ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್‌ನ ಪೋರಬಂದರ್‌ನಲ್ಲಿ ನಡೆಯುತ್ತಿರುವ ಮಾಧವಪುರ ಮೇಳದ ಅಂಗವಾಗಿ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
29 MAR 2026 10:23AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೋರಬಂದರ್‌ನಲ್ಲಿ ನಡೆಯುತ್ತಿರುವ ಮಾಧವಪುರ ಮೇಳಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಈ ಸಾಂಸ್ಕೃತಿಕ ಹಬ್ಬವು ನಮ್ಮ ಭವ್ಯ ಪರಂಪರೆಯನ್ನು ತೋರಿಸುವುದರ ಜೊತೆಗೆ, ಗುಜರಾತ್ ಮತ್ತು ಈಶಾನ್ಯ ಭಾರತದ ನಡುವಿನ ಶಾಶ್ವತ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. “ಈ ಹಬ್ಬವು ವಿಭಿನ್ನ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಎಲ್ಲರೂ ಈ ಮೇಳಕ್ಕೆ ಭೇಟಿ ನೀಡುವಂತೆ ನಾನು ಕರೆ ನೀಡುತ್ತೇನೆ,” ಎಂದು ಮೋದಿ ತಿಳಿಸಿದ್ದಾರೆ.
ಮಾಧವಪುರ ಮೇಳದ ಮಹತ್ವವನ್ನು ಪ್ರಧಾನಮಂತ್ರಿ ಶ್ರೀ ಮೋದಿಯವರು 2022ರ ಏಪ್ರಿಲ್‌ನಲ್ಲಿ ನಡೆದ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲಿಯೂ ಉಲ್ಲೇಖಿಸಿದ್ದರು.
ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
“ಗುಜರಾತ್‌ನ ಪೋರಬಂದರ್‌ನಲ್ಲಿ ನಡೆಯುತ್ತಿರುವ ಮಾಧವಪುರ ಮೇಳದ ಅಂಗವಾಗಿ ನನ್ನ ಶುಭಾಶಯಗಳು. ಈ ಸಾಂಸ್ಕೃತಿಕ ಹಬ್ಬವು ನಮ್ಮ ಭವ್ಯ ಸಂಸ್ಕೃತಿಯನ್ನು ತೋರಿಸುವುದರ ಜೊತೆಗೆ, ಗುಜರಾತ್ ಮತ್ತು ಈಶಾನ್ಯ ಭಾರತದ ನಡುವಿನ ಶಾಶ್ವತ ಬಾಂಧವ್ಯವನ್ನು ಬಲಪಡಿಸುತ್ತದೆ.
ಈ ಹಬ್ಬವು ವಿವಿಧ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಎಲ್ಲರೂ ಈ ಮೇಳಕ್ಕೆ ಭೇಟಿ ನೀಡುವಂತೆ ನಾನು ಮನವಿ ಮಾಡುತ್ತೇನೆ.”
“ಏಪ್ರಿಲ್ 2022ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಾನು ಮಾಧವಪುರ ಮೇಳದ ಮಹತ್ವ ಮತ್ತು ನಮ್ಮ ಸಂಸ್ಕೃತಿಯಲ್ಲಿ ಅದರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದೇನೆ. ದಯವಿಟ್ಟು ಕೇಳಿ…”
*****
(ಪ್ರಕಟಣೆ ಐ.ಡಿ.: 2246641)
ವಿಸಿಟರ್ ಕೌಂಟರ್ : 8