ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇಂದ್ರ ಮಾಜಿ ಸಚಿವರಾದ ಶ್ರೀ ಮುಕುಲ್ ರಾಯ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 23 FEB 2026 10:21AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಮಾಜಿ ಸಚಿವರಾದ ಶ್ರೀ ಮುಕುಲ್ ರಾಯ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಮುಕುಲ್ ರಾಯ್ ಅವರನ್ನು ಅವರ ರಾಜಕೀಯ ಅನುಭವ ಮತ್ತು ಸಮಾಜ ಸೇವೆಗಾಗಿ ಮಾಡಿದ ಪ್ರಯತ್ನಗಳಿಗಾಗಿ ಸ್ಮರಿಸಲಾಗುವುದು ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,

"ಕೇಂದ್ರದ ಮಾಜಿ ಸಚಿವರಾದ ಶ್ರೀ ಮುಕುಲ್ ರಾಯ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ರಾಜಕೀಯ ಅನುಭವ ಮತ್ತು ಸಮಾಜ ಸೇವೆಗಾಗಿ ಮಾಡಿದ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪಗಳು. ಓಂ ಶಾಂತಿ."

 

*****


(रिलीज़ आईडी: 2231661) आगंतुक पटल : 47
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam