ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಅಡುಗೆ ಅನಿಲ ಸಿಲಿಂಡರ್ ಮರುಪೂರಣಕ್ಕಾಗಿ ಬುಕಿಂಗ್ ಅವಧಿ ಪರಿಷ್ಕರಣೆ ಕುರಿತಾದ ಸುದ್ದಿ ವರದಿಗಳ ಬಗ್ಗೆ ಸ್ಪಷ್ಟೀಕರಣ

ಪ್ರಕಟಣಾ ದಿನಾಂಕ: 25 MAR 2026 11:30AM by PIB Bengaluru

ಅಡುಗೆ ಅನಿಲ ಸಿಲಿಂಡರ್‌ (ಎಲ್‌ ಪಿ ಜಿ) ಮರುಪೂರಣಕ್ಕಾಗಿ ಬುಕ್ಕಿಂಗ್‌ ಅವಧಿಯನ್ನು ಪರಿಷ್ಕರಿಸಲಾಗಿದೆ ಎಂಬುದಾಗಿ ಕೆಲವು ಸುದ್ದಿ ವರದಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ತಿಳಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಪಡೆದಿರುವ ಸಂಪರ್ಕಗಳಿಗೆ 45 ದಿನಗಳು, ಪಿಎಂಯುವೈ ಯೇತರ ಏಕ ಸಿಲಿಂಡರ್‌ ಸಂಪರ್ಕಗಳಿಗೆ 25 ದಿನಗಳು ಹಾಗೂ ಪಿಎಂಯುವೈ ಯೇತರ ಎರಡು ಸಿಲಿಂಡರ್‌ ಸಂಪರ್ಕಗಳಿಗೆ 35 ದಿನಗಳ ಬುಕ್ಕಿಂಗ್‌ ಕಾಲಮಿತಿ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. 

ಅಂತಹ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಸ್ತಿತ್ವದಲ್ಲಿರುವ ಮರುಪೂರಣ ಬುಕಿಂಗ್ ಸಮಯಸೂಚಿಗಳು ಬದಲಾಗದೆ ಉಳಿದಿವೆ ಮತ್ತು ಮುಂದುವರಿಯುತ್ತವೆ:

 

  • ನಗರ ಪ್ರದೇಶಗಳಲ್ಲಿ 25 ದಿನಗಳು, ಮತ್ತು
  • ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳು, ಸಂಪರ್ಕದ ಪ್ರಕಾರವನ್ನು ಲೆಕ್ಕಿಸದೆ.

 

ನಾಗರಿಕರು ಯಾವುದೇ ತಪ್ಪು ಮಾಹಿತಿಯನ್ನು ನಂಬದಂತೆ ಅಥವಾ ಸುಳ್ಳು ಸುದ್ದಿ ಹರಡದಂತೆ ಹಾಗೂ ಅನಗತ್ಯವಾಗಿ ಅಥವಾ ಭಯಭೀತರಾಗಿ ಎಲ್ ಪಿ ಜಿ ಮರುಪೂರಣಕ್ಕಾಗಿ ಬುಕಿಂಗ್ ಮಾಡದಂತೆ ಸಲಹೆ ನೀಡಲಾಗಿದೆ. 

ದೇಶದಲ್ಲಿ ಸಾಕಷ್ಟು ಎಲ್ ಪಿ ಜಿ ದಾಸ್ತಾನು ಲಭ್ಯವಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಮೂಲಗಳು ಪುನರುಚ್ಚರಿಸಿವೆ.

 

*****


(ಪ್ರಕಟಣೆ ಐ.ಡಿ.: 2244877) ವಿಸಿಟರ್ ಕೌಂಟರ್ : 34
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Assamese , Manipuri , Bengali-TR , Bengali , Telugu