ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಅರುಣಾಚಲ ಪ್ರದೇಶದ ಕಮ್ಲೆ, ಕ್ರಾದಾಡಿ ಮತ್ತು ಕುರುಂಗ್ ಕುಮೆ ಜಿಲ್ಲೆಗಳಲ್ಲಿ 26,069.50 ಕೋಟಿ ರೂ.ಗಳ ವೆಚ್ಚದಲ್ಲಿ 1720 ಮೆಗಾವ್ಯಾಟ್ ಸಾಮರ್ಥ್ಯದ ಕಮಲಾ ಜಲ ವಿದ್ಯುತ್ ಯೋಜನೆ ನಿರ್ಮಾಣಕ್ಕೆ ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
08 APR 2026 4:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ, ಅರುಣಾಚಲ ಪ್ರದೇಶದ ಕಮ್ಲೆ, ಕ್ರಾದಾಡಿ ಮತ್ತು ಕುರುಂಗ್ ಕುಮೆ ಜಿಲ್ಲೆಗಳಲ್ಲಿ ಕಮಲಾ ಜಲ ವಿದ್ಯುತ್ ಯೋಜನೆ (ಎಚ್.ಇ.ಪಿ.) ನಿರ್ಮಾಣಕ್ಕೆ 26,069.50 ಕೋಟಿ ರೂಪಾಯಿ ಹೂಡಿಕೆಗೆ ತನ್ನ ಅನುಮೋದನೆ ನೀಡಿದೆ. ಯೋಜನೆಯ ಅಂದಾಜು 96 ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
1720 ಮೆಗಾವ್ಯಾಟ್ (8 x 210 ಮೆಗಾವ್ಯಾಟ್ ಮತ್ತು 1 x 40 ಮೆಗಾವ್ಯಾಟ್) ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ಈ ಯೋಜನೆಯು 6870 ಮೆಗಾ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಉತ್ಪಾದನೆಯಾಗುವ ವಿದ್ಯುತ್ ಅರುಣಾಚಲ ಪ್ರದೇಶ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸ್ಥಿತಿಯನ್ನು ಬಲಪಡಿಸುತ್ತದೆ, ಗರಿಷ್ಠ ಬೇಡಿಕೆ ನಿರ್ವಹಣೆಗೆ ಬೆಂಬಲ ನೀಡುತ್ತದೆ, ರಾಷ್ಟ್ರೀಯ ಗ್ರಿಡ್ ಸಮತೋಲನಕ್ಕೆ ಕೊಡುಗೆ ನೀಡುತ್ತದೆ ಮತ್ತು ಬ್ರಹ್ಮಪುತ್ರ ಕಣಿವೆಯಲ್ಲಿ ಪ್ರವಾಹ ನಿಯಂತ್ರಣ ಪ್ರಯೋಜನವನ್ನು ಒದಗಿಸುತ್ತದೆ. ಕಮಲಾ ಎಚ್ ಇಪಿ ಜೊತೆಗೆ, ಇತರ ಜಲವಿದ್ಯುತ್ ಯೋಜನೆಗಳಾದ ಸುಬಾನ್ಸಿರಿ ಲೋವರ್ (2000 ಮೆಗಾವ್ಯಾಟ್), ದಿಬಾಂಗ್ ವಿವಿಧೋದ್ದೇಶ (2880 ಮೆಗಾವ್ಯಾಟ್) ನಿರ್ಮಾಣ ಹಂತದಲ್ಲಿವೆ ಮತ್ತು ಎಟಾಲಿನ್ (3097 ಮೆಗಾವ್ಯಾಟ್) ಅನ್ನು ಅರುಣಾಚಲ ಪ್ರದೇಶದಲ್ಲಿ ಎನ್‌ಎಚ್‌ಪಿಸಿ ಲಿಮಿಟೆಡ್ ಅಭಿವೃದ್ಧಿಪಡಿಸಲು ಯೋಜಿಸಿದೆ.
ಕಮಲಾ ಎಚ್ಇಪಿಯನ್ನು ಎನ್‌ಎಚ್‌ಪಿಸಿ ಲಿಮಿಟೆಡ್ ಮತ್ತು ಅರುಣಾಚಲ ಪ್ರದೇಶ ಸರ್ಕಾರದ ನಡುವಿನ ಜಂಟಿ ಉದ್ಯಮ ಕಂಪನಿಯ ಮೂಲಕ ಕಾರ್ಯಗತಗೊಳಿಸಲಾಗುವುದು. ಭಾರತ ಸರ್ಕಾರವು ಪ್ರವಾಹ ನಿಯಂತ್ರಿಸುವ ಘಟಕಕ್ಕಾಗಿ 4743.98 ಕೋಟಿ ರೂ.ಗಳನ್ನು ಬಜೆಟ್ ಬೆಂಬಲವಾಗಿ ಮತ್ತು 1340 ಕೋಟಿ ರೂ.ಗಳನ್ನ ಅಂದರೆ ರಸ್ತೆಗಳು, ಸೇತುವೆಗಳು ಮತ್ತು ಸಂಬಂಧಿತ ಪ್ರಸರಣ ವ್ಯವಸ್ಥೆಗಳ ನಿರ್ಮಾಣಕ್ಕೆ ಬಜೆಟ್ ಬೆಂಬಲವಾಗಿ ನೀಡಲಿದೆ, ಹಾಗು 750 ಕೋಟಿ ರೂ.ಗಳನ್ನು ರಾಜ್ಯದ ಈಕ್ವಿಟಿ ಪಾಲುಭಾಗವಾಗಿ ಕೇಂದ್ರ ಆರ್ಥಿಕ ನೆರವು ನೀಡಲಿದೆ.
