ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸೃಜನಶೀಲ ಆರ್ಥಿಕತೆಗೆ ವೇಗ ನೀಡುತ್ತಿರುವ ಸರ್ಕಾರ; ದೇಶಾದ್ಯಂತ ಕಂಟೆಂಟ್ ಸೃಷ್ಟಿಕಾರರ ಪ್ರಯೋಗಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ವಿಸ್ತರಣೆ
2026-27ರ ಬಜೆಟ್ ನಲ್ಲಿ ಎವಿಜಿಸಿ ವಲಯಕ್ಕೆ ಉತ್ತೇಜನ; 15,000 ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಗಳ ಪ್ರಯೋಗಾಲಯಗಳ ಸ್ಥಾಪನೆ
ಪ್ರಕಟಣಾ ದಿನಾಂಕ:
02 APR 2026 2:13PM by PIB Bengaluru
ಕೇಂದ್ರ ಸರ್ಕಾರವು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯ ಸೇರಿದಂತೆ ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಉತ್ತೇಜಿಸುತ್ತಿದೆ. ಸೃಜನಶೀಲ ಆರ್ಥಿಕತೆ (orange economy)ಯನ್ನು ಬಲಪಡಿಸುವ ಮತ್ತು ಕಂಟೆಂಟ್ ಸೃಷ್ಟಿಗಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಸರ್ಕಾರದ ದೂರದೃಷ್ಟಿಯಡಿ ಅನೇಕ ಉಪಕ್ರಮಗಳನ್ನು ಆರಂಭಿಸಲಾಗಿದೆ.
2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, ದೇಶಾದ್ಯಂತ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಎವಿಜಿಸಿ ಕಂಟೆಂಟ್ ಸೃಷ್ಟಿಕರ್ತರ ಪ್ರಯೋಗಾಲಯಗಳನ್ನು (ಸಿಸಿಎಲ್) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಈ ಉಪಕ್ರಮಕ್ಕೆ 250 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
AVGC-XR ವಲಯಕ್ಕೆ ರಾಷ್ಟ್ರೀಯ ಜೇಷ್ಠತಾ ಕೇಂದ್ರ NCoE ಆಗಿ ಐಐಸಿಟಿ ಸದ್ಯ ಜುಲೈ 2025 ರಿಂದ ಮುಂಬೈನ IICT–ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಕ್ಯಾಂಪಸ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಸದ್ಯ 18 ಕೋರ್ಸ್‌ಗಳನ್ನು ಪರಿಚಯಿಸಲಾಗಿದ್ದು, 136 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಮತ್ತು ಪಾಲ್ಗೊಂಡಿರುವ 15 ಮಂದಿ ಟ್ರೈನ್-ದಿ-ಟ್ರೈನರ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (ಐಐಸಿಟಿ) ಅನ್ನು ಕಂಟೆಂಟ್ ಸೃಷ್ಟಿರ್ತರ ಪ್ರಯೋಗಾಲಯಗಳ ಯೋಜನೆ, ಸಮನ್ವಯ ಮತ್ತು ಹಂತ ಹಂತದ ಬಿಡುಗಡೆಗಾಗಿ ನೋಡಲ್ ಏಜೆನ್ಸಿಯಾಗಿ ಗೊತ್ತುಪಡಿಸಲಾಗಿದೆ. ತಂತ್ರಜ್ಞಾನ ಸ್ಟ್ಯಾಕ್, ಫಲಾನುಭವಿ ಸಂಸ್ಥೆಗಳ ಗುರುತಿಸುವಿಕೆ ಮತ್ತು ಬಿಡುಗಡೆ ವಿಧಾನಗಳಿಗೆ ಸಂಬಂಧಿಸಿದ ಪಾಲುದಾರರ ಸಮಾಲೋಚನೆಗಳು ನಡೆಯುತ್ತಿವೆ.
ಸರ್ಕಾರವು AVGC-XR ವಲಯದ ಉತ್ತೇಜನ ಮತ್ತು ಬೆಳವಣಿಗೆಗೆ ಸಮಗ್ರ ಕಾರ್ಯತಂತ್ರವನ್ನು ರೂಪಿಸಲು ಮತ್ತು ನೀತಿ ಕ್ರಮಗಳನ್ನು ಶಿಫಾರಸು ಮಾಡಲು2022ರ ಏಪ್ರಿಲ್ ನಲ್ಲಿ AVGC ಉತ್ತೇಜನ ಕಾರ್ಯಪಡೆಯನ್ನು ರಚಿಸಿತು. ಇದು ಡಿಸೆಂಬರ್ 2022 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವಲಯವು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು AVGC-XR, ವಿಷಯ ಉತ್ಪಾದನೆ, ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ 2030ರ ವೇಳೆಗೆ ಸುಮಾರು ಎರಡು ಮಿಲಿಯನ್ ನುರಿತ ವೃತ್ತಿಪರರು ಬೇಕಾಗಬಹುದು ಎಂದು ವರದಿಯು ಪ್ರಮುಖವಾಗಿ ಪ್ರಸ್ತಾಪಿಸಿದೆ.
