ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮೋದಿ ಸರ್ಕಾರವು ಅಡಮಾನ ರಹಿತ ಸಾಲಗಳನ್ನು ಒದಗಿಸುವ ಮೂಲಕ ಸಣ್ಣ ವ್ಯಾಪಾರಿಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸಿದೆ, ಆ ಮೂಲಕ ಸ್ವಯಂ ಉದ್ಯೋಗ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಉತ್ತೇಜನ ನೀಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ


ಕಳೆದ 11 ವರ್ಷಗಳಲ್ಲಿ, ಈ ಕಲ್ಯಾಣ ಯೋಜನೆಯಡಿ 40 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 58 ಕೋಟಿಗಳಿಗೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ

12 ಕೋಟಿ ಯುವಕರು ಇದರಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯಾಣಕ್ಕೆ ಹೊಸ ವೇಗವನ್ನು ನೀಡುತ್ತಿದ್ದಾರೆ

ಇವುಗಳಲ್ಲಿ, ಪ್ರತಿ 3 ರಲ್ಲಿ 2 'ಮುದ್ರಾ' ಸಾಲಗಳನ್ನು ಮಹಿಳೆಯರಿಗೆ ನೀಡಿರುವುದು ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಯ ನಿಟ್ಟಿನಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ

ಪ್ರಕಟಣಾ ದಿನಾಂಕ: 08 APR 2026 2:17PM by PIB Bengaluru

'ಪ್ರಧಾನ ಮಂತ್ರಿ ಮುದ್ರಾ' ಯೋಜನೆಯು 11 ವರ್ಷಗಳನ್ನು ಪೂರೈಸಿದ ಸಂದರ್ಭದ ಈ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು  "ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಡಮಾ ರಹಿತ ಸಾಲಗಳನ್ನು ಒದಗಿಸುವ ಮೂಲಕ ಸಣ್ಣ ವ್ಯಾಪಾರಿಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸಿದೆ, ಆ ಮೂಲಕ ಸ್ವಯಂ ಉದ್ಯೋಗ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಉತ್ತೇಜನವನ್ನು ನೀಡಿದೆ,''ಎಂದು  ಹೇಳಿದ್ದಾರೆ.

ಈ ಕುರಿತು ‘ಎಕ್ಸ್‌’ ವೇದಿಕೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, "ಮುದ್ರಾ ಯೋಜನೆಯ 11 ವರ್ಷಗಳಲ್ಲಿ, ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಡಮಾನ ರಹಿತ ಸಾಲಗಳನ್ನು ಒದಗಿಸುವ ಮೂಲಕ ಸಣ್ಣ ವ್ಯಾಪಾರಿಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸಿದೆ, ಆ ಮೂಲಕ ಸ್ವಯಂ ಉದ್ಯೋಗ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಶಕ್ತಿಯನ್ನು ನೀಡಿದೆ. ಕಳೆದ 11 ವರ್ಷಗಳಲ್ಲಿ, ಈ ಕಲ್ಯಾಣ ಯೋಜನೆಯಡಿ 40 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 58 ಕೋಟಿಗಳಿಗೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ. ಇದು 12 ಕೋಟಿ ಯುವಕರಿಗೆ ಪ್ರಯೋಜನವನ್ನು ನೀಡಿದೆ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯಾಣಕ್ಕೆ ಹೊಸ ವೇಗವನ್ನು ನೀಡಿದೆ. ಪ್ರತಿ 3 'ಮುದ್ರಾ' ಸಾಲಗಳಲ್ಲಿ 2 ಸಾಲಗಳನ್ನು ಮಹಿಳೆಯರಿಗೆ ನೀಡಿರುವುದು ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಯ ನಿಟ್ಟಿನಲ್ಲಿ ಐತಿಹಾಸಿಕ ಸಾಧನೆಯಾಗಿದೆ.’’ 

 

*****


(ಪ್ರಕಟಣೆ ಐ.ಡಿ.: 2250111) ವಿಸಿಟರ್ ಕೌಂಟರ್ : 81
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Bengali-TR , Assamese , Punjabi , Gujarati , Telugu