ ಸಂಸ್ಥೆಯಿಂದ ಪಡೆದ ಮಾಹಿತಿಯನ್ನು ಅಭಿವೃದ್ಧಿಪಡಿಸಿದ ನಂತರ, ನವದೆಹಲಿಯ ನೆಬ್ ಸರೈನಲ್ಲಿರುವ ಮನೆಯನ್ನು ಗುರುತಿಸಲಾಯಿತು ಮತ್ತು ಮೇ 11, 2026 ರಂದು ಮನೆಯನ್ನು ಶೋಧಿಸಿದಾಗ ಸುಮಾರು 31.5 ಕೆಜಿ ಕ್ಯಾಪ್ಟಗನ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಯಿತು, ಇದನ್ನು ವಾಣಿಜ್ಯ ಚಪಾತಿ ತಯಾರಿಸುವ ಯಂತ್ರದಲ್ಲಿ ಎಚ್ಚರಿಕೆಯಿಂದ ಮರೆಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ, ಇದನ್ನು ಸೌದಿ ಅರೇಬಿಯಾದ ಜೆಡ್ಡಾಗೆ ರಫ್ತು ಮಾಡಲು ಉದ್ದೇಶಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಿರಿಯನ್ ಪ್ರಜೆಯು 15.11.2024 ರಂದು ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಪ್ರವೇಶಿಸಿದ್ದನು, ಆದರೆ ಅವನ ವೀಸಾ ಅವಧಿ 12.01.2025 ರಂದು ಮುಕ್ತಾಯಗೊಂಡಿತು ಮತ್ತು ಅವನು ಭಾರತದಲ್ಲಿ ಕಾನೂನುಬಾಹಿರವಾಗಿ ಅವಧಿ ಮೀರಿ ವಾಸಿಸುತ್ತಿದ್ದನು ಮತ್ತು ನೆಬ್ ಸರೈನಲ್ಲಿರುವ ಸದರಿ ಮನೆಯನ್ನು ಬಾಡಿಗೆಗೆ ಪಡೆದಿದ್ದನು ಎಂದು ತಿಳಿದುಬಂದಿದೆ.
ಆರೋಪಿಯನ್ನು ಮತ್ತಷ್ಟು ಪ್ರಶ್ನಿಸಿದಾಗ ಮೇ 14, 2026 ರಂದು ಗುಜರಾತ್ ನ ಮುಂದ್ರಾದಲ್ಲಿರುವ ಕಂಟೇನರ್ ಫೆಸಿಲಿಟೇಶನ್ ಸ್ಟೇಷನ್ (ಸಿ.ಎಫ್.ಎಸ್) ನಲ್ಲಿರುವ ಕಂಟೇನರ್ ನಿಂದ ಸುಮಾರು 196.2 ಕೆಜಿ ಕ್ಯಾಪ್ಟಗನ್ ಪೌಡರ್ ಪತ್ತೆಯಾಗಿದೆ. ಕಂಟೇನರ್ ಅನ್ನು ಸಿರಿಯಾದಿಂದ ಆಮದು ಮಾಡಿಕೊಳ್ಳಲಾಗಿದ್ದು, ಕುರಿ ಉಣ್ಣೆಯನ್ನು ಘೋಷಿತ ಸರಕು ಎಂದು ಘೋಷಿಸಲಾಗಿದೆ. ಕಂಟೇನರ್ ಅನ್ನು ಸಂಪೂರ್ಣವಾಗಿ ಶೋಧಿಸಿದಾಗ 196.2 ಕೆಜಿ ಕ್ಯಾಪ್ಟಗನ್ ಪೌಡರ್ ಹೊಂದಿರುವ 3 ಚೀಲಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಸರಕು ಗಲ್ಫ್ ಪ್ರದೇಶಕ್ಕೆ, ವಿಶೇಷವಾಗಿ ಸೌದಿ ಅರೇಬಿಯಾ ಮತ್ತು ನೆರೆಯ ಮಧ್ಯಪ್ರಾಚ್ಯ ದೇಶಗಳಿಗೆ ಟ್ರಾನ್ಸ್ಶಿಪ್ಮೆಂಟ್ ಮಾಡಲು ಉದ್ದೇಶಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಹಾಗೂ ದುರುಪಯೋಗ ವಿರುದ್ದ ಗಂಭೀರ ಕಾನೂನು ಜಾರಿ ಮತ್ತು ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ.