ರಾಜ್ಯವು 12% ಉಚಿತ ವಿದ್ಯುತ್ ಮತ್ತು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ (ಎಲ್ಎಡಿಎಫ್) ಮೀಸಲಿಟ್ಟ ಹೆಚ್ಚುವರಿ 1% ಅನ್ನು ಪಡೆಯುತ್ತದೆ, ಜೊತೆಗೆ ಗಮನಾರ್ಹ ಮೂಲಸೌಕರ್ಯ ಅಭಿವೃದ್ಧಿ ಮತ್ತು ಈ ಪ್ರದೇಶಕ್ಕೆ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತದೆ.
ಅರುಣಾಚಲ ಪ್ರದೇಶದ ಕಮ್ಲೆ, ಕ್ರಾದಾಡಿ ಮತ್ತು ಕುರುಂಗ್ ಕುಮೆ ಜಿಲ್ಲೆಗಳಲ್ಲಿ ಮೂಲಸೌಕರ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ, ಇದರಲ್ಲಿ ಸುಮಾರು 196 ಕಿ.ಮೀ ರಸ್ತೆಗಳು ಮತ್ತು ಸೇತುವೆಗಳ ಅಭಿವೃದ್ಧಿಯೂ ಸೇರಿದೆ. ಈ ಯೋಜನೆಯು ಹೆಚ್ಚಾಗಿ ಸ್ಥಳೀಯ ಬಳಕೆಗೆ ಲಭ್ಯವಿರುತ್ತದೆ. ಆಸ್ಪತ್ರೆಗಳು, ಶಾಲೆಗಳು, ಮಾರುಕಟ್ಟೆಗಳು ಮುಂತಾದ ಅಗತ್ಯ ಮೂಲಸೌಕರ್ಯಗಳ ನಿರ್ಮಾಣದಿಂದ ಜಿಲ್ಲೆಗೆ 8 ಕೋಟಿ ರೂ.ಗಳ ಮೀಸಲಾದ ಯೋಜನಾ ನಿಧಿಯಿಂದ ಹಣ ಒದಗಿಸಲಾಗುವುದು. ಸ್ಥಳೀಯ ಜನರಿಗೆ ಪರಿಹಾರ, ಉದ್ಯೋಗ ಮತ್ತು ಸಿಎಸ್ಆರ್ ಚಟುವಟಿಕೆಗಳಿಂದಲೂ ಪ್ರಯೋಜನವಾಗಲಿದೆ.
ಕಮಲಾ ಎಚ್ ಇ ಪಿ ಜೊತೆಗೆ, ಮೂರು ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಸುಬನ್ಸಿರಿ ಲೋವರ್ (2000 ಮೆಗಾವ್ಯಾಟ್), ದಿಬಾಂಗ್ ವಿವಿಧೋದ್ದೇಶ (2880 ಮೆಗಾವ್ಯಾಟ್) ಮತ್ತು ಎಟಾಲಿನ್ (3097 ಮೆಗಾವ್ಯಾಟ್) ಅನ್ನು ಎನ್‌ಎಚ್‌ಪಿಸಿ ಲಿಮಿಟೆಡ್ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಅಭಿವೃದ್ಧಿಪಡಿಸುತ್ತಿದೆ. ಸುಬಾನ್ಸಿರಿ ಲೋವರ್ ಎಚ್ ಇ ಪಿ (2000 ಮೆಗಾವ್ಯಾಟ್) ಈಗಾಗಲೇ 750 ಮೆಗಾವ್ಯಾಟ್ ಕಾರ್ಯಾರಂಭ ಮಾಡುವುದರೊಂದಿಗೆ ಮುಂದುವರಿದ ಹಂತದಲ್ಲಿದೆ ಮತ್ತು ಉಳಿದ ಸಾಮರ್ಥ್ಯವು ಡಿಸೆಂಬರ್ 2026ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ, ಆದರೆ ಎಲ್ಲಾ ಯೋಜನೆಗಳು ಆತಿಥೇಯ ರಾಜ್ಯಗಳಿಗೆ 12% ಉಚಿತ ವಿದ್ಯುತ್ ಒದಗಿಸುತ್ತವೆ ಮತ್ತು ಯೋಜನಾ ಆದಾಯದ 1%ಕ್ಕೆ ಸಮಾನವಾದ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯ ಮೂಲಕ ಸ್ಥಳೀಯ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ.
*****
(ಪ್ರಕಟಣೆ ಐ.ಡಿ.: 2250147)
ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Telugu