ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಂಗೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ ಶ್ರೀ ಪೀಟರ್ ಮೆಗ್ಯಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 APR 2026 11:40AM by PIB Bengaluru

ಹಂಗೇರಿ ದೇಶದ ಸಂಸತ್ತು ಚುನಾವಣೆಯಲ್ಲಿ ಜಯ ಸಾಧಿಸಿದ ಶ್ರೀ ಪೀಟರ್ ಮೆಗ್ಯಾರ್ ಹಾಗೂ ಟಿಸ್ಜಾ ಪಕ್ಷಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಭಾರತ ಮತ್ತು ಹಂಗೇರಿ ದೇಶಗಳು ಆಳವಾದ ಸ್ನೇಹ, ಪರಸ್ಪರ ಹಂಚಿಕೊಂಡ ಮೌಲ್ಯಗಳು ಮತ್ತು ಶಾಶ್ವತ ಗೌರವಗಳನ್ನು ಹೊಂದಿವೆ. ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಹಾಗೂ ಎರಡೂ ದೇಶಗಳ ಜನರ ಒಟ್ಟು ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಮಹತ್ವದ ಭಾರತ–ಐರೋಪ್ಯ ಒಕ್ಕೂಟ (EU) ತಾಂತ್ರಿಕ ಸಹಕಾರವನ್ನು ಮುಂದುವರಿಸಲು ಶ್ರೀ ಮೆಗ್ಯಾರ್ ಅವರೊಂದಿಗೆ ನಿಕಟವರ್ತಿಯಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಪ್ರಧಾನ ಮಂತ್ರಿ ಶ್ರೀ ಮೋದಿ ಹೇಳಿದ್ದಾರೆ. 

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;

"ಶ್ರೀ ಪೀಟರ್ ಮೆಗ್ಯಾರ್ ಹಾಗೂ ಟಿಸ್ಜಾ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಸಾಧಿಸಿದ ಭರ್ಜರಿ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ ಮತ್ತು ಹಂಗೇರಿ ಆಳವಾದ ಸ್ನೇಹ, ಹಂಚಿಕೊಂಡ ಮೌಲ್ಯಗಳು ಮತ್ತು ಶಾಶ್ವತ ಪರಸ್ಪರ ಗೌರವದಿಂದ ಬಂಧಿತವಾಗಿವೆ. ನಮ್ಮ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಹಾಗೂ ನಮ್ಮ ಜನರ ಒಟ್ಟು ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಮಹತ್ವದ ಭಾರತ–ಐರೋಪ್ಯ ಒಕ್ಕೂಟ ತಂತ್ರಾತ್ಮಕ ಭಾಗ ಸಹಕಾರವನ್ನು ಮುಂದುವರಿಸಲು ನಿಮ್ಮೊಂದಿಗೆ ಹತ್ತಿರದಿಂದ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.

@magyarpeterMP "

 

*****


(ಪ್ರಕಟಣೆ ಐ.ಡಿ.: 2251486) ವಿಸಿಟರ್ ಕೌಂಟರ್ : 5