ಆಪರೇಷನ್ ರೇಜ್ಪಿಲ್ ಸಮಯದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಕ್ಯಾಪ್ಟಗಾನ್ ಮಾತ್ರೆಗಳು/ಪೌಡರ್ ಸುಮಾರು 227.7 ಕೆ.ಜಿ.ಗಳಷ್ಟಿದ್ದು, ಗಲ್ಫ್ ಮತ್ತು ಮಧ್ಯಪ್ರಾಚ್ಯದಾದ್ಯಂತದ ಗಮ್ಯಸ್ಥಾನ ಮಾರುಕಟ್ಟೆಗಳಲ್ಲಿ ಅಂದಾಜು ₹182 ಕೋಟಿಗಳಷ್ಟು ಅಕ್ರಮ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಈ ಕಾರ್ಯಾಚರಣೆಯ ಮೂಲಕ ಭಾರತವು ಮೊದಲ ಬಾರಿಗೆ ಕ್ಯಾಪ್ಟಗಾನ್ ಅನ್ನು ವಶಪಡಿಸಿಕೊಂಡಿದೆ ಮತ್ತು ಭಾರತವನ್ನು ಸಾರಿಗೆ ಕೇಂದ್ರವಾಗಿ ಬಳಸಲು ಅಂತರರಾಷ್ಟ್ರೀಯ ಸಿಂಡಿಕೇಟ್ ಗಳ ಪ್ರಯತ್ನಗಳನ್ನು ಇದು ಬಹಿರಂಗಪಡಿಸುತ್ತದೆ. ಅಂತರರಾಷ್ಟ್ರೀಯ ಗುಪ್ತಚರ ಹಂಚಿಕೆ ಮತ್ತು ಕಾನೂನು ಜಾರಿ ಸಹಕಾರವು ಬಹು ನ್ಯಾಯವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಗುರುತಿಸುವುದು, ಪ್ರತಿಬಂಧಿಸುವುದು ಮತ್ತು ಕಿತ್ತುಹಾಕುವಲ್ಲಿ ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಮಾದಕವಸ್ತು ಜಾರಿ ಸಂಸ್ಥೆಗಳು ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್ಗಳನ್ನು ಕೆಡವಲು ಹೇಗೆ ಒಟ್ಟಾಗಿ ಬರಬಹುದು ಎಂಬುದನ್ನು ಇದು ವಿವರಿಸುತ್ತದೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಪ್ರಮುಖ ಎನ್.ಸಿ.ಬಿ. ನಿಷೇಧದ ಹಿನ್ನೆಲೆಯಲ್ಲಿ ಈಕ್ವೆಡಾರ್ನಿಂದ ಹುಟ್ಟಿಕೊಂಡ ಕಂಟೇನರ್ನಲ್ಲಿ ಮರೆಮಾಡಲಾಗಿರುವ 349 ಕಿಲೋಗ್ರಾಂಗಳಷ್ಟು ಕೊಕೇನ್ ಅನ್ನು ಒಳಗೊಂಡಂತೆ ಈ ವಶಪಡಿಸಿಕೊಳ್ಳುವಿಕೆಯು ಮಹತ್ವದ್ದಾಗಿದೆ, ಇದು ಪ್ರದೇಶಗಳಾದ್ಯಂತ ಮಾದಕವಸ್ತು ವಸ್ತುಗಳನ್ನು ಸಾಗಿಸಲು ವಾಣಿಜ್ಯ ಸರಕು ಮತ್ತು ಕಂಟೇನರೀಕೃತ ವ್ಯಾಪಾರ ಮಾರ್ಗಗಳನ್ನು ದುರುಪಯೋಗಪಡಿಸಿಕೊಳ್ಳುವ ಅಂತಾರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್ಗಳ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ.
ಖರೀದಿಯ ಮೂಲ, ಹಣಕಾಸು ಮತ್ತು ಹವಾಲಾ ಸಂಪರ್ಕಗಳು, ಲಾಜಿಸ್ಟಿಕ್ಸ್ ಫೆಸಿಲಿಟೇಟರ್ಗಳು, ಅಂತಾರಾಷ್ಟ್ರೀಯ ಸ್ವೀಕರಿಸುವವರು ಮತ್ತು ಸಿಂಡಿಕೇಟ್ಗೆ ಸಂಬಂಧಿಸಿದ ವಿಶಾಲವಾದ ಅಂತಾರಾಷ್ಟ್ರೀಯ ಜಾಲವನ್ನು ಗುರುತಿಸಲು ಎನ್ಸಿಬಿ ಸಮಗ್ರ ತನಿಖೆಯನ್ನು ಪ್ರಾರಂಭಿಸಿದೆ. ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕವಸ್ತು ದುರುಪಯೋಗದ ಜಾಗತಿಕ ಸಮಸ್ಯೆಗೆ ಸಾಮೂಹಿಕ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಗುಪ್ತಚರ ಹಂಚಿಕೆ, ಮಾದಕವಸ್ತು ಕಿಂಗ್ಪಿನ್ ಗಳ ಹಸ್ತಾಂತರ ಮತ್ತು ಮಾದಕವಸ್ತು-ಭಯೋತ್ಪಾದನೆ ಮತ್ತು ಮಾದಕವಸ್ತು ಕಾರ್ಟೆಲ್ ಗಳ ವಿರುದ್ಧ ಸಂಘಟಿತ ಕ್ರಮದ ಮೂಲಕ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಭಾರತ ಬದ್ಧವಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಮಾದಕವಸ್ತು ದುರುಪಯೋಗದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯ ಕಡೆಗೆ ಎನ್‌ಸಿಬಿ ತನ್ನ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಮತ್ತು ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್ಗಳನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಮಾನಸ್ ಸಹಾಯವಾಣಿ (ನಿಶುಲ್ಕ ಕರೆ: 1933) ಮೂಲಕ ಮಾದಕವಸ್ತು ಸಂಬಂಧಿತ ಮಾಹಿತಿಯನ್ನು ವರದಿ ಮಾಡಲು ಎನ್.ಸಿ.ಬಿ. ನಾಗರಿಕರನ್ನು ಒತ್ತಾಯಿಸುತ್ತದೆ. ಮಾಹಿತಿದಾರರ ಗುರುತನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗುತ್ತದೆ.
*****
(ಪ್ರಕಟಣೆ ಐ.ಡಿ.: 2261771)
ವಿಸಿಟರ್ ಕೌಂಟರ್ : 13