ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಯೋತ್ಪಾದನೆ ವಿರುದ್ಧ ಭಾರತದ ನಿರ್ಣಾಯಕ ಹೋರಾಟದ ಕುರಿತು ಲೋಕಸಭೆಯಲ್ಲಿ ಶ್ರೀ ಅಮಿತ್ ಶಾ ಅವರು ಮಾಡಿದ ಭಾಷಣವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 30 MAR 2026 9:53PM by PIB Bengaluru

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಡಿದ ಅತ್ಯುತ್ತಮ ಭಾಷಣವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಇದು ಪ್ರಮುಖ ಸಂಗತಿಗಳು, ಐತಿಹಾಸಿಕ ಹಿನ್ನೆಲೆ, ಮತ್ತು ಕಳೆದ ದಶಕದಲ್ಲಿ ಸರ್ಕಾರದ ಪ್ರಯತ್ನಗಳ ವಿವರವಾದ ವರದಿಯನ್ನು ಒಳಗೊಂಡಿದೆ ಎಂದು ಅವರು ಗಮನಿಸಿದ್ದಾರೆ. ದಶಕಗಳಿಂದ, ಪ್ರತಿಗಾಮಿ ಮಾವೋವಾದಿ ಸಿದ್ಧಾಂತವು ಹಲವಾರು ಪ್ರದೇಶಗಳ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು ಎಡಪಂಥೀಯ ತೀವ್ರಗಾಮಿತವದವು ಅಸಂಖ್ಯಾತ ಯುವಕರ ಭವಿಷ್ಯವನ್ನು ತೀವ್ರವಾಗಿ ಬಾಧಿಸಿದೆ ಎಂದು ಶ್ರೀ ಮೋದಿ ಅವರು ಉಲ್ಲೇಖಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ, ಸರ್ಕಾರವು ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಶ್ರಮಿಸಿದೆ ಮತ್ತು ಅದೇ ಸಮಯದಲ್ಲಿ ಅಭಿವೃದ್ಧಿಯ ಪ್ರಯೋಜನಗಳು ಭಯೋತ್ಪಾದನೆ ಪೀಡಿತ ಪ್ರದೇಶಗಳಿಗೆ ತಲುಪುವಂತೆ ಖಚಿತಪಡಿಸಿದೆ ಎಂದು ಅವರು ಹೇಳಿದ್ದಾರೆ. ಉತ್ತಮ ಆಡಳಿತವನ್ನು ಬಲಪಡಿಸಲು ಮತ್ತು ಎಲ್ಲರಿಗೂ ಶಾಂತಿ ಹಾಗೂ ಸಮೃದ್ಧಿಯನ್ನು ಖಚಿತಪಡಿಸಲು ಸರ್ಕಾರವು ನಿರಂತರವಾಗಿ ಗಮನಹರಿಸಲಿದೆ ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಡಿದ ಅತ್ಯುತ್ತಮ ಭಾಷಣ ಇದಾಗಿದೆ. ಇದು ಪ್ರಮುಖ ಸಂಗತಿಗಳು, ಐತಿಹಾಸಿಕ ಹಿನ್ನೆಲೆ ಮತ್ತು ಕಳೆದ ದಶಕದಲ್ಲಿ ನಮ್ಮ ಸರ್ಕಾರದ ಪ್ರಯತ್ನಗಳನ್ನು ಒಳಗೊಂಡಿದೆ.

ದಶಕಗಳಿಂದ, ಪ್ರತಿಗಾಮಿ ಮಾವೋವಾದಿ ಸಿದ್ಧಾಂತವು ಹಲವಾರು ಪ್ರದೇಶಗಳ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎಡಪಂಥೀಯ ತೀವ್ರಗಾಮಿತವದವು ಅಸಂಖ್ಯಾತ ಯುವಕರ ಭವಿಷ್ಯವನ್ನು ಹಾಳುಮಾಡಿದೆ.

ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಶ್ರಮಿಸಿದೆ ಮತ್ತು ಅದೇ ಸಮಯದಲ್ಲಿ ಅಭಿವೃದ್ಧಿ ಪ್ರಯೋಜನೆಗಳನ್ನು ಭಯೋತ್ಪಾದನೆ ಪೀಡಿತ ಪ್ರದೇಶಗಳಿಗೆ ತಲುಪಿಸುವುದನ್ನು ಖಚಿತಪಡಿಸಿದೆ. ನಾವು ಉತ್ತಮ ಆಡಳಿತವನ್ನು ಉತ್ತೇಜಿಸಲು ಮತ್ತು ಎಲ್ಲರಿಗೂ ಶಾಂತಿ ಹಾಗೂ ಸಮೃದ್ಧಿಯನ್ನು ಖಚಿತಪಡಿಸಲು ಗಮನಹರಿಸುವುದನ್ನು ಮುಂದುವರಿಸುತ್ತೇವೆ."

 

*****


(ಪ್ರಕಟಣೆ ಐ.ಡಿ.: 2257833) ವಿಸಿಟರ್ ಕೌಂಟರ್ : 10