ಸರ್ಕಾರವು ಮುಂಬೈನಲ್ಲಿ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆಯನ್ನು (ವೇವ್ಸ್ 2025) ಆಯೋಜಿಸಿತು. ಅದು “ಕ್ರಿಯೇಟ್ ಇನ್ ಇಂಡಿಯಾ, ಕ್ರಿಯೇಟ್ ಫಾರ್ ದಿ ವರ್ಲ್ಡ್" ಉಪಕ್ರಮದಡಿಯಲ್ಲಿ ಭಾರತವನ್ನು ಕಂಟೆಂಟ್ ಸೃಷ್ಟಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿತ್ತು. ಶೃಂಗಸಭೆಯು ಭಾರತೀಯ ನಿರ್ದೇಶಕರು, ನಿರ್ಮಾಪಕರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಖರೀದಿದಾರರು, ಹೂಡಿಕೆದಾರರು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು 100 ಕ್ಕೂ ಅಧಿಕ ದೇಶಗಳ ತಂತ್ರಜ್ಞಾನ ನಾಯಕರೊಂದಿಗೆ ತೊಡಗಿಸಿಕೊಳ್ಳಲು ಸಮಗ್ರ ವೇದಿಕೆಯನ್ನು ಒದಗಿಸಿತು.
ವರ್ಲ್ಡ್ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಆರಂಭಿಸಲಾದ ವೇವ್ ಎಕ್ಸ್ (WaveX) ಸ್ಟಾರ್ಟ್‌ಅಪ್ ಆಕ್ಸಿಲರೇಟರ್ ಕಾರ್ಯಕ್ರಮ, ವ್ಯವಸ್ಥಿತ ಇನ್‌ಕ್ಯುಬೇಶನ್, ಮಾರ್ಗದರ್ಶನ ಮತ್ತು ಜಾಗತಿಕ ನೆಟ್‌ವರ್ಕ್‌ಗಳಿಗೆ ಲಭ್ಯತೆಯ ಮೂಲಕ ಮಾಧ್ಯಮ-ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಿದೆ. ಮೊದಲ ಹಂತದ ನವೋದ್ಯಮಗಳಿಗೆ ಉದ್ಯಮ ತಜ್ಞರಿಂದ ಮಾರ್ಗದರ್ಶನ, ಹೂಡಿಕೆದಾರರ ಸಂಪರ್ಕ, ಬೌದ್ಧಿಕ ಆಸ್ತಿ ಉತ್ಪಾದನೆ ಮತ್ತು ರಕ್ಷಣೆಗೆ ಬೆಂಬಲ ನೀಡುವ ಅವಕಾಶಗಳನ್ನು ಒದಗಿಸಲಾಗಿದೆ. ಈ ಕಾರ್ಯಕ್ರಮವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಗವಹಿಸುವಿಕೆ, ಉದ್ಯಮ ಪಾಲುದಾರಿಕೆಗಳು ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಯೋಜನೆಯನ್ನು ಸುಗಮಗೊಳಿಸುತ್ತದೆ, ಇದು ನವೋದ್ಯಮಗಳು ತಮ್ಮ ನಾವೀನ್ಯತೆಗಳನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.
ಮಾಧ್ಯಮ ಮತ್ತು ಮನರಂಜನಾ ವಲಯದಾದ್ಯಂತ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಲು, ಪೋಷಿಸಲು ಮತ್ತು ಪ್ರದರ್ಶಿಸಲು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಅನ್ನು ರಾಷ್ಟ್ರೀಯ ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಸಿಐಸಿಯ ಸೀಸನ್ I ರಲ್ಲಿ, ಉದ್ಯಮ ಪಾಲುದಾರರ ಸಹಯೋಗದೊಂದಿಗೆ 33 ಸ್ಪರ್ಧೆಗಳನ್ನು ನಡೆಸಲಾಯಿತು ಮತ್ತು ಅದು ವೇವ್ಸ್ 2025 ರಲ್ಲಿ ಮುಕ್ತಾಯವಾಯಿತು. ಶೃಂಗಸಭೆಯು ದೇಶದ ಎರಡನೇ ಹಾಗೂ ಮೂರನೇ ದರ್ಜೆಯ ನಗರಗಳು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಕಂಟೆಂಟ್ ಸಿದ್ಧಪಡಿಸುವವರು ಭಾಗವಹಿಸಿದ್ದರು. ಆಯ್ದ ಸೃಷ್ಟಿಕರ್ತರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ವಿಷಯವನ್ನು ಪ್ರಸ್ತುತಪಡಿಸಲು ವೇವ್‌ಎಕ್ಸ್ ಮತ್ತು ವೇವ್ಸ್ ಬಜಾರ್‌ನಂತಹ ವೇದಿಕೆಗಳ ಮೂಲಕ ಬೆಂಬಲ ನೀಡಲಾಗುತ್ತಿದೆ.
ಲೋಕಸಭೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಶ್ರೀಮತಿ ಕೃತಿ ದೇವಿ ದೇಬ್ಬರ್ಮನ್ ಮತ್ತು ಶ್ರೀ ಈತಲಾ ರಾಜೇಂದರ್ ಅವರು ಕೇಳಿದ ಪ್ರಶ್ನೆಗಳಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2248301)
ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Odia
,
Telugu
,
Malayalam